ರಾಷ್ಟ್ರೀಯ

ರಾಜ್ಯಸಭೆಯ ಸದನ ನಾಯಕರಾಗಿ ಪಿಯೂಷ್ ಗೋಯಲ್

ನವೆದಹಲಿ : ಪ್ರಸ್ತುತ ರಾಜ್ಯಸಭೆಯ ಉಪ ಮಹಡಿ ನಾಯಕರಾಗಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಭಾರತೀಯ ಜನತಾ ಪಕ್ಷದ ರಾಜ್ಯಸಭೆಯ ಸದನದ ನಾಯಕರಾಗಲಿದ್ದಾರೆ. ಸಧ್ಯ ಕರ್ನಾಟಕದ ರಾಜ್ಯಪಾಲರಾಗಿರುವ ಹಿರಿಯ ನಾಯಕ ಥಾವರ್ ಚಂದ್ ಗೆಹ್ಲೋಟ್ ಅವರ ರಾಜೀನಾಮೆಯ ನಂತರ ತೆರವಾದ ಸ್ಥಾನವನ್ನ ಗೋಯಲ್ ಅಲಂಕರಿಸಲಿದ್ದಾರೆ. ಹಿರಿಯ ಸಂಸದೀಯ ನಾಯಕರಾಗಿರುವ ಗೋಯಲ್ ಅವರು ತ್ರಿವಳಿ ತಲಾಖ್ ಮತ್ತು ಅನುಚ್ಛೇದ 370 ರಂತಹ ನಿರ್ಣಾಯಕ ಮಸೂದೆಗಳನ್ನು ಅಂಗೀಕರಿಸುವ ಸಮಯದಲ್ಲಿ ಸೇರಿದಂತೆ ಪರಿಣಾಮಕಾರಿ ಸನ್ನಿವೇಶಗಳಲ್ಲಿ ಫ್ಲೋರ್ ಮ್ಯಾನೇಜರ್ ಆಗಿದ್ದಾರೆ.ಮಹಾರಾಷ್ಟ್ರ ಮೂಲದ […]

ರಾಜ್ಯಸಭೆಯ ಸದನ ನಾಯಕರಾಗಿ ಪಿಯೂಷ್ ಗೋಯಲ್ Read More »

ಮುಳುಗಿದ್ದ ಸೇತುವೆ ಮೇಲೆ ಬಸ್ ಚಲಾಯಿಸಿದ ಚಾಲಕ ಅಮಾನತು

ಮಹಾರಾಷ್ಟ್ರ: ಪ್ರವಾಹದಿಂದ ಸಂಪೂರ್ಣವಾಗಿ ಮುಳುಗಿದ್ದು ಸೇತುವೆ ಮೇಲೆ ಚಾಲಕನೊಬ್ಬ ಬಸ್ ಚಲಾಯಿಸಿದ ಘಟನೆ ರಾಯಗಡ ಜಿಲ್ಲೆಯಲ್ಲಿ ನಡೆದಿದೆ. ಜನರ ಜೀವದ ಜೊತೆ ಚೆಲ್ಲಾಟವಾಡಿದ ಚಾಲಕರನ್ನು ಎಂಎಸ್ಆರ್’ಟಿಸಿ ಅಮಾನತು ಮಾಡಿದೆ. ರಾಯಗಡದ ಮಹಾಡ ತಾಲೂಕಿನ ನದಿಯ ಸೇತುವೆ ಭಾರಿ ಮಳೆ ಹಿನ್ನೆಲೆಯಲ್ಲಿ ಮುಳುಗಡೆಯಾಗಿತ್ತು. ಮುಳುಗಿದೆ ಸೇತುವೆ ಮೇಲೆ ಇತರೆ ಯಾವುದೇ ವಾಹನಗಳು ಸಂಚರಿಸಿಲ್ಲ. ಆದರೆ ದುಸ್ಸಾಹಸಕ್ಕೆ ಕೈಹಾಕಿದ ಎಂಎಸ್ಆರ್’ಟಿಸಿ ಬಸ್ ಚಾಲಕ ಬಸ್ಸನ್ನು ನೀರಿನ ಮೇಲೆಯೇ ನದಿಯ ಇನ್ನೊಂದು ಬದಿಗೆ ಕೊಂಡೊಯ್ದಿದ್ದಾನೆ. ನದಿ ದಾಟುತ್ತಿದ್ದಂತೆ ಬಸ್ ಹಡಗಿನಂತೆ ಕಂಡುಬಂದಿದೆ.

ಮುಳುಗಿದ್ದ ಸೇತುವೆ ಮೇಲೆ ಬಸ್ ಚಲಾಯಿಸಿದ ಚಾಲಕ ಅಮಾನತು Read More »

RBI ಮುದ್ರಣಾಲಯದಿಂದಲೇ ಬಂಡಲ್ ಬಂಡಲ್ ಬಿಸಿ ಬಿಸಿ ನೋಟು ಮಾಯ…..!

ಮುಂಬೈ: ಮುಂಬೈನಲ್ಲಿರುವ ನೋಟು ಮುದ್ರಾಣಾಲಯದಿಂದ ಐದು ಬಂಡಲ್ 500 ರೂ ನೋಟು ನಾಪತ್ತೆಯಾಗಿದೆ. ಈ ಬಗ್ಗೆ ನಾಸಿಕ್ ಪೊಲೀಸ್ ಠಾಣೆಯಲ್ಲಿ ಮುದ್ರಣಾಲಯದ ಅಧಿಕಾರಿಗಳು ದೂರು ನೀಡಿದ್ದಾರೆ. ಝೆಡ್ ಪ್ಲಸ್ ಸೆಕ್ಯೂರಿಟಿ ನಡುವೆಯೂ 5 ಲಕ್ಷ ಮೌಲ್ಯದ ನೋಟು ನಾಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ ಮತ್ತು ಅನುಮಾನಕ್ಕೆ ಕಾರಣವಾಗಿದೆ. ವರ್ಷಕ್ಕೆ ಎರಡರಿಂದ ಎರಡೂವರೆ ಸಾವಿರ ಮಿಲಿಯನ್ ರೂಪಾಯಿ ಮೌಲ್ಯದ ನೋಟುಗಳನ್ನು ಇಲ್ಲಿ ಮುದ್ರಿಸಲಾಗುತ್ತದೆ. ಆದರೆ ಇಲ್ಲಿಯ ವರೆಗೆ ಇಂತಹ ಪ್ರಕರಣಗಳು ವರದಿಯಾಗಿಲ್ಲ. ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ದಿನಕ್ಕೆ ಕೋಟಿ-ಕೋಟಿ ಮೌಲ್ಯದ

RBI ಮುದ್ರಣಾಲಯದಿಂದಲೇ ಬಂಡಲ್ ಬಂಡಲ್ ಬಿಸಿ ಬಿಸಿ ನೋಟು ಮಾಯ…..! Read More »

ಪುಲ್ವಾಮದಲ್ಲಿ ಬೆಳ್ಳಂಬೆಳಗ್ಗೆ ಮೂವರು LET ಉಗ್ರರು ಫಿನಿಷ್

ಪುಲ್ವಾಮ: ಜಮ್ಮು ಕಾಶ್ಮೀರದ ಪುಲ್ವಾಮ ದಲ್ಲಿ ಉಗ್ರರಿರುವ ಖಚಿತ ಮಾಹಿತಿ ಪಡೆದ ಸೇನೆ ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನು ಹೊಡೆದುರುಳಿಸಿದೆ . ಇಂದು ಮುಂಜಾನೆ ಪುಲ್ವಾಮ ನಗರದಲ್ಲಿ ಉಗ್ರರಿರುವ ಬಗ್ಗೆ ಸೇನಾಧಿಕಾರಿಗಳಿಗೆ ಖಚಿತ ಮಾಹಿತಿ ದೊರೆತಿತ್ತು. ತಕ್ಷಣ ಕಾರ್ಯಪ್ರವೃತವಾದ ಭಾರತೀಯ ಭೂ ಸೇನೆ ಉಗ್ರರಿರುವ ಸ್ಥಳವನ್ನು ಸುತ್ತುವರೆದಿದೆ. ಅದಾಗಲೇ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದಾರೆ. ತಕ್ಷಣ ಪ್ರತಿದಾಳಿ ನಡೆಸಿದ ಯೋಧರು ಲಷ್ಕರ್-ಇ-ತಾಯ್ಬಾ ಉಗ್ರ ಸಂಘಟನೆಯ ಓರ್ವ ಕಾಮಾಂಡರ್ ಸೇರಿದಂತೆ ಮೂವರು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪುಲ್ವಾಮದಲ್ಲಿ ಬೆಳ್ಳಂಬೆಳಗ್ಗೆ ಮೂವರು LET ಉಗ್ರರು ಫಿನಿಷ್ Read More »

ಎಷ್ಟೇ ಗೋಗರೆದರೂ ಕರಗದ ಪ್ರಿಯಕರನ ಮನ | ಕಲ್ಯಾಣ ಮಂಟಪದೆದುರು ಪ್ರೀತಿಗಾಗಿ ಅಂಗಲಾಚಿದ ಪ್ರೇಯಸಿ | ಇಲ್ಲಿದೆ ಮನಕರಗಿಸುವ ವಿಡಿಯೋ

ಮಧ್ಯಪ್ರದೇಶ: ತನ್ನನ್ನು ಪ್ರೀತಿಸಿದ ಯುವಕ ಬೇರೊಬ್ಬಳು ಯುವತಿಯೊಂದಿಗೆ ವಿವಾಹವಾಗುತ್ತಿರುವ ವಿಷಯ ತಿಳಿದ ಯುವತಿಯೊಬ್ಬಳು ಮನನೊಂದು ಕಲ್ಯಾಣ ಮಂಟಪದೆದುರು ಪ್ರೀತಿಗಾಗಿ ಗೋಗರೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ. ರಾಜ್ಯದ ಹೋಶಂಗಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಯುವಕ ಮತ್ತು ಕಾನ್ಪುರ ಮೂಲದ ಯುವತಿ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಒಬ್ಬೊರನ್ನೊಬ್ಬರು ಬಿಟ್ಟಿರದ ಇಬ್ಬರೂ, ಬಹಳ ಅನ್ಯೋನ್ಯವಾಗಿದ್ದರು. ಆದರೆ ಕೊನೆಯಲ್ಲಿ ಯುವಕ ಕೈಕೊಟ್ಟಿದ್ದಾನೆ. ಯುವಕ ತನಗೆ ಮೋಸ ಮಾಡಿ ಬೇರೊಬ್ಬಳ ಜೊತೆ ಮದುವೆಯಾಗುತ್ತಿರುವ ವಿಷಯ ಇತ್ತೀಚೆಗೆ

ಎಷ್ಟೇ ಗೋಗರೆದರೂ ಕರಗದ ಪ್ರಿಯಕರನ ಮನ | ಕಲ್ಯಾಣ ಮಂಟಪದೆದುರು ಪ್ರೀತಿಗಾಗಿ ಅಂಗಲಾಚಿದ ಪ್ರೇಯಸಿ | ಇಲ್ಲಿದೆ ಮನಕರಗಿಸುವ ವಿಡಿಯೋ Read More »

ಬರ್ತಾ ಇದೆ ಮೂರನೇ ಅಲೆ, ದೇಶವಾಸಿಗಳೇ ಎಚ್ಚರದಿಂದಿರಿ- ಐಎಂಎ ಕಳವಳ

ನವದೆಹಲಿ: ಕೊರೋನಾ 2ನೇ ಅಲೆ ಇಳಿಕೆಯ ನಂತರ ಜನರು ಮಾರ್ಗಸೂಚಿಗಳನ್ನು ಎಗ್ಗಿಲ್ಲದೇ ಮುರಿಯುತ್ತಿದ್ದು, ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆತಂಕ ವ್ಯಕ್ತಪಡಿಸಿದೆ. ಜನರ ವಿನಾಕಾರಣ ಓಡಾಟ ಹಾಗೂ‌ ಯಾತ್ರೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದೆ. ‘ ಜಗತ್ತಿನಲ್ಲಿ ಲಭ್ಯವಿರುವ ಸಾಕ್ಷ್ಯಗಳನ್ನು ನೋಡಿದರೆ ಹಾಗೂ ಯಾವುದೇ ಸಾಂಕ್ರಾಮಿಕ ರೋಗದ ಇತಿಹಾಸವನ್ನು ಗಮನಿಸಿದರೆ ಕೊರೋನಾದ 3ನೇ ಅಲೆ ಕೂಡ ಬಂದೇ ಬರುತ್ತದೆ ಎಂದು ಅನುಮಾನವಿಲ್ಲದೆ ಹೇಳಬಹುದು. ದೇಶದ ವೈದ್ಯಕೀಯ

ಬರ್ತಾ ಇದೆ ಮೂರನೇ ಅಲೆ, ದೇಶವಾಸಿಗಳೇ ಎಚ್ಚರದಿಂದಿರಿ- ಐಎಂಎ ಕಳವಳ Read More »

ಪೆಟ್ರೋಲ್ ಸುರಿದು ಬಾಲಕಿಯ ಹತ್ಯೆ ಯತ್ನ, ಯೋಗಿ ರಾಜ್ಯದಲ್ಲಿ ಯಾಕಿಂಗೆ?

ಲಕ್ನೊ: ಉತ್ತರ ಪ್ರದೇಶದಲ್ಲಿ ದಿನೇದಿನೇ ಅಪರಾದ ಚಟುವಟಿಕೆಗಳು ಹೆಚ್ಚಾಗ್ತಿದೆ. ಕೆಲ ದಿನಗಳ ಹಿಂದಷ್ಟೇ ದಲಿತ ಯುವಕನ ಮೇಲೆ ಹಲ್ಲೆ ಸೇರಿದಂತೆ ಹಲವು ಪ್ರಕರಣಗಳ ಕುರಿತು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ದ ಪ್ರತಿಪಕ್ಷಗಳು ವಾಕ್ಸಮರ ನಡೆಸಿದ್ದವು. ಅದರ ಬೆನ್ನಲ್ಲೇ ಮತ್ತೊಂದು ಅಮಾನವೀಯ ಘಟನೆ ರಾಜ್ಯದ ಬುಲಂದ್ ಶಹರ್ ಜಿಲ್ಲೆಯ ಮುಂಡಖೇಡದಲ್ಲಿ ನಡೆದಿದೆ. ವ್ಯಕ್ಯಿಯೋರ್ವ ಮನೆ ಮುಂದೆ ಬಿದ್ದಿದ್ದ ಸೆಗಣಿಯನ್ನು ಬಾಲಕಿಯೋರ್ವಳ ಬಳಿ ಎತ್ತಾಕಲು ಹೇಳಿದ್ದು, ಆಕೆ ವಿರೋದಿಸಿದಾಗ ಅವಳ ಜೊತೆಗೆ ಜಗಳ ಕಾಯ್ದಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆಕೆಯ

ಪೆಟ್ರೋಲ್ ಸುರಿದು ಬಾಲಕಿಯ ಹತ್ಯೆ ಯತ್ನ, ಯೋಗಿ ರಾಜ್ಯದಲ್ಲಿ ಯಾಕಿಂಗೆ? Read More »

ತಮಿಳುನಾಡು ರಾಜಕಾರಣದಲ್ಲಿ ಭಾರೀ ಸಂಚಲನ, ರಾಜಕೀಯ ವಿದಾಯ ಘೋಷಿಸಿದ ರಜನಿಕಾಂತ್,

ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಅಧಿಕೃತವಾಗಿ ಗುಡ್ ಬೈ ಹೇಳಿದ್ದು, ರಾಜಕೀಯ ಪಕ್ಷ ಬರ್ಕಾಸ್ತುಗೊಳಿಸುವುದಾಗಿ ಹೇಳಿದ್ದಾರೆ. ಕಳೆದ ವರ್ಷ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ರಾಜಕೀಯದಿಂದ ಹೊರಗುಳಿದಿದ್ದ ಸೂಪರ್ ಸ್ಟಾರ್ ರಜನೀಕಾಂತ್ ಅವರು, ಭವಿಷ್ಯದಲ್ಲಿ ರಾಜಕೀಯ ಪ್ರವೇಶ ಮಾಡಬೇಕೇ ಬೇಡವೇ ಎಂಬ ಬಗ್ಗೆ ರಜನಿ ಮಕ್ಕಳ್ ಮಂದ್ರಾಮ್ (ಆರ್ ಎಂಎಂ) ಪದಾಧಿಕಾರಿಗಳೊಂದಿಗೆ ಸಮಾಲೋಚಿಸಿದ ಬಳಿಕ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಅನಾರೋಗ್ಯದ ಕಾರಣಕ್ಕಾಗಿ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಸಂಪೂರ್ಣವಾಗಿ ವಿದಾಯ ಘೋಷಿಸಿದ್ದಾರೆ.ತಮ್ಮ ಪಕ್ಷ

ತಮಿಳುನಾಡು ರಾಜಕಾರಣದಲ್ಲಿ ಭಾರೀ ಸಂಚಲನ, ರಾಜಕೀಯ ವಿದಾಯ ಘೋಷಿಸಿದ ರಜನಿಕಾಂತ್, Read More »

ಸಿಡಿಲು ಬಡಿದು 20 ಮಂದಿ ದುರ್ಮರಣ, 17 ಮಂದಿ ಗಂಭೀರ

ಜೈಪುರ: ರಾಜಸ್ಥಾನದಲ್ಲಿ ಭಾನುವಾರ ಸಿಡಿಲಿನ ಹೊಡೆತಕ್ಕೆ ಸಿಲುಕಿ ಸುಮಾರು 20 ಜನ ಸಾವಿಗೀಡಾದ್ದಾರೆ. ರಾಜ್ಯದ ಜೈಪುರ, ಝಲವಾರ್, ಧೋಲ್‌ಪುರ ಜಿಲ್ಲೆಗಳಲ್ಲಿ‌ ದುರ್ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಸುಮಾರು 20 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 20 ಸಾವಿನ ಪೈಕಿ ಜೈಪುರದ ಹೊರವಲಯದಲ್ಲಿರುವ ಅಮೆರ್ ಕೋಟೆ (Amer Fort) ವೀಕ್ಷಣೆಗಾಗಿ ಸಂಜೆ ವೇಳೆ ಪ್ರವಾಸಿಗರು ಬಂದಿದ್ದಾಗ ವೇಳೆ ಸಂಭವಿಸಿದೆ ಎನ್ನಲಾಗಿದೆ. ಅಮೆರ್​ ಕೋಟೆಯ ವೀಕ್ಷಣಾಗೋಪುರದ ಬಳಿ ನಿಂತು ಪ್ರಕೃತಿ ವೀಕ್ಷಣೆಯಲ್ಲಿ ತೊಡಗಿದ್ದ ವೇಳೆ ಏಕಾಏಕಿ

ಸಿಡಿಲು ಬಡಿದು 20 ಮಂದಿ ದುರ್ಮರಣ, 17 ಮಂದಿ ಗಂಭೀರ Read More »

ವಿದ್ಯಾರ್ಥಿಗಳು ಪ್ರಿಪೇಡ್‌ ಎಜುಕೇಷನ್ App ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

ಬಾಗಲಕೋಟೆಯ ಜನಪ್ರಿಯ ನೆಪ್ರೊಲಜಿಸ್ಟ್ ಡಾ. ಸಂದೀಪ್ ಹುಯಿಲಗೋಳ ಅವರು ಒಂದಿಷ್ಟು ಸಮಾನಾಸಕ್ತ ತಂಡವನ್ನು ಕಟ್ಟಿಕೊಂಡು ಆರಂಭಿಸಿದ ಪ್ರಿಪೆಡ್‌ ಕಲಿಕಾ ಆಪ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯವಾಗಿ ನರ್ಸಿಂಗ್‌, ಪ್ಯಾರಾಮೆಡಿಕಲ್‌ ಮತ್ತು ಅಲೈಡ್‌ ಹೆಲ್ತ್ ಕೇರ್‌ ವಿದ್ಯಾರ್ಥಿಗಳಿಗೆ, ಇಂಗ್ಲಿಷ್‌ನಲ್ಲಿ ಕಲಿಯುವುದು ಕಷ್ಟ ಎನ್ನುವವರಿಗೆ ಈ ವೈದ್ಯರ ತಂಡವು ಸರಳವಾಗಿ ಆಪ್‌ ಮೂಲಕ ಬೋಧಿಸುತ್ತಿದೆ. ಶೈಕ್ಷಣಿಕ ಹಬ್ ಆದ ಬಾಗಲಕೋಟೆಯ ಡಾ. ಸಂದೀಪ್ ಅವರು ಕನ್ನಡ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಯ ಬೋಧಿಸುವ ವಿಶೇಷ ಸೇವೆ ಪರಿಚಯಿಸಿದ್ದಾರೆ.

ವಿದ್ಯಾರ್ಥಿಗಳು ಪ್ರಿಪೇಡ್‌ ಎಜುಕೇಷನ್ App ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? Read More »