ಕ್ರೈಂ

ದಟ್ಟ ಅರಣ್ಯದೊಳಗೆ ಸುಟ್ಟ ಕಾರು, ಜೊತೆಗೊಂದು ಮೃತದೇಹ| ತನಿಖೆ ಕೈಗೊಂಡ ಪೊಲೀಸರು|

ಶಿವಮೊಗ್ಗ: ಇಲ್ಲಿನ ತೀರ್ಥಹಳ್ಳಿ ತಾಲ್ಲೂಕಿನ ಸಾಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಣ್ಯದಲ್ಲಿ ಸುಟ್ಟ ಕಾರು ಮತ್ತು ಮೃತದೇಹ ಪತ್ತೆಯಾಗಿದೆ. ಕೆಲವು ದಿನಗಳ ಹಿಂದೆ ಕಾರು ಸುಟ್ಟು ಹೋಗಿರುವ ಶಂಕೆ ಇದ್ದು, ಬುಧವಾರ ಪ್ರಕರಣ ಬೆಳಕಿಗೆ ಬಂದಿದೆ. ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಮಿಟ್ಲುಗೋಡು ಎಂಬ ಹಳ್ಳಿಯ ಸನಿಹದ ದಟ್ಟ ಅರಣ್ಯ ಪ್ರದೇಶದಲ್ಲಿ ಕಾರು ಸುಟ್ಟು ಕರಕಲಾಗಿ ಪತ್ತೆಯಾಗಿದೆ. ಕಾರಿನೊಳಗೆ ಮೃತದೇಹ ಸಹ ಸುಟ್ಟ ಸ್ಥಿತಿಯಲ್ಲಿ ಸಿಕ್ಕಿದೆ. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. […]

ದಟ್ಟ ಅರಣ್ಯದೊಳಗೆ ಸುಟ್ಟ ಕಾರು, ಜೊತೆಗೊಂದು ಮೃತದೇಹ| ತನಿಖೆ ಕೈಗೊಂಡ ಪೊಲೀಸರು| Read More »

ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಬೆಳ್ತಂಗಡಿ : ದ. ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.28ರಂದು ನಡೆದಿದೆ. ಹುಣಸೆಕಟ್ಟೆ ನಿವಾಸಿ ಸಂಜೀವ ಶೆಟ್ಟಿ ಮತ್ತು ಜಯಂತಿ ದಂಪತಿ ಪುತ್ರಿಯಾದ ದೀಕ್ಷಿತ ಶೆಟ್ಟಿ(23.ವ) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮನನೊಂದು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Read More »

ಮತ್ತೊಂದು ಹೆಣ್ಣುಮಗು ಹುಟ್ಟಿತೆಂದು ಹೆಂಡತಿಯ ಕತ್ತು ಹಿಸುಕಿ ಕೊಲೆಗೈದ ಗಂಡ

ತೆಲಂಗಾಣ: ಹೆಣ್ಣು ಮಗು ಹುಟ್ಟಿದೆ ಎಂಬ ಕಾರಣಕ್ಕೆ ಕೋಪಗೊಂಡ ಗಂಡ ತನ್ನ ಹೆಂಡತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಗದ್ವಾಲದಲ್ಲಿ ನಡೆದಿದೆ. ಗದ್ವಾಲ ಜಿಲ್ಲೆಯ ಸಂಸದರ ಕಚೇರಿಯಲ್ಲಿ ಅಟೆಂಡರ್​​ ಆಗಿ ಕೆಲಸ ನಿರ್ವಹಿಸುತ್ತಿದ್ದ ವೆಂಕಟೇಶ್​​ ತನ್ನ ಪತಿ ಪವಾನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ ಕೋಪಗೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ. 2009ರಲ್ಲಿ ಪವಾನಿಯನ್ನು ಮದುವೆಯಾಗಿದ್ದ ವೆಂಕಟೇಶ ವರದಕ್ಷಿಣೆ ರೂಪದಲ್ಲಿ 60 ಗ್ರಾಂ ಚಿನ್ನ, 6 ಲಕ್ಷ ರೂ.

ಮತ್ತೊಂದು ಹೆಣ್ಣುಮಗು ಹುಟ್ಟಿತೆಂದು ಹೆಂಡತಿಯ ಕತ್ತು ಹಿಸುಕಿ ಕೊಲೆಗೈದ ಗಂಡ Read More »

ಅಕ್ರಮ ಗೋಸಾಗಾಟ ತಡೆದ ಗ್ರಾಮಸ್ಥರು| 5 ಹಸುಗಳು ವಾಹನದಲ್ಲೇ ಸಾವು|

ಕೋಲಾರ: ಅಕ್ರಮವಾಗಿ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಚಾರಕಸನಹಳ್ಳಿಯಲ್ಲಿ ನಡೆದಿದೆ. ಕಳೆದ ರಾತ್ರಿ ಎರಡು ಲಾರಿಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಗೋವುಗಳನ್ನ ಅಕ್ರಮವಾಗಿ ಕಸಾಯಿಖಾನೆಗೆ, ಚಾಕಾರಸನಹಳ್ಳಿ ಮಾರ್ಗವಾಗಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು. ಈ ವೇಳೆ ಅನುಮಾನಗೊಂಡ ಗ್ರಾಮಸ್ಥರು ಲಾರಿಗಳನ್ನ ತಡೆದು ಪರಿಶೀಲನೆ ನಡೆಸಿದ ವೇಳೆ ಲಾರಿಗಳಲ್ಲಿ ಹಸುಗಳು ಇರುವುದು ಕಂಡುಬಂದಿದ್ದು, ಅಕ್ರಮವಾಗಿ ಗೋವುಗಳನ್ನ ಸಾಗಿಸಲಾಗುತ್ತಿದೆ ಎಂದು ತಿಳಿದು, ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಲಾರಿಗಳಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು

ಅಕ್ರಮ ಗೋಸಾಗಾಟ ತಡೆದ ಗ್ರಾಮಸ್ಥರು| 5 ಹಸುಗಳು ವಾಹನದಲ್ಲೇ ಸಾವು| Read More »

ಕಡಬ| ಪೊಲೀಸ್ ಪೇದೆಯಿಂದ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ| ಆರೋಪಿ ಶಿವರಾಜ್ ನಾಯಕ್ ಬಂಧನ

ಕಡಬ: ವರ್ಷಗಳ ಹಿಂದೆ ನಡೆದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ, ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಕಡಬ ಠಾಣಾ ಪೊಲೀಸ್ ಕಾನ್‌ಸ್ಟೆಬಲ್‌ ಶಿವರಾಜ್ ನಾಯಕ್ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯ ತಂದೆ ಸೋಮವಾರ ಕಡಬ ಠಾಣೆಯಲ್ಲಿ ದೂರು ನೀಡಿರುವ ಹಿನ್ನೆಲೆಯಲ್ಲಿ, ಕಡಬ ಠಾಣೆ ಪೊಲೀಸರು ಆರೋಪಿ ಶಿವರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಕಡಬ ಠಾಣೆಗೆ ಸೋಮವಾರ ಸಂಜೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.

ಕಡಬ| ಪೊಲೀಸ್ ಪೇದೆಯಿಂದ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ| ಆರೋಪಿ ಶಿವರಾಜ್ ನಾಯಕ್ ಬಂಧನ Read More »

ಕಡಬ| ಕೊನೆಗೂ ದಾಖಲಾಯ್ತು ಪೋಲಿ ಪೊಲೀಸಪ್ಪನ ವಿರುದ್ದ ದೂರು| ಗರ್ಭವತಿಯನ್ನಾಗಿಸಿ ಅಬಾರ್ಷನ್ ಮಾಡಿಸಿದನೇ ಈ ಪೊಲೀಸ್?

ಕಡಬ: ಪ್ರಕರಣವೊಂದರಲ್ಲಿ ಸಂತ್ರಸ್ಥೆಯಾಗಿದ್ದ ಅಪ್ರಾಪ್ತೆ ಯುವತಿಯನ್ನು ತನ್ನಕಾಮದಾಟಕ್ಕೆ ಬಳಸಿಕೊಂಡಿದ್ದ ಕಡಬ ಠಾಣೆಯ ಪೋಲಿಸ್ ಸಿಬ್ಬಂದಿ ಶಿವರಾಜ್ ವಿರುದ್ದ ಕೊನೆಗೂ ದೂರು ನೀಡಲಾಗಿದೆ. ಯುವತಿಯೇ ತಂದೆ ದೂರು ನೀಡಿದ್ದು, ತನ್ನ ಮಗಳನ್ನು ಬಲತ್ಕಾರ ಮಾಡಿ ಅತ್ಯಾಚಾರವೆಸಗಿ ಇದೀಗ ಗರ್ಭವತಿಯಾಗಲು ಕಾರಣನಾಗಿದ್ದು, ಗರ್ಭಪಾತ ನಡೆಸುವ ಸಲುವಾಗಿ ಯುವತಿಯನ್ನು ಮಂಗಳೂರಿನಲ್ಲಿ ಅಜ್ಞಾತ ಸ್ಥಳದಲ್ಲಿರಿಸಿದ್ದಾನೆ, ಅಲ್ಲದೆ ಗರ್ಭಪಾತ ನಡೆಸಲು ಹಣವನ್ನು ಕೂಡ ಪೋಲಿಸ್ ಸಿಬ್ಬಂದಿ ಶಿವರಾಜ್ ನೀಡಿದ್ದಾನೆ ಎಂದು ಯುವತಿಯ ತಂದೆ ದೂರಿನಲ್ಲಿ ವಿವರಿಸಿದ್ದಾರೆ. ಯುವತಿ ತಂದೆ ನೀಡಿದ ದೂರಿನ ಸಾರಾಂಶ ಹೀಗಿದೆ:

ಕಡಬ| ಕೊನೆಗೂ ದಾಖಲಾಯ್ತು ಪೋಲಿ ಪೊಲೀಸಪ್ಪನ ವಿರುದ್ದ ದೂರು| ಗರ್ಭವತಿಯನ್ನಾಗಿಸಿ ಅಬಾರ್ಷನ್ ಮಾಡಿಸಿದನೇ ಈ ಪೊಲೀಸ್? Read More »

ಕೇಸ್ ಹಿಂಪಡೆಯಲೊಪ್ಪದ‌ ಪತ್ನಿಯ ಮೂಗು‌ ಕತ್ತರಿಸಿದ ಪತಿರಾಯ! ಕೋಪದಲ್ಲಿ ತುಂಡಾಗಿದ್ದು ಮತ್ತೆ ಬಂದೀತೇ?

ಭೋಪಾಲ್: ಮೂಗು ಮನುಷ್ಯನ ಸೌಂದರ್ಯಕ್ಕೆ ಹಿಡಿದ ಕೈಗನ್ನಡಿ. ಅಂತಹ‌ ಮೂಗು ಇಲ್ಲವಾದರೆ ಆ ದೃಶ್ಯ ಊಹಿಸಲೂ ಆಗದು. ಆದರೆ ಕೋಪದಲ್ಲೊಬ್ಬ ಪತಿ ಮಹಾಶಯ ತನ್ನ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸುವುದೇ? ಇಂತಹ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಲ್ಲಿನ ರಾತ್ಲಾಮ್ ಜಿಲ್ಲೆಯಲ್ಲಿ ಘಟನೆ ನಡೆದಿದೆ.ತನ್ನ ಇಬ್ಬರು ಹೆಣ್ಣು ಮಕ್ಕಳ ಎದುರಲ್ಲೇ ಪತ್ನಿಯ ಮೂಗನ್ನು ಕಚ್ಚಿದ ಪತಿ ಕ್ರೌರ್ಯ ಮೆರೆದಿದ್ದು, ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಆಲೌಟ್ ಆಂಜುಮನ್ ಕಾಲೋನಿಯಯಲ್ಲಿರುವ ಪತ್ನಿ

ಕೇಸ್ ಹಿಂಪಡೆಯಲೊಪ್ಪದ‌ ಪತ್ನಿಯ ಮೂಗು‌ ಕತ್ತರಿಸಿದ ಪತಿರಾಯ! ಕೋಪದಲ್ಲಿ ತುಂಡಾಗಿದ್ದು ಮತ್ತೆ ಬಂದೀತೇ? Read More »

ಲಾಡ್ಜ್ ನಲ್ಲಿ ಆತ್ಮಹತ್ಯೆ ‌ಮಾಡಿಕೊಂಡ ಇಬ್ಬರು ಯುವಕರು|

ಸಾಗರ: ಇಲ್ಲಿನ ಜೋಗ ಬಸ್ ನಿಲ್ದಾಣದ ಸಮೀಪದ ಖಾಸಗಿ ಲಾಡ್ಜ್‌ವೊಂದರಲ್ಲಿ ಇಬ್ಬರು ಯುವಕರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಹಟ್ಟಿ ಗ್ರಾಮದ ಸಂತೋಷ್ (23) ಮತ್ತು ಹನುಮಂತ (28) ಮೃತ ದುರ್ದೈವಿಗಳು. ಸಂತೋಷ್ ಮತ್ತು ಹನುಮಂತ ಅವರು ಸೆ. 24ರ ತಡರಾತ್ರಿ ಲಾಡ್ಜ್‌ಗೆ ಬಂದು ಡಬ್ಬಲ್ ಬೆಡ್‌ರೂಂ ಬಾಡಿಗೆಗೆ ಪಡೆದಿದ್ದರು. ಶನಿವಾರ ಮಧ್ಯಾಹ್ನ ಇಬ್ಬರೂ ಹೊರಗೆ ಬಂದು ಊಟ ತೆಗೆದುಕೊಂಡು ರೂಮ್ ಸೇರಿಕೊಂಡಿದ್ದರು ಎನ್ನಲಾಗಿದೆ. ಶನಿವಾರ

ಲಾಡ್ಜ್ ನಲ್ಲಿ ಆತ್ಮಹತ್ಯೆ ‌ಮಾಡಿಕೊಂಡ ಇಬ್ಬರು ಯುವಕರು| Read More »

ಪತ್ನಿಯನ್ನು ಕೊಲೆಗೈದು‌ ಧರ್ಮಸ್ಥಳಕ್ಕೆ ಬಂದು ಹರಕೆ ತೀರಿಸಿದ ಪಾಪಿ ಪತಿರಾಯ| ಈತನ ವಿಲಕ್ಷಣ ಘಟನೆಗೆ ಸಾಕ್ಷಿಯಂತೆ ಪುಣ್ಯಕ್ಷೇತ್ರ…!

ಬೆಂಗಳೂರು: ಆತನಿಗೆ ಪತ್ನಿಯ ಶೀಲದ ಮೇಲೆ ವಿನಾಕಾರಣ ಶಂಕೆ, ಇದಕ್ಕಾಗಿ ಪತಿ ಜೊತೆಗೆ ಆಕೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಿದರೂ ಪತ್ನಿಯನ್ನು ನಂಬದೇ ಆಕೆಯ ಕೊಲೆ ಮಾಡಿ ಮುಡಿಕೊಡುತ್ತೇನೆ ಎಂದು ಹರಕೆ ತೊಟ್ಟಿದ್ದನಂತೆ ಆ ಪತಿ‌ ಮಹಾಶಯ..! ಅದರಂತೆ ಆಕೆಯನ್ನು ಕೊಲೆಗೈದು ಧರ್ಮಸ್ಥಳಕ್ಕೆ ಬಂದು ಮಂಡೆ ಬೋಳಿಸಿ ಹರಕೆ ತೀರಿಸಿದ ವಿಲಕ್ಷಣ ಘಟನೆಯೊಂದು ನಡೆದಿದ್ದು‘ಧರ್ಮಬೀರು’ ಪತ್ನಿ ಹಂತಕ ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.ಅನ್ನಪೂರ್ಣೇಶ್ವರಿ ನಗರ ಸಮೀಪದ ಹೆಲ್ತ್‌ ಲೇಔಟ್‌ ನಿವಾಸಿ ಕಾಂತರಾಜ್‌ ಎಂಬಾತನೇ ಈ

ಪತ್ನಿಯನ್ನು ಕೊಲೆಗೈದು‌ ಧರ್ಮಸ್ಥಳಕ್ಕೆ ಬಂದು ಹರಕೆ ತೀರಿಸಿದ ಪಾಪಿ ಪತಿರಾಯ| ಈತನ ವಿಲಕ್ಷಣ ಘಟನೆಗೆ ಸಾಕ್ಷಿಯಂತೆ ಪುಣ್ಯಕ್ಷೇತ್ರ…! Read More »

ಪುತ್ತೂರು: ಬೇಲಿಯೇ ಹೊಲ ಮೇಯ್ದ ಕಥೆ| ಅರಣ್ಯಾಧಿಕಾರಿಯ ಮನೆಯಲ್ಲೇ ಅಕ್ರಮ ಮರ ದಾಸ್ತಾನು| ಅಧಿಕಾರಿಗಳಿಂದ ದಾಳಿ

ಪುತ್ತೂರು, ಸೆ.25: ಕರ್ನಾಟಕ ಅರಣ್ಯ ರಬ್ಬರ್ ನಿಗಮದ ನೌಕರರೊಬ್ಬರ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾದ ಬೆಲೆಬಾಳುವ ಮರಗಳನ್ನು ಪುತ್ತೂರು ಅರಣ್ಯ ಇಲಾಖೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದು, ಆರೋಪಿ ಪರಾರಿಯಾದ ಘಟನೆ ನಡೆದಿದೆ. ಪುತ್ತೂರು ಕೆಎಫ್‌ಡಿಸಿ ಇಲಾಖೆಯ ನೌಕರ, ಅರಿಯಡ್ಕ ಗ್ರಾಮದ ಮಡ್ಯಂಗಳ ನಿವಾಸಿ ಅರುಣ್ ಕುಮಾರ್ ಎಂಬವರ ಮನೆಯಲ್ಲಿ ಸುಮಾರು ರೂ. 2.5 ಲಕ್ಷಕ್ಕೂ ಅಧಿಕ ಬೆಲೆಯ ಬೀಟೆ, ಹಲಸು, ಸಾಗುವಾನಿ ಹಾಗೂ ಇತರೆ ಜಾತಿಯ ಮರದ ದಿಮ್ಮಿಗಳು ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ

ಪುತ್ತೂರು: ಬೇಲಿಯೇ ಹೊಲ ಮೇಯ್ದ ಕಥೆ| ಅರಣ್ಯಾಧಿಕಾರಿಯ ಮನೆಯಲ್ಲೇ ಅಕ್ರಮ ಮರ ದಾಸ್ತಾನು| ಅಧಿಕಾರಿಗಳಿಂದ ದಾಳಿ Read More »