ಕ್ರೈಂ

ಗುಂಡ್ಯ: ಕಾರಿನ ಮೇಲೆ ಮರಬಿದ್ದು ಚಾಲಕ ದುರ್ಮರಣ | ಕಾರಿನಲ್ಲಿನ ಸಮಸ್ಯೆ ಸಾವಾಗಿ ಪರಿವರ್ತನೆ|

ಗುಂಡ್ಯ: ಕಾರಿನ ಮೇಲೆ ಮರಬಿದ್ದು ಚಾಲಕ ಮೃತಪಟ್ಟ ಘಟನೆ ಶಿರಾಡಿ ಗ್ರಾಮದ ಗುಂಡ್ಯ ಸಮೀಪ ಅಡ್ಡಹೊಳೆಯಲ್ಲಿ ಜ.2 ರಂದು ಬೆಳಿಗ್ಗೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರಿನಲ್ಲಿ ಶಬ್ದ ಬಂದ ಹಿನ್ನೆಲೆಯಲ್ಲಿ ಚಾಲಕ ಕಾರನ್ನು ನಿಲ್ಲಿಸಿ ಬಾನೆಟ್ ತೆಗೆಯುತ್ತಿದ್ದ ವೇಳೆ ಹೆದ್ದಾರಿ ಬದಿಯಲ್ಲಿದ್ದ ಹಾಲುಮಡ್ಡಿ ಮರವೊಂದು ಕಾರು ಹಾಗೂ ಅವರ ಮೇಲೆಯೇ ಬಿದ್ದಿದೆ ಎಂದು ವರದಿಯಾಗಿದೆ. ಇದು ಸಾವು ಬರುವ ಸಮಯಕ್ಕೆ ಸರಿಯಾಗಿ ಸೃಷ್ಟಿಯಾದ ಸಮಸ್ಯೆ ಎನ್ನುವಂತಾಗಿದೆ. ಘಟನೆಯಲ್ಲಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು […]

ಗುಂಡ್ಯ: ಕಾರಿನ ಮೇಲೆ ಮರಬಿದ್ದು ಚಾಲಕ ದುರ್ಮರಣ | ಕಾರಿನಲ್ಲಿನ ಸಮಸ್ಯೆ ಸಾವಾಗಿ ಪರಿವರ್ತನೆ| Read More »

ಯುವಕನಿಂದ ಬಾಲಕನ ಅತ್ಯಾಚಾರ| ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು|

ವಿಜಯನಗರ: ಯುವಕನೋರ್ವ ಬಾಲಕನ ಮೇಲೆಯೇ ಅತ್ಯಾಚಾರ ಎಸಗಿದ ಪ್ರಕರಣ ವಿಜಯಪುರ ಜಿಲ್ಲೆಯ ಕೂಡ್ಲಿಗಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಏಳು ವರ್ಷದ ಬಾಲಕನ ಮೇಲೆ 18 ವರ್ಷದ ಯುವಕನೋರ್ವ ಅತ್ಯಾಚಾರ ಮಾಡಿದ್ದಾನೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಜಯನಗರ ಎಸ್​ಪಿ ಡಾ.ಕೆ.ಅರುಣ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಯುವಕನಿಂದ ಬಾಲಕನ ಅತ್ಯಾಚಾರ| ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು| Read More »

ನ್ಯೂ ಇಯರ್ ಎಫೆಕ್ಟ್| ಸರ್ಕಾರಿ ಶಾಲೆಯಲ್ಲಿ ಕೊಠಡಿಯಲ್ಲಿ ”BP” ಕ್ವಾಟರ್ ಪ್ಯಾಕೆಟ್| ಮಕ್ಕಳಿಗೆ ಕೊಡುವ ಮೊಟ್ಟೆ ಕುಡುಕರ ಹೊಟ್ಟೆಗೆ..!

ರಾಯಚೂರು : ಹೊಸ ವರ್ಷದ ಹಿನ್ನೆಲೆ ಕಿಡಿಕೇಡಿಗಳು ಸರಕಾರಿ ಶಾಲೆಯಲ್ಲಿ ಎಣ್ಣೆ ಪಾರ್ಟಿ ಮಾಡಿದ ಘಟನೆಯೊಂದು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ರಬ್ಬಣಕಲ್​ ಕ್ಯಾಂಪ್​​ನ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶಾಲೆಯ ಬೀಗ ಒಡೆದು ಕೊಠಡಿಯೊಳಗೆ ನುಗ್ಗಿ ಎಣ್ಣೆ ಪಾರ್ಟಿ ಮಾಡಿದ್ದು ಮಾತ್ರವಲ್ಲದೇ ಬಿಸಿಯೂಟದ ಸಾಮಗ್ರಿಗಳನ್ನು ಬಳಕೆ ಮಾಡಿ ಮೊಟ್ಟೆ ಬೇಯಿಸಿಕೊಂಡು ಮಾಂಸಾಹಾರ ತಯಾರಿಸಿ ದುಷ್ಕೃತ್ಯ ಮೆರೆದಿದ್ದಾರೆ. ಪಾರ್ಟಿಗೆ ಬಳಸಲಾದ ವಸ್ತುಗಳು ಎಲ್ಲೆಂದರಲ್ಲಿ ಬಿಸಾಡಲಾಗಿದೆ. ಅಲ್ಲದೇ ಶಾಲೆಗೆ ಸೇರಿದ ದಾಖಲೆಗಳಿಗೂ ಹಾನಿ ಉಂಟು ಮಾಡಿದ್ದಾರೆ. ಬೆಳಗ್ಗೆ ಶಾಲೆಗೆ ಬರುತ್ತಿದ್ದಂತೆಯೇ

ನ್ಯೂ ಇಯರ್ ಎಫೆಕ್ಟ್| ಸರ್ಕಾರಿ ಶಾಲೆಯಲ್ಲಿ ಕೊಠಡಿಯಲ್ಲಿ ”BP” ಕ್ವಾಟರ್ ಪ್ಯಾಕೆಟ್| ಮಕ್ಕಳಿಗೆ ಕೊಡುವ ಮೊಟ್ಟೆ ಕುಡುಕರ ಹೊಟ್ಟೆಗೆ..! Read More »

ಶಿವಕಾಶಿ: ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ, ನಾಲ್ವರು ಸಜೀವ ದಹನ

ಚೆನ್ನೈ : ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಪೋಟ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ತಮಿಳುನಾಡಿನ ವಿರುಧುನಗರ ಜಿಲ್ಲೆಯ ಶಿವಕಾಶಿಯ ಪಟಾಕಿ ಕಾರ್ಖಾನೆ ಯೊಂದರಲ್ಲಿ ಸ್ಫೋಟ ಸಂಭವಿಸಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಫೋಟದಿಂದ ಧ್ವಂಸಗೊಂಡ ಕಾರ್ಖಾನೆ ಬಳಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿವೆ. ಪಟಾಕಿ ಸ್ಪೋಟ ದುರಂತದಲ್ಲಿ ನಾಲ್ವರೂ ಕೂಡ ಸಜೀವ ದಹನಗೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಶಿವಕಾಶಿ: ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ, ನಾಲ್ವರು ಸಜೀವ ದಹನ Read More »

ವೈಶ್ಣೋದೇವಿ ಮಂದಿರದಲ್ಲಿ ಕಾಲ್ತುಳಿತ | 6 ಕ್ಕೂ ಹೆಚ್ಚು ಸಾವು ಹಲವರು ಗಂಭೀರ

ಜಮ್ಮು ಕಾಶ್ಮೀರಾ: 2022 ರ ಮೊದಲ ದಿನವೇ ಸಂಭವಿಸಿದ ಭೀಕರ ದುರಂತಕ್ಕೆ 6ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡ ಘಟನೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವೈಶ್ಣೋದೇವಿ ಮಂದಿರದಲ್ಲಿ ನಡೆದಿದೆ. ಇಂದು ಮುಂಜಾನೆ ಘಟನೆ ನಡೆದಿದ್ದು, ದೇವಿ ದರ್ಶನಕ್ಕಾಗಿ ಕಿಕ್ಕಿರಿದು ಸೇರಿದ್ದ ಜನರ ನಡುವೆ ಉಂಟಾದ ಗೊಂದಲದಿಂದ ದುರಂತ ನಡೆದಿದೆ. ಸದ್ಯ ಆರು ಜನರು ಮೃತಪಟ್ಟಿದ್ದಾರೆ. ಗಾಯಗೊಂಡ ಹಲವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಇದೆ ಎಂದು ತಿಳಿದುಬಂದಿದೆ.

ವೈಶ್ಣೋದೇವಿ ಮಂದಿರದಲ್ಲಿ ಕಾಲ್ತುಳಿತ | 6 ಕ್ಕೂ ಹೆಚ್ಚು ಸಾವು ಹಲವರು ಗಂಭೀರ Read More »

10ನೇ ತರಗತಿ ಬಾಲಕನ ಜೊತೆ ಪರಾರಿಯಾದ 22ರ ಯುವತಿ| ಮದುವೆಯಾಗಿ ಸಿಕ್ಕಿಬಿದ್ದ ಜೋಡಿ ಪೊಲೀಸ್ ವಶಕ್ಕೆ|

ಕೊಟ್ವಾಲಿ: ಫೇಸ್‌ಬುಕ್‌ನಿಂದ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಗೆ ಸಿಲುಕಿ ಬಾಲಕನ ಜತೆ ಯುವತಿ ಓಡಿಹೋಗಿರುವ ಘಟನೆ ಪಶ್ಚಿಮಬಂಗಾಳದಲ್ಲಿ ನಡೆದಿದೆ. ನಾಡಿಯಾದ ಕೃಷ್ಣನಗರ ಕೊಟ್ವಾಲಿಯ 15 ವರ್ಷದ ಬಾಲಕ ಮತ್ತು ಶಾಂತಿನಗರದ 22 ವರ್ಷದ ಯುವತಿ ಇಬ್ಬರೂ ಪ್ರೀತಿಯ ಬಲೆಗೆ ಬಿದ್ದು ಮದುವೆಯಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಇವರಿಬ್ಬರೂ ಫೇಸ್‌ಬುಕ್‌ ಮೂಲಕ ಪರಿಚಯವಾಗಿದ್ದರು. ನಂತರ ಮಾತುಕತೆಯ ವೇಳೆ ಪರಸ್ಪರ ಲವ್‌ ಆಗಿದೆ. ಮನೆಯವರಿಗೆ ತಿಳಿಸಿದರೆ ಖಂಡಿತ ಮದುವೆಗೆ ಒಪ್ಪುವುದಿಲ್ಲ ಎಂದುಕೊಂಡು ಇಬ್ಬರೂ ಉತ್ತರ ಪ್ರದೇಶಕ್ಕೆ ಹೋಗುವ

10ನೇ ತರಗತಿ ಬಾಲಕನ ಜೊತೆ ಪರಾರಿಯಾದ 22ರ ಯುವತಿ| ಮದುವೆಯಾಗಿ ಸಿಕ್ಕಿಬಿದ್ದ ಜೋಡಿ ಪೊಲೀಸ್ ವಶಕ್ಕೆ| Read More »

ಸುಳ್ಯ: ವಸತಿಗೃಹದಲ್ಲಿ ಸಿಕ್ಕಿಬಿದ್ದ ಭಿನ್ನಕೋಮಿನ ಜೋಡಿ| ಭಜರಂಗದಳದ ಕಾರ್ಯಾಚರಣೆ|

ಸುಳ್ಯ: ಇಲ್ಲಿನ ನಗರದ ವಸತಿಗೃಹವೊಂದರಲ್ಲಿ ಭಿನ್ನ ಕೋಮಿನ ಜೋಡಿಯೊಂದು ಸಿಕ್ಕಿಬಿದ್ದಿದ್ದು, ಭಜರಂಗದಳದ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ವರದಿಯಾಗಿದೆ. ಯುವತಿ ಹಾಗೂ ಯುವಕ ಕೇರಳ ಮೂಲದವರಾಗಿದ್ದು, ಯುವತಿಯ ಕುರಿತು ಕೇರಳದ ಠಾಣೆಯೊಂದರಲ್ಲಿ ಕೆಲ ದಿನಗಳ ಹಿಂದೆ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅದೇ ಯುವತಿ ಇದೀಗ ಯುವಕನೊಂದಿಗೆ ಪತ್ತೆಯಾಗಿದ್ದು, ಈ ಬಗ್ಗೆ ಕೇರಳ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ಜೋಡಿಯನ್ನು ಕೇರಳ ಪೊಲೀಸರಿಗೆ ಹಸ್ತಾಂತರಿಸುವುದಾಗಿ ಸುಳ್ಯ ಪೊಲೀಸರು ತಿಳಿಸಿದ್ದಾರೆ.

ಸುಳ್ಯ: ವಸತಿಗೃಹದಲ್ಲಿ ಸಿಕ್ಕಿಬಿದ್ದ ಭಿನ್ನಕೋಮಿನ ಜೋಡಿ| ಭಜರಂಗದಳದ ಕಾರ್ಯಾಚರಣೆ| Read More »

ಹೊಸ ವರ್ಷಾಚರಣೆಗೆ ತೆರಳುತ್ತಿದ್ದವರು ಮಸಣಕ್ಕೆ| ಕಾರು ಅಪಘಾತದಲ್ಲಿ ಮೂವರು ಯುವಕರು ದುರ್ಮರಣ|

ಅಲಪ್ಪುಳ: ಹೊಸ ವರ್ಷಾಚರಣೆಗೆಂದು ಗೋವಾಕ್ಕೆ ತೆರಳಿದ್ದ ಯುವಕರ ತಂಡವೊಂದು ಕಾರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಘಟನೆ ಗೋವಾದಲ್ಲಿ ನಡೆದಿದೆ. ಮೂವರು ಯುವಕರು ಕೇರಳ ಮೂಲದವರಾಗಿದ್ದು, ಮೃತರನ್ನು ಕಣ್ಣನ್ (24), ವಿಷ್ಣು (27) ಮತ್ತು ನಿಧಿನ್ ದಾಸ್ (24) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕೇರಳದ ಅಲಪ್ಪುಳ ಜಿಲ್ಲೆಯ ಕಾಯಂಕುಲಂನ ಅರಟ್ಟುಪುಳದವರು ಎಂದು ತಿಳಿದುಬಂದಿದೆ. ಘಟನೆ ವೇಳೆ ಜೊತೆಗಿದ್ದ ಅಖಿಲ್ ಮತ್ತು ವಿನೋದ್ ಕುಮಾರ್ ಸ್ಥಿತಿ ಚಿಂತಾಜನಕವಾಗಿದೆ. ಗುರುವಾರ ರಾತ್ರಿ 9:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಅಖಿಲ್ ವಾಹನ ಚಲಾಯಿಸುತ್ತಿದ್ದರು

ಹೊಸ ವರ್ಷಾಚರಣೆಗೆ ತೆರಳುತ್ತಿದ್ದವರು ಮಸಣಕ್ಕೆ| ಕಾರು ಅಪಘಾತದಲ್ಲಿ ಮೂವರು ಯುವಕರು ದುರ್ಮರಣ| Read More »

ಕೊರಗಜ್ಜನ ಕಟ್ಟೆ ಅಪವಿತ್ರಗೊಳಿಸಿದಾತನಿಗೆ ಎಚ್ಚರಿಕೆ ನೀಡಿದ ಕ್ರಿಶ್ಚಿಯನ್ ವ್ಯಕ್ತಿ

ಮಂಗಳೂರು : ದಕ್ಷಿಣಕನ್ನಡ ಹೆಸರಾಂತ ಹಾಗೂ ಕಾರ್ಣಿಕದ ಕೊರಗಜ್ಜನ ಕ್ಷೇತ್ರವನ್ನು ಅಪವಿತ್ರಗೊಳಿಸಿದ ಆರೋಪಿಯ ವಿರುದ್ಧ ಇದೀಗ ಕ್ರಿಶ್ಚಿಯನ್ ವ್ಯಕ್ತಿಯೊಬ್ಬರು ಗುಡುಗಿದ್ದು, ಭಾರಿ ಎಚ್ಚರಿಕೆಯನ್ನೇ ನೀಡಿದ್ದಾರೆ. ಜೈಲಿನಲ್ಲಿರುವ ಆರೋಪಿ ಹೊರಗೆ ಬಂದರೆ ಆತನ ಕೈ-ಕಾಲು ಕಡಿಯುತ್ತೇನೆ ಎಂಬುದಾಗಿ ಹೇಳಿದ್ದಾರೆ. ಕೊರಗಜ್ಜ ಕ್ಷೇತ್ರವನ್ನು ಅಪವಿತ್ರಗೊಳಿಸಿದ್ದ ಆರೋಪದ ಮೇಲೆ ಮಿತ್ರನಗರ ನಿವಾಸಿ ದೇವದಾಸ್ ದೇಸಾಯಿಯನ್ನು ಪೊಲೀಸರು ನಿನ್ನೆ ಬಂಧಿಸಿದ್ದರು. ಆ ಆರೋಪಿ ವಿರುದ್ಧ ರೋಶನ್ ಡಿಸೋಜ ಎಂಬವರು ಆಕ್ರೋಶ ವ್ಯಕಪಡಿಸಿದ್ದಾರೆ. ಮಂಗಳೂರು ನಗರದ 18 ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿದ್ದ ಆರೋಪಿ ದೇವದಾಸ್,

ಕೊರಗಜ್ಜನ ಕಟ್ಟೆ ಅಪವಿತ್ರಗೊಳಿಸಿದಾತನಿಗೆ ಎಚ್ಚರಿಕೆ ನೀಡಿದ ಕ್ರಿಶ್ಚಿಯನ್ ವ್ಯಕ್ತಿ Read More »

ನ್ಯಾಯಾಧೀಶರಿಗೆ ಚಪ್ಪಲಿ ಎಸೆದ ಅತ್ಯಾಚಾರ ಪ್ರಕರಣದ ಆರೋಪಿ

ಸೂರತ್‌: ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 27 ವರ್ಷದ ಯುವಕ ಕ್ರುದ್ಧಗೊಂಡು ನ್ಯಾಯಾಧೀಶರತ್ತ ಚಪ್ಪಲಿ ಎಸೆದಿದ್ದಾನೆ. ಬುಧವಾರ ಸೂರತ್‌ನ ಕೋರ್ಟೊಂದರಲ್ಲಿ ಈ ಘಟನೆ ನಡೆದಿದೆ. ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆಯೇ ಆತ ಈ ಕೃತ್ಯವೆಸಗಿದ್ದಾನೆ. ಎಪ್ರಿಲ್‌ನಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಆತನನ್ನು ಬಂಧಿಸಲಾಗಿದೆ. ಬಾಲಕಿಯ ಕುಟುಂಬಕ್ಕೆ ಕೋರ್ಟ್‌ 20 ಲಕ್ಷ ರೂ. ಪರಿಹಾರ ನೀಡಬೇಕು ಎಂದೂ ತನ್ನ ಆದೇಶದಲ್ಲಿ ಕೋರ್ಟ್‌ ತಿಳಿಸಿದೆ.

ನ್ಯಾಯಾಧೀಶರಿಗೆ ಚಪ್ಪಲಿ ಎಸೆದ ಅತ್ಯಾಚಾರ ಪ್ರಕರಣದ ಆರೋಪಿ Read More »