ಕ್ರೈಂ

ಸುರತ್ಕಲ್: ಆನ್ ಲೈನ್ ಸಾಲದ ಶೂಲಕ್ಕೆ ಬಿತ್ತು ಮತ್ತೊಂದು ಹೆಣ| ಡೆತ್ ನೋಟ್ ಬರೆದಿಟ್ಟು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ಯುವಕ ಆತ್ಮಹತ್ಯೆ|

ಮಂಗಳೂರು : ಸಾಲದ ಸುಳಿಯಲ್ಲಿ ಸಿಲುಕಿ ನೊಂದ ಯುವಕನೊಬ್ಬ ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮೃತ ಯುವಕನನ್ನು 26 ವರ್ಷ ಪ್ರಾಯದ ಸುಶಾಂತ್ (ಜಗ್ಗು) ಎಂದು ಗುರುತಿಸಲಾಗಿದೆ. ಮೂಲ್ಕಿ ಸಮೀಪದ ಪಕ್ಷಿ ಕೆರೆ ನಿವಾಸಿಯಾಗಿರುವ ಸುಶಾಂತ್ ತಾನು ಕೆಲಸ ಮಾಡುತ್ತಿದ್ದ ಕುಳಾಯಿಯ ಸನ್’ರೈಸ್ ಕಾರ್ಪೋರೇಷನ್ ಕಚೇರಿಯಲ್ಲೇ ನೇಣಿಗೆ ಶರಣಾಗಿದ್ದಾರೆ. ಸಾಲದ ಕಾರಣಕ್ಕಾಗಿಯೇ ಸಾವಿಗೆ ಶರಣಾದ ಶಂಕೆ ವ್ಯಕ್ತವಾಗಿದ್ದು, ಡೆತ್ ನೋಟ್ ನಲ್ಲಿ ಶರತ್ ಈ […]

ಸುರತ್ಕಲ್: ಆನ್ ಲೈನ್ ಸಾಲದ ಶೂಲಕ್ಕೆ ಬಿತ್ತು ಮತ್ತೊಂದು ಹೆಣ| ಡೆತ್ ನೋಟ್ ಬರೆದಿಟ್ಟು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ಯುವಕ ಆತ್ಮಹತ್ಯೆ| Read More »

ಮಹಿಳೆಯ ಜೊತೆಯಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ರ ಪುತ್ರ!?|ಆಶ್ಲೀಲ ಫೋಟೋ ಬಿಡುಗಡೆಯಾಗುತ್ತಿದ್ದಂತೆ ಖ್ಯಾತ ಜ್ಯೋತಿಷಿ ಪುತ್ರ ಅರೆಸ್ಟ್

ಬೆಂಗಳೂರು: ಸಚಿವ ಎಸ್.ಟಿ.ಸೋಮಶೇಖರ್ ಅವರ ಪುತ್ರ ನಿಶಾಂತ್ ಗೆ ನಕಲಿ ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿರುವ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಸಚಿವರ ಪುತ್ರ ನಿಶಾಂತ್ ಆಡುಗೋಡಿಯಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದಾರೆ. ನಾನು ರಾಜಕೀಯವಾಗಿ ಬಿಜೆಪಿ ಪಕ್ಷದಿಂದ ಗುರುತಿಸಿಕೊಂಡಿದ್ದೇನೆ. ಪಕ್ಷ ಸಂಘಟನೆಯಲ್ಲಿ ಕೆಲಸವನ್ನು ಮಾಡುತ್ತಾ ಬಂದಿರುತ್ತೇನೆ. ನನ್ನ ಮತ್ತು ನನ್ನ ತಂದೆ ರಾಜಕೀಯ ಬೆಳವಣಿಗೆ ಸಹಿಸದೆ ಕೃತ್ಯ ಮಾಡಲಾಗಿದೆ. ಈ ಮೂಲಕ

ಮಹಿಳೆಯ ಜೊತೆಯಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ರ ಪುತ್ರ!?|ಆಶ್ಲೀಲ ಫೋಟೋ ಬಿಡುಗಡೆಯಾಗುತ್ತಿದ್ದಂತೆ ಖ್ಯಾತ ಜ್ಯೋತಿಷಿ ಪುತ್ರ ಅರೆಸ್ಟ್ Read More »

ತೆಂಗಿನ ಮರ ಬಿದ್ದು ನವ ವಿವಾಹಿತ ದಾರುಣ ಸಾವು

ಬಂಟ್ವಾಳ: ತೆಂಗಿನ ಮರ ಬಿದ್ದು ನವ ವಿವಾಹಿತನೋರ್ವ ಮೃತಪಟ್ಟ ದಾರುಣ ಘಟನೆ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಾಯಿಲ ಎಂಬಲ್ಲಿ ಜ. 9 ರಂದು ನಡೆದಿದೆ. ನಾಯಿಲ ಬೆಟ್ಟುಗದ್ದೆ ನಿವಾಸಿ ದಿ. ಪೂವಪ್ಪ ಪೂಜಾರಿ ಎಂಬವರ ಪುತ್ರ ಯತಿರಾಜ್ (37) ಮೃತಪಟ್ಟ ದುರ್ದೈವಿ. ಇವರಿಗೆ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಸ್ಥಳೀಯ ಕೃಷಿಕರೊಬ್ಬರ ತೋಟದಲ್ಲಿ ತೆಂಗಿನಮರ ಕಡಿಯುವ ಗುತ್ತಿಗೆಯನ್ನು ಯತಿರಾಜ್ ಅವರು ಪಡೆದುಕೊಂಡಿದ್ದು , ಆ ಕೆಲಸ ಮಾಡುತ್ತಿದ್ದ ವೇಳೆ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ತೆಂಗಿನ ಮರ ಬಿದ್ದು ನವ ವಿವಾಹಿತ ದಾರುಣ ಸಾವು Read More »

ಅಪಘಾತ: ಶಬರಿಮಲೆಯಿಂದ ಮರಳುತ್ತಿದ್ದ ಇಬ್ಬರು ಸಾವು

ಚಿಕ್ಕಬಳ್ಳಾಪುರ: ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಬಳಿ ನಡೆದಿದೆ. ಶಬರಿಮಲೆಗೆ ಹೋಗಿ ಅಯ್ಯಪ್ಪ ದರ್ಶನ ಪಡೆದು ವಾಪಸ್ ಬರುವ ವೇಳೆ ದುರ್ಘಟನೆ ನಡೆದಿದೆ. ಧರಣೀಶ್ (22) ನಿರಂಜನ್ ಸಿಂಗ್ (52) ಮೃತ ದುರ್ಧೈವಿಗಳು. ಮೃತಪಟ್ಟರೆಲ್ಲಾ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯವರು ಎಂದು ಗುರುತಿಸಲಾಗಿದೆ. ಪಂಚರ್ ಆಗಿದ್ದ ಕಾರನ್ನು ರಸ್ತೆ ಬದಿ ನಿಲ್ಲಿಸಿ ಸ್ಟೆಪ್ನಿ ಬದಲಾಯಿಸುತ್ತಿದ್ದ ವೇಳೆ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂರು

ಅಪಘಾತ: ಶಬರಿಮಲೆಯಿಂದ ಮರಳುತ್ತಿದ್ದ ಇಬ್ಬರು ಸಾವು Read More »

ನೈಸ್ ರಸ್ತೆಯಲ್ಲಿ ಭೀಕರ ಅಪಘಾತ| ಕಾರಿನಲ್ಲಿದ್ದ ನಾಲ್ವರು ಟೆಕ್ಕಿಗಳು ಸ್ಥಳದಲ್ಲೇ ಸಾವು|

ಬೆಂಗಳೂರು: ಬನ್ನೇರುಘಟ್ಟ – ತುಮಕೂರು ನೈಸ್ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಬನ್ನೇರುಘಟ್ಟದಿಂದ ತುಮಕೂರಿನ ಕಡೆ ಹೊರಟ್ಟಿದ್ದ ಕಾರಿಗೆ ಹಿಂಬದಿಯಿಂದ ಲಾರಿ ಬಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಪುರುಷರು, ಇಬ್ಬರು ಮಹಿಳೆಯರ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ವಿಷಯ ತಿಳಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದ

ನೈಸ್ ರಸ್ತೆಯಲ್ಲಿ ಭೀಕರ ಅಪಘಾತ| ಕಾರಿನಲ್ಲಿದ್ದ ನಾಲ್ವರು ಟೆಕ್ಕಿಗಳು ಸ್ಥಳದಲ್ಲೇ ಸಾವು| Read More »

ವಿದ್ಯಾರ್ಥಿನಿಯನ್ನು ಬೆತ್ತಲೆಗೊಳಿಸಿ ಹಲ್ಲೆಗೈದ ಶಿಕ್ಷಕಿಗೆ ಸಸ್ಪೆಂಡ್ ಶಿಕ್ಷೆ

ಮಂಡ್ಯ: ಇಲ್ಲಿನ ಶ್ರೀರಂಗಪಟ್ಟಣ ತಾಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಮುಖ್ಯ ಶಿಕ್ಷಕಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಅಮಾನತು ಮಾಡಿದ್ದಾರೆ. ಶಾಲೆಗೆ ಮೊಬೈಲ್ ತಂದಿದ್ದ ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿದ ಮುಖ್ಯಶಿಕ್ಷಕಿ ಹಲ್ಲೆ ಮಾಡಿ ಫ್ಯಾನ್ ಕೆಳಗೆ ಕೂರಿಸಿದ್ದರು. ಶಿಕ್ಷಕಿಯ ಈ ಕೃತ್ಯದ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಗ್ರಾಮಸ್ಥರು ಕೂಡ ಮುಖ್ಯಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಉನ್ನತ ಅಧಿಕಾರಿಗಳಿಗೆ ವರದಿ ನೀಡಿದ್ದರು.

ವಿದ್ಯಾರ್ಥಿನಿಯನ್ನು ಬೆತ್ತಲೆಗೊಳಿಸಿ ಹಲ್ಲೆಗೈದ ಶಿಕ್ಷಕಿಗೆ ಸಸ್ಪೆಂಡ್ ಶಿಕ್ಷೆ Read More »

ಸುದ್ದಿ ಪ್ರಸಾರ ಮಾಡುವುದಾಗಿ ಚಾನೆಲ್ ವರದಿಗಾರನಿಂದ ಬ್ಲ್ಯಾಕ್ ಮೇಲ್| 25 ಲಕ್ಷ ಹಣಕ್ಕಾಗಿ ಬೇಡಿಕೆಯಿಟ್ಟವ ಹಣ ಪಡೆಯುತ್ತಿರುವಾಗಲೇ ಅರೆಸ್ಟ್

ಬೆಂಗಳೂರು: ಮರಳು ಮಾಫಿಯಾದ ಸಂಬಂಧಿಸಿದಂತೆ ಸುದ್ದಿ ಪ್ರಸಾರ ತಡೆಗೆ 25 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು 8 ಲಕ್ಷ ರೂ. ಹಣ ಪಡೆಯುತ್ತಿದ್ದಾಗ ಖಾಸಗಿ ವಾಹಿನಿಯ ಪತ್ರಕರ್ತನನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಖಾಸಗಿ ಚಾನೆಲ್​ ಸಿಬ್ಬಂದಿ ಬಂಧನಅನಿಲ್‌ಕುಮಾರ್, ಶ್ರೀಕಾಂತ್ ಕುಮಾರ್, ಸುನಿಲ್ ಕುಮಾರ್ ಎಂಬುವವರು ತಮಗೆ ಸುದ್ದಿ ಪ್ರಸಾರ ಮಾಡದಂತೆ ತಡೆಯಲು ಹಣ ಕೇಳುತ್ತಿದ್ದಾರೆ ಎಂದು ಆಡಿಯೋ ಮತ್ತು ವಿಡಿಯೋ ಸಮೇತ ದೂರು ನೀಡಿದ್ದಾರೆ.

ಸುದ್ದಿ ಪ್ರಸಾರ ಮಾಡುವುದಾಗಿ ಚಾನೆಲ್ ವರದಿಗಾರನಿಂದ ಬ್ಲ್ಯಾಕ್ ಮೇಲ್| 25 ಲಕ್ಷ ಹಣಕ್ಕಾಗಿ ಬೇಡಿಕೆಯಿಟ್ಟವ ಹಣ ಪಡೆಯುತ್ತಿರುವಾಗಲೇ ಅರೆಸ್ಟ್ Read More »

ಮುಸ್ಲಿಂ ಮದುಮಗನಿಂದ‌ ಕೊರಗಜ್ಜನ ವೇಷ ಧರಿಸಿ ಅವಮಾನ| ಮುಸ್ಲಿಂ ಸಮುದಾಯದಿಂದಲೇ ಆಕ್ರೋಶ

ಪುತ್ತೂರು: ಮುಸ್ಲಿಂ ಸಮುದಾಯದ ಮದುವೆ ಕಾರ್ಯಕ್ರಮದಲ್ಲಿ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ವೇಷಭೂಷಣ ಧರಿಸಿ ಅವಮಾನ ಮಾಡಿರುವ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಮುಸ್ಲಿಂ ಸಮುದಾಯದವರೇ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉಪ್ಪಳದ ಯುವಕನ ಜೊತೆ ನಡೆದಿದ್ದ ಕೊಳ್ನಾಡು ಗ್ರಾಮದ ಯುವತಿಯೊಬ್ಬರ ಜೊತೆ ಮದುವೆ ಕಾರ್ಯಕ್ರಮ ನಡೆದಿದ್ದು, ವಧುವಿನ‌

ಮುಸ್ಲಿಂ ಮದುಮಗನಿಂದ‌ ಕೊರಗಜ್ಜನ ವೇಷ ಧರಿಸಿ ಅವಮಾನ| ಮುಸ್ಲಿಂ ಸಮುದಾಯದಿಂದಲೇ ಆಕ್ರೋಶ Read More »

ಒಂಬತ್ತು ವರ್ಷದ ಬಾಲಕಿ‌ ಮೇಲೆ ಇಬ್ಬರು ಬಾಲಕರಿಂದ ಅತ್ಯಾಚಾರ

ಮುಜಾಫರ್‌ನಗರ: ಜಿಲ್ಲೆಯಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ ಇಬ್ಬರು ಹುಡುಗರು ಅತ್ಯಾಚಾರವೆಸಗಿದ ಕುರಿತು ಪ್ರಕರಣವೊಂದು ದಾಖಲಾಗಿದೆ. ಕಳವಳಕಾರಿ ಘಟನೆಯು ಕೆಲವು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಜನವರಿ 5 ರಂದು ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಸಂತ್ರಸ್ತೆಯ ಪೋಷಕರು ನೀಡಿದ ಪೊಲೀಸ್ ದೂರಿನ ಪ್ರಕಾರ, ಬಾಲಕಿ ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ಆರೋಪಿಗಳಾದ 10 ಮತ್ತು 14 ವರ್ಷ ವಯಸ್ಸಿನ ಬಾಲಕರು ಆಕೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಬಾಲಕಿಯನ್ನು

ಒಂಬತ್ತು ವರ್ಷದ ಬಾಲಕಿ‌ ಮೇಲೆ ಇಬ್ಬರು ಬಾಲಕರಿಂದ ಅತ್ಯಾಚಾರ Read More »

ಮಂಗಳೂರು: ಟಿವಿ ನೋಡಲು ಬಂದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ|ಆರೋಪಿ ಬಂಧನ

ಮಂಗಳೂರು : ಅಶೋಕನಗರ ಬಳಿ ಬಾಲಕಿಗೆ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೋರ್ವನನ್ನು ಇಲ್ಲಿನ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತ ತನ್ನ‌ ಮನೆಗೆ ಟಿವಿ ನೋಡಲೆಂದು ಬಂದಿದ್ದ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ತಿಳಿದುಬಂದಿದೆ. ಬಂಧಿತ ಆರೋಪಿಯನ್ನು ನಿತಿನ್ (19) ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಉರ್ವ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಟಿವಿ ನೋಡಲು ಬಂದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ|ಆರೋಪಿ ಬಂಧನ Read More »