ಸೈನಿಕನಾಗುವ ಕನಸು ಕಂಡಿದ್ದ ಯುವಕ ನಿಗೂಢ ಸಾವು | ಸಾವಿನ ಸುತ್ತ ಅನುಮಾನದ ಹುತ್ತ | ಕೊಲೆಯೋ? ಆತ್ಮಹತ್ಯೆಯೋ?
ಸುರತ್ಕಲ್: ಸೈನಿಕನಾಗಲು ಕನಸು ಕಂಡಿದ್ದ ಯುವಕನೋರ್ವನ ಮೃತ ದೇಹ ಕಳೆದ ಸೋಮವಾರ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಪತ್ತೆಯಾಗಿದ್ದು, ಆತನ ಸಾವಿನ ಹಿಂದೆ ಅನುಮಾನದ ಹೊಗೆಯಾಡುತ್ತಿದೆ. ಹಾಗಾಗಿ ಸೂಕ್ತ ತನಿಖೆಗೆ ಆಗ್ರಹ ವ್ಯಕ್ತವಾಗಿದೆ. ಸುರತ್ಕಲ್ ನ ಕೃಷ್ಣಾಪುರ ಕ್ರಾಸ್ ನಿವಾಸಿ ಮುಹಮ್ಮದ್ ಶರೀಫ್ ಹಾಜಿ ಪುತ್ರ ಮುಹಮ್ಮದ್ ಫಹಾದ್ (19)ನ ಮೃತದೇಹವು ಸೋಮವಾರ ಸಸಿಹಿತ್ಲು ನದಿ ಕಿನಾರೆಯಲ್ಲಿ ಪತ್ತೆಯಾಗಿತ್ತು. ಪಿಯುಸಿ ಕಲಿಯುತ್ತಿದ್ದ ಫಹಾದ್ ಸೈನ್ಯಕ್ಕೆ ಸೇರಲು ಸಿದ್ಧತೆ ನಡೆಸುತ್ತಿದ್ದ. ಈ ಬಗ್ಗೆ ಭೋಪಾಲ್‌ಗೆ ತರಬೇತಿಗೂ ತೆರಳಿದ್ದ. ಲಾಕ್‌ಡೌನ್ ಹಿನ್ನಲೆಯಲ್ಲಿ […]