ರಾಷ್ಟ್ರೀಯ

ಸರ್ಕಾರಕ್ಕೆ ಬಿಸಿ ತುಪ್ಪವಾದ 7ನೇ ವೇತನ ಆಯೋಗ| ಮಾ.1 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ನಿರ್ಧಾರ

ಸಮಗ್ರ ನ್ಯೂಸ್: ಬಿಜೆಪಿ ಸರ್ಕಾರಕ್ಕೆ ಸರ್ಕಾರಿ ನೌಕರರ ಏಳನೇ ಪರಿಷ್ಕ್ರೃತ ವೇತನ ಹಾಗೂ ಹಳೆ ಪಿಂಚಣಿ ಯೋಜನೆಗಾಗಿನ ಪಟ್ಟು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವರದಿ ಜಾರಿಗಾಗಿ ನೌಕರರ ಪಟ್ಟು ಹಿಡಿದಿದ್ದು, ಫೆ.22 ರಿಂದ ಫೆ.28 ರವರೆಗೆ ಸರ್ಕಾರಕ್ಕೆ 7 ದಿನಗಳ ಗಡುವು ನೀಡಿದ್ದಾರೆ. ಒಂದೇ ವೇಳೆ ಯೋಜನೆ ಜಾರಿಗೆ ತರದಿದ್ದರೆ ಮಾರ್ಚ್ 1 ರಿಂದ ಕರ್ತವ್ಯಕ್ಕೆ ಗೈರಾಗಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ನೌಕರರು ನಿರ್ಧರಿಸಿದ್ದಾರೆ. ಇಂದು ನಡೆದ ನೌಕರರ ಸಂಘದ ತುರ್ತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು […]

ಸರ್ಕಾರಕ್ಕೆ ಬಿಸಿ ತುಪ್ಪವಾದ 7ನೇ ವೇತನ ಆಯೋಗ| ಮಾ.1 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ನಿರ್ಧಾರ Read More »

ಪಾಸ್ ಪೋರ್ಟ್ ವೆರಿಫಿಕೇಶನ್ ಈಗ ಇನ್ನಷ್ಟು ಸುಲಭ| ಹೊಸದೊಂದು ಸೌಲಭ್ಯ ಜಾರಿಗೊಳಿಸಿದ ವಿದೇಶಾಂಗ ಇಲಾಖೆ

ಸಮಗ್ರ ನ್ಯೂಸ್: ಪಾಸ್‌ಪೋರ್ಟ್ ವೆರಿಫಿಕೇಷನ್‌ಗಾಗಿ ಭಾರತ ಸರ್ಕಾರವು ದೆಹಲಿಯಲ್ಲಿ “ಎಂಪಾಸ್ ಪೋರ್ಟ್ ಸೇವಾ” (” mPassport”) ಎಂಬ ಹೊಸ ಆನ್‌ಲೈನ್ ಸರ್ವೀಸ್ ಸೇವೆಯನ್ನು ಪ್ರಾರಂಭಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಸೌಲಭ್ಯವನ್ನು ಆರಂಭಿಸಿದ್ದು, ಈ ಸೌಲಭ್ಯದ ಮೂಲಕ ಪಾಸ್ ಪೋರ್ಟ್ ಪರಿಶೀಲನೆ ಪ್ರಕ್ರಿಯೆ ಕೇವಲ ಐದು ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿಂದೆ ಪಾಸ್ ಪೋರ್ಟ್ ಪರಿಶೀಲನೆಗಾಗಿ ಇದ್ದ 15 ದಿನಗಳ ಕಾಯುವಿಕೆ ಅವಧಿಯನ್ನು (ವೇಟಿಂಗ್ ಪಿರೀಯೆಡ್) ಇದು ಕಡಿಮೆ ಮಾಡುವುದಲ್ಲದೆ

ಪಾಸ್ ಪೋರ್ಟ್ ವೆರಿಫಿಕೇಶನ್ ಈಗ ಇನ್ನಷ್ಟು ಸುಲಭ| ಹೊಸದೊಂದು ಸೌಲಭ್ಯ ಜಾರಿಗೊಳಿಸಿದ ವಿದೇಶಾಂಗ ಇಲಾಖೆ Read More »

ದೆಹಲಿಯಲ್ಲಿ ಮತ್ತೊಂದು ತಣ್ಣನೆಯ ಕೊಲೆ| ಗೆಳತಿಯ ಕೊಂದು ಪ್ರಿಡ್ಜ್ ನಲ್ಲಿ ಇರಿಸಿ ಅದೇ ದಿನ ಮತ್ತೊಬ್ಬಾಕೆಯ ಮದ್ವೆಯಾದ ಪಾತಕಿ

ಸಮಗ್ರ ನ್ಯೂಸ್: ಶ್ರದ್ಧಾ ವಾಕರ್​ ಹತ್ಯೆ ಪ್ರಕರಣ ಮಾಸುವ ಮುನ್ನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಲಿವ್‌ ಇನ್‌ ರಿಲೇಶನ್​​ಶಿಪ್​ನಲ್ಲಿದ್ದ ಯುವಕ ತನ್ನ ಸಂಗಾತಿಯನ್ನು ಕತ್ತು ಹಿಸುಕಿ ಕೊಂದು, ಆಕೆಯ ಶವವನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟಿದ್ದಾನೆ. ಅಲ್ಲದೇ ಅದೇ ದಿನವೇ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ. ದೆಹಲಿ ಕ್ರೈಂ ಬ್ರಾಂಚ್ ಘಟಕದ ಪ್ರಕಾರ, ಆರೋಪಿಯನ್ನು ಸಾಹಿಲ್ ಗೆಹ್ಲೋಟ್ (24) ಎಂದು ಗುರುತಿಸಲಾಗಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ. ಮೃತ ಯುವತಿಯನ್ನು ನಿಕ್ಕಿ ಯಾದವ್ ಎಂದು ಗುರುತಿಸಲಾಗಿದೆ.

ದೆಹಲಿಯಲ್ಲಿ ಮತ್ತೊಂದು ತಣ್ಣನೆಯ ಕೊಲೆ| ಗೆಳತಿಯ ಕೊಂದು ಪ್ರಿಡ್ಜ್ ನಲ್ಲಿ ಇರಿಸಿ ಅದೇ ದಿನ ಮತ್ತೊಬ್ಬಾಕೆಯ ಮದ್ವೆಯಾದ ಪಾತಕಿ Read More »

ಫೆಬ್ರವರಿ 14 ಭಾರತೀಯರು ಮರೆಯಬಾರದ ದಿನ| ಯಾಕೆ ಗೊತ್ತಾ?

ಸಮಗ್ರ ನ್ಯೂಸ್: ಫೆ.14. ಭಾರತೀಯರು ಮರೆಯಲಾಗದ ದಿನ. ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ ಎಂದೇ ಹೇಳಬಹುದು. ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ 40 ಮಂದಿ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ನಾಲ್ಕು ವರ್ಷಗಳ ಹಿಂದೆ ಫೆಬ್ರವರಿ 14 ರಂದು 40 ಸಿಆರ್ಪಿಎಫ್ ಅಧಿಕಾರಿಗಳ ಸಾವು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ವರದಿಯಾದಾಗ ಇಡೀ ಭಾರತವೇ ಶೋಕಸಾಗರದಲ್ಲಿ ಮುಳುಗಿತ್ತು. ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸೇನೆಯ

ಫೆಬ್ರವರಿ 14 ಭಾರತೀಯರು ಮರೆಯಬಾರದ ದಿನ| ಯಾಕೆ ಗೊತ್ತಾ? Read More »

ಬಿಬಿಸಿ ದೆಹಲಿ ಕಚೇರಿ ಮೇಲೆ ಐಟಿ ರೈಡ್

ಸಮಗ್ರ ನ್ಯೂಸ್: ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಸರ್ವೀಸ್ (BBC)ನ ದೆಹಲಿ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಿಢೀರ್ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದೆ. ಲಂಡನ್ ಮೂಲದ ಕಂಪನಿಯ ಮೇಲೆ ಕಚೇರಿ ಏಕೆ ದಾಳಿ ಮಾಡಿದೆ ಎಂಬುದು ಸ್ಪಷ್ಟವಾಗಿಲ್ಲ. ಕೆಲವು ವರದಿಗಳ ಪ್ರಕಾರ ಇಲಾಖೆಯು ಕಚೇರಿಗೆ ಬೀಗ ಜಡಿಯಬಹುದು ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಐಟಿ ಅಧಿಕಾರಿಗಳು ಉದ್ಯೋಗಿಗಳ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ನೌಕರರನ್ನು ಕಚೇರಿ ಬಿಟ್ಟು ಬೇಗ ಮನೆಗೆ ತೆರಳುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಬಿಬಿಸಿ ದೆಹಲಿ ಕಚೇರಿ ಮೇಲೆ ಐಟಿ ರೈಡ್ Read More »

ಅಡ್ಡಪರಿಣಾಮದ ಅರಿವಿದ್ದೂ ಭಾರತದಲ್ಲಿ ಕೋವಿಶೀಲ್ಡ್ ಕೊಟ್ಟಿದ್ಯಾಕೆ? ಇದು ಅತ್ಯಂತ ಕಳಪೆ ವ್ಯಾಕ್ಸಿನ್ | ಆತಂಕ ವ್ಯಕ್ತಪಡಿಸಿದ ಡಾ. ಅಸೀಮ್ ಮಲ್ಹೋತ್ರಾ

ಸಮಗ್ರ ನ್ಯೂಸ್: ದೇಶಾದ್ಯಂತ ಹಠಾತ್ ಹೃದಯಾಘಾತ, ಕುಸಿದು ಬಿದ್ದು ಸಾಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಿಗೇ ಆತಂಕಕಾರಿ ಸಂಗತಿಯೊಂದು ಹೊರಬಿದ್ದಿದೆ. ಭಾರತದಲ್ಲಿ ಕೋವಿಶೀಲ್ಡ್​ ಲಸಿಕೆಯನ್ನು ಕೊಡಬಾರದಿತ್ತು ಎಂಬುದಾಗಿ ಬ್ರಿಟಿಷ್​-ಇಂಡಿಯನ್ ಕಾರ್ಡಿಯಾಲಜಿಸ್ಟ್​​ ಅಭಿಪ್ರಾಯ ಪಟ್ಟಿದ್ದಾರೆ. ಖ್ಯಾತ ಬ್ರಿಟಿಷ್​-ಇಂಡಿಯನ್ ಕಾರ್ಡಿಯಾಲಜಿಸ್ಟ್​ ಡಾ.ಅಸೀಮ್ ಮಲ್ಹೋತ್ರಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೃದಯಾಘಾತ ಹಾಗೂ ಸ್ಟ್ರೋಕ್​ಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ಸೀರಮ್​ ಇನ್​ಸ್ಟಿಟ್ಯೂಟ್​​ನಿಂದ ಭಾರತದಲ್ಲಿ ತಯಾರಿಸಲಾದ ಲಸಿಕೆ ಎಂಆರ್​​ಎನ್​ಎ ಕೋವಿಡ್-19 ಲಸಿಕೆಗಳಿಗಿಂತಲೂ ಕಳಪೆಯಾಗಿದೆ ಎಂದು ಹೇಳಿದ್ದಾರೆ. ಆಕ್ಸ್​ಫರ್ಡ್​​-ಆಸ್ಟ್ರಜೆನೆಕಾದ ಲಸಿಕೆ ಭಾರತದಲ್ಲಿ ಪರಿಚಯಿಸಲಾದ ಮೊದಲ ಲಸಿಕೆಗಳಲ್ಲಿ ಒಂದಾಗಿದ್ದು, ಪ್ರಸ್ತುತ

ಅಡ್ಡಪರಿಣಾಮದ ಅರಿವಿದ್ದೂ ಭಾರತದಲ್ಲಿ ಕೋವಿಶೀಲ್ಡ್ ಕೊಟ್ಟಿದ್ಯಾಕೆ? ಇದು ಅತ್ಯಂತ ಕಳಪೆ ವ್ಯಾಕ್ಸಿನ್ | ಆತಂಕ ವ್ಯಕ್ತಪಡಿಸಿದ ಡಾ. ಅಸೀಮ್ ಮಲ್ಹೋತ್ರಾ Read More »

ಪ್ರಧಾನಿ ಮೋದಿ ಔತಣಕೂಟದಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ ಶ್ರದ್ಧಾ| ಮೊದಲ ಭೇಟಿ ವೇಳೆ ‘ಅಯ್ಯೋ’ ಎಂದ ಮೋದಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಪ್ರದರ್ಶನ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ್ದು, ಭಾನುವಾರ ರಾತ್ರಿ(ಫೆ.12) ಅವರು ಬೆಂಗಳೂರಿನ ರಾಜಭವನದಲ್ಲಿ ತಂಗಿದ್ದರು. ಈ ವೇಳೆ ನಟ ಯಶ್, ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ, ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ, ಹೊಂಬಾಳೆ ಫಿಲ್ಮ್ಸ್​​ನ ವಿಜಯ್​ ಕಿರಗಂದೂರು ಅವರನ್ನು ಭೇಟಿ ಆಗಿದ್ದಾರೆ. ಇವರ ಜತೆ ಸ್ಟ್ಯಾಂಡಪ್ ಕಾಮಿಡಿಯನ್ ಶ್ರದ್ಧಾ ಕೂಡ ಇದ್ದರು. ಈಗ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ‘ಪ್ರಧಾನಿ

ಪ್ರಧಾನಿ ಮೋದಿ ಔತಣಕೂಟದಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ ಶ್ರದ್ಧಾ| ಮೊದಲ ಭೇಟಿ ವೇಳೆ ‘ಅಯ್ಯೋ’ ಎಂದ ಮೋದಿ Read More »

ಏರೋ ಇಂಡಿಯಾ 2023ಕ್ಕೆ ಚಾಲನೆ| ಇಂದಿನಿಂದ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ

ಸಮಗ್ರ ನ್ಯೂಸ್: ಇಂದಿನಿಂದ 5 ದಿನಗಳ ಕಾಲ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ-2023 ಏರ್ ಶೋಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇಂದಿನಿಂದ 5 ದಿನಗಳ ಕಾಲ ಬೆಂಗಳೂರಲ್ಲಿ ಲೋಹದ ಹಕ್ಕಿಗಳ ಕಲರವದ ರಂಗು ಇರಲಿದೆ. ಅಮೆರಿಕಾ, ಬ್ರಿಟನ್​, ಇಸ್ರೇಲ್​, ಇಟಲಿ, ಜಪಾನ್​ ಸೇರಿ 20ಕ್ಕೂ ಹೆಚ್ಚು ರಾಷ್ಟ್ರಗಳ ಯುದ್ಧ ವಿಮಾನಗಳು ಏರ್​​ ಶೋದಲ್ಲಿ ಕಸರತ್ತು ಪ್ರದರ್ಶಿಸಲಿವೆ. ಅಲ್ಲದೆ, ಒಟ್ಟು 809 ವೈಮಾನಿಕ ವಲಯದ ಪ್ರದರ್ಶನಗಳು ನಡೆಯಲಿದೆ. 699 ಭಾರತೀಯ ಪ್ರದರ್ಶಕರು, 110

ಏರೋ ಇಂಡಿಯಾ 2023ಕ್ಕೆ ಚಾಲನೆ| ಇಂದಿನಿಂದ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ Read More »

ಆಂಧ್ರದ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾ., ಮೂಡುಬಿದಿರೆಯ ಎಸ್​.ಅಬ್ದುಲ್​ ನಜೀರ್​

ಸಮಗ್ರ ನ್ಯೂಸ್ : ಆಂಧ್ರ ಪ್ರದೇಶದ ನೂತನ ರಾಜ್ಯಪಾಲರಾಗಿ ನಿವೃತ್ತ ನ್ಯಾಯಮೂರ್ತಿ ಎಸ್​.ಅಬ್ದುಲ್ ನಜೀರ್​​ರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಮೂಲತಃ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರಾದ ಶ ನಿವೃತ್ತ ನ್ಯಾಯಮೂರ್ತಿ ಎಸ್​.ಅಬ್ದುಲ್​ ನಜೀರ್​ ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡಿದ್ದು ಕರುನಾಡಿಗೆ ಹೆಮ್ಮೆಯ ವಿಚಾರವಾಗಿದೆ. ಅಬ್ದುಲ್​ ನಜೀರ್​ ಐತಿಹಾಸಿಕ ಅಯೋಧ್ಯೆ ರಾಮಜನ್ಮ ಭೂಮಿ ತೀರ್ಪು ನೀಡಿದ ಬೆಂಚ್ ಸದಸ್ಯರಾಗಿದ್ದರು. ಆಂಧ್ರ ಪ್ರದೇಶದ ಜೊತೆಯಲ್ಲಿ ಛತ್ತಿಸ್‌ಗಢ, ಬಿಹಾರ, ಮಣಿಪುರ ಸೇರಿದಂತೆ ವಿವಿಧ ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು

ಆಂಧ್ರದ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾ., ಮೂಡುಬಿದಿರೆಯ ಎಸ್​.ಅಬ್ದುಲ್​ ನಜೀರ್​ Read More »

ಇಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ| ನಾಳೆ ಏರೋ ಇಂಡಿಯಾ-2023 ಉದ್ಘಾಟನೆ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದು, ನಾಳೆ ಬೆಂಗಳೂರಿನ ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ಐದು ದಿನಗಳ ಕಾಲ ನಡೆಯುವ ಏರೋ ಇಂಡಿಯಾ-2023ರ 14 ನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಇಂದು ರಾತ್ರಿ ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದು, ರಾತ್ರಿ ಬೆಂಗಳೂರಿನ ರಾಜಭವನದಲ್ಲಿ ತಂಗಲಿದ್ದಾರೆ. ಫೆಬ್ರವರಿ 13 ರ ಸೋಮವಾರ ಬೆಳಗ್ಗೆ 9.30 ಕ್ಕೆ ಐದು ದಿನಗಳ ಕಾಲ ನಡೆಯುವ ಏರೋ ಇಂಡಿಯಾ-2023ರ 14 ನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಿ

ಇಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ| ನಾಳೆ ಏರೋ ಇಂಡಿಯಾ-2023 ಉದ್ಘಾಟನೆ Read More »