ಕ್ರೈಂ

ಪರಸತಿಯ ಜೊತೆಗಿನ ಸರಸದ ಪೋಟೋ ಸ್ಟೇಟಸ್ ಹಾಕಿದ ಪ್ರಿಯಕರ: ವಿಷಯ ತಿಳಿದ ಪತಿ ಏನ್ಮಾಡಿದ ಗೊತ್ತೇ?

ಚಾಮರಾಜನಗರ.ಮೇ.20: ಪತ್ನಿ ಜತೆ ಸರಸ ಸಲ್ಲಾಪದಲ್ಲಿ ತೊಡಗುತ್ತಿದ್ದ ಪ್ರಿಯಕರ ತಮ್ಮಿಬ್ಬರ ಅನೈತಿಕ ಸಂಬಂಧದ ಫೋಟೊ ಹಾಗೂ ವೀಡಿಯೊಗಳನ್ನು ವಾಟ್ಸಪ್ ನ ಸ್ಟೇಟಸ್ ನಲ್ಲಿ ಹಾಕಿ ವಿಕೃತಿ ಮೆರೆಯುತ್ತಿದ್ದ. ಇದನ್ನು ಗಮನಿಸಿದ ಆಕೆಯ ಪತಿ ಪ್ರಿಯಕರನನ್ನು ಕೊಂದು ಆತನ ವಿಕೃತಿಗೆ ಅಂತ್ಯ ಹಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಬುಧವಾರ ರಾತ್ರಿ ಪತ್ನಿ ಜೊತೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಕರ ಬಸವ ಶೆಟ್ಟಿ (37) ಎಂಬಾತನನ್ನು ಗಂಡ […]

ಪರಸತಿಯ ಜೊತೆಗಿನ ಸರಸದ ಪೋಟೋ ಸ್ಟೇಟಸ್ ಹಾಕಿದ ಪ್ರಿಯಕರ: ವಿಷಯ ತಿಳಿದ ಪತಿ ಏನ್ಮಾಡಿದ ಗೊತ್ತೇ? Read More »

ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ಜಿಲ್ಲಾಧಿಕಾರಿ ಎತ್ತಂಗಡಿ?

ಚಾಮರಾಜನಗರ: ಜಿಲ್ಲೆಯಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ  ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರನ್ನು ಸ್ಥಳ ನೀಡದೇ ಸರ್ಕಾರ ಅವರನ್ನು ಎತ್ತಂಗಡಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಫೆ‌.13ರಂದೇ ಚಾಮರಾಜನಗರ ಡಿಸಿ ರವಿ ಅವರನ್ನು ವರ್ಗಾವಣೆಗೊಳಿಸಿ ಅವರ ಸ್ಥಾನಕ್ಕೆ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಡಾ.ಬಿ‌.ಸಿ.ಸತೀಶ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಬಳಿಕ ಕೆಲವು ಬೆಳವಣಿಗೆಗಳು ನಡೆದು ರವಿ ಗಡಿಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಮುಂದುವರೆದಿದ್ದರು. ದುರಂತ ನಡೆದ ಬಳಿಕ ನಡೆದ ನ್ಯಾಯಾಂಗ ತನಿಖೆಯಲ್ಲಿ ರವಿ ಅವರ ವೈಫಲ್ಯ, ನಾಯಕತ್ವ ಪ್ರದರ್ಶಿಸುವಲ್ಲಿ ವಿಫಲರಾಗಿರುವುದರ

ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ಜಿಲ್ಲಾಧಿಕಾರಿ ಎತ್ತಂಗಡಿ? Read More »

ಕಾಸರಗೋಡು: ಅಕ್ರಮ ತಂಬಾಕು ಉತ್ಪನ್ನ ಸಾಗಾಟ: ಓರ್ವ ಬಂಧನ

ಕಾಸರಗೋಡು, ಮೇ.೧೯: ಕಾರಿನಲ್ಲಿ ಅಕ್ರಮವಾಗಿ ೧೧೦ ಕಿಲೋ ತಂಬಾಕು ಉತ್ಪನ್ನಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಮಂಜೇಶ್ವರ ಅಬಕಾರಿ ದಳದ ಸಿಬ್ಬಂದಿ ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ. ವಡಗರದ ಅಬೂಬಕ್ಕರ್ (೩೪)ಬಂಧಿತ ಆರೋಪಿ. ಅಬಕಾರಿ ಸಿಬ್ಬಂದಿ ಬುಧವಾರ ಬೆಳಿಗ್ಗೆ ಮಂಜೇಶ್ವರ ವಾಮಂಜೂರು ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ.ಈತನಿಗೆ ಅಬಕಾರಿ ಸಿಬ್ಬಂದಿ ವಾಹನ ನಿಲ್ಲಿಸಲು ಸೂಚನೆ ನೀಡಿದರೂ ಕಾರು ನಿಲ್ಲಿಸದೆ ಪರಾರಿಯಾಗಿದ್ದ. ಇದನ್ನು ಗಮನಿಸಿ ಬೆನ್ನಟ್ಟಿದ ಸಿಬ್ಬಂದಿ ಉಪ್ಪಳ ಹಿದಾಯತ್ ನಗರದಲ್ಲಿ ತಡೆದು ತಪಾಸಣೆ

ಕಾಸರಗೋಡು: ಅಕ್ರಮ ತಂಬಾಕು ಉತ್ಪನ್ನ ಸಾಗಾಟ: ಓರ್ವ ಬಂಧನ Read More »

ಕೋವಿಡ್ ನಿಯಮ ಉಲ್ಲಂಘನೆ: ಡಾ. ಕಕ್ಕಿಲಾಯ ವಿರುದ್ದ ಪ್ರಕರಣ ದಾಖಲು

ಮಂಗಳೂರು: ಮೇ 19: ಇಲ್ಲಿನ ಸೂಪರ್ ಮಾರ್ಕೆಟ್ ಗೆ ತೆರಳಿ ಮಾಸ್ಕ್ ಬಗ್ಗೆ ವಾಗ್ವಾದ ಮಾಡಿ ತೆರಳಿದ್ದ ನಗರದ ಖ್ಯಾತ ವೈದ್ಯ ಡಾ.ಬಿ.ಎಸ್. ಕಕ್ಕಿಲ್ಲಾಯ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಕದ್ರಿಯಲ್ಲಿ ಕಾರ್ಯಾಚರಿಸುತ್ತಿರುವ ಜಿಮ್ಮಿ ಮಾರ್ಕೆಟ್ ಪಾಲುದಾರ ರೇನ್ ರೊಸಾರಿಯೋ ಕದ್ರಿ ಠಾಣೆಯಲ್ಲಿ ಕಕ್ಕಿಲಾಯ ವಿರುದ್ಧ ದೂರು ನೀಡಿದ್ದಾರೆ. ಮೇ 18ರ ಬೆಳಗ್ಗೆ ಮಾರ್ಕೆಟ್ ಗೆ ಬಂದಿದ್ದ ವೈದ್ಯರು ಅಲ್ಲಿನ ಸಿಬ್ಬಂದಿ ಜೊತೆ ಮಾಸ್ಕ್ ವಿಚಾರದಲ್ಲಿ ವಾಗ್ವಾದ ನಡೆಸಿದ್ದಾರೆ. ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಹಾಕಿರಬೇಕೆಂದು

ಕೋವಿಡ್ ನಿಯಮ ಉಲ್ಲಂಘನೆ: ಡಾ. ಕಕ್ಕಿಲಾಯ ವಿರುದ್ದ ಪ್ರಕರಣ ದಾಖಲು Read More »

ಬಂಟ್ವಾಳ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

ಬಂಟ್ವಾಳ: ಕಳೆದು ಎರಡು ದಿನಗಳ ಹಿಂದೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬಂಟ್ವಾಳ ಬಿ.ಕಸ್ಬಾ ಗ್ರಾಮದ ಮುಗ್ಡಾಲ್ ಗುಡ್ಡೆ ನಿವಾಸಿ ವಿನಯ್ (೨೪) ಮೃತಪಟ್ಟ ಯುವಕ. ಮಾ.೧೦ ರಂದು ಪಾಣೆಮಂಗಳೂರು ಅಕ್ಕರಂಗಡಿ ಎಂಬಲ್ಲಿ ಪಿಕಪ್ ಜೀಪ್ ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ವಿನಯ್ ಅವರ ತಲೆಗೆ ಗಾಯವಾಗಿದ್ದು, ಅವರು ಕೋಮಾ ಅವಸ್ಥೆಯಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಬಂಟ್ವಾಳ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು Read More »

ನಿದ್ದೆಗಣ್ಣಲ್ಲಿದ್ರಾ ಮುಕ್ಕ ಆಸ್ಪತ್ರೆ ಸಿಬ್ಬಂದಿ? ಇಂಥಾ ಅಚಾತುರ್ಯ ಮಾಡಿದವರನ್ನು ಏನ್ಮಾಡ್ಬೇಕು?

ಮಂಗಳೂರು. ಮೇ.17: ಇಂದಿನ ದಿನಗಳಲ್ಲಿ ಆಸ್ಪತ್ರೆಗೆ ಬರೋದು ಅಂದ್ರೇನೆ ಜನ ಭಯ ಪಡ್ತಿದಾರೆ. ಅಂತದ್ದರಲ್ಲಿ ಇಂತಹ ತಪ್ಪನ್ನು ಮಾಡಿದ್ರೆ ನಿಜಕ್ಕೂ ಆಸ್ಪತ್ರೆಗೆ ಜನ ತಿರುಗೀನೂ ನೋಡಲ್ಲ. ಅಷ್ಟಕ್ಕೂ ಈ ಆಸ್ಪತ್ರೆ ಸಿಬ್ಬಂದಿ ಮಾಡಿದ್ದಾದ್ರೂ ಏನು? ಮುಂದೆ ಓದಿ.ಮಂಗಳೂರಿನ ಸುರತ್ಕಲ್ ಸಮೀಪದ ಮುಕ್ಕದ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಇಬ್ಬರು ಮೃತಪಟ್ಟಿದ್ದರು. ಈ ವೇಳೆ ಮೃತ ವ್ಯಕ್ತಿಗಳ ಶವ ಸಿಬ್ಬಂದಿ ಎಡವಟ್ಟಿನಿಂದ ಅದಲು ಬದಲಾದ ಘಟನೆ ನಡದಿದೆ.ಸುರತ್ಕಲ್ ಸಮೀಪದ ಹೊಸಬೆಟ್ಟು ನಿವಾಸಿ ಜಗದೀಶ್ ಕುಂದರ್ (66) ಹಾಗೂ ಕಾರ್ಕಳದ ಸುಧಾಕರ

ನಿದ್ದೆಗಣ್ಣಲ್ಲಿದ್ರಾ ಮುಕ್ಕ ಆಸ್ಪತ್ರೆ ಸಿಬ್ಬಂದಿ? ಇಂಥಾ ಅಚಾತುರ್ಯ ಮಾಡಿದವರನ್ನು ಏನ್ಮಾಡ್ಬೇಕು? Read More »

ಕಾಪು: ಹೆತ್ತವರ ಬುದ್ದಿಮಾತಿಗೆ ನೊಂದು ಬಾಲಕಿ ಆತ್ಮಹತ್ಯೆ

ಕಾಪು, ಮೇ ೧೭: ಮೊಬೈಲ್ ಗೇಮ್ ಅತಿಯಾಗಿ ಆಡದಂತೆ ತಾಯಿಯ ಬುದ್ದಿಮಾತಿಗೆ ನೊಂದು ೧೬ರ ಬಾಲಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇ.೧೫ರ ರಾತ್ರಿ ಇಲ್ಲಿನ ಮಣಿಪುರ ಗ್ರಾಮ ಕೋಟೆ ಬಳಿ ನಡೆದಿದೆ.ಮೃತ ಬಾಲಕಿಯನ್ನು ಶಾಬನ್ ಹಾಗೂ ಜುಬೇದಾ ಅವರ ಪುತ್ರಿ ಸುಹೇಬತ್ ಅಸ್ಲಮೀಯಾ(೧೬) ಎಂದು ಗುರುತಿಸಲಾಗಿದೆ. ಈಕೆಗೆ ಮೇ ೧೫ ರಂದು ರಾತ್ರಿ ೮.೦೦ ಗಂಟೆ ವೇಳೆಗೆ ತಾಯಿಯು ಮೊಬೈಲ್‌ನಲ್ಲಿ ಆಟ ಆಡದಂತೆ ಬುದ್ದಿ ಹೇಳಿ ಮೊಬೈಲ್‌ನ್ನು ತೆಗೆದುಕೊಂಡಿದ್ದರು.ಸ್ವಲ್ಪ ಸಮಯದ ಬಳಿಕ ಮಗಳು ಮನೆಯಲ್ಲಿರದಿರುವುದನ್ನು

ಕಾಪು: ಹೆತ್ತವರ ಬುದ್ದಿಮಾತಿಗೆ ನೊಂದು ಬಾಲಕಿ ಆತ್ಮಹತ್ಯೆ Read More »

ಉಡುಪಿ: ಅನಾಥಾಶ್ರಮದಲ್ಲಿದ್ದ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ 

ಉಡುಪಿ: ಹಿರಿಯಡ್ಕದ ‘ಅಪ್ಪ-ಅಮ್ಮ’ ಅನಾಥಾಶ್ರಮದಲ್ಲಿ ಆಶ್ರಯ ಪಡೆದುಕೊಂಡಿದ್ದ  ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೋಡಿಬೆಟ್ಟು ನಿವಾಸಿ ದಾಕ್ಷಾಯಿಣಿ(47) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅವಿವಾಹಿತೆಯಾಗಿದ್ದು ಇವರು ಅನಾಥಾಶ್ರಮದ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕವಾಗಿ ನೊಂದುಕೊಂಡಿದ್ದು  ಸೂಕ್ತ ಚಿಕಿತ್ಸೆ ಇಲ್ಲದೆ, ಮಾನಸಿಕವಾಗಿ ಅಸ್ವಸ್ಥಗೊಂಡಿದ್ದರು. ಕಳೆದ ಐದು ತಿಂಗಳಿನಿಂದ ವರಂಬಳ್ಳಿ ಬಳಿಯ ‘ಅಪ್ಪ-ಅಮ್ಮ’ ಅನಾಥಾಶ್ರಮದಲ್ಲಿ ಆಕೆಗೆ ಆಶ್ರಯ ನೀಡಲಾಗಿತ್ತು. ಆದರೆ, ಮೇ. 16 ರಂದು ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ

ಉಡುಪಿ: ಅನಾಥಾಶ್ರಮದಲ್ಲಿದ್ದ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ  Read More »

ಬೆಳ್ತಂಗಡಿ | ವಿದ್ಯುತ್ ಆಘಾತಕ್ಕೊಳಗಾಗಿ ಲೈನ್ ಮ್ಯಾನ್ ಮೃತ್ಯು

ಬೆಳ್ತಂಗಡಿ: ತಂತಿ ದುರಸ್ತಿಗೊಳಿಸುತ್ತಿದ್ದಾಗ ಲೈನ್ ಮ್ಯಾನ್ ಒಬ್ಬರು ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟ ಘಟನೆ ಇಂದು ತಾಲೂಕಿನ ತೆಕ್ಕಾರು ಸಮೀಪದ ಪಿಂಡಿಕಲ್ಲು ಎಂಬಲ್ಲಿ ನಡೆದಿದೆ.ಕಲ್ಲೇರಿ ಸೆಕ್ಷನ್ ಮೆಸ್ಕಾಂನ ಲೈನ್ ಮ್ಯಾನ್ ವಿಕಾಸ್ ಮೃತಪಟ್ಟವರು. ಇವರು ಕಳೆದೆರಡು ದಿನಗಳಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಹಾಗಾಗಿ ಸರಿಪಡಿಸುವ ಕಾರ್ಯ ನಡೆಯುತ್ತಿತ್ತು. ಇದೇ ವೇಳೆ ಸ್ಥಳದಲ್ಲಿ ಕಂಬದ ಮೇಲೆ ದುರಸ್ತಿಕಾರ್ಯ ಕೈಗೊಂಡಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಬೇಟಿ ನೀಡಿದ್ದು,

ಬೆಳ್ತಂಗಡಿ | ವಿದ್ಯುತ್ ಆಘಾತಕ್ಕೊಳಗಾಗಿ ಲೈನ್ ಮ್ಯಾನ್ ಮೃತ್ಯು Read More »