ರಾಷ್ಟ್ರೀಯ

ದುರ್ಬಲ ವರ್ಗದವರಿಗೆ ಶೇ.10 ಮೀಸಲಾತಿ| ಸರ್ಕಾರದ ನಡೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್

ಸಮಗ್ರ ನ್ಯೂಸ್: ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10 ರಷ್ಟು ಮೀಸಲಾತಿ ವಿಚಾರ ನೀಡುವ ಕುರಿತಂತೆ ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಮಾನ ಹೊರ ಬಿದ್ದಿದ್ದು, ಐವರು ನ್ಯಾಯಮೂರ್ತಿಗಳ ಪೈಕಿ ನಾಲ್ವರು ನ್ಯಾಯಮೂರ್ತಿಗಳು ಸರ್ಕಾರದ ತೀರ್ಮಾನವನ್ನು ಎತ್ತಿ ಹಿಡಿದಿದ್ದಾರೆ. ನ್ಯಾಯಮೂರ್ತಿ ರವೀಂದ್ರ ಭಟ್‌ ಅವರು ಮಾತ್ರ ಇದು ಅಸಾಂವಿಧಾನಿಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವುದರಿಂದ ಸಂವಿಧಾನದ ಆಶಯಗಳಿಗೆ ಧಕ್ಕೆ ಆಗುವುದಿಲ್ಲ ಎಂದು ಅಭಿಪ್ರಾಯಪಡಲಾಗಿದ್ದು, ಮೀಸಲಾತಿಗಾಗಿ ಸಂವಿಧಾನದ ತಿದ್ದುಪಡಿ ಸರಿಯಾಗಿದೆ ಎಂದು ಮೀಸಲಾತಿ ಪರ ತೀರ್ಪು ನೀಡಿರುವ […]

ದುರ್ಬಲ ವರ್ಗದವರಿಗೆ ಶೇ.10 ಮೀಸಲಾತಿ| ಸರ್ಕಾರದ ನಡೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ Read More »

‘ಜನಗಣಮನ’ ಮತ್ತು ‘ವಂದೇ ಮಾತರಂ’ ಗೆ ಸಮಾನ ಸ್ಥಾನ ನೀಡಬೇಕು- ಕೇಂದ್ರ‌ ಸರ್ಕಾರ

ಸಮಗ್ರ ನ್ಯೂಸ್: ‘ಜನ ಗಣ ಮನ’ ಮತ್ತು ‘ವಂದೇ ಮಾತರಂ’ ಎರಡೂ ಸಮಾನ ಸ್ಥಾನದಲ್ಲಿದ್ದು, ದೇಶದ ಪ್ರತಿಯೊಬ್ಬ ಪ್ರಜೆ ಎರಡಕ್ಕೂ ಸಮಾನ ಗೌರವ ನೀಡಬೇಕು ಎಂದು ಕೇಂದ್ರ ಸರ್ಕಾರ ಶನಿವಾರ ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯ ನಡುವಿನ ಸಮಾನತೆಯ ಪರಿಶೀಲನೆಗಾಗಿ ಮತ್ತು ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ ರಾಷ್ಟ್ರಗೀತೆಯ ಸಮನಾದ ಗೌರವ ಮತ್ತು ಸ್ಥಾನಮಾನವನ್ನು ನೀಡುವ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಮಯದಲ್ಲಿ (ಪಿಐಎಲ್) ಕೇಂದ್ರವು ಹೈಕೋರ್ಟ್​ಗೆ

‘ಜನಗಣಮನ’ ಮತ್ತು ‘ವಂದೇ ಮಾತರಂ’ ಗೆ ಸಮಾನ ಸ್ಥಾನ ನೀಡಬೇಕು- ಕೇಂದ್ರ‌ ಸರ್ಕಾರ Read More »

ಭಾರತೀಯ ವಾಯುಪಡೆಯಿಂದ ಅಗ್ನಿವೀರ್ ವಾಯುಗೆ ಅರ್ಜಿ ಆಹ್ವಾನ

ಸಮಗ್ರ ಉದ್ಯೋಗ: ಅಭ್ಯರ್ಥಿಗಳು ನ.7 ರಿಂದ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಕೊನೆ ದಿನಾಂಕ ನ.23. IAF ಅಗ್ನಿವೀರ್ ನೇಮಕಾತಿ 2023: ಭಾರತೀಯ ವಾಯುಪಡೆಯು (IAF) ಅಗ್ನಿವೀರ್ ವಾಯುಗೆ IAF ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಅಭ್ಯರ್ಥಿಗಳು ನ. 7 ರಿಂದ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಕೊನೆ ದಿನಾಂಕ 23 ನವೆಂಬರ್ 2022 ಇದೆ. ಅಭ್ಯರ್ಥಿಗಳು agnipathvayu.cdac.in ವೆಬ್​ಸೈಟ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆ: ಅಗ್ನಿವೀರ್ ವಾಯುಅರ್ಜಿ ಸಲ್ಲಿಸಲು ಪ್ರಾರಂಭ ದಿ: 7 ನವೆಂಬರ್ 2022ಮುಕ್ತಾಯ: 23

ಭಾರತೀಯ ವಾಯುಪಡೆಯಿಂದ ಅಗ್ನಿವೀರ್ ವಾಯುಗೆ ಅರ್ಜಿ ಆಹ್ವಾನ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಎನ್ಐಎನಿಂದ ಶಾಫಿ ಬೆಳ್ಳಾರೆ ಸೇರಿ ಮೂವರ ಬಂಧನ

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಎನ್ ಐಎ ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದು ಮೂವರನ್ನು ಬಂಧಿಸಿದ್ದಾರೆ. ಎನ್ ಐಎ ಅಧಿಕಾರಿಗಳು ರಾಜ್ಯದ ಹಲವಡೆ ಮತ್ತೆ ದಾಳಿ ನಡೆಸಿದ್ದು, ದಕ್ಷಿಣ ಕನ್ನಡ, ಮೈಸೂರು, ಹುಬ್ಬಳ್ಳಿ ಸೇರಿದಂತೆ ಹಲವಡೆ ನಿಷೇಧಿತ ಪಿಎಫ್ ಐ ಸಂಘಟನೆಯ ಮುಖಂಡರ ಮನೆಗಳ ಮೇಲೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಎನ್ ಐ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಎನ್ಐಎನಿಂದ ಶಾಫಿ ಬೆಳ್ಳಾರೆ ಸೇರಿ ಮೂವರ ಬಂಧನ Read More »

ಕಚ್ಚಾತೈಲ ದರದಲ್ಲಿ ಇಳಿಕೆ ಹಿನ್ನಲೆ| ಪೆಟ್ರೊಲಿಯಂ ಉತ್ಪನ್ನಗಳ ಬೆಲೆ ₹2 ಇಳಿಕೆ ಸಾಧ್ಯತೆ

ಸಮಗ್ರ ನ್ಯೂಸ್: ಜಾಗತಿಕ ಕಚ್ಚಾ ತೈಲ ದರ ಇಳಿಕೆ ಹಿನ್ನೆಲೆಯಲ್ಲಿ ಸದ್ಯದಲ್ಲೇ ತೈಲ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಲೀಟರ್‌ಗೆ ತಲಾ 2 ರೂ.ಇಳಿಕೆ ಮಾಡುವ ಸಾಧ್ಯತೆಯಿದೆ. ಮುಂದಿನ 5 ದಿನಗಳ ಕಾಲ ಪ್ರತಿದಿನ ಲೀಟರ್‌ಗೆ ತಲಾ 40 ಪೈಸೆಯಂತೆ ತೈಲ ದರದಲ್ಲಿ ಇಳಿಕೆಯಾಗಬಹುದು. ಆ ಮೂಲಕ ಒಟ್ಟಾರೆ ಲೀ.ಗೆ 2 ರೂ.ಗಳಷ್ಟು ಕಡಿತವಾಗಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಿಂದಿ ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಜತೆಗೆ, ತೈಲದ ದರ ಮತ್ತು ಡಾಲರ್‌ ಎದುರು ರೂಪಾಯಿ

ಕಚ್ಚಾತೈಲ ದರದಲ್ಲಿ ಇಳಿಕೆ ಹಿನ್ನಲೆ| ಪೆಟ್ರೊಲಿಯಂ ಉತ್ಪನ್ನಗಳ ಬೆಲೆ ₹2 ಇಳಿಕೆ ಸಾಧ್ಯತೆ Read More »

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ| ಆಪ್ತ ಸಹಾಯಕ ಸಾವು

ಸಮಗ್ರ ನ್ಯೂಸ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪಾಕಿಸ್ತಾನದ ಶಹಬಾಜ್ ಷರೀಫ್ ಸರ್ಕಾರದ ವಿರುದ್ಧ ಲಾಹೋರ್‌ ನಿಂದ ಇಸ್ಲಾಮಾಬಾದ್‌ಗೆ ಮೆರವಣಿಗೆ ನಡೆಸುತ್ತಿದ್ದ ವೇಳೆ ಘಟನೆ ನಡೆದಿದೆ. ಇಮ್ರಾನ್ ಖಾನ್ ಗುರುವಾರ ವಜೀರಾಬಾದ್‌ ನಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ್ದ ವೇಳೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಇಮ್ರಾನ್ ಖಾನ್ ಸೇರಿದಂತೆ 6 ಜನರು ಗಾಯಗೊಂಡಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಗುಂಡು ಹಾರಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಇಮ್ರಾನ್

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ| ಆಪ್ತ ಸಹಾಯಕ ಸಾವು Read More »

ಗುಜರಾತ್ ಚುನಾವಣೆಗೆ ಮುಹೂರ್ತ ಫಿಕ್ಸ್| ಡಿಸೆಂಬರ್ ನಲ್ಲಿ ನಡೆಯಲಿದೆ ಎರಡು‌ ಹಂತದ ಮತದಾನ

ಸಮಗ್ರ ನ್ಯೂಸ್: ಬಹು ನಿರೀಕ್ಷಿತ ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಗುರುವಾರ ಮಧ್ಯಾಹ್ನ ಪ್ರಕಟಿಸಿದೆ. ಚುನಾವಣೆಯು ಡಿಸೆಂಬರ್ 1 ಹಾಗೂ 5 ರಂದು ಎರಡು ಹಂತದಲ್ಲಿ ನಡೆಯಲಿದೆ. ಡಿಸೆಂಬರ್ 8ರಂದು ಹಿಮಾಚಲ ಪ್ರದೇಶದ ಜೊತೆಗೆ ಗುಜರಾತ್ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಭೀಕರ ಸೇತುವೆ ಕುಸಿತ ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಮಾಧ್ಯಮಗಳೊಂದಿಗೆ ತಮ್ಮ ಸಂವಾದವನ್ನು ಆರಂಭಿಸಿದರು. ಗುಜರಾತ್‌ನಲ್ಲಿ 4.9 ಕೋಟಿ ಮತದಾರರು ತಮ್ಮ ಹಕ್ಕು

ಗುಜರಾತ್ ಚುನಾವಣೆಗೆ ಮುಹೂರ್ತ ಫಿಕ್ಸ್| ಡಿಸೆಂಬರ್ ನಲ್ಲಿ ನಡೆಯಲಿದೆ ಎರಡು‌ ಹಂತದ ಮತದಾನ Read More »

ಪ್ರಧಾನಿ ಭಾಷಣದ ವೇಳೆ ಪೆಂಡಾಲ್ ನಿಂದ ಬೋಲ್ಟ್ ತೆಗೆದ ಭೂಪ| ಆರೋಪಿಯನ್ನು ಬಂಧಿಸಿದ ಪೊಲೀಸರು

ಸಮಗ್ರ ನ್ಯೂಸ್: ಗುಜರಾತ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡುತ್ತಿರುವಾಗಲೇ ಸಾರ್ವಜನಿಕವಾಗಿ ಹಾಕಲಾದ ಪೆಂಡಾಲ್‌ನಿಂದ ಬೋಲ್ಟ್ ಅನ್ನು ತೆಗದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕಳೆದ ಅಕ್ಟೋಬರ್ 31ರಂದು ಥರಾಡ್‌ನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆಯಲ್ಲಿನ ವಿಡಿಯೋವೊಂದು ವೈರಲ್ ಆಗಿತ್ತು. ಒಂದು ಕಡೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದರೆ, ಇನ್ನೊಂದು ಮಗ್ಗಲಿನಲ್ಲಿ ಸಾರ್ವಜನಿಕ ಸಭೆಗಾಗಿ ಹಾಕಿದ್ದ ಮಂಟಪದ ಬೋಲ್ಟ್ ಅನ್ನು ಬಿಚ್ಚಿ, ತೆಗೆಯುತ್ತಿರುವುದು ವಿಡಿಯೋದಲ್ಲಿ ಗೋಚರಿಸಿತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್

ಪ್ರಧಾನಿ ಭಾಷಣದ ವೇಳೆ ಪೆಂಡಾಲ್ ನಿಂದ ಬೋಲ್ಟ್ ತೆಗೆದ ಭೂಪ| ಆರೋಪಿಯನ್ನು ಬಂಧಿಸಿದ ಪೊಲೀಸರು Read More »

‘ಹೊಡಿತಾಳೆ, ಬಡೀತಾಳೆ ನನ್ ಹೆಂಡ್ತಿ’ | ಕಾಟ ತಾಳಲಾರದೆ ಮೋದಿಗೆ ಮೊರೆಯಿಟ್ಟ ಪತಿ ಮಹಾಶಯ

ಸಮಗ್ರ ನ್ಯೂಸ್: ನಾವು ಹೆಚ್ಚಾಗಿ ಗಂಡ ಹೆಂಡತಿಗೆ ಹಿಂಸೆ ಕೇಳುವುದನ್ನು ನೋಡಿರುತ್ತೇವೆ, ಕೇಳಿರುತ್ತೇವೆ, ಆದರೆ ಇಲ್ಲಿ ವಿರುದ್ಧ ಪತ್ನಿ ಕಿರುಕುಳ ನೀಡುತ್ತಾಳೆ ಎಂದು ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ ಪತಿರಾಯ ಸಹಾಯಕ್ಕೆ ಮೊರೆಯಿಟ್ಟಿದ್ದಾನೆ. ಸದ್ಯ ಈತನ ಪೋಸ್ಟ್ ವೈರಲ್ ಆಗಿದೆ. ನನ್ನ ಪತ್ನಿ ತನಗೆ ಕಿರುಕುಳ ನೀಡುತ್ತಿದ್ದಾಳೆ ಎಂಬುದು ಟ್ವಿಟ್ಟರ್ ಮೂಲಕ ಪ್ರಧಾನಿ ಮೋದಿ, ಕಾನೂನು ಸಚಿವ ಕಿರಣ್ ರಿಜುಜು ಮತ್ತು ಬೆಂಗಳೂರು ಪೊಲೀಸ್ ಆಯುಕ್ತರನ್ನು ಟ್ಯಾಗ್ ಮಾಡಿದ್ದಾನೆ. ಈತನ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ

‘ಹೊಡಿತಾಳೆ, ಬಡೀತಾಳೆ ನನ್ ಹೆಂಡ್ತಿ’ | ಕಾಟ ತಾಳಲಾರದೆ ಮೋದಿಗೆ ಮೊರೆಯಿಟ್ಟ ಪತಿ ಮಹಾಶಯ Read More »

ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆ| ನಾಳೆಯಿಂದ ಹೊಸ ದರ ಜಾರಿ

ಸಮಗ್ರ ನ್ಯೂಸ್: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿತಗೊಳಿಸಲಾಗಿದೆ. ತೈಲ ಕಂಪನಿಗಳು ದರಪರಿಷ್ಕರಣೆ ಮಾಡಿದ್ದು, ಪ್ರತಿ ಲೀಟರ್ ಗೆ ಪೆಟ್ರೋಲ್ ಹಾಗೂ ಡೀಸೆಲ್ ಗೆ 40 ಪೈಸೆ ಕಡಿಮೆ ಮಾಡಲಾಗಿದೆ. ಹೊಸ ಬೆಲೆಗಳು ಮಂಗಳವಾರ(ನ.1)ದಿಂದ ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬರಲಿವೆ. ನವದೆಹಲಿಯಲ್ಲಿ ಸೋಮವಾರ ಪೆಟ್ರೋಲ್ ಬೆಲೆ 96.72 ರೂ., ಮುಂಬೈನಲ್ಲಿ 106.31 ರೂ.ಕೊಲ್ಕತ್ತಾ ದಲ್ಲಿ ಪೆಟ್ರೋಲ್ ಗೆ 106.03 ರೂ., ಚೆನ್ನೈನಲ್ಲಿ 102.63 ರೂ ಆಗಿದೆ. ಸರ್ಕಾರಿ ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್

ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆ| ನಾಳೆಯಿಂದ ಹೊಸ ದರ ಜಾರಿ Read More »