ಸುಳ್ಯ : ಅಡ್ಕಾರ್ ನಲ್ಲಿ ಕಾರು ಅಪಘಾತ: ಮೂವರು ಗಂಭೀರ
ಸುಳ್ಯ : ಅಡ್ಕಾರ್ ಮಾವಿನ ಕಟ್ಟೆಯಲ್ಲಿ ಕಾರು ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡ ಘಟನೆ ಇಂದು ಸಂಭವಿಸಿದೆ. ಮುಂಜಾನೆಯಿಂದ ಸುರಿಯುತ್ತಿರುವ ಮಳೆಯಿಂದ ಹಾಗೂ ವೇಗವಾಗಿ ಬಂದ ಹಿನ್ನೆಲೆ ಚಾಲಕ ನಿಯಂತ್ರಣ ಕಳೆದು ಕೊಂಡಿದ್ದಾನೆ, ಬಳಿಕ ಕಾರು ಪಲ್ಟಿಯಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.ಇದೇ ವೇಳೆ ಕಾರಿನಲ್ಲಿ ಇದ್ದ ಮೂವರು ಗಂಭೀರ ಗಾಯಗೊಂಡಿದ್ದು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರನ್ನು ಮೈಸೂರಿನ ಶ್ರೇಯಸ್ಸ್, ಭುವನ್ ಹಾಗೂ ಸರ್ವೇಶ್ ಎಂದು ಗುರುತಿಸಲಾಗಿದೆ, ಅವರು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಳ್ಯ : ಅಡ್ಕಾರ್ ನಲ್ಲಿ ಕಾರು ಅಪಘಾತ: ಮೂವರು ಗಂಭೀರ Read More »









