ಕ್ರೈಂ

ಲಾಠಿ‌ ಏಟಿಗೆ ಬಾಲಕ ಸಾವು: ಯು.ಪಿ ಪೊಲೀಸರಿಂದ ಅಮಾನವೀಯ ಕೃತ್ಯ

ಉತ್ತರ ಪ್ರದೇಶ: ರಾಜ್ಯದಲ್ಲಿ ನಡೆಯುತ್ತಿರುವ ಕೊರೊನಾ ಕರ್ಫ್ಯೂವನ್ನು ಉಲ್ಲಂಘಿಸಿದ್ದಕ್ಕಾಗಿ 17 ವರ್ಷದ ಬಾಲಕನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದು, ಬಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಭಟ್​ಪುರಿ ಗ್ರಾಮದಲ್ಲಿ ನಡೆದಿದೆ. ಬಾಲಕ ತನ್ನ ಮನೆಯ ಹೊರಗೆ ತರಕಾರಿ ಮಾರುತ್ತಿದ್ದ. ಈ ವೇಳೆ ಕೊರೊನಾ ಕರ್ಫ್ಯೂ ಉಲ್ಲಂಘಿಸಿದ ಆರೋಪದ ಮೇಲೆ ಕಾನ್ಸ್​ಟೇಬಲ್​ ಹಿಡಿದು ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಪೊಲೀಸ್ ಠಾಣೆಗೆ ಕರೆದೊಯ್ದು ಮತ್ತೆ ಬಾಲಕನ ಮೇಲೆ ಲಾಠಿಯಿಂದ ಮನಸೋ ಇಚ್ಛೆ ಥಳಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಬಾಲಕ […]

ಲಾಠಿ‌ ಏಟಿಗೆ ಬಾಲಕ ಸಾವು: ಯು.ಪಿ ಪೊಲೀಸರಿಂದ ಅಮಾನವೀಯ ಕೃತ್ಯ Read More »

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ ಆರೋಪಿ ಸೆರೆ

ಮಂಗಳೂರು, ಮೇ ೨೧: ಯುವತಿವೋರ್ವಳಿಗೆ ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ದೈಹಿಕವಾಗಿ ಬಳಸಿಕೊಂಡು ಕೊನೆಗೆ ವಂಚಿಸಿದ ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿದಿಸಿದೆ.ಆರೋಪಿಯನ್ನು ಅರುಣ್ ರಾಜ್ ಕಾಪಿಕಾಡ್ (39) ಎಂದು ಗುರುತಿಸಲಾಗಿದ್ದು, ಈತನನ್ನು ಪಾಂಡೇಶ್ವರದ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈತ ಯುವತಿಯನ್ನು ಕಳೆದ ಡಿಸೆಂಬರ್‌ನಲ್ಲಿ ನಗರದ ಹೊಟೇಲ್‌ಗೆ ಕರೆತಂದು ಜ್ಯೂಸ್ ನೀಡಿ ಪ್ರಜ್ಞೆ ತಪ್ಪಿಸಿ ಬಲಾತ್ಕಾರವಾಗಿ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಅಲ್ಲದೆ ಬೆದರಿಸಿದ್ದಾನೆ ಎಂದು ದೂರು ದಾಖಲಾಗಿದೆ.ಆ ಬಳಿಕ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಮತ್ತೊಮ್ಮೆ ತನ್ನ ಅಪಾರ್ಟ್ಮೆಟ್‌ನಲ್ಲೂ

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ ಆರೋಪಿ ಸೆರೆ Read More »

ಮಂಗಳೂರು: ಲಾರಿ ಢಿಕ್ಕಿ- ಸೈಕಲ್ ಸವಾರ ಸ್ಥಳದಲ್ಲೇ ಸಾವು

ಮಂಗಳೂರು, ಮೇ ೨೧: ರಾ.ಹೆ.ಯ ಬೈಕಂಪಾಡಿಯಲ್ಲಿ ಲಾರಿಯೊಂದು ಸೈಕಲ್ ಸವಾರನಿಗೆ  ಢಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನಪ್ಪಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.ಮಧು ಕೆ. ಮೃತ ಸೈಕಲ್ ಸವಾರ ಎಂದು ಗುರುತಿಸಲಾಗಿದೆ. ಈತ ಹೈರೇಂಜ್ ಸೆಕ್ಯುರಿಟಿ ಸರ್ವಿಸಸ್‌ನ ಉದ್ಯೋಗಿ ಎಂದು ತಿಳಿದುಬಂದಿದೆ.ಈತ ಸೈಕಲ್‌ನಲ್ಲಿ ತೆರಳುತ್ತಿದ್ದಾಗ ಅತೀ ವೇಗವಾಗಿ, ಅಜಾಗರೂಕತೆಯಿಂದ ಧಾವಿಸಿ ಬಂದ ಲಾರಿ ಢಿಕ್ಕಿ ಹೊಡೆಯಿತು ಎನ್ನಲಾಗಿದ್ದು. ಇದರಿಂದ ಸೈಕಲ್ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಸಂಚಾರ

ಮಂಗಳೂರು: ಲಾರಿ ಢಿಕ್ಕಿ- ಸೈಕಲ್ ಸವಾರ ಸ್ಥಳದಲ್ಲೇ ಸಾವು Read More »

ಬೆಂಗಳೂರಿನಲ್ಲಿ ಅಕ್ರಮ ವ್ಯಾಕ್ಸೀನ್ ಮಾರಾಟ: ವೈದ್ಯೆ ಮತ್ತು ಸಹಚರರ ಬಂಧನ

ಬೆಂಗಳೂರು: ಕಳೆದೊಂದು ವರ್ಷದಲ್ಲಿ ಕೊರೋನ ಹಾವಳಿಯಿಂದ ವಿಶ್ವವೇ ಕಂಗೆಟ್ಟಿದ್ದು ಇತ್ತೀಚಿನ ದಿನಗಳಲ್ಲಿ ಕಠಿಣ ನಿಯಮಾವಳಿಗಳು ಹಾಗೂ  ವ್ಯಾಕ್ಸಿನೇಷನ್ ಕಾರ್ಯಕ್ರಮಗಳ ಬಲದಿಂದ ಭಾರತ ಸೇರಿದಂತೆ ಇತರ ರಾಷ್ಟ್ರಗಳು ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುತ್ತಿದೆ. ಜನಸಂಖ್ಯೆಯಲ್ಲಿ ಬಹುದೊಡ್ಡ ರಾಷ್ಟ್ರಗಳು ಎಂದೆನಿಸಿಕೊಂಡಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತದಲ್ಲಿ ವ್ಯಾಕ್ಸಿನೇಷನ್ ಕಾರ್ಯಕ್ರಮ ಹಂತಹಂತವಾಗಿ ನಡೆಯುತ್ತಿದೆ. ಒಂದೇ ಹಂತದಲ್ಲಿ ಇಷ್ಟು ದೊಡ್ಡ ಜನಸಂಖ್ಯೆಗೆ ವ್ಯಾಕ್ಸಿನ್ ಪೂರೈಕೆ ಕಷ್ಟವಾಗಿರುವುದರಿಂದ ಸರಕಾರ ಹಂತ ಹಂತವಾಗಿ ವ್ಯಾಕ್ಸಿನ್ ನಿರ್ವಹಣೆ ಮಾಡುತ್ತಿದೆ. ಆದರೆ ಭ್ರಷ್ಟಾಚಾರದ ಕರಿನೆರಳು ವ್ಯಾಕ್ಸಿನೇಷನ್ ಗೂ ತಟ್ಟಿದ್ದು, ಬೆಂಗಳೂರಿನಲ್ಲಿ ವೈದ್ಯಕೀಯ ಇಲಾಖೆ

ಬೆಂಗಳೂರಿನಲ್ಲಿ ಅಕ್ರಮ ವ್ಯಾಕ್ಸೀನ್ ಮಾರಾಟ: ವೈದ್ಯೆ ಮತ್ತು ಸಹಚರರ ಬಂಧನ Read More »

ಪೋಕ್ಸೊ ಪ್ರಕರಣದ ಆರೋಪಿ ಈಗ ಜಿಲ್ಲಾ ಎಸ್ಪಿ

ಹೊಸದಿಲ್ಲಿ : ಅಪ್ರಾಪ್ತೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಐಪಿಎಸ್ ಅಧಿಕಾರಿ ಗೌರವ್ ಉಪಾಧ್ಯಾಯ ಎಂಬವರನ್ನು ಅಸ್ಸಾಂ ಜಿಲ್ಲೆಯೊಂದರ ಎಸ್‌ಪಿ ಆಗಿ ನೇಮಕಗೊಳಿಸಲಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಈ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತಾದ ಚಾರ್ಜ್ ಶೀಟ್ ಅನ್ನು ಮಾರ್ಚ್ ೩೧, ೨೦೨೦ರಂದು ಈ ನಿರ್ದಿಷ್ಟ ಅಧಿಕಾರಿ ವಿರುದ್ಧ ಐಪಿಸಿಯ ಸೆಕ್ಷನ್ ೩೫೪ ಹಾಗೂ ೩೫೪ಅ ಅನ್ವಯ ಹಾಗೂ ಪೋಕ್ಸೋ ಅನ್ವಯ ದಾಖಲಿಸಲಾಗಿತ್ತು. ಜನವರಿ ೩, ೨೦೨೦ರಂದು ದಾಖಲಾದ ಈ ಪ್ರಕರಣವನ್ನು ಅಸ್ಸಾಂ ಸಿಐಡಿ ತನಿಖೆ

ಪೋಕ್ಸೊ ಪ್ರಕರಣದ ಆರೋಪಿ ಈಗ ಜಿಲ್ಲಾ ಎಸ್ಪಿ Read More »

ಮುಹೂರ್ತದ ವೇಳೆ ಮಂಗಲಸೂತ್ರ ಎಗರಿಸಿದ ಅರ್ಚಕ: ಮೂರನೇ ಕಣ್ಣಲ್ಲಿ ಕೈಚಳಕ ಬಯಲು

ತೆಲಂಗಾಣ: ಮದುವೆ ಕಾರ್ಯ ನಡೆಸಿಕೊಡಲು ಬಂದ  ಅರ್ಚಕನೋರ್ವ ತಾಳಿ ಎಗರಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಅರ್ಚಕನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಅರ್ಚಕನೋರ್ವ ಮದುವೆ ಕಾರ್ಯದಲ್ಲಿ ಮಂತ್ರ ಹೇಳುತ್ತಿರುವ ಸಂದರ್ಭದಲ್ಲಿ ಕೈ ಚಳಕದಿಂದ   ಚಿನ್ನದ ಮಾಂಗಲ್ಯ ಸರವನ್ನು ಎಗರಿಸಿ,  ನಕಲಿ ಮಾಂಗಲ್ಯ ಸರವನ್ನು ವರನಿಂದ ಕಟ್ಟಿಸಿದ್ದಾನೆ. ಇದು ಮದುವೆ ದಿನ ಯಾರಿಗೂ ಗೊತ್ತಾಗಿಲ್ಲ. ಮನೆಗೆ ತೆರಳಿದ ಬಳಿಕ ಮಾಂಗಲ್ಯ ಸರ ಬದಲಾಗಿರುವ ಬಗ್ಗೆ ಮನೆಯವರಿಗೆ ತಿಳಿದಿದೆ. ಇದರಿಂದ ಮನೆ ಕಡೆಯವರಿಗೆ ಯಾರ

ಮುಹೂರ್ತದ ವೇಳೆ ಮಂಗಲಸೂತ್ರ ಎಗರಿಸಿದ ಅರ್ಚಕ: ಮೂರನೇ ಕಣ್ಣಲ್ಲಿ ಕೈಚಳಕ ಬಯಲು Read More »

ಪರಸತಿಯ ಜೊತೆಗಿನ ಸರಸದ ಪೋಟೋ ಸ್ಟೇಟಸ್ ಹಾಕಿದ ಪ್ರಿಯಕರ: ವಿಷಯ ತಿಳಿದ ಪತಿ ಏನ್ಮಾಡಿದ ಗೊತ್ತೇ?

ಚಾಮರಾಜನಗರ.ಮೇ.20: ಪತ್ನಿ ಜತೆ ಸರಸ ಸಲ್ಲಾಪದಲ್ಲಿ ತೊಡಗುತ್ತಿದ್ದ ಪ್ರಿಯಕರ ತಮ್ಮಿಬ್ಬರ ಅನೈತಿಕ ಸಂಬಂಧದ ಫೋಟೊ ಹಾಗೂ ವೀಡಿಯೊಗಳನ್ನು ವಾಟ್ಸಪ್ ನ ಸ್ಟೇಟಸ್ ನಲ್ಲಿ ಹಾಕಿ ವಿಕೃತಿ ಮೆರೆಯುತ್ತಿದ್ದ. ಇದನ್ನು ಗಮನಿಸಿದ ಆಕೆಯ ಪತಿ ಪ್ರಿಯಕರನನ್ನು ಕೊಂದು ಆತನ ವಿಕೃತಿಗೆ ಅಂತ್ಯ ಹಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಬುಧವಾರ ರಾತ್ರಿ ಪತ್ನಿ ಜೊತೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಕರ ಬಸವ ಶೆಟ್ಟಿ (37) ಎಂಬಾತನನ್ನು ಗಂಡ

ಪರಸತಿಯ ಜೊತೆಗಿನ ಸರಸದ ಪೋಟೋ ಸ್ಟೇಟಸ್ ಹಾಕಿದ ಪ್ರಿಯಕರ: ವಿಷಯ ತಿಳಿದ ಪತಿ ಏನ್ಮಾಡಿದ ಗೊತ್ತೇ? Read More »

ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ಜಿಲ್ಲಾಧಿಕಾರಿ ಎತ್ತಂಗಡಿ?

ಚಾಮರಾಜನಗರ: ಜಿಲ್ಲೆಯಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ  ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರನ್ನು ಸ್ಥಳ ನೀಡದೇ ಸರ್ಕಾರ ಅವರನ್ನು ಎತ್ತಂಗಡಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಫೆ‌.13ರಂದೇ ಚಾಮರಾಜನಗರ ಡಿಸಿ ರವಿ ಅವರನ್ನು ವರ್ಗಾವಣೆಗೊಳಿಸಿ ಅವರ ಸ್ಥಾನಕ್ಕೆ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಡಾ.ಬಿ‌.ಸಿ.ಸತೀಶ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಬಳಿಕ ಕೆಲವು ಬೆಳವಣಿಗೆಗಳು ನಡೆದು ರವಿ ಗಡಿಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಮುಂದುವರೆದಿದ್ದರು. ದುರಂತ ನಡೆದ ಬಳಿಕ ನಡೆದ ನ್ಯಾಯಾಂಗ ತನಿಖೆಯಲ್ಲಿ ರವಿ ಅವರ ವೈಫಲ್ಯ, ನಾಯಕತ್ವ ಪ್ರದರ್ಶಿಸುವಲ್ಲಿ ವಿಫಲರಾಗಿರುವುದರ

ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ಜಿಲ್ಲಾಧಿಕಾರಿ ಎತ್ತಂಗಡಿ? Read More »

ಕಾಸರಗೋಡು: ಅಕ್ರಮ ತಂಬಾಕು ಉತ್ಪನ್ನ ಸಾಗಾಟ: ಓರ್ವ ಬಂಧನ

ಕಾಸರಗೋಡು, ಮೇ.೧೯: ಕಾರಿನಲ್ಲಿ ಅಕ್ರಮವಾಗಿ ೧೧೦ ಕಿಲೋ ತಂಬಾಕು ಉತ್ಪನ್ನಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಮಂಜೇಶ್ವರ ಅಬಕಾರಿ ದಳದ ಸಿಬ್ಬಂದಿ ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ. ವಡಗರದ ಅಬೂಬಕ್ಕರ್ (೩೪)ಬಂಧಿತ ಆರೋಪಿ. ಅಬಕಾರಿ ಸಿಬ್ಬಂದಿ ಬುಧವಾರ ಬೆಳಿಗ್ಗೆ ಮಂಜೇಶ್ವರ ವಾಮಂಜೂರು ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ.ಈತನಿಗೆ ಅಬಕಾರಿ ಸಿಬ್ಬಂದಿ ವಾಹನ ನಿಲ್ಲಿಸಲು ಸೂಚನೆ ನೀಡಿದರೂ ಕಾರು ನಿಲ್ಲಿಸದೆ ಪರಾರಿಯಾಗಿದ್ದ. ಇದನ್ನು ಗಮನಿಸಿ ಬೆನ್ನಟ್ಟಿದ ಸಿಬ್ಬಂದಿ ಉಪ್ಪಳ ಹಿದಾಯತ್ ನಗರದಲ್ಲಿ ತಡೆದು ತಪಾಸಣೆ

ಕಾಸರಗೋಡು: ಅಕ್ರಮ ತಂಬಾಕು ಉತ್ಪನ್ನ ಸಾಗಾಟ: ಓರ್ವ ಬಂಧನ Read More »

ಕೋವಿಡ್ ನಿಯಮ ಉಲ್ಲಂಘನೆ: ಡಾ. ಕಕ್ಕಿಲಾಯ ವಿರುದ್ದ ಪ್ರಕರಣ ದಾಖಲು

ಮಂಗಳೂರು: ಮೇ 19: ಇಲ್ಲಿನ ಸೂಪರ್ ಮಾರ್ಕೆಟ್ ಗೆ ತೆರಳಿ ಮಾಸ್ಕ್ ಬಗ್ಗೆ ವಾಗ್ವಾದ ಮಾಡಿ ತೆರಳಿದ್ದ ನಗರದ ಖ್ಯಾತ ವೈದ್ಯ ಡಾ.ಬಿ.ಎಸ್. ಕಕ್ಕಿಲ್ಲಾಯ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಕದ್ರಿಯಲ್ಲಿ ಕಾರ್ಯಾಚರಿಸುತ್ತಿರುವ ಜಿಮ್ಮಿ ಮಾರ್ಕೆಟ್ ಪಾಲುದಾರ ರೇನ್ ರೊಸಾರಿಯೋ ಕದ್ರಿ ಠಾಣೆಯಲ್ಲಿ ಕಕ್ಕಿಲಾಯ ವಿರುದ್ಧ ದೂರು ನೀಡಿದ್ದಾರೆ. ಮೇ 18ರ ಬೆಳಗ್ಗೆ ಮಾರ್ಕೆಟ್ ಗೆ ಬಂದಿದ್ದ ವೈದ್ಯರು ಅಲ್ಲಿನ ಸಿಬ್ಬಂದಿ ಜೊತೆ ಮಾಸ್ಕ್ ವಿಚಾರದಲ್ಲಿ ವಾಗ್ವಾದ ನಡೆಸಿದ್ದಾರೆ. ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಹಾಕಿರಬೇಕೆಂದು

ಕೋವಿಡ್ ನಿಯಮ ಉಲ್ಲಂಘನೆ: ಡಾ. ಕಕ್ಕಿಲಾಯ ವಿರುದ್ದ ಪ್ರಕರಣ ದಾಖಲು Read More »