ರಾಷ್ಟ್ರೀಯ

ರೈಲಿನಿಂದ ಎಸೆಯಲ್ಪಟ್ಟು ಯುವಕ ದುರ್ಮರಣ

ಸಮಗ್ರ ನ್ಯೂಸ್: ಸ್ನೇಹಿತನ ಜೊತೆ ಗೋವಾಕ್ಕೆ ತೆರಳುತ್ತಿದ್ದ ಯುವಕನೊಬ್ಬ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಉಪ್ಪಳ ಪೆರಿಂಗಡಿಯಲ್ಲಿ ನಡೆದಿದೆ. ಪಾಲಕ್ಕಾಡ್ ನ ನಿವಾಸಿ ಸಾಬೀರ್(32) ಮೃತ ಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಗೋವಾಕ್ಕೆ ತಲಪಿದಾಗ ಸ್ನೇಹಿತನು ಸಾಬೀರ್ ನಾಪತ್ತೆಯಾಗಿದ್ದು , ಈ ಬಗ್ಗೆ ಸ್ನೇಹಿತನು ಗೋವಾ ಪೊಲೀಸರಿಗೆ ದೂರು ನೀಡಿದ್ದು, ಗೋವಾ ಪೊಲೀಸರು ಕೇರಳ ಮತ್ತು ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಕುಂಬಳೆ ಪೊಲೀಸ್ ಠಾಣೆಯ ಪೆರಿಂಗಡಿಯ ರೈಲ್ವೆ ಹಳಿ ಬಳಿ ಮೃತದೇಹ […]

ರೈಲಿನಿಂದ ಎಸೆಯಲ್ಪಟ್ಟು ಯುವಕ ದುರ್ಮರಣ Read More »

ಹೆಲಿಕಾಪ್ಟರ್ ನ ರೆಕ್ಕೆ ಬಡಿದು ಅಧಿಕಾರಿ ಸಾವು

ಡೆಹ್ರಾಡೂನ್: ಹೆಲಿಕಾಪ್ಟರ್ ನ ರೆಕ್ಕೆ ಬಡಿದು ಅಧಿಕಾರಿಯೊಬ್ಬರು ಸಾವನಪ್ಪಿದ ಘಟನೆ ಗಡ್ವಾಲ್ ಮಂಡಲ್ ವಿಕಾಸ್ ನಿಗಮ್ ಹೆಲಿಪ್ಯಾಡ್‌ನಲ್ಲಿ ಸಂಭವಿಸಿದೆ. 2017 ರ ಬ್ಯಾಚ್ ರಾಜ್ಯ ಹಣಕಾಸು ಸೇವಾ ಅಧಿಕಾರಿ ಅಮಿತ್ ಸೈನಿ ಮೃತ ಅಧಿಕಾರಿ. ಅವರು ಏಪ್ರಿಲ್ 25 ರಂದು ಪ್ರಾರಂಭವಾಗುವ ಕೇದಾರನಾಥ ಯಾತ್ರೆಗೆ ಮುಂಚಿತವಾಗಿ ಆಡಿಟ್ ಮತ್ತು ತಪಾಸಣೆ ಸಂಬಂಧಿತ ಕೆಲಸಕ್ಕಾಗಿ ಭಾನುವಾರ ಬೆಳಿಗ್ಗೆ ಡೆಹ್ರಾಡೂನ್‌ನಿಂದ ಕೇದಾರನಾಥಕ್ಕೆ ಇತರ ಅಧಿಕಾರಿಗಳೊಂದಿಗೆ ತೆರಳಿದ್ದರು. ಕೆಲಸ ಮುಗಿದ ನಂತರ ಅಧಿಕಾರಿ ಡೆಹ್ರಾಡೂನ್‌ಗೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ . ಕೆಸ್ಟ್ರೆಲ್

ಹೆಲಿಕಾಪ್ಟರ್ ನ ರೆಕ್ಕೆ ಬಡಿದು ಅಧಿಕಾರಿ ಸಾವು Read More »

ಹೊತ್ತಿ ಉರಿಯಲಿದ್ದಾನೆ ಸೂರ್ಯ| ಆದಷ್ಟೂ ಮನೆಯೊಳಗೆ ಇರಲು ನಾಸಾ ಸೂಚನೆ

ಸಮಗ್ರ ನ್ಯೂಸ್: ಸೂರ್ಯ‌ ಮುಂದಿನ ಒಂದೆರಡು ದಿನಗಳಲ್ಲಿ ಇನ್ನಷ್ಟು ಪ್ರಖರಗೊಳ್ಳಲಿದ್ದು ಹೆಚ್ಚು ಬಿಸಿಲಿನ ತಾಪಮಾನ ಅಂತೆಯೇ ಬಿಸಿಗಾಳಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಬಾಹ್ಯಾಕಾಶ ಸಂಸ್ಥೆ ನಾಸಾ ಎಚ್ಚರಿಸಿದೆ. ಸೂರ್ಯನು 11 ವರ್ಷಗಳ ಆವರ್ತನೆಯ ಉತ್ತುಂಗ ಮಟ್ಟವನ್ನು ತಲುಪುವ ಸಮಯದಲ್ಲಿ ಇನ್ನಷ್ಟು ಪ್ರಖರಗೊಳ್ಳುತ್ತದೆ ಎಂದು ಸಂಸ್ಥೆ ತಿಳಿಸಿದೆ.‌‌ ಆದ್ದರಿಂದ ಮುಂದಿನ ಎರಡ್ಮೂರು ದಿ‌ನ ಮನೆಯಿಂದ ಹೊರಗೆ ಬರೋದನ್ನು ಆದಷ್ಟು ತಪ್ಪಿಸುವುದು ಒಳಿತು ಎಂದು ನಾಸಾ ತಿಳಿಸಿದೆ. ಸೌರ ಬಿರುಗಾಳಿಯ ಆರಂಭದ ಹೊಡೆತವು ಏಪ್ರಿಲ್ 24 ರಂದು ಭೂಮಿಯನ್ನು

ಹೊತ್ತಿ ಉರಿಯಲಿದ್ದಾನೆ ಸೂರ್ಯ| ಆದಷ್ಟೂ ಮನೆಯೊಳಗೆ ಇರಲು ನಾಸಾ ಸೂಚನೆ Read More »

ನಮೀಬಿಯಾದಿಂದ ತಂದ ಮತ್ತೊಂದು ಚೀತಾ ‌ಸಾವು

ಸಮಗ್ರ ನ್ಯೂಸ್: ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಸರ್ಕಾರ ತಂದ ಒಟ್ಟು 20 ಚೀತಾಗಳ ಪೈಕಿ ಒಂದು ಚೀತಾ ಈಗಾಗಲೇ ಸಾವನ್ನಪ್ಪಿದ್ದು ಇದೀಗ ಮತ್ತೊಂದು ಚೀತಾ ಕೂಡಾ ಸಾವನ್ನಪ್ಪಿದೆ.‌ ಮೃತ ಪಟ್ಟಿರುವ ಚಿರತೆ ‘ಉದಯ್’ಗೆ ಆರು ವರ್ಷ ವಯಸ್ಸಾಗಿತ್ತು. ಇದಕ್ಕೂ ಮುನ್ನ ನಮೀಬಿಯಾದ ಚೀತಾ ಸಶಾ ಮಾರ್ಚ್ 27 ರಂದು ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿತ್ತು. ಬೆಳಿಗ್ಗೆ ತಪಾಸಣೆಯ ಸಮಯದಲ್ಲಿ, ದಕ್ಷಿಣ ಆಫ್ರಿಕಾದಿಂದ ತರಲಾದ ಚೀತಾ ತಲೆ ತಗ್ಗಿಸಿ ಮಂಕಾಗಿರುವುದು ಕಂಡುಬಂದಿತು. ನಂತ್ರ ಹಾಜರಾದ ಪಶುವೈದ್ಯರು, ಹಿರಿಯ ಅಧಿಕಾರಿಗಳಿಗೆ

ನಮೀಬಿಯಾದಿಂದ ತಂದ ಮತ್ತೊಂದು ಚೀತಾ ‌ಸಾವು Read More »

ಕೊನೆಗೂ ಸಿಕ್ಕಿಬಿದ್ದ ಖಲಿಸ್ತಾನ್ ಉಗ್ರ ಅಮೃತ್ ಪಾಲ್ ಸಿಂಗ್| ಪಂಜಾಬ್ ನಲ್ಲಿ ಮೋಗಾದಲ್ಲಿ ಬಂಧನ

ಸಮಗ್ರ ನ್ಯೂಸ್: ತಲೆಮರೆಸಿಕೊಂಡಿದ್ದ ಉಗ್ರ ಅಮೃತ್ ಪಾಲ್ ಸಿಂಗ್ ನನ್ನು ಪಂಜಾಬ್ ನ ಮೋಗಾದಲ್ಲಿ ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮೂಲಗಳು ತಿಳಿಸಿವೆ. ಖಲಿಸ್ತಾನ್ ಮುಖಂಡ ಅಮೃತ್ ಪಾಲ್ ಸಿಂಗ್ ನನ್ನು ಪಂಜಾಬ್ ನ ಮೋಗಾದಲ್ಲಿ ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮೂಲಗಳು ತಿಳಿಸಿವೆ.ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಪಂಜಾಬ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಖಲಿಸ್ತಾನಿ ಉಗ್ರ ಅಮೃತ್ಪಾಲ್ ಸಿಂಗ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇತ್ತೀಚೆಗಷ್ಟೇ ಅಮೃತ್ ಪಾಲ್ ಸಿಂಗ್ ಪತ್ನಿಯನ್ನು ವಶಕ್ಕೆ ಪಡೆಯಲಾಗಿತ್ತು.

ಕೊನೆಗೂ ಸಿಕ್ಕಿಬಿದ್ದ ಖಲಿಸ್ತಾನ್ ಉಗ್ರ ಅಮೃತ್ ಪಾಲ್ ಸಿಂಗ್| ಪಂಜಾಬ್ ನಲ್ಲಿ ಮೋಗಾದಲ್ಲಿ ಬಂಧನ Read More »

ಈಶ್ವರಪ್ಪಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ‌ ಮೋದಿ| 40% ಕಮಿಷನ್ ಗೆ ಅಧಿಕೃತ ಮುದ್ರೆ ಎಂದ ಕಾಂಗ್ರೆಸ್

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕರೆ ಮಾಡಿ ಅಭಿನಂದಿಸಿರುವುದನ್ನು ಕಾಂಗ್ರೆಸ್ ಖಂಡಿಸಿದ್ದು, ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಪ್ರಧಾನಿಯವರು ಈ ನಡವಳಿಕೆ ರಾಜ್ಯದಲ್ಲಿ ನಡೆಯುತ್ತಿರುವ ಶೇ.40ರಷ್ಟು ಕಮಿಷನ್ ಹಗರಣಕ್ಕೆ ಅಧಿಕೃತ ಮುದ್ರೆ ಒತ್ತಿದಂತಾಗಿದೆ ಎಂದು ಆರೋಪಿಸಿದೆ. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ನಾಯಕ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಚುನಾವಣೆಯಲ್ಲಿ ಟಿಕೆಟ್ ವಂಚಿತ ಈಶ್ವರಪ್ಪ ಅವರಿಗೆ ಮೋದಿ ಕರೆ ಮಾಡಿ ಅಭಿನಂದಿಸಿದ್ದಾರೆ. ಚುನಾವಣೆಯಲ್ಲಿ

ಈಶ್ವರಪ್ಪಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ‌ ಮೋದಿ| 40% ಕಮಿಷನ್ ಗೆ ಅಧಿಕೃತ ಮುದ್ರೆ ಎಂದ ಕಾಂಗ್ರೆಸ್ Read More »

ಚೀನಾವನ್ನೇ ಹಿಂದಿಕ್ಕಿದ ಭಾರತ| ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಇಂಡಿಯಾ ನಂ.1

ಸಮಗ್ರ ನ್ಯೂಸ್: ವಿಶ್ವ ಜನಸಂಖ್ಯಾ ರಿವ್ಯೂ ಪ್ರಕಾರ ಭಾರತ ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವೆನಿಸಿಕೊಂಡಿದ್ದ ಚೀನಾವನ್ನು ಈಗಾಗ್ಲೇ ಹಿಂದಿಕ್ಕಿದೆ. ಈ ಗಣತಿಯ ಪ್ರಕಾರ 2022ರ ಅಂತ್ಯದ ವೇಳೆಗೆ ಭಾರತದ ಜನಸಂಖ್ಯೆ 140 ಕೋಟಿ ದಾಟಿತ್ತು. ಇದು ಚೀನಾದ ಜನಸಂಖ್ಯೆಗಿಂತ 50 ಲಕ್ಷದಷ್ಟು ಹೆಚ್ಚಾಗಿದೆ. ಪ್ರಸ್ತುತ ದೇಶದ ಜನಸಂಖ್ಯೆ 1.412 ಬಿಲಿಯನ್‌ ಎಂದು ಚೀನಾ ಹೇಳಿಕೊಂಡಿದೆ. 1961ರ ಬಳಿಕ ಅಂದರೆ ಚೀನಾ ಸ್ವಾತಂತ್ರ್ಯ ಪಡೆದ ನಂತರ ಇದೇ ಮೊದಲ ಬಾರಿಗೆ ಅಲ್ಲಿನ ಜನಸಂಖ್ಯೆಯಲ್ಲಿ ಕುಸಿತ ದಾಖಲಾಗಿದೆ. ತಜ್ಞರ ಪ್ರಕಾರ

ಚೀನಾವನ್ನೇ ಹಿಂದಿಕ್ಕಿದ ಭಾರತ| ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಇಂಡಿಯಾ ನಂ.1 Read More »

ವೇಶ್ಯಾವಾಟಿಕೆ ದಂಧೆ| ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದ ಕಿರುತೆರೆ ನಟಿ

ಸಮಗ್ರ ನ್ಯೂಸ್: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಕಾಸ್ಟಿಂಗ್ ನಿರ್ದೇಶಕಿ ಮತ್ತು ಕಿರುತೆರೆಯ ಖ್ಯಾತ ನಟಿ ಆರತಿ ಮಿತ್ತಲ್ ಅವರನ್ನು ಮುಂಬೈ ಪೊಲೀಸರು ಪೊಲೀಸರು ಬಂಧಿಸಿದ್ದಾರೆ. ವೇಶ್ಯಾವಾಟಿಕೆ ದಂಧೆಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಆಗ ಆರತಿ ಸೇರಿದಂತೆ 2 ಮಾಡೆಲ್ಸ್ ರೆಡ್ ಹ್ಯಾಂಡ್​ ಆಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಮಾಡೆಲ್​​ಗಳನ್ನು ಬಳಕೆ ಮಾಡಿಕೊಂಡು ಈ ದಂಧೆಯನ್ನು ನಡೆಸುತ್ತಿದ್ದರು ಎಂಬುದನ್ನು ಪೊಲೀಸರು ಹೇಳಿದ್ದಾರೆ. ಆರತಿ ಬಂಧನ ಬಾಲಿವುಡ್ ಬಣ್ಣದ ಲೋಕದಲ್ಲಿ ಸಂಚಲನ ಮೂಡಿಸಿದೆ.

ವೇಶ್ಯಾವಾಟಿಕೆ ದಂಧೆ| ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದ ಕಿರುತೆರೆ ನಟಿ Read More »

ಅಮುಲ್ ಬಳಿಕ ಮೆಣಸಿನಕಾಯಿ ಮಸಾಲೆ ಅರೆಯುತ್ತಿರುವ ಗುಜರಾತ್| ಬ್ಯಾಡಗಿ ಮೆಣಸಿನ ಮಾರುಕಟ್ಟೆ ಆವರಿಸಿಕೊಳ್ಳುತ್ತಿದೆ ‘ಲಾಲ್ ಮಿರ್ಚಿ’

ಸಮಗ್ರ ನ್ಯೂಸ್: ಅಮುಲ್ ಹಾಲಿನ ವಿವಾದದ ಬಳಿಕ ಈಗ ಗುಜರಾತ್ ಮೆಣಸು ಮಾರುಕಟ್ಟೆಯಲ್ಲಿ ಗದ್ದಲ ಸೃಷ್ಟಿಸಿದೆ. ಬೆಂಗಳೂರು ಮಾರುಕಟ್ಟೆಗೆ ಅಮುಲ್ ಪ್ರವೇಶದ ಪ್ರಸ್ತಾವನೆ ಸಿಕ್ಕಾಪಟ್ಟೆ ರಾಜಕೀಯ ಗದ್ದಲ ಸೃಷ್ಟಿಸಿತ್ತು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ಹೆಚ್ಚುತ್ತಿರುವ ಸಮಯದಲ್ಲಿ ಗುಜರಾತ್ ಮೂಲದ ಅಮುಲ್ ಸಂಸ್ಥೆ ಬೆಂಗಳೂರು ಮಾರುಕಟ್ಟೆಯಲ್ಲಿ ಆನ್‌ಲೈನ್‌ ಮೂಲಕ ಹಾಲು ಮತ್ತು ಮೊಸರು ವಿತರಣೆಗೆ ಸಜ್ಜಾಗಿರೋದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ‘ಬಾಯ್ಕಾಟ್‌ ಅಮುಲ್‌, ಸೇವ್‌ ನಂದಿನಿ’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಅಭಿಯಾನ ಪ್ರಾರಂಭಿಸಿದ್ದರು. ಈಗ

ಅಮುಲ್ ಬಳಿಕ ಮೆಣಸಿನಕಾಯಿ ಮಸಾಲೆ ಅರೆಯುತ್ತಿರುವ ಗುಜರಾತ್| ಬ್ಯಾಡಗಿ ಮೆಣಸಿನ ಮಾರುಕಟ್ಟೆ ಆವರಿಸಿಕೊಳ್ಳುತ್ತಿದೆ ‘ಲಾಲ್ ಮಿರ್ಚಿ’ Read More »

ಭಾರತದಲ್ಲಿ ವಾಟ್ಸಪ್ ಸರ್ವರ್ ಡೌನ್; ಪರದಾಡುತ್ತಿರುವ ಬಳಕೆದಾರರು

ಸಮಗ್ರ ನ್ಯೂಸ್: ಭಾರತದಲ್ಲಿ ಕೆಲವು ಬಳಕೆದಾರರಿಗೆ WhatsApp ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ. Downdetector ಪ್ರಕಾರ, ಅಪ್ಲಿಕೇಶನ್ ಕಳೆದ ರಾತ್ರಿಯಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಂದು ಕೂಡ ಮುಂದುವರೆದಿದೆ ಎಂದು ತಿಳಿದುಬಂದಿದೆ. ಈ ಸಮಸ್ಯೆ ಎದುರಿಸಿದ ಬಗ್ಗೆ ಬಳಕೆದಾರರು Twitter ನಲ್ಲಿ ಸ್ಥಗಿತದ ಬಗ್ಗೆ ದೂರು ನೀಡಿದ್ದಾರೆ. ಈ ಮೂಲಕ ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಸ್ವೀಕರಿಸಿದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ. ಆದಾಗ್ಯೂ, ಆಂಡ್ರಾಯ್ಡ್ ಬೀಟಾ ಬಳಕೆದಾರರಲ್ಲಿ ಈ ಸಮಸ್ಯೆಯು ಹೆಚ್ಚು ಪ್ರಚಲಿತವಾಗಿದೆ.

ಭಾರತದಲ್ಲಿ ವಾಟ್ಸಪ್ ಸರ್ವರ್ ಡೌನ್; ಪರದಾಡುತ್ತಿರುವ ಬಳಕೆದಾರರು Read More »