ಕ್ರೈಂ

ವಿದ್ಯಾರ್ಥಿನಿ ಜೊತೆಗೆ ಶಾಲಾ ಕೊಠಡಿಯಲ್ಲೇ ಮುಖ್ಯಶಿಕ್ಷಕನ ಸರಸ| ಮೊಬೈಲ್ ನಲ್ಲಿ ಚಿತ್ರೀಕರಿಸಿ ವೈರಲ್ ಮಾಡಿದ ವಿದ್ಯಾರ್ಥಿಗಳು

ಮೈಸೂರು: ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಶಾಲೆಯೊಂದರಲ್ಲಿ ವಿದ್ಯಾರ್ಥಿನಿ ಜೊತೆ ಮುಖ್ಯ ಶಿಕ್ಷಕ ರೊಮ್ಯಾನ್ಸ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮುಖ್ಯ ಶಿಕ್ಷಕ ಶಾಲಾ ಕೊಠಡಿಯಲ್ಲೇ ವಿದ್ಯಾರ್ಥಿನಿ ಜೊತೆ ರೊಮ್ಯಾನ್ಸ್ ಮಾಡಿದ್ದು, ಶಾಲೆಯ ಇತರ ವಿದ್ಯಾರ್ಥಿಗಳು ಈ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ವಿಡಿಯೋ ವೈರಲ್​ ಆಗಿದ್ದು, ವಿಡಿಯೋ ಆಧರಿಸಿ ಮುಖ್ಯ ಶಿಕ್ಷಕರ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಲಾಗಿದೆ. ದೂರು ಸ್ವೀಕರಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸುವ ಭರವಸೆ ನೀಡಿದ್ದಾರೆ.

ವಿದ್ಯಾರ್ಥಿನಿ ಜೊತೆಗೆ ಶಾಲಾ ಕೊಠಡಿಯಲ್ಲೇ ಮುಖ್ಯಶಿಕ್ಷಕನ ಸರಸ| ಮೊಬೈಲ್ ನಲ್ಲಿ ಚಿತ್ರೀಕರಿಸಿ ವೈರಲ್ ಮಾಡಿದ ವಿದ್ಯಾರ್ಥಿಗಳು Read More »

ಕಾರಿಗೆ ಹಂದಿ ಡಿಕ್ಕಿ – ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ದುರ್ಮರಣ!

ಮುಂಬೈ: ಕಾರು ಅಪಘಾತದಲ್ಲಿ ಬಿಜೆಪಿ ಶಾಸಕನ ಪುತ್ರ ಸೇರಿದಂತೆ 7 ವೈದ್ಯಕೀಯ ವಿದ್ಯಾರ್ಥಿಗಳು ದುರ್ಮರಣವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಗಳಲ್ಲಿ ಒಬ್ಬ ಗೊಂಡಿಯಾ ಜಿಲ್ಲೆಯ ತಿರೋರಾ ಕ್ಷೇತ್ರದ ಶಾಸಕ ವಿಜಯ್ ರಹಾಂಗದಲೆ ಅವರ ಪುತ್ರ ಆವಿಷ್ಕಾರ್ ಎಂದು ಗುರುತಿಸಲಾಗಿದೆ. ನೀರಜ್ ಚೌಹಾಣ್ (ಪ್ರಥಮ ವರ್ಷದ ಎಂಬಿಬಿಎಸ್), ನಿತೇಶ್ ಸಿಂಗ್ (2015 ಇಂಟರ್ನ್ ಎಂಬಿಬಿಎಸ್), ವಿವೇಕ್ ನಂದನ್ (2018, ಎಂಬಿಬಿಎಸ್ ಫೈನಲ್), ಪ್ರತ್ಯುಷ್ ಸಿಂಗ್ (2017 ಎಂಬಿಬಿಎಸ್), ಶುಭಂ ಜೈಸ್ವಾಲ್ (2017 ಎಂಬಿಬಿಎಸ್) ಮತ್ತು ಪವನ್ ಶಕ್ತಿ

ಕಾರಿಗೆ ಹಂದಿ ಡಿಕ್ಕಿ – ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ದುರ್ಮರಣ! Read More »

ವಕೀಲರೊಟ್ಟಿಗೆ ಪ್ರಯಾಣಿಸುತ್ತಿದ್ದ ನ್ಯಾಯಾದೀಶೆ| ಕಾರನ್ನುಅಡ್ಡಗಟ್ಟಿದ ಸ್ಥಳೀಯ ವಕೀಲರ ಗುಂಪು

ದೊಡ್ಡಬಳ್ಳಾಪುರ: ನ್ಯಾಯಾಧೀಶೆಯೊಬ್ಬರು ರಾತ್ರಿ ವೇಳೆ ವಕೀಲರೊಟ್ಟಿಗೆ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ ಸ್ಥಳೀಯ ವಕೀಲರ ಗುಂಪೊಂದು ಇಬ್ಬರನ್ನೂ ತರಾಟೆಗೆ ತೆಗೆದುಕೊಂಡ ವಿಡಿಯೊ ವೈರಲ್‌ ಆಗಿದೆ. ನಗರದ ಹೊರವಲಯದಲ್ಲಿ ಶುಕ್ರವಾರ ರಾತ್ರಿ ನ್ಯಾಯಾಧೀಶೆ ಮತ್ತು ವಕೀಲರೊಬ್ಬರ ಜೊತೆ ವಕೀಲರ ಗುಂಪು ನಡೆಸಿದ ಜಟಾಪಟಿ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ.ಈ ವಿಡಿಯೊ ತುಣುಕು ಈಗ ಎಲ್ಲೆಡೆ ಹರಿದಾಡುತ್ತಿದೆ. ಕಾರಿನಲ್ಲಿ ಕುಳಿತಿದ್ದ ವಕೀಲನನ್ನು ಕೆಳಗಿಳಿಸಿ ತರಾಟೆಗೆ ತೆಗೆದುಕೊಂಡ ಗುಂಪು ನಂತರ ಕಾರು ಚಾಲನೆ ಮಾಡುತ್ತಿದ್ದ ನ್ಯಾಯಾಧೀಶೆಯನ್ನೂ ಕೆಳಗೆ ಇಳಿಯುವಂತೆ ‌ಒತ್ತಾಯಿಸಿರುವುದು ವಿಡಿಯೊದಲ್ಲಿದೆ. ಈ

ವಕೀಲರೊಟ್ಟಿಗೆ ಪ್ರಯಾಣಿಸುತ್ತಿದ್ದ ನ್ಯಾಯಾದೀಶೆ| ಕಾರನ್ನುಅಡ್ಡಗಟ್ಟಿದ ಸ್ಥಳೀಯ ವಕೀಲರ ಗುಂಪು Read More »

ಸಂಪಾಜೆ: ಲಾರಿಯಲ್ಲಿ ಅಕ್ರಮ ಗೋ ಸಾಗಾಟ| ತಪಾಸಣೆ ವೇಳೆ ಪಲಾಯನಗೈದ ಖದೀಮರು

ಮಡಿಕೇರಿ: ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಗೇಟಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಈಚರ್ ಲಾರಿಯೊಂದರಲ್ಲಿ 25 ಕ್ಕೂ ಹೆಚ್ಚು ದನಗಳು ಪತ್ತೆಯಾದ ಘಟನೆ ನಿನ್ನೆ ತಡರಾತ್ರಿ ವರದಿಯಾಗಿದೆ. ಮಡಿಕೇರಿ ಕಡೆಯಿಂದ ಈಚರ್ ಲಾರಿಯಲ್ಲಿ ದನಗಳನ್ನು ತುಂಬಿಕೊಂಡು ಬರಲಾಗಿದ್ದು, ಸಂಪಾಜೆ ಗೇಟಿನ ಸಿಬ್ಬಂದಿ ವಿಚಾರಣೆ ನಡೆಸಿದಾಗ ಇದು ಪಶುಆಹಾರ ಸಾಗಾಟ ಎಂದು ಚಾಲಕ ಹೇಳಿದನೆಂದೂ ಗೇಟಿನ ಸಿಬ್ಬಂದಿ ಅನುಮಾನ ಬಂದು ಲಾರಿಯನ್ನು ತಪಾಸಣೆ ನಡೆಸಿದಾಗ ಒಳಗೆ ದನದ ಫುಡ್ ನ ಜತೆಗೆ 25 ಕ್ಕೂ

ಸಂಪಾಜೆ: ಲಾರಿಯಲ್ಲಿ ಅಕ್ರಮ ಗೋ ಸಾಗಾಟ| ತಪಾಸಣೆ ವೇಳೆ ಪಲಾಯನಗೈದ ಖದೀಮರು Read More »

ಸುಳ್ಯ: ತಂದೆಯಿಂದ ಮಗನಿಗೆ ಕತ್ತಿಯೇಟು| ಆಸ್ಪತ್ರೆಗೆ ದಾಖಲು

ಸುಳ್ಯ: ತಂದೆ ಮತ್ತು ಮಗನ ಮಧ್ಯೆ ಹೊಡೆದಾಟ ನಡೆದು ಮಗನಿಗೆ ಕತ್ತಿಯಿಂದ ಕಡಿದ ಘಟನೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಗುಂಡ್ಯ ಎಂಬಲ್ಲಿ ನಡೆದಿದೆ. ಕತ್ತಿಯೇಟಿನಿಂದ ಯುವಕನ ಎದೆಗೆ ಗಂಭೀರವಾಗಿದ್ದು ಹಲ್ಲೆಗೊಳಗಾದ ಆತನನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡ್ಯ ನಿವಾಸಿ ಐತಪ್ಪ ನಾಯ್ಕ ಮತ್ತು ಅವರ ಮಗ ಜಯಪ್ರಕಾಶ್ ರವರ ಮಧ್ಯೆ ಮಾತಿನ ಚಕಮಕಿಯಾಗಿ ಹೊಡೆದಾಟ ನಡೆದಿದೆ ಎನ್ನಲಾಗಿದೆ. ತಂದೆಯೇ ಮಗನ ಎದೆಗೆ ಕತ್ತಿಯಿಂದ ಕಡಿದಿದ್ದು ಗಂಭೀರ ಗಾಯಗೊಂಡು ವಿಪರೀತ ರಕ್ತಸ್ರಾವಕ್ಕೊಳಗಾದ ಯುವಕನನ್ನು ಸುಳ್ಯ

ಸುಳ್ಯ: ತಂದೆಯಿಂದ ಮಗನಿಗೆ ಕತ್ತಿಯೇಟು| ಆಸ್ಪತ್ರೆಗೆ ದಾಖಲು Read More »

ಮಂಗಳೂರಿನ ಬಾಲೆಯ ಜತೆ ಮಾತನಾಡಿದ ಪ್ರಧಾನಿ ಮೋದಿ: ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರಧಾನ

ಮಂಗಳೂರು: ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿ ವಿಜೇತ ರಾಜ್ಯದ ಏಕೈಕ ಬಾಲಕಿ ಮಂಗಳೂರಿನ ಭರತನಾಟ್ಯ ಕಲಾವಿದೆ ರೆಮೋನಾ ಪರೇರಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಸ್ತಿ ಪ್ರದಾನ ಮಾಡಿದರು. ಹೊಸದಿಲ್ಲಿಯಿಂದ ಡಿಜಿಟಲ್ ಮಾದ್ಯಮದ ಮೂಲಕ ಪ್ರಶಸ್ತಿ ವಿತರಿಸಿ ಪ್ರಧಾನಿ ಬಾಲಕಿ ಜತೆ ಮಾತನಾಡಿದರು.

ಮಂಗಳೂರಿನ ಬಾಲೆಯ ಜತೆ ಮಾತನಾಡಿದ ಪ್ರಧಾನಿ ಮೋದಿ: ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರಧಾನ Read More »

ರಾಷ್ಟ್ರಗೀತೆಗೆ ಅವಮಾನ| ಕೊಹ್ಲಿ ವಿರುದ್ಧ ಅಭಿಮಾನಿಗಳು ಗರಂ

ಕೇಪ್‌ಟೌನ್: ಕೇಪ್‌ಟೌನ್‌ನ ನ್ಯೂಲೆಂಡ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 3ನೇ ಏಕದಿನ ಕ್ರಿಕೆಟ್‌ ಪಂದ್ಯದ ವೇಳೆ ರಾಷ್ಟ್ರಗೀತೆಗೆ ಅವಮಾನ ಮಾಡಿದ ಮಾಜಿ ನಾಯಕ ವಿರಾಟ್‌ ಕೊಹ್ಲಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇವರೀಗ ಭಾರಿ ಟ್ರೋಲ್‌ ಆಗುತ್ತಿದ್ದಾರೆ. ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಹಾಗೂ ಅಂತಿಮ ಹಣಾಹಣಿ ಆರಂಭಕ್ಕೂ ಮುನ್ನ ಇಂಥದ್ದೊಂದು ಘಟನೆ ನಡೆದಿದೆ. ಪಂದ್ಯದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡುತ್ತಿದ್ದಾಗ ವಿರಾಟ್‌ ಕೊಹ್ಲಿ ಚೂಯಿಂಗ್‌ ಗಮ್‌ ಜಗಿಯುತ್ತಾ ನಿಂತ್ತಿದ್ದರು.

ರಾಷ್ಟ್ರಗೀತೆಗೆ ಅವಮಾನ| ಕೊಹ್ಲಿ ವಿರುದ್ಧ ಅಭಿಮಾನಿಗಳು ಗರಂ Read More »

ಮದುವೆಯಾಗಲು ನಾದಿನಿಯನ್ನೇ ಅಪಹರಿಸಿದ ಬಾವ| ಮೂವರು ಅರೆಸ್ಟ್

ಬೆಂಗಳೂರು: ಮದುವೆ ಮಾಡಿಕೊಳ್ಳಲು ನಾದಿನಿಯನ್ನೇ ಕಿಡ್ನಾಪ್ ಮಾಡಿದ ಬಾವ ಮತ್ತು ಕೃತ್ಯಕ್ಕೆ ಸಾಥ್ ನೀಡಿದ ಮತ್ತಿಬ್ಬರನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವಂತೆ ಬಲವಂತ ಮಾಡಿ ನಾದಿನಿಯನ್ನು ದೇವರಾಜ್ ಅಪಹರಣ ಮಾಡಿದ್ದ. ಜನವರಿ 22 ರಂದು ಯುವತಿಯನ್ನು ಅಪಹರಣ ಮಾಡಲಾಗಿತ್ತು. ನಂದಿನಿಯನ್ನು ಮದುವೆಯಾಗುವುದಕ್ಕಾಗಿ ದೇವರಾಜ್ ಅಪಹರಣದ ಕತೆ ಕಟ್ಟಿದ್ದ. ಆರೋಪಿ ಸೇರಿದಂತೆ ಸೇರಿದಂತೆ ಮೂವರನ್ನು ಹಾಸನದ ಸಕಲೇಶಪುರದಲ್ಲಿ ಬೆಂಗಳೂರಿನ ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜನವರಿ 22 ರಂದು ಅಪಹರಿಸಲಾಗಿದ್ದ ಯುವತಿಯನ್ನು ರಕ್ಷಣೆ ಮಾಡಲಾಗಿದೆ ಎನ್ನಲಾಗಿದೆ.

ಮದುವೆಯಾಗಲು ನಾದಿನಿಯನ್ನೇ ಅಪಹರಿಸಿದ ಬಾವ| ಮೂವರು ಅರೆಸ್ಟ್ Read More »

ಪಾಣೆಮಂಗಳೂರು: ಕಲ್ಲುರ್ಟಿ ದೇವಸ್ಥಾನದ ಸಮೀಪ ಅಪರಿಚಿತ ಶವ ಪತ್ತೆ

ಬಂಟ್ವಾಳ: ಅಪರಿಚಿತ ವ್ಯಕ್ತಿಯೋರ್ವನ ಮೃತದೇಹ ಪಾಣೆಮಂಗಳೂರು ಕಲ್ಲುರ್ಟಿ ದೇವಸ್ಥಾನದ ಸಮೀಪದಲ್ಲಿ ಪತ್ತೆಯಾಗಿದೆ. ಪಾಣೆಮಂಗಳೂರು ಕಲ್ಲುರ್ಟಿ ದೇವಸ್ಥಾನದ ಸಮೀಪ ಬೊರಲಾಗಿ ಮಲಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಕಾಣಸಿಕ್ಕಿದ್ದು, ಸ್ಥಳೀಯರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸುಮಾರು 65 ರಿಂದ 70 ವರ್ಷ ಪ್ರಾಯದ ವ್ಯಕ್ತಿ ಮೃತಪಟ್ಟಿದ್ದು, ಇವರ ಗುರುತು ಪತ್ತೆಯಾಗಬೇಕಿದೆ. ಹೃದಯಾಘಾತದಿಂದ ನಿಧನರಾಗಿರಬಹುದು ಎಂಬ ಶಂಕೆಯನ್ನು ಪೋಲೀಸರು ನೀಡಿದ್ದಾರೆ. ಮಾಹಿತಿ ಲಭ್ಯ ವಾಗದ ಹಿನ್ನಲೆ ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಇನ್ನು ಮೃತಪಟ್ಟ

ಪಾಣೆಮಂಗಳೂರು: ಕಲ್ಲುರ್ಟಿ ದೇವಸ್ಥಾನದ ಸಮೀಪ ಅಪರಿಚಿತ ಶವ ಪತ್ತೆ Read More »

ಸುಳ್ಯ : ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋದ ಆರೋಪ|ಬಜರಂಗಿಗಳ ನಡುವೆ ಮಾರಾಮಾರಿ

ಸುಳ್ಯ: ಬಾಲಕಿಯೊಬ್ಬಳನ್ನು ಕಾರಿನಲ್ಲಿ ಕರೆದುಕೊಂಡು ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಬಜರಂಗದಳದ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿರುವ ಘಟನೆ ನಗರದ ಪೈಚಾರು ಬಳಿ ನಡೆದಿದೆ. ಘಟನೆಗೆ ಸಂಬಂಧಿಸಿ ರಕ್ಷಿತ್ ಎಂಬ ಯುವಕನ ಮೇಲೆ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ ಎಂದು ವರದಿಯಾಗಿದೆ. ಯುವಕನೊಬ್ಬ ಶಾಲಾ ಬಾಲಕಿಯೊಬ್ಬಳನ್ನು ಪುತ್ತೂರಿನಿಂದ ಆಕೆಯ ಮನೆಗೆ ಬಿಡಲೆಂದು ಕಾರಲ್ಲಿ ಕರೆದುಕೊಂಡು ಹೋಗಿದ್ದನು. ಇದನ್ನು ಆರೋಪಿಸಿ ಯುವಕನಿಗೆ ಹಲ್ಲೆ ನಡೆಸಿದರೆಂದೂ ಹೇಳಲಾಗಿದೆ. ಇದಾದ ಬಳಿಕ ಎರಡೂ ಕಡೆಯವರು ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಾರೆ. ಎರಡೂ

ಸುಳ್ಯ : ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋದ ಆರೋಪ|ಬಜರಂಗಿಗಳ ನಡುವೆ ಮಾರಾಮಾರಿ Read More »