ಕರಾವಳಿ

ಪುತ್ತೂರು: ನಿರ್ಮಾಣ ಹಂತದ ಸೇತುವೆ ಕುಸಿದು, 7 ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

ಸಮಗ್ರ ನ್ಯೂಸ್: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಣಚ ಗ್ರಾಮದ ಮಲ್ಲಿಪ್ಪಾಡಿಯಲ್ಲಿ ರಸ್ತೆ ನಿರ್ಮಾಣ ಹಂತದ ಸೇತುವೆ ಕುಸಿದುಬಿದ್ದ ಪರಿಣಾಮ ಏಳು ಜನರಿಗೆ ಗಾಯವಾಗಿ ಓರ್ವ ಬ್ರಿಡ್ಜ್ ಕಾಮಗಾರಿ ಸಾಮಗ್ರಿಗಳ ಮಧ್ಯೆ ಸಿಲುಕಿ ಗಂಭೀರ ಗಾಯವಾದ ಘಟನೆ ನಡೆದಿದೆ. ಬರೆಂಜ-ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿಯ ನಿರ್ಮಾಣ ಹಂತದಲ್ಲಿದ್ದ ಸೇತುವೆ ಇದಾಗಿದ್ದು, ತಳಭಾಗದ ರಾಡ್ ಜಾರಿ ಮೇಲ್ಭಾಗದ ಸಂಪೂರ್ಣ ಕಾಂಕ್ರೀಟ್ ಸ್ಲ್ಯಾಬ್ ಕುಸಿದಿದೆ. ಸೇತುವೆಯ ಕೊನೆಯ ಹಂತದ ಕಾಂಕ್ರೀಟ್ ಮಿಕ್ಸ್ ಹಾಕುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಉಳಿದ ಆರು […]

ಪುತ್ತೂರು: ನಿರ್ಮಾಣ ಹಂತದ ಸೇತುವೆ ಕುಸಿದು, 7 ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ Read More »

ಜಾಲ್ಸೂರು: ನಿಯಂತ್ರಣ ತಪ್ಪಿ ಎರಡು ಬೈಕ್ ಗಳಿಗೆ ಗುದ್ದಿದ ಕಾರು|

ಸಮಗ್ರ ನ್ಯೂಸ್: ಸುಳ್ಯ ಕಡೆಯಿಂದ ಜಾಲ್ಲೂರು ಕಡೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎರಡು ಬೈಕ್ ಗಳಿಗೆ ಗುದ್ದಿದ ಘಟನೆ ಜಾಲ್ಸೂರಿನಲ್ಲಿ ಇಂದು (ಎ.15) ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರರಿಗೆ ಗಾಯಗಳಾಗಿದ್ದು, ಕಾರು ಬೈಕ್ ಜಖಂಗೊಂಡಿದೆ.

ಜಾಲ್ಸೂರು: ನಿಯಂತ್ರಣ ತಪ್ಪಿ ಎರಡು ಬೈಕ್ ಗಳಿಗೆ ಗುದ್ದಿದ ಕಾರು| Read More »

ಡಾ. ಅನುರಾಧಾ ಕುರುಂಜಿಯವರಿಗೆ “ಶತಶೃಂಗ” ಪ್ರಶಸ್ತಿ ಪ್ರದಾನ|ಅಂತಾರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಸ್ವರಚಿತ ಕವನ ವಾಚನ

ಸಮಗ್ರ ನ್ಯೂಸ್: ಉಪನ್ಯಾಸಕಿ, ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಸುಳ್ಯದ ಡಾ. ಅನುರಾಧಾ ಕುರುಂಜಿಯವರಿಗೆ ಸ್ವರ್ಣಭೂಮಿ ಫೌಂಡೇಶನ್ ಕೋಲಾರದವರು ಕೊಡಮಾಡಿದ ಪ್ರತಿಷ್ಠಿತ “ಶತ ಶೃಂಗ” ಪ್ರಶಸ್ತಿಯನ್ನು ಎ. 11ರಂದು ಪ್ರದಾನ ಮಾಡಲಾಯಿತು. ಕಾಸರಗೋಡು ನುಲ್ಲಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕನ್ನಡ ಭವನ ಪ್ರಕಾಶನ ಹಾಗೂ ಕೋಲಾರದ ಸ್ವರ್ಣಭೂಮಿ ಫೌಂಡೇಶನ್ ಜಂಟಿಯಾಗಿ ಆಯೋಜಿಸಿದ “ಕೇರಳ -ಕರ್ನಾಟಕ ಗಡಿನಾಡು ಕನ್ನಡ ಸಾಂಸ್ಕೃತಿಕ ಉತ್ಸವ 2024 ರಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುರಾಣ ಪ್ರಸಿದ್ಧ ಶತಶೃಂಗ

ಡಾ. ಅನುರಾಧಾ ಕುರುಂಜಿಯವರಿಗೆ “ಶತಶೃಂಗ” ಪ್ರಶಸ್ತಿ ಪ್ರದಾನ|ಅಂತಾರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಸ್ವರಚಿತ ಕವನ ವಾಚನ Read More »

ಮಂಗಳೂರು: ಬಾವುಟಗುಡ್ಡೆಯಲ್ಲಿ ಕಾರ್ಮಿಕ ಸಂಘಟನೆಯ ಜಿಲ್ಲಾ ಮಟ್ಟದ ಸಮಾವೇಶ

ಸಮಗ್ರ ನ್ಯೂಸ್‌ : ದಕ್ಷಿಣ ಕನ್ನಡ ಜಿಲ್ಲಾ ಇಂಟಕ್ ಕಾರ್ಮಿಕ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಮಾವೇಶ ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಜರಗಿತು. ಮಾಜಿ ಶಾಸಕರಾದ ಜೆಆರ್ ಲೋಬೋವ ಅವರು ದೇಶದ ಬೃಹತ್ ಕಾರ್ಮಿಕ ಸಂಘಟನೆಯಾದ ಇಂಟಕ್ ಸಂಘಟನೆಯು ಕಾಂಗ್ರೆಸ್ಸಿನ ಅವಿಭಾಜ್ಯ ಅಂಗವಾಗಿದೆ. ಕಾರ್ಮಿಕರು ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನ ತಮಗೆ ಒಳಿತಾಗುವಂತೆ ಚಲಾಯಿಸುವ ಮೂಲಕ ಕಾರ್ಮಿಕ ಶಕ್ತಿಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಅಧ್ಯಕ್ಷರಾದ ಮನೋಹರ್ ಶೆಟ್ಟಿ ಅವರು ಮಾತನಾಡಿ, ಕಾರ್ಮಿಕರಿಗೆ

ಮಂಗಳೂರು: ಬಾವುಟಗುಡ್ಡೆಯಲ್ಲಿ ಕಾರ್ಮಿಕ ಸಂಘಟನೆಯ ಜಿಲ್ಲಾ ಮಟ್ಟದ ಸಮಾವೇಶ Read More »

ಮಂಗಳೂರಿನಲ್ಲಿ ಮೊದಲ ಬಾರಿ ಮೋದಿ ರೋಡ್ ಶೋ: ಖಾಕಿ ಹೈ ಅಲರ್ಟ್

ಸಮಗ್ರ ನ್ಯೂಸ್‌ : ಪ್ರಧಾನಿ ಮೋದಿ ಆಗಮನ ಹಿನ್ನಲೆ ಮಂಗಳೂರು ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ. ಏರ್ ಪೋರ್ಟ್ ನಿಂದ ರೋಡ್ ಶೋ ಮುಕ್ತಾಯವಾಗುವ ಪ್ರದೇಶದವರೆ, ಹಾಗೆಯೇ ಲೇಡಿಹಿಲ್ ವರೆಗೂ ಬಿಗಿ ಭದ್ರತೆ ವಹಿಸಿಕೊಂಡಿದೆ. ಸುಮಾರು 2500 ಸಾವಿರ ಪೊಲೀಸ್ ಸಿಬ್ಬಂದಿಯ ನಿಯೋಜನೆ ಮಾಡಿಕೊಂಡಿದೆ. 10 ಜನ ಎಸ್ಪಿ ಹಾಗು ಹೆಚ್ಚುವರಿ ಎಸ್ಪಿ ರಾಂಕ್ ಅಧಿಕಾರಿಗಳು, 250 ಡಿವೈಎಸ್ಪಿ ಮತ್ತು ಪಿಎಸ್ ಐ ರಾಂಕ್ ಅಧಿಕಾರಿಗಳ ನಿಯೋಜನೆ ಮಾಡಿದೆ. ವಾಹನ ಸಂಚಾರ ,ಪಾರ್ಕಿಂಗ್ ಸೇರಿದಂತೆ ಸಂಚಾರ

ಮಂಗಳೂರಿನಲ್ಲಿ ಮೊದಲ ಬಾರಿ ಮೋದಿ ರೋಡ್ ಶೋ: ಖಾಕಿ ಹೈ ಅಲರ್ಟ್ Read More »

ಮಂಗಳೂರಿಗೆ ಭೇಟಿ ನೀಡಿದ ಪ್ರಧಾನಿ ಮೋದಿಗೆ ಸಿಎಂ ಸಾಲು ಸಾಲು ಪ್ರಶ್ನೆ| ಪ್ರಧಾನಿಗಳೇ,ನೀವು ದ.ಕ ಜಿಲ್ಲೆಗೆ ಕೊಟ್ಟದ್ದೆಷ್ಟು? ಕಿತ್ತುಕೊಂಡದ್ದೆಷ್ಟು?

ಸಮಗ್ರ ನ್ಯೂಸ್: ಎ.14ರಂದು ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದಾರೆ. ಅದೇ ರೀತಿ ಮಂಗಳೂರಿಗೆ ಬಂದು ಬ್ರಿಜೇಶ್ ಚೌಟ ಮತ್ತು ಶ್ರೀನಿವಾಸ್ ಪೂಜಾರಿ ಪರ ರೋಡ್ ಶೋ ನಡೆಸುವ ಮೂಲಕ, ಪ್ರಧಾನಿ ಮತಯಾಚಿಸಿದ್ದಾರೆ. ಈ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಪ್ರಧಾನಿಗೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. ಎಕ್ಸ್ ನಲ್ಲಿ ಟ್ವೀಟ್ ಮಾಡಿದ ಸಿಎಂ‌ ಸಿದ್ದರಾಮಯ್ಯ ಪ್ರಧಾನಿಯವರ ವಿರುದ್ದ ಹರಿಹಾಯ್ದಿದ್ದಾರೆ. ಸಿಎಂ ಸಿದ್ದರಾಮಯ್ಯ ಎತ್ತಿದ ಪ್ರಶ್ನೆಗಳು

ಮಂಗಳೂರಿಗೆ ಭೇಟಿ ನೀಡಿದ ಪ್ರಧಾನಿ ಮೋದಿಗೆ ಸಿಎಂ ಸಾಲು ಸಾಲು ಪ್ರಶ್ನೆ| ಪ್ರಧಾನಿಗಳೇ,ನೀವು ದ.ಕ ಜಿಲ್ಲೆಗೆ ಕೊಟ್ಟದ್ದೆಷ್ಟು? ಕಿತ್ತುಕೊಂಡದ್ದೆಷ್ಟು? Read More »

ಮಂಗಳೂರಿನಲ್ಲಿ ನಮೋ ಮೇನಿಯಾ| ರೋಡ್ ಶೋ ಮುಖಾಂತರ ಮತ ಪ್ರಚಾರ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮಾಡಿದ್ದು, ಸಾವಿರಾರು ಜನರು ಮೋದಿಯನ್ನು ನೋಡಲು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಟ್ಟಡ, ಕಾಂಪೌಂಡ್ ಮೇಲೇರಿ ನಿಂತು ಮೋದಿ ರೋಡ್ ಶೋ ವೀಕ್ಷಿಸಿದ್ದಾರೆ. ನಾರಾಯಣಗುರು ವೃತ್ತದಿಂದ ನವಭಾರತ ವೃತ್ತದವರೆಗೆ ಅಂದರೆ ಸುಮಾರು 2 ಕಿ.ಮೀ. ರೋಡ್​ಶೋ ನಡೆಸಿದ್ದು, ನಗರದೆಲ್ಲೆಡೆ ಮೋದಿ, ಮೋದಿ ಜೈ ಘೋಷ ಮೊಳಗಿದೆ. ಇನ್ನೂ ಪ್ರಧಾನಿ ನಾರಾಯಣ ಗುರು ಪುತ್ಥಳಿಗೆ ನಮಸ್ಕರಿಸಿ ರೋಡ್ ಶೋ ಆರಂಭಿಸಿದರು. ರಸ್ತೆಯುದ್ದಕ್ಕೂ ಜನಸಾಗರ ಹರಿದು ಬಂದಿತ್ತು. ಕೇಸರಿ ಕೋಟೆಯಲ್ಲಿ ಜನರನ್ನು

ಮಂಗಳೂರಿನಲ್ಲಿ ನಮೋ ಮೇನಿಯಾ| ರೋಡ್ ಶೋ ಮುಖಾಂತರ ಮತ ಪ್ರಚಾರ Read More »

ಮಂಗಳೂರು: ಮೋದಿ ರೋಡ್ ಶೋ ಪಕ್ಕದಲ್ಲಿ ಬೆಂಕಿ ಅವಘಡ

ಸಮಗ್ರ ನ್ಯೂಸ್: ಇಂದು ಮೈಸೂರಿನಲ್ಲಿ ಸಮಾವೇಶ ಮುಗಿಸಿ ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆದಿತ್ತು. ಆದರೆ ರೋಡ್ ಶೋ ಪಕ್ಕದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ನಗರದ ಭಾರತ್ ಮಾಲ್ ಪಕ್ಕದ ಔಷಧ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ನರೇಂದ್ರ ಮೋದಿ ರೋಡ್ ಶೋ ನಡೆಯುತ್ತಿದ್ದ ಮಾರ್ಗದಿಂದ ಈ ಕಟ್ಟಡ ಕೇವಲ 50 ಮೀಟರ್ ಅಂತರದಲ್ಲಿದೆ. ನಾಯಕ್ ಹೆಲ್ತ್ ಕೇರ್ ಗೋಡೌನ್‌ನಲ್ಲಿ

ಮಂಗಳೂರು: ಮೋದಿ ರೋಡ್ ಶೋ ಪಕ್ಕದಲ್ಲಿ ಬೆಂಕಿ ಅವಘಡ Read More »

ಮಂಗಳೂರು: ಮೋದಿ ರೋಡ್‌ ಶೋಗೆ ಕ್ಷಣಗಣನೆ; ನಗರದೆಲ್ಲೆಡೆ ಪೊಲೀಸ್‌ ಸರ್ಪಗಾವಲು

ಸಮಗ್ರ ನ್ಯೂಸ್‌ : ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಇಂದು ರಾತ್ರಿ 7.45ರಿಂದ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಮತ ಯಾಚಿಸಲಿದ್ದಾರೆ. ಪ್ರಧಾನಿ ಭಾಗವಹಿಸುವ ಈ ಕಾರ್ಯಕ್ರಮದ ಸಲುವಾಗಿ ನಗರದೆಲ್ಲೆಡೆ ಬಿಗು ಭದ್ರತೆ ಏರ್ಪಡಿಸಲಾಗಿದೆ. ಬ್ರಹ್ಮಶ್ರೀ ನಾರಾಯಣಗುರು ವೃತ್ತರಿಂದ ಆರಂಭವಾಗಲಿರುವ ರೋಡ್‌ ಶೋ ಲಾಲ್‌ಬಾಗ್‌, ಪಿವಿಎಸ್‌ ವೃತ್ತದ ಮೂಲಕ ಸಾಗಿ ನವಭಾರತ ವೃತ್ತದಲ್ಲಿ ಸಮಾಪನಗೊಳ್ಳಲಿದೆ. ನಾರಾಯಣ ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಧಾನಿ ರೋಡ್‌ ಶೋ ಆರಂಭಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ

ಮಂಗಳೂರು: ಮೋದಿ ರೋಡ್‌ ಶೋಗೆ ಕ್ಷಣಗಣನೆ; ನಗರದೆಲ್ಲೆಡೆ ಪೊಲೀಸ್‌ ಸರ್ಪಗಾವಲು Read More »

ಉಡುಪಿ: 6100 ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ – ಡಿಸಿ ಕೆ. ವಿದ್ಯಾಕುಮಾರಿ

ಸಮಗ್ರ ನ್ಯೂಸ್‌ : ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವಿಶೇಷ ಚೇತನರು ಹಾಗೂ 85 ವರ್ಷ ಮೇಲ್ಪಟ್ಟ ಮತದಾನ ಕೇಂದ್ರಗಳಿಗೆ ತೆರಳಿ ಮತದಾನ ಮಾಡಲು ಆಗದ 6100 ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕೆ ತಿಳಿಸಿದರು. ಅವರು ಇಂದು ಕಾಪು ತಾಲೂಕಿನ ಕಲ್ಯಾ ಗ್ರಾಮದ ವಯಸ್ಕ ಮತದಾನರ ಮನೆಯಲ್ಲಿ ನಡೆದ ಮತದಾನದ ಪ್ರಕ್ರಿಯೆಯನ್ನು ಪರಿಶೀಲಿಸಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ವಿಶೇಷ ಚೇತನ ಹಾಗೂ 85 ವರ್ಷ ಮೇಲ್ಪಟ

ಉಡುಪಿ: 6100 ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ – ಡಿಸಿ ಕೆ. ವಿದ್ಯಾಕುಮಾರಿ Read More »