ರಾಷ್ಟ್ರೀಯ

ಚುನಾವಣಾ ನೀತಿ ಸಂಹಿತೆ/ ಬಸ್‍ಗಳಲ್ಲಿ ಲಗೇಜ್ ಗಳನ್ನು ಸಾಗಿಸುವಾಗ ಎಚ್ಚರ

ಸಮಗ್ರ ನ್ಯೂಸ್: 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ದಾರಿಯುದ್ದಕ್ಕೂ ಪ್ರತಿ ಹೆಜ್ಜೆಗೂ ಪೆÇಲೀಸ್ ಕಾವಲು ಹಾಕಲಾಗುತ್ತಿದೆ. ಸಾರ್ವಜನಿಕ ಸಾರಿಗೆ ಬಸ್‍ಗಳಲ್ಲಿ ಲಗೇಜ್ ಗಳನ್ನು ಸಾಗಿಸುವಾಗ ಪ್ರಯಾಣಿಕರಿಗೆ ಕೆಲವು ನಿಬರ್ಂಧಗಳನ್ನು ವಿಧಿಸಲಾಗಿದ್ದು, ಇನ್ನು ಮುಂದೆ ಸರ್ಕಾರಿ ಬಸ್‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಲಗೇಜ್‍ನಲ್ಲಿ ಕೆಲವು ವಸ್ತುಗಳನ್ನು ಸಾಗಿಸಲು ಅನುಮತಿಸಲಾಗುವುದಿಲ್ಲ. ಈಗಾಗಲೇ ನಾಲ್ಕು ನಿಗಮಗಳಿಗೆ ಹೊಸ ನಿಯಮಗಳನ್ನು ಪರಿಚಯಿಸಲಾಗಿದ್ದು ಚುನಾವಣಾ ಸಂಬಂಧಿತ ದಾಖಲಾತಿ ಅಥವಾ ನೀತಿ ಸಂಹಿತೆ ನಿಯಮಗಳನ್ನು ಉಲ್ಲಂಘಿಸುವ ಸರಕುಗಳನ್ನು ಸಾಗಿಸಲಾಗುವುದಿಲ್ಲ. ದಾಖಲೆಗಳಿಲ್ಲದೆ ಪ್ರಯಾಣಿಕರು […]

ಚುನಾವಣಾ ನೀತಿ ಸಂಹಿತೆ/ ಬಸ್‍ಗಳಲ್ಲಿ ಲಗೇಜ್ ಗಳನ್ನು ಸಾಗಿಸುವಾಗ ಎಚ್ಚರ Read More »

ನಿರುದ್ಯೋಗ ಪ್ರಮಾಣ/ ದೇಶದಲ್ಲಿ ಎರಡನೇ ಸ್ಥಾನ ಪಡೆದ ಕೇರಳ

ಸಮಗ್ರ ನ್ಯೂಸ್: ಡಿಸೆಂಬರ್ ತಿಂಗಳಿಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕೇರಳ ರಾಜ್ಯದ ನಗರ ಪ್ರದೇಶಗಳಲ್ಲಿ ನಿರೋದ್ಯೋಗ ಪ್ರಮಾಣದಲ್ಲಿ ಶೇ.10.3ಕ್ಕೆ ಏರಿಕೆಯಾಗಿದೆ ಎಂಬ ಅಂಶ ಕೇಂದ್ರದ ಅಂಕಿ ಅಂಶ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ಬಹಿರಂಗವಾಗಿದೆ. ಈ ಅಂಕಿಅಂಶಗಳ ಪ್ರಕಾರ ನಿರುದ್ಯೋಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕೇರಳ ಎರಡನೇ ಸ್ಥಾನದಲ್ಲಿದೆ. ನಿರುದ್ಯೋಗ ಪ್ರಮಾಣದಲ್ಲಿ ಹಿಮಾಚಲ ಪ್ರದೇಶದಲ್ಲಿ 12.3% ದಾಖಲಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಹರಿಯಾಣ ಅತ್ಯಂತ ಕಡಿಮೆ ಅಂದರೆ 3.1% ಪ್ರಮಾಣದಲ್ಲಿದೆ. ಆಂಧ್ರಪ್ರದೇಶ 8%, ತಮಿಳುನಾಡು 6.7%, ಕರ್ನಾಟಕ 3.6% ಪ್ರಮಾಣ

ನಿರುದ್ಯೋಗ ಪ್ರಮಾಣ/ ದೇಶದಲ್ಲಿ ಎರಡನೇ ಸ್ಥಾನ ಪಡೆದ ಕೇರಳ Read More »

ಹಿಂದೆ ಸರಿದ ಸಮುದ್ರ/ ಕೇರಳದಲ್ಲೊಂದು ವಿಚಿತ್ರ ಘಟನೆ

ಸಮಗ್ರ ನ್ಯೂಸ್: ಕೇರಳದ ಪುರಕ್ಕಾಡ್‍ನಲ್ಲಿ ಸಮುದ್ರವು ಏಕಾಏಕಿ ತೀರದಿಂದ ಸುಮಾರು 50 ಮೀಟರ್ ಸಮುದ್ರ ಹಿಂದೆ ಸರಿದು ಅಚ್ಚರಿ ಉಂಟು ಮಾಡಿದೆ. ಈ ಬೆಳವಣಿಗೆಯಿಂದ ಯಾವುದೇ ಅಪಾಯ ಉಂಟಾಗಿಲ್ಲವಾದರೂ, ತೀರದ ನಿವಾಸಿಗಳಿಗೆ ನಿದ್ದೆಯಿಲ್ಲದಂತೆ ಮಾಡಿದೆ ರಾತ್ರಿ ವೇಳೆ ಅಲೆಗಳ ಅಬ್ಬರ ಜೋರಾಗಿರುತ್ತದೆ. ಮುಂಜಾನೆ ವೇಳೆ ಇಂತಹ ವಿದ್ಯಮಾನ ಕಂಡು ಬಂದಿದೆ. ಈ ಹಿಂದೆ ಎರಡು ಬಾರಿ ಇದೇ ರೀತಿ ನಡೆದಿತ್ತು ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ. ಪುರಕ್ಕಾಡ್‍ನಿಂದ ದಕ್ಷಿಣಕ್ಕೆ 300 ಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು,

ಹಿಂದೆ ಸರಿದ ಸಮುದ್ರ/ ಕೇರಳದಲ್ಲೊಂದು ವಿಚಿತ್ರ ಘಟನೆ Read More »

ಬಂಗಾಳದ ನೂತನ ಡಿಜಿಪಿಯಾಗಿ ಸಂಜಯ್ ಮುಖರ್ಜಿ/ 24 ಗಂಟೆಗಳಲ್ಲಿ ಬದಲಾದ ನೇಮಕಾತಿ

ಸಮಗ್ರ ನ್ಯೂಸ್: ಪಶ್ಚಿಮ ಬಂಗಾಳದ ಡಿಜಿಪಿ ಹುದ್ದೆಗೆ ಸಂಜಯ್ ಮುಖರ್ಜಿ ಅವರನ್ನು ನೇಮಿಸುವಂತೆ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ವಿವೇಕ್ ಸಹಾಯ್ ಅವರನ್ನು ನೇಮಕ ಮಾಡಿದ 24 ಗಂಟೆಗಳಲ್ಲಿ ಚುನಾವಣಾ ಆಯೋಗ ಅವರಿಗೆ ಗೇಟ್ ಪಾಸ್ ನೀಡಿದೆ. ವಿವೇಕ್ ಸಹಾಯ್ ಅವರ ನೇಮಕವು ಅವರ ಹಿರಿತನವನ್ನು ಆಧರಿಸಿದ್ದರೂ, ಲೋಕಸಭಾ ಚುನಾವಣೆ ಮುಗಿಯುವ ಮೊದಲು ಅವರು ಮೇ ಕೊನೆಯ ವಾರದಲ್ಲಿ ನಿವೃತ್ತರಾಗುವುದರಿಂದ ಮುಖರ್ಜಿ ಅವರನ್ನು ಡಿಜಿಪಿಯಾಗಿ ಹೆಸರಿಸಿದೆ. 1989ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ಮುಖರ್ಜಿ, ಚುನಾವಣಾ

ಬಂಗಾಳದ ನೂತನ ಡಿಜಿಪಿಯಾಗಿ ಸಂಜಯ್ ಮುಖರ್ಜಿ/ 24 ಗಂಟೆಗಳಲ್ಲಿ ಬದಲಾದ ನೇಮಕಾತಿ Read More »

ಪೌರತ್ವ ತಿದ್ದುಪಡಿ ಕಾಯ್ದೆ/ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಸಮಗ್ರ ನ್ಯೂಸ್: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಡೆ ಕೋರುವಂತೆ ಸುಪ್ರೀಂ ಕೋರ್ಟ್ ಗೆ 237 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, ತಡೆ ನೀಡಲು ನಿರಾಕರಿಸಿದೆ. ಜೊತೆಗೆ ವಿರೋಧ ಹಾಗೂ ತಡೆ ಕುರಿತು ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಜಸ್ಟೀಸ್ ಜೆಬಿ ಪರಿದ್ವಾಲ್, ಮನೋಜ್ ಮಿಶ್ರಾ ಸೇರಿದ ಪೀಠ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಅವಶ್ಯಕತೆ, ಇದಕ್ಕೆ ಎದುರಾಗಿರುವ ವಿರೋಧಗಳ ಕುರಿತು ಏಪ್ರಿಲ್

ಪೌರತ್ವ ತಿದ್ದುಪಡಿ ಕಾಯ್ದೆ/ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್ Read More »

Whatsappನಲ್ಲಿ ನ್ಯೂ ಫೀಚರ್! ಸ್ಕ್ರೀನ್ ಶಾಟ್ಸ್ ಗೆ ಬಿತ್ತು ಕಡಿವಾಣ

ಬಳಕೆದಾರರ ಗೌಪ್ಯತೆಯನ್ನು ಕಾಪಾಡಲು ವಾಟ್ಸಾಪ್ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮೂಲಕ ಯಾರೂ ಪ್ರೊಫೈಲ್ ಫೋಟೋಗಳನ್ನು ತೆಗೆಯುವಂತಿಲ್ಲ ಮತ್ತು ಸ್ಕ್ರೀನ್ ಶಾಟ್ ಗಳನ್ನು ತೆಗೆಯುವಂತಿಲ್ಲ ಮತ್ತು ಮಾರ್ಫ್ ಮಾಡುವಂತಿಲ್ಲ. WhatsApp ಸಾಮಾನ್ಯವಾಗಿ ಬಳಕೆದಾರರಿಗೆ ಫೋಟೋ ಅಥವಾ ವೀಡಿಯೊ ಸ್ಕ್ರೀನ್‌ಶಾಟ್‌ಗಳನ್ನು ವೀಕ್ಷಿಸಲು ಅನುಮತಿಸುವುದಿಲ್ಲ. ಈಗ ಅದೇ ವೈಶಿಷ್ಟ್ಯವು ಪ್ರೊಫೈಲ್ ಚಿತ್ರದಲ್ಲೂ ಬರಲಿದೆ. ಕೆಲವರು ನಿಮ್ಮ ಪ್ರೊಫೈಲ್ ಚಿತ್ರವನ್ನು ಉಳಿಸುತ್ತಾರೆ ಅಥವಾ ನಿಮಗೆ ತಿಳಿಯದೆ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುತ್ತಾರೆ. ಚಾಟ್‌ಗಳು ಸ್ಕ್ರೀನ್‌ಶಾಟ್‌ಗಳನ್ನು ಸಹ ತೆಗೆದುಕೊಳ್ಳುತ್ತವೆ. WhatsApp ಇನ್ನು ಮುಂದೆ ಅಂತಹ ವಿಷಯಗಳನ್ನು

Whatsappನಲ್ಲಿ ನ್ಯೂ ಫೀಚರ್! ಸ್ಕ್ರೀನ್ ಶಾಟ್ಸ್ ಗೆ ಬಿತ್ತು ಕಡಿವಾಣ Read More »

ಬಾಬಾ ರಾಮ್‍ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ಸುಪ್ರೀಂ ಸಮನ್ಸ್/ ಖುದ್ದು ಹಾಜರಾಗಲು ಸೂಚನೆ

ಸಮಗ್ರ ನ್ಯೂಸ್: ಯೋಗ ಗುರು ಬಾಬಾ ರಾಮ್‍ದೇವ್, ಪತಂಜಲಿ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ಸಮನ್ಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಾಗುವಂತೆ ಸೂಚಿಸಿದೆ. ಶೋಕಾಸ್ ನೋಟಿಸ್‍ಗೆ ಉತ್ತರ ನೀಡದ ಹಿನ್ನೆಲೆಯಲ್ಲಿ, ನಮ್ಮ ಆದೇಶಗಳನ್ನು ನಿರ್ಲಕ್ಷಿಸಿದ್ದೀರಿ. ಬಾಬಾ ರಾಮ್‍ದೇವ್, ಪತಂಜಲಿ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ವೇಳೆ ಪತಂಜಲಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೊಪ್ಪಗಿ ರಾಮದೇವ್

ಬಾಬಾ ರಾಮ್‍ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ಸುಪ್ರೀಂ ಸಮನ್ಸ್/ ಖುದ್ದು ಹಾಜರಾಗಲು ಸೂಚನೆ Read More »

ಮಹಾರಾಷ್ಟ್ರದಲ್ಲಿ ನಕ್ಸಲ್- ಪೊಲೀಸ್ ಚಕಮಕಿ/ ನಾಲ್ವರು ನಕ್ಸಲರ ಹತ್ಯೆ

ಸಮಗ್ರ ನ್ಯೂಸ್: ಪೊಲೀಸರು ಹಾಗೂ ನಕ್ಸಲರ ನಡುವೆ ಮಹಾರಾಷ್ಟ್ರದ ಗಡ್ಡಿರೋಲಿಯಲ್ಲಿ ಭಾರೀ ಗುಂಡಿನ ಚಕಮಕಿ ನಡೆದಿದ್ದು, ನಾಲ್ವರು ನಕ್ಸಲರನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಮಹಾರಾಷ್ಟ್ರ ಪೊಲೀಸರ ವಿಶೇಷ ಸಿ-60 ಕಮಾಂಡೋಗಳು ಹಾಗೂ ಸಿಆರ್‍ಪಿಎಫ್ ಕಮಾಂಡೋಗಳು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅನಾಹುತ ಸೃಷ್ಟಿಸಲು ಸಂಚು ರೂಪಿಸಿ ಅರಣ್ಯಗಳಲ್ಲಿ ಅಡಗಿ ಕುಳಿತಿದ್ದ ನಕ್ಸಲರನ್ನು ಹೊಡೆದುರುಳಿಸಿದ್ದಾರೆ. ನಕ್ಸಲರನ್ನು ಹಿಡಿದುಕೊಟ್ಟವರಿಗೆ 36 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು. ಇದೀಗ ನಕ್ಸಲರು ಬಲಿಯಾಗಿದ್ದು, ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಮಹಾರಾಷ್ಟ್ರದಲ್ಲಿ ನಕ್ಸಲ್- ಪೊಲೀಸ್ ಚಕಮಕಿ/ ನಾಲ್ವರು ನಕ್ಸಲರ ಹತ್ಯೆ Read More »

ಪಶ್ಚಿಮ ಬಂಗಾಳದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ವಿವೇಕ್ ಸಹಾಯ್ ನೇಮಕ

ಸಮಗ್ರ ನ್ಯೂಸ್: ಪಶ್ಚಿಮ ಬಂಗಾಳದ ಡಿಜಿಪಿ ಹುದ್ದೆಯಿಂದ ರಾಜೀವ್ ಕುಮಾರ್ ಅವರನ್ನು ವಜಾಗೊಳಿಸಿದ ನಂತರ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ವಿವೇಕ್ ಸಹಾಯ್ ಅವರನ್ನು ನೇಮಕ ಮಾಡಲಾಗಿದೆ. ವಿವೇಕ್ ಸಹಾಯ್ ಅವರಿಗೆ ರಾಜ್ಯ ಪೊಲೀಸ್ ಮುಖ್ಯಸ್ಥರ ಜವಾಬ್ದಾರಿಯನ್ನು ನೀಡಲಾಗಿದ್ದು, ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ವಿವೇಕ್ ಸಹಾಯ್ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದಾರೆ. ವಿವೇಕ್ ಸಹಾಯ್ ಅವರು ಪಶ್ಚಿಮ ಬಂಗಾಳ ಕೇಡರ್‍ನ 1988 ಬ್ಯಾಚ್‍ನ ಐಪಿಎಸ್ ಅಧಿಕಾರಿ. ಅವರು ಈ ಹಿಂದೆ ಡೈರೆಕ್ಟರ್ ಜನರಲ್ (ಡಿಜಿ), ಪ್ರಾವಿಶನಿಂಗ್

ಪಶ್ಚಿಮ ಬಂಗಾಳದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ವಿವೇಕ್ ಸಹಾಯ್ ನೇಮಕ Read More »

ಬಿಜೆಪಿ ಸೇರ್ಪಡೆಗೊಂಡ ಸುಪ್ರೀಂ ಕೋರ್ಟ್ ವಕೀಲೆ ಸೀಮಾ ಕುಶ್ವಾಹಾ

ಸಮಗ್ರ ನ್ಯೂಸ್: ನಿರ್ಭಯಾ ಸಾಮೂಹಿಕ ಅತ್ಯಾಚಾರ, ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಶ್ರದ್ಧಾ ವಾಕರ್ ಹತ್ಯೆಯಂತಹ ಪ್ರಮುಖ ಪ್ರಕರಣಗಳಲ್ಲಿ ಸಂತ್ರಸ್ತರ ಪರವಾಗಿ ವಾದ ಮಂಡಿಸಿದ್ದ ಸುಪ್ರೀಂ ಕೋರ್ಟ್ ವಕೀಲೆ ಮತ್ತು ಬಿಎಸ್ಪಿ ನಾಯಕಿ ಸೀಮಾ ಕುಶ್ವಾಹಾ ಅವರು ಸೋಮವಾರ ಬಿಜೆಪಿ ಸೇರ್ಪಡೆಗೊಂಡಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವೆ ಪಕ್ಷಕ್ಕೆ ಸ್ವಾಗತಿಸಿದರು. ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ(ಬಿಎಸ್ಪಿ)ಕ್ಕೆ ಕುಶ್ವಾಹಾ ಅವರು 2022 ರ ಜನವರಿಯಲ್ಲಿ ಸೇರಿದ್ದರು. ಸೀಮಾ ಅವರು ನಿರ್ಭಯಾ ಜ್ಯೋತಿ ಟ್ರಸ್ಟ್ ಸ್ಥಾಪಿಸಿದರು

ಬಿಜೆಪಿ ಸೇರ್ಪಡೆಗೊಂಡ ಸುಪ್ರೀಂ ಕೋರ್ಟ್ ವಕೀಲೆ ಸೀಮಾ ಕುಶ್ವಾಹಾ Read More »