ರಾಷ್ಟ್ರೀಯ

ನವಜಾತ ಶಿಶುವಿಗೆ 2 ಇಂಚು ಉದ್ದದ ಬಾಲ…!!

ಮೆಕ್ಸಿಕೊ: ನವಜಾತ ಶಿಶುವೊಂದು 2 ಇಂಚು ಉದ್ದದ ಬಾಲದೊಂದಿಗೆ ಜನಸಿದ ಘಟನೆ ಮೆಕ್ಸಿಕೋ ಸಿಟಿಯಲ್ಲಿರುವ ನ್ಯೂವೋ ಲಿಯಾನ್​ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಈ ಆಸ್ಪತ್ರೆಯಲ್ಲಿ ಇತ್ತೀಚೆಗೆ ಜನಿಸಿದ ಹೆಣ್ಣು ಮಗುವೊಂದಕ್ಕೆ 2 ಇಂಚು ಉದ್ದದ ಬಾಲ ಇರುವುದು ಗೊತ್ತಾಗಿದ್ದು ಕೂಡಲೇ ಬಾಲವನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆಯಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ. ಬಾಲವು 5.7 ಸೆಂ.ಮೀಟರ್​ ಉದ್ದವಿದ್ದು, ಮೃದುವಾಗಿತ್ತು. ಕೂದಲನ್ನೂ ಹೊಂದಿತ್ತು. ಪ್ರಾಣಿಗಳಲ್ಲಿರುವಂತೆ ಮೇಲ್ಭಾಗದಲ್ಲಿ ದಪ್ಪವಿದ್ದು, ತುದಿಯ ಕಡೆಗೆ ಕಿರಿದಾಗಿ 3ಎಂಎಂ ಮತ್ತು 5 ಎಂಎಂ ನಡುವಿನ […]

ನವಜಾತ ಶಿಶುವಿಗೆ 2 ಇಂಚು ಉದ್ದದ ಬಾಲ…!! Read More »

ಭಾರತ್ ಜೋಡೋ ಯಾತ್ರೆ ವೇಳೆ ಕಾಲ್ತುಳಿತ| ಕೆ.ಸಿ‌ ವೇಣುಗೋಪಾಲ್ ಜಖಂ

ಸಮಗ್ರ ನ್ಯೂಸ್: ಭಾರತ್ ಜೋಡೋ ಪಾದಯಾತ್ರೆ ವೇಳೆ ಕಾಲ್ತುಳಿತ ಉಂಟಾಗಿದ್ದು, ಈ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ. ಕೆ.ಸಿ. ವೇಣುಗೋಪಾಲ್ ಅವರ ಮೊಣಕಾಲು, ಕೈಗಳಿಗೆ ಗಾಯಗಳಾಗಿದ್ದು, ಭಾರತ್ ಜೋಡೋ ಯಾತ್ರೆ ಶಿಬಿರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಪಾದಯಾತ್ರೆ ವೇಳೆ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಜನರು ಮುನ್ನುಗ್ಗಿದ್ದಾರೆ. ಈ ವೇಳೆ ನೂಕಾಟ-ತಳ್ಳಾಟ ನಡೆದಿದ್ದು, ಕಾಲ್ತುಳಿತ ಸಂಭವಿಸಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಭಾರತ್ ಜೋಡೋ ಯಾತ್ರೆ ವೇಳೆ ಕಾಲ್ತುಳಿತ| ಕೆ.ಸಿ‌ ವೇಣುಗೋಪಾಲ್ ಜಖಂ Read More »

ಚಪ್ಪಲಿ ಕಚ್ಚಿಕೊಂಡು ಹೋದ ಹಾವು| ವಿಡಿಯೋ ವೈರಲ್

ಸಮಗ್ರ ನ್ಯೂಸ್: ಹಾವೊಂದು ಚಪ್ಪಲಿ ಕಚ್ಚಿಕೊಂಡು ಹೋಗುವ ವಿಡಿಯೋ ವೈರಲ್ ಆಗಿದ್ದು, ಹಾವಿನ ಈ ಸಾಹಸ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಈ ಹಾವು ಆ ಚಪ್ಪಲಿಯನ್ನು ಏನು ಮಾಡುತ್ತದೆ. ಅದಕ್ಕೆ ಕಾಲುಗಳಿಲ್ಲವಲ್ಲ ಎಂದು ಶೀರ್ಷಿಕೆಯಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಾಯಿಯಲ್ಲಿ ಚಪ್ಪಲಿ‌ ಕಚ್ಚಿಕೊಂಡ ಹಾವು ವೇಗವಾಗಿ ಸರಿದು ಹೋಗುತ್ತದೆ. ಈ ವೀಡಿಯೊ ಬಿಹಾರದ್ದೆಂದು ಹಲವರು ಗಮನ ಸೆಳೆದಿದ್ದು, ಲಕ್ಷಾಂತರ ವೀಕ್ಷಣೆ ಕಂಡಿದೆ. ಅನೇಕರು ರೋಚಕ‌ ಕಾಮೆಂಟ್ ಮಾಡಿದ್ದಾರೆ.

ಚಪ್ಪಲಿ ಕಚ್ಚಿಕೊಂಡು ಹೋದ ಹಾವು| ವಿಡಿಯೋ ವೈರಲ್ Read More »

ಪೇಟಿಎಂ ಜೊತೆಗೆ 10 ದೈತ್ಯ ಕಂಪೆನಿಗಳೂ ಹಳ್ಳಕ್ಕೆ!! ಷೇರು ಮಾರುಕಟ್ಟೆಯಲ್ಲಿ ಕೋಲಾಹಲ

ಸಮಗ್ರ ನ್ಯೂಸ್: ಪ್ರಸ್ತುತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಬಹಳಷ್ಟು ಕಂಪನಿಗಳು ನಷ್ಟ ತೋರಿಸಿವೆ. ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ 4 ಸಾವಿರಕ್ಕೂ ಹೆಚ್ಚು ಕಂಪನಿಗಳ ಪೈಕಿ ಸುಮಾರು 1,100ಕ್ಕೂ ಹೆಚ್ಚು ಕಂಪನಿಗಳು ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್‌ನಲ್ಲಿ ನಷ್ಟ ಕಂಡಿವೆ. ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ ಬರೋಬ್ಬರಿ 7,562.8 ಕೋಟಿ ರೂ ನಷ್ಟ ಹೊಂದಿರುವುದು ಅದರ ವರದಿಯಿಂದ ತಿಳಿದುಬರುತ್ತದೆ. ಈ ಕ್ವಾರ್ಟರ್‌ನಲ್ಲಿ ಅತಿಹೆಚ್ಚು ನಷ್ಟ ಹೊಂದಿದ ಕಂಪನಿ ಎಂಬ ಮುಜುಗರದ ದಾಖಲೆ ವೊಡಾಫೋನ್‌ಗೆ

ಪೇಟಿಎಂ ಜೊತೆಗೆ 10 ದೈತ್ಯ ಕಂಪೆನಿಗಳೂ ಹಳ್ಳಕ್ಕೆ!! ಷೇರು ಮಾರುಕಟ್ಟೆಯಲ್ಲಿ ಕೋಲಾಹಲ Read More »

ಮತ್ತೊಂದು ಕುಕ್ಕರ್ ಬಾಂಬ್; ಸ್ವಲ್ಪದರಲ್ಲೇ ತಪ್ಪಿತು ಭಾರೀ ಅನಾಹುತ

ಸಮಗ್ರ ನ್ಯೂಸ್: ಸೇನಾ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.ಶೋಪಿಯಾನ್ ನ ಇಮಾಮ್ ಸಾಹೇಬ್ ನಲ್ಲಿ ಐಇಡಿ ಕುಕ್ಕರ್ ಬಾಂಬ್ ಪತ್ತೆಯಾಗಿದೆ. ಕುಕ್ಕರ್ ಬಾಂಬ್ ಸ್ಪೋಟಗೊಂಡಿದ್ದರೆ ಬಾರಿ ಅನಾಹುತವೇ ಸಂಭವಿಸುತ್ತಿತ್ತು. ಸೇನಾ ಸಿಬ್ಬಂದಿ ಸಕಾಲಿಕ ಕ್ರಮದಿಂದ ಅನಾಹುತ ತಪ್ಪಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶುಕ್ರವಾರ ಶೋಪಿಯಾನ್ ಪೊಲೀಸ್ ಮತ್ತು ಭಾರತೀಯ ಸೇನೆಯ 44 ರಾಷ್ಟ್ರೀಯ ರೈಫಲ್ಸ್ ಜಂಟಿ ಕಾರ್ಯಾಚರಣೆಯಲ್ಲಿ, ಶೋಪಿಯಾನ್‌ನ ಇಮಾಸಾಹಿಬ್‌ನಲ್ಲಿ ಕುಕ್ಕರ್‌ನಲ್ಲಿ ಅಳವಡಿಸಲಾದ ಸುಧಾರಿತ ಸ್ಫೋಟಕ ಸಾಧನ (ಐಇಡಿ)

ಮತ್ತೊಂದು ಕುಕ್ಕರ್ ಬಾಂಬ್; ಸ್ವಲ್ಪದರಲ್ಲೇ ತಪ್ಪಿತು ಭಾರೀ ಅನಾಹುತ Read More »

15 ವರ್ಷಕ್ಕಿಂತ ಹಳೆಯ ವಾಹನಗಳು ಗುಜುರಿಗೆ

ನಾಗಪುರ: 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ವಾಹನಗಳನ್ನು ಗುಜರಿ ಹಾಕಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ನಾಗಪುರದಲ್ಲಿ ವಾರ್ಷಿಕ ಕೃಷಿ-ವಿಷನ್, ಕೃಷಿ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದ ಅವರು, ಭಾರತ ಸರ್ಕಾರಕ್ಕೆ ಸೇರಿದ 15ಕ್ಕಿಂತ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಸಂಬಂಧ ಸ್ಕ್ರ್ಯಾಪ್ ನೀತಿಯನ್ನು ಎಲ್ಲಾ ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದರು. ಕೇಂದ್ರಕ್ಕೆ ಸಂಬಂಧಿಸಿದ ವಾಹನಗಳನ್ನು ಗುಜರಿಗೆ ಹಾಕುವ ಸಂಬಂಧ ಕಡತವೊಂದಕ್ಕೆ ಈಗಾಗಲೇ ನಾನು ಸಹಿ ಹಾಕಿದ್ದೇನೆ. ರಾಜ್ಯಗಳು ಕೂಡಾ ಇದನ್ನು

15 ವರ್ಷಕ್ಕಿಂತ ಹಳೆಯ ವಾಹನಗಳು ಗುಜುರಿಗೆ Read More »

ತನ್ನ ಕ್ಯಾಬಿನ್ ಸಿಬ್ಬಂದಿಗೆ ಹೊಸ ನಿಯಮವನ್ನು ಜಾರಿ ಮಾಡಿದ ಏರ್ ಇಂಡಿಯಾ

ನವದೆಹಲಿ: ಟಾಟಾ ಒಡೆತನದ ಏರ್ ಇಂಡಿಯಾ ತನ್ನ ಕ್ಯಾಬಿನ್ ಸಿಬ್ಬಂದಿಗೆ ಹೊಸ ನಿಯಮವನ್ನು ಜಾರಿ ಮಾಡಿದೆ. ಹೊಸ ನಿಯಮದ ಪ್ರಕಾರ ಕೂದಲು ಉದುರಿರುವ ಪುರುಷ ಸಿಬ್ಬಂದಿ ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆಸಿಕೊಂಡು ಕೆಲಸಕ್ಕೆ ಬರುವಂತೆ ಸೂಚಿಸಿದೆ. ಇನ್ನೂ ಮಹಿಳೆಯರು ಅರಳು ಇರುವ ಕಿವಿ ಓಲೆಗಳನ್ನು ಧರಿಸದಂತೆ ಸೂಚಿಸಿದೆ. ದಶಕಗಳ ಕಾಲದಿಂದ ವಿಮಾನ ಸೇವೆ ಒದಗಿಸುತ್ತಿರುವ ಏರ್ ಇಂಡಿಯಾ ತನ್ನ ಸಿಬ್ಬಂದಿ ವಸ್ತ್ರಸಂಹಿತೆ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿಲ್ಲ ಎಂಬ ಕಾರಣಕ್ಕೆ ಅದನ್ನು ಬದಲಾಯಿಸಲು ತೀರ್ಮಾನಿಸಿದೆ. ತಲೆಯಲ್ಲಿ ಹೆಚ್ಚು ಕೂದಲು

ತನ್ನ ಕ್ಯಾಬಿನ್ ಸಿಬ್ಬಂದಿಗೆ ಹೊಸ ನಿಯಮವನ್ನು ಜಾರಿ ಮಾಡಿದ ಏರ್ ಇಂಡಿಯಾ Read More »

ಟಾಟಾ ತೆಕ್ಕೆಗೆ ಸೇರಿದ ಬಿಸ್ಲೇರಿ

ಸಮಗ್ರ ನ್ಯೂಸ್: ದೇಶದ ಹೆಮ್ಮೆಯ ಟಾಟಾ ಗ್ರೂಪ್ ರಮೇಶ್ ಜೆ ಚೌಹಾನ್ ಮಾಲೀಕತ್ವದ ಬಿಸ್ಲೇರಿ ಇಂಟರ್‌ನ್ಯಾಶನಲ್‌ ಕಂಪನಿಯನ್ನು ಖರೀದಿಸುವ ಪ್ರಕ್ರಿಯೆಯಲ್ಲಿದ್ಧು ಒಟ್ಟು 7,000 ಕೋಟಿ ರೂ.ಗೆ ಈ ವಹಿವಾಟು ನಡೆದಿದೆ ಎನ್ನಲಾಗಿದೆ.ಒಪ್ಪಂದದ ಭಾಗವಾಗಿ ಈಗಿನ ಆಡಳಿತ ಮಂಡಳಿಯು ಮುಂದಿನ ಎರಡು ವರ್ಷಗಳ ಕಾಲ ಮುಂದುವರಿಯಲಿದೆ. ಟಾಟಾ ಸಮೂಹವು ತನ್ನ ಟಾಟಾ ಕನ್‌ಸ್ಯೂಮರ್‌ ಪ್ರಾಡಕ್ಟ್ಸ್‌ (TCPL) ಕಂಪನಿಯ ಅಡಿಯಲ್ಲಿ ತನ್ನ ಪ್ಯಾಕೇಜ್ಡ್‌ ಮಿನರಲ್‌ ವಾಟರ್‌ ಮಾರಾಟವನ್ನು ನಡೆಸುತ್ತಿದೆ. ಹಿಮಾಲಯನ್‌ ಮತ್ತು ಟಾಟಾ ಕಾಪ್ಪರ್‌ ಪ್ಲಸ್‌ ವಾಟರ್‌, ಟಾಟಾ ಗ್ಲೊಕೊ+

ಟಾಟಾ ತೆಕ್ಕೆಗೆ ಸೇರಿದ ಬಿಸ್ಲೇರಿ Read More »

ಶಬರಿಮಲೆ ಯಾತಾರ್ಥಿಗಳಿಗೆ ವಿಮಾನದಲ್ಲಿ ಇರುಮುಡಿ ಕೊಂಡೊಯ್ಯಲು ಅನುಮತಿ….!!

ಸಮಗ್ರ ನ್ಯೂಸ್ : ಶಬರಿಮಲೆಗೆ ಭೇಟಿ ಕೊಡುವ ಯಾತ್ರಾರ್ಥಿಗಳಿಗೆ ಸೀಮಿತ ಅವಧಿಯ ಸಂದರ್ಭ ತಮ್ಮ ಬ್ಯಾಗೇಜ್ ಜೊತೆ ತೆಂಗಿನಕಾಯಿ ಕೊಂಡೊಯ್ಯಲು ಬ್ಯುರೊ ಆಫ್‌ ಸಿವಿಲ್‌ ಏವಿಯೇಷನ್‌ ಸೆಕ್ಯುರಿಟಿ (ಬಿಸಿಎಎಸ್‌) ಅನುಮತಿ ನೀಡಿದೆ. ಶಬರಿಮಲೆ ಋುತು ಪ್ರಾರಂಭವಾಗಿರುವ ಹಿನ್ನಲೆ ಶಬರಿಮಲೆಗೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಭೇಟಿ ನೀಡಲಿದ್ದು, ‘ಇರುಮುಡಿ’ ಹೊತ್ತು ಸಾಗುವ ಭಕ್ತರಿಗೆ ಈ ನಿಯಮದಿಂದ ಅನುಕೂಲವಾಗಲಿದೆ. ‘ಫೈರ್‌ ಸೇಫ್ಟಿ’ ಅಡಿಯಲ್ಲಿ ಕ್ಯಾಬಿನ್‌ ಬ್ಯಾಗ್‌ ಜತೆ ತೆಂಗಿನಕಾಯಿ ಒಯ್ಯಲು ಅವಕಾಶ ಇಲ್ಲ. ತಾತ್ಕಾಲಿಕವಾಗಿ ಈ ನಿಯಮದಲ್ಲಿ

ಶಬರಿಮಲೆ ಯಾತಾರ್ಥಿಗಳಿಗೆ ವಿಮಾನದಲ್ಲಿ ಇರುಮುಡಿ ಕೊಂಡೊಯ್ಯಲು ಅನುಮತಿ….!! Read More »

10 ಸಾವಿರ ಮಂದಿ ಗೂಗಲ್ ನಿಂದ ಹೊರಕ್ಕೆ| ಉದ್ಯೋಗಿಗಳ ವಜಾಕ್ಕೆ ಚಿಂತನೆ

ಸಮಗ್ರ ನ್ಯೂಸ್: ದೈತ್ಯ ಐಟಿ ಕಂಪೆನಿಗಳಲ್ಲಿ ಉದ್ಯೋಗಿಗಳ ವಜಾ ಪರ್ವ ಮುಂ‌ದುವರಿದಿದ್ದು ಇದೀಗ ಗೂಗಲ್‌ ಕಂಪೆನಿಯಿಂದ 10ಸಾವಿರ ಮಂದಿಯನ್ನು ಶೀಘ್ರವೇ ಕೆಲಸದಿಂದ ಕೈಬಿಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಹೆಡ್ಜ್ ಫಂಡ್ ಬಿಲಿಯನೇರ್ ಕ್ರಿಸ್ಟೋಫರ್ ಹೊಹ್ನ್, ಗೂಗಲ್ ಮಾತೃಸಂಸ್ಥೆಯಾದ ಆಲ್ಫಾಬೆಟ್‌ಗೆ ಈ ಸಂಬಂಧ ಪತ್ರ ಬರೆದಿದ್ದು, ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸಲು ಸಲಹೆ ನೀಡಲಾಗಿದೆ. ಟೆಕ್ ಬೆಹೆಮೊತ್ ಗೂಗಲ್ ಕಾರ್ಯಕ್ಷಮತೆಯ ಸುಧಾರಣೆ ಸಂಬಂಧ ಯೋಜನೆಯೊಂದನ್ನು ಜಾರಿಗೊಳಿಸಲು ಮುಂದಾಗಿದ್ದು, ಇದರ ಫಲಿತಾಂಶವಾಗಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬೆಕಾಗುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

10 ಸಾವಿರ ಮಂದಿ ಗೂಗಲ್ ನಿಂದ ಹೊರಕ್ಕೆ| ಉದ್ಯೋಗಿಗಳ ವಜಾಕ್ಕೆ ಚಿಂತನೆ Read More »