ಕ್ರೈಂ

ಹೀಗೊಂದು ವಿಚಿತ್ರ ರೇಪ್| ರೇಪಿಸ್ಟ್ ಅಂದರ್

ಬೆಳಗಾವಿ: ಬಸ್‌ಗಾಗಿ ಕಾಯುತ್ತಿದ್ದ ಯುವಕನೊಬ್ಬನನ್ನು ಡ್ರಾಪ್ ಕೊಡುವ ನೆಪದಲ್ಲಿ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಅನೈಸರ್ಗಿಕ ಲೈಂಗಿಕ ಸಂಪರ್ಕ ನಡೆಸಿರುವ ಘಟನೆ ಜಿಲ್ಲೆಯ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆ ಯುವಕ ಬಸ್‌ಗಾಗಿ ಕಾಯುತ್ತಿದ್ದು, ಅದೇ ರಸ್ತೆಯಾಗಿ ಬೈಕ್ ನಲ್ಲಿ ಬಂದ ರಾಜು ನೀಲವ್ವ ಆಚಾರಟ್ಟಿ ಎಂಬಾತ ಡ್ರಾಪ್ ಕೊಡುವುದಾಗಿ ನಂಬಿಸಿ ಬಸ್ ಗೆ ಕಾಯುತ್ತಿದ್ದ ಯುವಕನನ್ನು ಬೈಕ್ ಹತ್ತಿಸಿಕೊಂಡಿದ್ದಾನೆ. ಬಳಿಕ ಬೈಕನ್ನು ನಿರ್ಜನ ಪ್ರದೇಶಕ್ಕೆ ಕೊಂಡು ಹೋಗಿದ್ದು, ಅಲ್ಲಿ ಯುವಕನ ಇಚ್ಛೆಗೆ ವಿರುದ್ಧವಾಗಿ ಅನೈಸರ್ಗಿಕ […]

ಹೀಗೊಂದು ವಿಚಿತ್ರ ರೇಪ್| ರೇಪಿಸ್ಟ್ ಅಂದರ್ Read More »

ಅಣ್ಣನ ಮಗಳ ಬೆತ್ತಲೆ ಫೋಟೋ ಸೆರೆಹಿಡಿದು ಲೈಂಗಿಕ ಕಿರುಕುಳ ನೀಡಿದ ಕಾಮಿ ಚಿಕ್ಕಪ್ಪ| ಪೊಲೀಸರಿಂದ ಆರೋಪಿ ಬಂಧನ

ಶಿವಮೊಗ್ಗ: ಅಣ್ಣನ ಪುತ್ರಿಯ ಬೆತ್ತಲೆ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಲೈಂಗಿಕ ಕಿರುಕುಳ ಕೊಟ್ಟಿರುವ ಪಾಪಿ ಚಿಕ್ಕಪ್ಪನೀಗ ಪೊಲೀಸ್ ಅತಿಥಿಯಾಗಿದ್ದಾನೆ. ಸೊರಬ ತಾಲೂಕಿನಲ್ಲಿ ಪಾಪಿ ಚಿಕ್ಕಪ್ಪನೋರ್ವ ಈ ರೀತಿಯ ವಿಕೃತಿ ಮೆರೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತೇಜಪ್ಪ(38) ಎಂಬಾತನೇ ಮಗಳ ಸಮಾನಳಾದ ಅಣ್ಣನ ಪುತ್ರಿಯ ಮೇಲೆ ಕಣ್ಣು ಹಾಕಿದ ಆರೋಪಿ. ಅಲ್ಲದೆ ಆಕೆಯ ಬೆತ್ತಲೆ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಮಾಡಿ ವಿಕೃತಿ ಮೆರೆದಿದ್ದಾನೆ. ಆರೋಪಿ ತೇಜಪ್ಪ 3 ದಿನಗಳ ಹಿಂದೆ ಈತ ಅಣ್ಣನ ಪುತ್ರಿಯನ್ನು

ಅಣ್ಣನ ಮಗಳ ಬೆತ್ತಲೆ ಫೋಟೋ ಸೆರೆಹಿಡಿದು ಲೈಂಗಿಕ ಕಿರುಕುಳ ನೀಡಿದ ಕಾಮಿ ಚಿಕ್ಕಪ್ಪ| ಪೊಲೀಸರಿಂದ ಆರೋಪಿ ಬಂಧನ Read More »

ಪುತ್ತೂರು: ಲಾರಿಗೆ ಬೈಕ್ ಅಪಘಾತ : ಸವಾರ ಮೃತ್ಯು

ಪುತ್ತೂರು: ಗೊಬ್ಬರದ ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಬಳಿ ಅ.10 ರಂದು ಬೆಳಗ್ಗೆ ನಡೆದಿದೆ. ಮೃತಪಟ್ಟವರನ್ನು ಗೋಲ್ಡನ್ ಬೇಕರಿಯ ಮಾಲೀಕ ಅಝೀಝ್ ಎಂದು ಗುರುತಿಸಲಾಗಿದೆ. ಅವರು ಭಾನುವಾರ ಬೆಳಗ್ಗೆ ತನ್ನ ಅಂಗಡಿಗೆ ಹೋಗುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು: ಲಾರಿಗೆ ಬೈಕ್ ಅಪಘಾತ : ಸವಾರ ಮೃತ್ಯು Read More »

ಕಡಬ: ಹೊಳೆಯಲ್ಲಿ ತೇಲಿಬಂತು ಮಾನವನ ತಲೆಬುರುಡೆ| ಕಾರಣ ನಿಗೂಢ..!

ಕಡಬ: ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಕೊಳೆತ ತಲೆಬುರುಡೆಯೊಂದು ಹೊಳೆಯೊಂದರಲ್ಲಿ ತೇಲಿಬಂದಿರುವ ಘಟನೆ ತಾಲೂಕಿನ ಪೆರಾಬೆ ಗ್ರಾಮದ ಅನ್ನಡ್ಕ ಎಂಬಲ್ಲಿ ನಡೆದಿದೆ. ಅನ್ನಡ್ಕದಲ್ಲಿರುವ ತೋಡಿನಲ್ಲಿ ಪತ್ತೆಯಾಗಿರುವ ಕೊಳೆತ ತಲೆ ಬುರುಡೆ,ಕಾಡಿನಿಂದ ನೀರಿನೊಂದಿಗೆ ಕೊಚ್ಚಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿದ್ದು, ಈ ಕುರುತಂತೆ ತನಿಖೆ ನಡೆಸುತ್ತಿದ್ದಾರೆ. ಯಾವೊಂದೂ ಸುಳಿವು ಇಲ್ಲದೇ ಪತ್ತೆಯಾಗಿರುವ ತಲೆಬುರುಡೆಯಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ಕಡಬ: ಹೊಳೆಯಲ್ಲಿ ತೇಲಿಬಂತು ಮಾನವನ ತಲೆಬುರುಡೆ| ಕಾರಣ ನಿಗೂಢ..! Read More »

ನಶೆಯ ನಂಟು| ಚಿತ್ರ ನಿರ್ಮಾಪಕ ಇಮ್ತಿಯಾಜ್ ಖತ್ರಿ‌ ಮನೆಗೆ ಸಿಬಿಐ ದಾಳಿ

ಮುಂಬೈ: ಬಾಲಿವುಡ್ ನ ಮಾದಕ ಲೋಕದ ನಂಟಿನ ಗಂಟು ದಿನಕ್ಕೊಂದು ರೀತಿಯಲ್ಲಿ ಬಿಚ್ಚಿಕೊಳ್ಳುತ್ತಿದೆ. ಶಾರುಖ್ ಖಾನ್ ಪುತ್ರ ಆರ್ಯಾನ್ ಖಾನ್ ಬಂಧನ ಪ್ರಕರಣದ ನಡುವೆ ಇದೀಗ ಎನ್ ಸಿಬಿ ಅಧಿಕಾರಿಗಳು ಚಿತ್ರ ನಿರ್ಮಾಪಕ ಇಮ್ತಿಯಾಜ್ ಖತ್ರಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ಮುಂಬೈ ನಗರದ ಬಾಂದ್ರಾ ಪ್ರದೇಶದಲ್ಲಿರುವ ನಿರ್ಮಾಪಕ ಇಮ್ತಿಯಾಜ್ ಖತ್ರಿ ಅವರ ನಿವಾಸ ಮತ್ತು ಕಚೇರಿಯಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಪರಿಶೀಲನೆ ನಡೆಸುತ್ತಿದೆ. ಬಿಲ್ಡರ್ ಒಬ್ಬರ ಪುತ್ರನಾಗಿರುವ ಇಮ್ತಿಯಾಜ್ ಖತ್ರಿ ಬಾಲಿವುಡ್ ನೊಂದಿಗೆ ನಂಟು ಹೊಂದಿದ್ದಾರೆ.

ನಶೆಯ ನಂಟು| ಚಿತ್ರ ನಿರ್ಮಾಪಕ ಇಮ್ತಿಯಾಜ್ ಖತ್ರಿ‌ ಮನೆಗೆ ಸಿಬಿಐ ದಾಳಿ Read More »

ಯಮಕಿಂಕರನಾದ ರಸ್ತೆ ಗುಂಡಿ| ಟಿಪ್ಪರ್ ಹರಿದು ಮಹಿಳೆ‌ ಸಾವು

ಬೆಂಗಳೂರು: ರಸ್ತೆ ಗುಂಡಿಗಳಿಂದ ರಾಜಧಾನಿ ಬೆಂಗಳೂರು ಮಂದಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಈ ಮಧ್ಯೆ, ಅಲ್ಲಲ್ಲಿ ಗುಂಡಿಗಳು ಮಾರಕವಾಗಿದ್ದು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೊದಲು ರಸ್ತೆ ಗುಂಡಿಗಳನ್ನು ಮುಚ್ಚಿ ಎಂದು ಖುದ್ದು ಹೈಕೋರ್ಟೇ ಆದೇಶಿಸಿದ್ದರೂ ಬಿಬಿಎಂಪಿ ಎಚ್ಚೆತ್ತಿಲ್ಲ. ಇದೀಗ ಈ ಗುಂಡಿಗೆ ಅಮಾಯಕ ಮಹಿಳೆಯೊಬ್ಬರು‌ ಬಲಿಯಾಗಿದ್ದಾರೆ. ರಸ್ತೆಗುಂಡಿಯ‌ನ್ನು ತಪ್ಪಿಸಲು ಪಕ್ಕಕ್ಕೆ ಸರಿದ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಮಹಿಳೆಯ ಮೇಲೆ ಟಿಪ್ಪರ್ ಲಾರಿ ಹರಿದು, ಮಹಿಳೆ ಸಾವನ್ನಪ್ಪಿದ್ದಾರೆ. ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ಈ ದುರಂತ ನಡೆದಿದೆ. ಮೊನ್ನೆ

ಯಮಕಿಂಕರನಾದ ರಸ್ತೆ ಗುಂಡಿ| ಟಿಪ್ಪರ್ ಹರಿದು ಮಹಿಳೆ‌ ಸಾವು Read More »

ಹೈದರಾಬಾದ್ ನಲ್ಲಿ ಅಪಘಾತ| ಬಂಟ್ವಾಳ ಮೂಲದ ಯುವಕ ಸಾವು

ಬಂಟ್ವಾಳ : ಹೈದರಾಬಾದ್ ನಲ್ಲಿ ಬುಧವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ತಾಲೂಕಿನ ಸಜಿಪಮೂಡ ಗ್ರಾಮದ ಬೊಳ್ಳಾಯಿ ನಿವಾಸಿ ಯುವಕನೋರ್ವ ಸಾವನ್ನಪ್ಪಿದ್ದಾನೆ. ಮೃತರನ್ನು ಇಲ್ಲಿನ ಕುಚ್ಚುಗುಡ್ಡೆ ನಿವಾಸಿ ನಾರಾಯಣ ಶೆಟ್ಟಿ ಎಂಬವರ ಪುತ್ರ ಪ್ರಶಾಂತ್ ಶೆಟ್ಟಿ(32) ಎಂದು ಗುರುತಿಸಲಾಗಿದೆ. ಪ್ರಶಾಂತ್ ಶೆಟ್ಟಿ ಚಲಾಯಿಸುತ್ತಿದ್ದ ಬೈಕ್ ಹಾಗೂ ಬಸ್ ಮುಖಾಮುಖಿ ಡಿಕ್ಕಿ‌ಯಾಗಿ ಈ ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಪ್ರಶಾಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಕುರಿತಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೈದರಾಬಾದ್ ನಲ್ಲಿ ಅಪಘಾತ| ಬಂಟ್ವಾಳ ಮೂಲದ ಯುವಕ ಸಾವು Read More »

ಬಂಟ್ವಾಳ: ಮಹಿಳೆಯಿಂದ ಲಂಚ ಸ್ವೀಕಾರ| ಸರ್ವೇಯರ್ ಬಂಧನ

ಬಂಟ್ವಾಳ: ಭೂಮಿಯ ಗಡಿ ಗುರುತಿಸಲು ಮಹಿಳೆಯೊಬ್ಬರಿಂದ ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಸಿಬ್ಬಂದಿ ಬಂಟ್ವಾಳ ಸರ್ವೇ ವಿಭಾಗದ ಸರ್ವೇಯರ್‌ನನ್ನು ಬಂಧಿಸಿದ್ದಾರೆ. ಬಿ.ಸಿ.ರೋಡಿನ ಮಿನಿ ವಿಧಾನ ಸೌಧದಲ್ಲಿರುವ ಸರ್ವೇಕ್ಷಣಾ ಇಲಾಖೆಯಲ್ಲಿ ಸರ್ವೇಯರ್ ಸುರೇಶ್ ಬಂಧಿತ ಆರೋಪಿ. ಈತ ಮಹಿಳೆಯಿಂದ 6,000 ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕಲ್ಲಿಯ ಪ್ರೇಮಾ ಸರಿತಾ ಪಿಂಟೋ ಎಂಬವರು ತನ್ನ ಭೂಮಿಯಲ್ಲಿ ಗಡಿ ಸಮೀಕ್ಷೆಗಾಗಿ ಅರ್ಜಿ ಸಲ್ಲಿಸಿದ್ದರು. ಸರ್ವೇಯರ್ ಆಕೆಯಿಂದ 7,000 ಲಂಚಕ್ಕೆ

ಬಂಟ್ವಾಳ: ಮಹಿಳೆಯಿಂದ ಲಂಚ ಸ್ವೀಕಾರ| ಸರ್ವೇಯರ್ ಬಂಧನ Read More »

ಉಡುಪಿ: ಅಪಘಾತದಲ್ಲಿ ಬಾಲಕಿ ಸಾವು ಪ್ರಕರಣ| ವೈದ್ಯರಿಗೆ 2 ವರ್ಷ ಜೈಲು ಶಿಕ್ಷೆ

ಉಡುಪಿ: ಕುಕ್ಕಿಕಟ್ಟೆ ಸಮೀಪ ಡಯಾನಾ ಟಾಕೀಸು ಬಳಿ 2017 ರ ಮಾ. 16 ರಂದು ನಡೆದಿದ್ದ ಅಪಘಾತದಲ್ಲಿ ಬಾಲಕಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ 2 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಉಡುಪಿಯ ಪ್ರಸಿದ್ಧ ಆಯುರ್ವೇದ ವೈದ್ಯ, ಅಲೆವೂರು ನಿವಾಸಿ ಲಕ್ಷ್ಮೀಪ್ರಸಾದ್ ಭಟ್ ಪ್ರಕರಣದ ಆಫರಾದಿ. ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಕೈಗೆತ್ತಿಕೊಂಡ ಉಡುಪಿ ಜಿಲ್ಲಾ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಧೀಶರಾದ

ಉಡುಪಿ: ಅಪಘಾತದಲ್ಲಿ ಬಾಲಕಿ ಸಾವು ಪ್ರಕರಣ| ವೈದ್ಯರಿಗೆ 2 ವರ್ಷ ಜೈಲು ಶಿಕ್ಷೆ Read More »

ಶಿವಮೊಗ್ಗ ಡಿ ಸಿ ಕಚೇರಿ ಸಿಬ್ಬಂದಿ ಡೆತ್‌ನೋಟ್ ಬರೆದಿಟ್ಟು ನಾಪತ್ತೆ ಪ್ರಕರಣ| ಧರ್ಮಸ್ಥಳದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆ

ಬೆಳ್ತಂಗಡಿ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಶಿವಮೊಗ್ಗ ವ್ಯಕ್ತಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಗಿರಿರಾಜ್ ಆತ್ಮಹತ್ಯೆಗೆ ಯತ್ನಿಸಿದವರು. ಇವರು ಮೇಲಧಿಕಾರಿಗಳ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಚೀಟಿಯಲ್ಲಿ ಬರೆದಿಟ್ಟು ಸೆ.28 ರಂದು ನಾಪತ್ತೆಯಾಗಿದ್ದರು. ಚೀಟಿ ನೋಡಿ ಆಘಾತಗೊಂಡಿದ್ದ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಒಂದು ವಾರದಿಂದ ನಾಪತ್ತೆಯಾಗಿದ್ದರಿಂದ ಗಿರಿರಾಜ್ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.ಇದೀಗ 10 ದಿನಗಳ ಬಳಿಕ ಗಿರಿರಾಜ್ ಅಸ್ವಸ್ಥ ಸ್ಥಿತಿಯಲ್ಲಿ

ಶಿವಮೊಗ್ಗ ಡಿ ಸಿ ಕಚೇರಿ ಸಿಬ್ಬಂದಿ ಡೆತ್‌ನೋಟ್ ಬರೆದಿಟ್ಟು ನಾಪತ್ತೆ ಪ್ರಕರಣ| ಧರ್ಮಸ್ಥಳದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆ Read More »