ನನ್ ಮಗ ಕಾರು,ಬೈಕ್ ರೈಡ್ ಮಾಡ್ತಾನೆ ಅಂತ ಜಂಬ ಪಡ್ತೀರಾ? ಅಪ್ರಾಪ್ತನಿಗೆ ಕಾರು ಚಲಾಯಿಸಲು ಕೊಟ್ಟು ಏನಾಗಿದೆ ಗೊತ್ತಾ?
ಸಮಗ್ರ ನ್ಯೂಸ್: ನಿಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ಕೊಡುವ ಮೊದಲು ಅಂತಹ ಪಾಲಕರು ಈ ಸ್ಟೋರಿ ಓದ್ಲೇಬೇಕು. ಮಕ್ಕಳು ಕಾರು, ಬೈಕ್ ಓಡಿಸ್ತಾರೆ ಅಂತ ಅವರಿಗೆ ಗಾಡಿ ಕೊಡುವ ಮುನ್ನ ಈ ವಿಷಯ ಸರಿಯಾಗಿ ತಿಳ್ಕೊಳ್ಳಿ. ತಮ್ಮ ಅಪ್ರಾಪ್ತ ಪುತ್ರನಿಗೆ ವಾಹನ ಚಲಾಯಿಸಲು ನೀಡಿದ ತಪ್ಪಿಗೆ ವಾಹನ ಮಾಲಿಕನಿಗೆ ನ್ಯಾಯಾಲಯ ಬರೊಬ್ಬರಿ 20 ಸಾವಿರ ದಂಡ ವಿಧಿಸಿದ ಘಟನೆ ಕಡಬ ತಾಲ್ಲೂಕಿನಲ್ಲಿ ನಡೆದಿದೆ. ಕೊಯಿಲ ಗ್ರಾಮದ ಕೆ.ಸಿ.ಫಾರ್ಮ್ ನಿವಾಸಿ ಅಬ್ದುಲ್ ರಹಿಮಾನ್ ಎಂಬವರು ದಂಡ ಪಾವತಿಸಿದ […]