ವಾಟ್ಸ್ಆ್ಯಪ್ ಪಿಂಕ್ ನಿಂದ ಎಚ್ಚರಿಕೆ… ವಾಟ್ಸ್ಆ್ಯಪ್ ಪಿಂಕ್ ಅನ್ನು ಇನ್ಸ್ಟಾಲ್ ಮಾಡದಂತೆ ಪೊಲೀಸರ ಮನವಿ
ಸಮಗ್ರ ನ್ಯೂಸ್: ಕರ್ನಾಟಕ ಪೊಲೀಸರು ಸೈಬರ್ ವಂಚನೆಯ ಇನ್ನೊಂದು ಮುಖವನ್ನು ಪತ್ತೆಹಚ್ಚಿದ್ದು ಯಾವುದೇ ಕಾರಣಕ್ಕೂ ಗುಲಾಬಿ ಬಣ್ಣದ ವಾಟ್ಸ್ಆ್ಯಪ್ ಅಥವಾ ವಾಟ್ಸ್ಆ್ಯಪ್ ಪಿಂಕ್ ಅನ್ನು ಇನ್ಸ್ಟಾಲ್ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸಿರುವ ಕರ್ನಾಟಕ ಪೊಲೀಸ್, ಗುಲಾಬಿ ಬಣ್ಣದ ವಾಟ್ಸ್ಆ್ಯಪ್ ಅಪಾಯಕಾರಿ ಎಚ್ಚರಿಕೆಯಿಂದಿರಿ. ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್ಆ್ಯಪ್ (Apk) ಬಳಸುವವರನ್ನು ಗುರಿಯಾಗಿಸಿ ಮೋಸಗಾರರು ಡೇಟಾ ಕದಿಯಲು ಇಲ್ಲವೇ ಆ್ಯಂಡ್ರಾಯ್ಡ್ ಮೊಬೈಲ್ ಹ್ಯಾಕ್ ಮಾಡಲು ಬಳಸಿಕೊಳ್ಳುತ್ತಾರೆ. ಜಾಗೃತೆಯಿಂದಿರಿ […]