ರಾಷ್ಟ್ರೀಯ

ಆದಾಯ ತೆರಿಗೆ ಪಾವತಿದಾರರೇ ಇಲ್ಲಿ ಕೇಳಿ | ನಿಮಗೆ ಗೊತ್ತಿರಲಿ ಈ ೬ ವೈಶಿಷ್ಟ್ಯಗಳು

ನವದೆಹಲಿ: ಆದಾಯ ತೆರಿಗೆ ಇಲಾಖೆಯಿಂದ ಹೊಸ ಇ- ಫೈಲಿಂಗ್ ವೆಬ್ಸೈಟ್ incometax.gov.in – ಇಂದಿನಿOದ (ಜೂನ್ ೭, ೨೦೨೧) ಆರಂಭವಾಗಲಿದೆ. ಎಲ್ಲ ಬಗೆಯಲ್ಲೂ ಹೊಸದಾದ ಮೊಬೈಲ್ ಆ್ಯಪ್, ಪ್ರೀ ಫಿಲ್ಡ್ (ಅದಾಗಲೇ ಭರ್ತಿ ಮಾಡಿದ) ಆದಾಯ ತೆರಿಗೆ ಮಾಹಿತಿ, ಐಟಿಆರ್ ಫಾರ್ಮ್ ಮತ್ತು ಸರಳ ಆದಾಯ ತೆರಿಗೆ ವ್ಯವಸ್ಥೆ ಇವೆಲ್ಲವೂ ಹೊಸ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿದೆ. ಇ- ಫೈಲಿಂಗ್ ಪೋರ್ಟಲ್ ೨.೦ ಮೂಲಕ ತೆರಿಗೆ ಪಾವತಿದಾರರಿಗೆ ಆಧುನಿಕವಾದ, ಅಡೆತಡೆ ಇಲ್ಲದಂಥ ಅನುಭವವನ್ನು ದೊರಕಿಸುತ್ತದೆ. ಹಲವು ಬಗೆಯಲ್ಲಿ ತಾಂತ್ರಿಕ […]

ಆದಾಯ ತೆರಿಗೆ ಪಾವತಿದಾರರೇ ಇಲ್ಲಿ ಕೇಳಿ | ನಿಮಗೆ ಗೊತ್ತಿರಲಿ ಈ ೬ ವೈಶಿಷ್ಟ್ಯಗಳು Read More »

ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಭಾಷಣ

ನವದೆಹಲಿ: ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ. ಕೋವಿಡ್ ಎರಡನೇ ಅಲೆ ಹಿಮ್ಮೆಟ್ಟಲು ಕಳೆದೊಂದು ತಿಂಗಳಿನಿಂದ ರಾಷ್ಟ್ರವ್ಯಾಪಿ ಲಾಕ್ಡೌನ್ ಮಾಡಲಾಗಿತ್ತು. ಇದೀಗ ಹಲವು ರಾಜ್ಯಗಳಲ್ಲಿ ಹಂತಹಂತವಾಗಿ ಲಾಕ್ಡೌನ್ ತೆರವುಗೊಳಿಸಲಾಗುತ್ತಿದೆ. ಅದಲ್ಲದೆ ರಾಷ್ಟ್ರಾದಾದ್ಯಂತ ಕೊರೋನ ವ್ಯಾಕ್ಸಿನ್ ಚುಚ್ಚು ಮದ್ದು ಹಂತಹಂತವಾಗಿ ನೀಡಲಾಗುತ್ತಿದೆ. ಅದರಂತೆ ಕೋವಿಡ್ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಇನ್ನು ಮುಂದಿನ ನಡೆಯ ಬಗ್ಗೆ ದೇಶದ

ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಭಾಷಣ Read More »

ಕಾಸರಗೋಡು: ಸಾವಿನ ಸಂಖ್ಯೆ 500 ದಾಟಿದರೂ ಲೆಕ್ಕ ಮಾತ್ರ 154 ಮೀರಿಲ್ಲ

ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿ ಇದುವರೆಗೆ ಮೃತಪಟ್ಟವರ ಸಂಖ್ಯೆ ಐನೂರು ದಾಟಿದ್ದು ಆರೋಗ್ಯ ಇಲಾಖೆ ದಾಖಲೆಗಳಲ್ಲಿ ಮಾತ್ರ 154 ದಾಟಿಲ್ಲ. ಆಸ್ಪತ್ರೆಗಳು ಕೊರೊನಾದಿಂದ ಸಾವು ಸಂಭವಿಸಿದೆ ಎಂದರು ಆರೋಗ್ಯ ಇಲಾಖೆ ಮಾತ್ರ ಅದನ್ನು ಅಲ್ಲಗಳೆದಿದೆ. ಇನ್ನು ಕೋವಿಡ್ ನಿಂದ ಸಾವು ಸಂಭವಿಸಿದಾಗ ಅದನ್ನು ದಾಖಲೆಗೆ ಸೇರಿಸಿಕೊಳ್ಳಲು ರಾಜ್ಯ ಸರ್ಕಾರದ ಕೆಲವು ನಿಬಂಧನೆಗಳಿವೆ. ಅದಕ್ಕನುಗುಣವಾಗಿ ಸಾವಿನ ಸಂಖ್ಯೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದ್ದು ಇನ್ನು ಸರಕಾರ ಕೈಗೊಂಡ ನಿಬಂಧನೆಗಳಲ್ಲಿರುವ ಕುಂದುಕೊರತೆಗಳಿಂದಾಗಿ ಈ ದಾಖಲೆಗಳಲ್ಲಿ ಕೊರತೆ ಉಂಟಾಗಿದೆ

ಕಾಸರಗೋಡು: ಸಾವಿನ ಸಂಖ್ಯೆ 500 ದಾಟಿದರೂ ಲೆಕ್ಕ ಮಾತ್ರ 154 ಮೀರಿಲ್ಲ Read More »

“ಮನೆಬಾಗಿಲಿಗೆ ಪಡಿತರ” ದಿಲ್ಲಿ ಸರ್ಕಾರದ ಯೋಜನೆಗೆ ತಡೆ | ಕೇಂದ್ರ ರೇಷನ್ ಮಾಫಿಯಾ ಪ್ರಭಾವಕ್ಕೊಳಗಾಗಿದೆ: ಕೇಜ್ರಿವಾಲ್

ನವದೆಹಲಿ: ದಿಲ್ಲಿ ರಾಜ್ಯ ಸರಕಾರದ ಮನೆಬಾಗಿಲಿಗೆ ಪಡಿತರ ತಲುಪಿಸುವ ಮಹತ್ತರ ಯೋಜನೆಗೆ ಕೇಂದ್ರ ಸರ್ಕಾರ ತಡೆಹಿಡಿದಿದೆ. ಕೇಂದ್ರ ಸರ್ಕಾರದ ಈ ನಡೆಗೆ ತೀವ್ರ ಆಕ್ರೋಶ ಹೊರಹಾಕಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕೇಂದ್ರ ಸರ್ಕಾರ ಸಂಪೂರ್ಣವಾಗಿ ರೇಷನ್ ಮಾಫಿಯಾದ ಪ್ರಭಾವಕ್ಕೊಳಗಾಗಿದೆ ಎಂದಿದ್ದಾರೆ. ರೇಷನ್ ಅಂಗಡಿಗಳಲ್ಲಿ ಜನ ಸೇರುವ ಕಾರಣ ಕೋವಿಡ್ ವ್ಯಾಪಕವಾಗಿ ಹರಡುತ್ತಿದೆ. ಅದನ್ನು ಹೋಗಲಾಡಿಸಲು ಮನೆಮನೆಗೆ ರೇಷನ್ ತಲುಪಿಸಿದರೆ ಒಳಿತು ಎಂದು ರಾಜ್ಯ ಸರ್ಕಾರ ತೀರ್ಮಾನಿಸಿ ಇನ್ನೆರಡು ದಿನಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ಕೈ ಹಾಕಿತ್ತು. ಈ ನಡುವೆ

“ಮನೆಬಾಗಿಲಿಗೆ ಪಡಿತರ” ದಿಲ್ಲಿ ಸರ್ಕಾರದ ಯೋಜನೆಗೆ ತಡೆ | ಕೇಂದ್ರ ರೇಷನ್ ಮಾಫಿಯಾ ಪ್ರಭಾವಕ್ಕೊಳಗಾಗಿದೆ: ಕೇಜ್ರಿವಾಲ್ Read More »

ಪೊಲೀಸ್ ಬಲೆಗೆ ಬಿದ್ದ ಪೊಲೀಸ್ ಜೊತೆ ಮಂಚ ಹತ್ತಿದ್ದ ಪೊಲೀಸ್

ಹೈದರಾಬಾದ್​: ಸಹೋದ್ಯೋಗಿ ಮಹಿಳೆಯೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾಗ ಪಿ ಎಸ್ ಐ ಪೊಲೀಸ್ ಬಲೆಗೆ ಬಿದ್ದ ಘಟನೆ ಹೈದರಬಾದ್ನಲ್ಲಿ ನಡೆದಿದೆ. ಸಹೋದ್ಯೋಗಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿ ಸಿಕ್ಕಿಬಿದ್ದ ಹೈದರಾಬಾದ್​ನ ಜವಹರ್​ ನಗರ ಠಾಣೆಯ ಸಬ್​ ಇನ್ಸ್​ಪೆಕ್ಟರ್​ನನ್ನು ರಾಚಕೊಂಡ ಪೊಲೀಸ್​ ಆಯುಕ್ತ ಮಹೇಶ್​ ಭಾಗವತ್​ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಪಿಎಸ್​ಐ ಅನಿಲ್​ ಎಂಬವರು ಮಹಿಳಾ ಸಿಬ್ಬಂದಿಯೊಂದಿಗೆ ಹಲವು ದಿನಗಳಿಂದ ಈ ಸಂಬಂಧ ಇಟ್ಟುಕೊಂಡಿದ್ದರು. ಇದರ ನಡುವೆ ತಿಮ್ಮೈಪಲ್ಲಿಯಲ್ಲಿರುವ ರೆಸಾರ್ಟ್​ನಒಂದರಲ್ಲಿ ಅನಿಲ್​ ಮತ್ತು ಮಹಿಳೆ ಇಬ್ಬರು ಸೇರಿರುವುದಾಗಿ ಕೀಸರ

ಪೊಲೀಸ್ ಬಲೆಗೆ ಬಿದ್ದ ಪೊಲೀಸ್ ಜೊತೆ ಮಂಚ ಹತ್ತಿದ್ದ ಪೊಲೀಸ್ Read More »

ಹೈಕಮಾಂಡ್ ಸೂಚಿಸಿದರೆ ತಕ್ಷಣ ರಾಜೀನಾಮೆ: ಸಿಎಂ ಬಿ.ಎಸ್ ಯಡಿಯೂರಪ್ಪ

ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರ, ಬಿಜೆಪಿಯಲ್ಲಿನ ಅಸಮಾಧಾನದ ಬೆನ್ನಲ್ಲೇ ಖಡಕ್ ಪ್ರತಿಕ್ರಿಯೆ ನೀಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. ವಿಧಾನಸೌದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಬಿಜೆಪಿ ಹೈಕಮಾಂಡ್ ನನ್ನ ಮೇಲೆ ಸಂಪೂರ್ಣ ವಿಶ್ವಾಸವಿಟ್ಟಿದೆ. ಎಲ್ಲಿಯವರೆಗೆ ಅಧಿಕಾರದಲ್ಲಿರಲು ಹೇಳುತ್ತಾರೋ ಅಲ್ಲಿಯವರೆಗೂ ನಾನು ಅಧಿಕಾರದಲ್ಲಿ ಮುಂದುವರೆಯುತ್ತೇನೆ. ಹೈಕಮಾಂಡ್ ರಾಜೀನಾಮೆ ನೀಡುವಂತೆ ನನಗೆ ಸೂಚಿಸಿದರೆ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ನಾಯಕತ್ವ ಬದಲಾವಣೆ ನಿಟ್ಟಿನಲ್ಲಿ ತೆರೆ ಮರೆಯಲ್ಲಿ ಕೆಲ

ಹೈಕಮಾಂಡ್ ಸೂಚಿಸಿದರೆ ತಕ್ಷಣ ರಾಜೀನಾಮೆ: ಸಿಎಂ ಬಿ.ಎಸ್ ಯಡಿಯೂರಪ್ಪ Read More »

ಬಾಲಕಿಯ ಸಾಮೂಹಿಕ ಅತ್ಯಾಚಾರ: ಕಿರುತೆರೆ ನಟನ ಬಂಧನ

ಮುಂಬೈ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪದ ಮೇಲೆ ಕಿರುತೆರೆ ನಟ ಪರ್ವ್ ವಿ. ಪುರಿ ಸೇರಿದಂತೆ 6 ಮಂದಿಯನ್ನು ಮುಂಬೈ ವಾಲಿವ್ ಪೊಲೀಸರು ಬಂಧಿಸಿದ್ದಾರೆ.ಕಾರಿನಲ್ಲಿ ನಟ ಸೇರಿದಂತೆ ಇತರರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ನೀಡಿದ ದೂರಿನ ಅನ್ವಯ ಮುಂಬೈನ ವಾಲಿವ್ ಪೊಲೀಸರು ಪರ್ವ್ ವಿ ಪುರಿ ಸೇರಿದಂತೆ 6 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ದಿಲ್ ಕಿ ನಸರ್ ಸೆ ಖೂಬ್ ಸೂರತ್ ಧಾರವಾಹಿ ಮೂಲಕ 2013ರಲ್ಲಿ ಕಿರುತೆರೆ ಕಾಲಿಟ್ಟ

ಬಾಲಕಿಯ ಸಾಮೂಹಿಕ ಅತ್ಯಾಚಾರ: ಕಿರುತೆರೆ ನಟನ ಬಂಧನ Read More »

ಸೊಸೆಯ ತಬ್ಬಿಕೊಂಡು ಕೊರೋನ ಅಂಟಿಸಿದಳು ಅತ್ತೆ

ತೆಲಂಗಾಣ: ಅತ್ತೆ-ಸೊಸೆ ಸಂಭಂದವೆಂದರೆ ಅದು ಹಾವು ಮುಂಗುಸಿಯ ಸಂಭಂದದಂತೆ ಎಂಬ ಮಾತು ಚಾಲ್ತಿಯಲ್ಲಿದೆ. ಆಧುನಿಕ ಕಾಲದಲ್ಲಿ ಅಂತೂ ಅತ್ತೆ-ಸೊಸೆ ವೈರತತ್ವವಿರದ ಕುಟುಂಬ ಕಾಣಸಿಗುವುದು ಬಹಳ ವಿರಳ. ಇದಕ್ಕೆ ಪುಷ್ಟಿ ಎಂಬಂತೆ ರಾಜ್ಯದಲ್ಲೊಂದು ಘಟನೆ ನಡೆದಿದೆ. ಸಿರಿಸಿಲ್ಲಾ ಜಿಲ್ಲೆಯ ಸುಮಾರಿಪೇಟಾ ಗ್ರಾಮದಲ್ಲಿ, ಸೊಸೆಯ ಮೇಲೆ ಕುಪಿತಗೊಂಡ ಸೊಂಕಿತೆ ಅತ್ತೆಯೊಬ್ಬಳು ಆಕೆಯನ್ನು ತಬ್ಬಿಕೊಂಡು ಸೋಂಕು ಅಂಟಿಸಿದ ಘಟನೆ ನಡೆದಿದೆ. ಹಿಂದಿನಿಂದಲೂ ಸೊಸೆಯ ಮೇಲೆ ಹಠ ಸಾಧಿಸುತ್ತಿದ್ದ ಅತ್ತೆ, ಕೋವಿಡ್ ಸೋಂಕಿಗೊಳಗಾಗಿ ಕ್ವಾರಂಟೈನ್ ನಲ್ಲಿದ್ದಳು. ಈ ಕಾರಣದಿಂದ ಸೊಸೆ ತನ್ನ ಮಕ್ಕಳನ್ನು

ಸೊಸೆಯ ತಬ್ಬಿಕೊಂಡು ಕೊರೋನ ಅಂಟಿಸಿದಳು ಅತ್ತೆ Read More »

ದೇಶದಲ್ಲಿ ಒಂದೇ ದಿನ 1.2 ಲಕ್ಷ ಕೋವಿಡ್ ಸೋಂಕು ಪ್ರಕರಣ ಪತ್ತೆ

ನವದೆಹಲಿ : ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಕೊಂಚ ಕೊಂಚವಾಗಿ ಇಳಿಕೆಯಾಗುತ್ತಿದೆ. ಇದೀಗ ಕಳೆದ 24 ಗಂಟೆಗಳಲ್ಲಿ, ಭಾರತವು ಕೋವಿಡ್-19 ರ 1.2 ಲಕ್ಷ ಹೊಸ ಪ್ರಕರಣಗಳನ್ನು ದಾಖಲಿಸಿದೆ, ಇದು ಕಳೆದ 58 ದಿನಗಳಲ್ಲಿ ಪ್ರಕರಣಗಳ ಕನಿಷ್ಠ ಏಕ ದಿನದ ಹೆಚ್ಚಳವಾಗಿದೆ. ದೇಶದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳು 15,55,248. ದೇಶಾದ್ಯಂತ ಕೋವಿಡ್ ಸೋಂಕಿನಿಂದ ಈವರೆಗೆ ೨.೬೭ ಕೋಟಿಗೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ, ಕಳೆದ ೨೪ ಗಂಟೆಗಳಲ್ಲಿ 1,97,894 ಜನರು ಚೇತರಿಸಿಕೊಂಡಿದ್ದಾರೆ.ದೈನಂದಿನ ಪಾಸಿಟಿವಿಟಿ ದರವು ಶೇಕಡಾ 5.78 ಕ್ಕೆ

ದೇಶದಲ್ಲಿ ಒಂದೇ ದಿನ 1.2 ಲಕ್ಷ ಕೋವಿಡ್ ಸೋಂಕು ಪ್ರಕರಣ ಪತ್ತೆ Read More »

ಲಸಿಕೆ ಪಡೆಯಲು ಹಿಂಜರಿಯುವವರಿಗೆ ಇವರೇ ಸ್ಫೂರ್ತಿ | ಮೊದಲ ಡೋಸ್ ಪಡೆದು ಆರೋಗ್ಯವಾಗಿದ್ದಾರೆ 124 ವರ್ಷದ ಅಜ್ಜಿ

ಶ್ರೀನಗರ: ಜಗತ್ತನ್ನೇ ನಡುಗಿಸಿ ಕ್ರೌರ್ಯ ಮೆರೆಯುತ್ತಿರುವ ಕೊರೋನ ಕಂಡರೆ, ಕೇಳಿದರೆ ಹಲವರಿಗೆ ಭಯ. ಕಳೆದೆರಡು ವರ್ಷದಲ್ಲಿ ತಾಂಡವವಾಡುತ್ತಿರುವ ಕೊರೋನ ಜೀವ-ಜಗತ್ತನ್ನೇ ನಡುಗಿಸಿದ ಬಿಟ್ಟಿದೆ. ಕೊರೋನ ಹೆಸರು ಕೇಳಿ ಭಯ ಪಡುವುದರಲ್ಲಿ ತಪ್ಪಿಲ್ಲ ಆದರೆ ಕೆಲ ಜನರು ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳಲು ಭಯಪಟ್ಟು ಹಿಂಜರಿಯುತ್ತಿರುವುದು ಅಚ್ಚರಿಯ ವಿಷಯ. ಆದರೆ ಇಲ್ಲೊಬ್ಬ ಬರೋಬ್ಬರಿ 124 ವರ್ಷದ ವೃದ್ಧರೊಬ್ಬರು ಮೊದಲ ಡೋಸ್ ಲಸಿಕೆ ಪಡೆದು ವ್ಯಾಕ್ಸಿನ್ ಪಡೆಯಲು ಹಿಂಜರಿಕೆ ಉಳ್ಳವರಿಗೆ ಸ್ಪೂರ್ತಿ ಎನಿಸಿದ್ದಾರೆ. ಇವರ ಹೆಸರು ರೆಹತಿ ಬೇಗಂ. ಜಮ್ಮು ಕಾಶ್ಮೀರದ

ಲಸಿಕೆ ಪಡೆಯಲು ಹಿಂಜರಿಯುವವರಿಗೆ ಇವರೇ ಸ್ಫೂರ್ತಿ | ಮೊದಲ ಡೋಸ್ ಪಡೆದು ಆರೋಗ್ಯವಾಗಿದ್ದಾರೆ 124 ವರ್ಷದ ಅಜ್ಜಿ Read More »