ಕರಾವಳಿ

ಕಾಪು: ಹೆತ್ತವರ ಬುದ್ದಿಮಾತಿಗೆ ನೊಂದು ಬಾಲಕಿ ಆತ್ಮಹತ್ಯೆ

ಕಾಪು, ಮೇ ೧೭: ಮೊಬೈಲ್ ಗೇಮ್ ಅತಿಯಾಗಿ ಆಡದಂತೆ ತಾಯಿಯ ಬುದ್ದಿಮಾತಿಗೆ ನೊಂದು ೧೬ರ ಬಾಲಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇ.೧೫ರ ರಾತ್ರಿ ಇಲ್ಲಿನ ಮಣಿಪುರ ಗ್ರಾಮ ಕೋಟೆ ಬಳಿ ನಡೆದಿದೆ.ಮೃತ ಬಾಲಕಿಯನ್ನು ಶಾಬನ್ ಹಾಗೂ ಜುಬೇದಾ ಅವರ ಪುತ್ರಿ ಸುಹೇಬತ್ ಅಸ್ಲಮೀಯಾ(೧೬) ಎಂದು ಗುರುತಿಸಲಾಗಿದೆ. ಈಕೆಗೆ ಮೇ ೧೫ ರಂದು ರಾತ್ರಿ ೮.೦೦ ಗಂಟೆ ವೇಳೆಗೆ ತಾಯಿಯು ಮೊಬೈಲ್‌ನಲ್ಲಿ ಆಟ ಆಡದಂತೆ ಬುದ್ದಿ ಹೇಳಿ ಮೊಬೈಲ್‌ನ್ನು ತೆಗೆದುಕೊಂಡಿದ್ದರು.ಸ್ವಲ್ಪ ಸಮಯದ ಬಳಿಕ ಮಗಳು ಮನೆಯಲ್ಲಿರದಿರುವುದನ್ನು […]

ಕಾಪು: ಹೆತ್ತವರ ಬುದ್ದಿಮಾತಿಗೆ ನೊಂದು ಬಾಲಕಿ ಆತ್ಮಹತ್ಯೆ Read More »

ಸುಳ್ಯ: ಜೂಜಾಟವಾಡುತ್ತಿದ್ದ ಐವರ ಬಂಧನ

ಸುಳ್ಯ ಮೇ.೧೭: ನಗರದ ಬಾರೊಂದರ ಬಳಿ ಜೂಜಾಡುತಿದ್ದ ಐವರನ್ನು ಪೋಲಿಸರು ವಶಕ್ಕೆ ಪಡೆದುಕೊಂಡ ಘಟನೆ ಇಂದು ಸಂಜೆ ನಡೆದಿದಡೆ.ನಗರದ ಜಟ್ಟಿಪಳ್ಳ ಬಳಿ ಇರುವ ಹಿಲ್‌ಸೈಡ್ ಬಾರ್ ಬಳಿ ಜೂಜಾಟವಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡಿದ್ದರೆ. ಅಲ್ಲದೆ ಆಟಕ್ಕೆ ಬಳಸಿದ 2 ಅಟೋ ರಿಕ್ಷಾ, ಹಾಗೂ ನಗದು ಹಣ ವಶ ಪಡಿಸಿಕೊಂಡಿದ್ದಾರೆ.

ಸುಳ್ಯ: ಜೂಜಾಟವಾಡುತ್ತಿದ್ದ ಐವರ ಬಂಧನ Read More »

ಮಂಗಳೂರಿಗೂ ಕಾಲಿಟ್ಟಿತಾ ಬ್ಯ್ಲಾಕ್ ಫಂಗಸ್!? ಹೇಗಿರುತ್ತೆ ಮಹಾಮಾರಿಯ ಲಕ್ಷಣ?

ಮಂಗಳೂರು, ಮೇ 17 :ರಾಜ್ಯದಲ್ಲಿ ಜನ ಕೊರೊನಾ ಸೋಂಕಿಗೆ ತುತ್ತಾಗಿ ಗುಣಮುಖರಾಗುತ್ತಿರುವ ಬೆನ್ನಲ್ಲೇ ಬ್ಯ್ಲಾಕ್ ಫಂಗಸ್ ಅತಿ ಹೆಚ್ಚು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಮಹಾಮಾರಿ ಮಂಗಳೂರಿಗೂ ಕಾಲಿಟ್ಟಿತಾ? ಎಂಬ ಶಂಕೆ ವ್ಯಕ್ತವಾಗಿದೆ. ದ.ಕ. ಜಿಲ್ಲೆಯಲ್ಲಿ ಭಾನುವಾರ ಇಬ್ಬರು ರೋಗಿಗಳಲ್ಲಿ ಬ್ಯ್ಲಾಕ್ ಫಂಗಸ್ ಲಕ್ಷಣಗಳು ಕಂಡುಬಂದಿದ್ದು, ಇದು ಇನ್ನೂ ದೃಢಪಟ್ಟಿಲ್ಲ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ| ಕಿಶೋರ್ ಕುಮಾರ್ ತಿಳಿಸಿದ್ದಾರೆ. ಜಿಲ್ಲೆಯ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಬ್ಯ್ಲಾಕ್ ಫಂಗಸ್ ಲಕ್ಷಣ ಇರುವ ರೋಗಿಗಳು ಕಂಡುಬಂದಲ್ಲಿ

ಮಂಗಳೂರಿಗೂ ಕಾಲಿಟ್ಟಿತಾ ಬ್ಯ್ಲಾಕ್ ಫಂಗಸ್!? ಹೇಗಿರುತ್ತೆ ಮಹಾಮಾರಿಯ ಲಕ್ಷಣ? Read More »

ಜೀವನ್ಮರಣ ಹೋರಾಟದಲ್ಲಿದ್ದ 9 ಜನರ ರಕ್ಷಿಸಿದ ನೌಕಾಪಡೆ: ಸೇನಾ‌ ಕಾರ್ಯಾಚರಣೆಯ ಇಂಚಿಂಚೂ ಮಾಹಿತಿ

ಮಂಗಳೂರು , ಮೇ 17:ತೌಕ್ತೆ ಚಂಡಮಾರುತ ಅಲೆಗಳ ಅಬ್ಬರಕ್ಕೆ ಸಮುದ್ರದಲ್ಲಿ ಸಿಲುಕಿ ಜೀವನ್ಮರಣ ಹೋರಾಟದಲ್ಲಿ ಟಗ್ ನಲ್ಲಿದ್ದ 9 ಮಂದಿ ಸಿಬ್ಬಂದಿಯನ್ನು ಕರಾವಳಿ ಕಾವಲು ಪಡೆ, ಸ್ಥಳೀಯ ಪೊಲೀಸರೊಂದಿಗೆ ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. ಕೊಚ್ಚಿನ್ ನಿಂದ ಆಗಮಿಸಿರುವ ನೌಕಾ ಪಡೆಯ ಹೆಲಿಕಾಪ್ಟರ್, ಮಂಗಳೂರಿಗೆ ತಲುಪಿ ಅಲ್ಲಿಂದ ಬಳಿಕ ಟಗ್ ಸಿಲುಕಿರುವ ಕಾಪುವಿನತ್ತ ತೆರಳಿ ಮುಂಜಾನೆಯಿಂದ ಕಾರ್ಯಾಚರಣೆ ನಡೆಸಿ ಎಲ್ಲಾ ಸಿಬ್ಬಂದಿಗಳನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿದೆ. ಸಂಸದ

ಜೀವನ್ಮರಣ ಹೋರಾಟದಲ್ಲಿದ್ದ 9 ಜನರ ರಕ್ಷಿಸಿದ ನೌಕಾಪಡೆ: ಸೇನಾ‌ ಕಾರ್ಯಾಚರಣೆಯ ಇಂಚಿಂಚೂ ಮಾಹಿತಿ Read More »

ಪುತ್ತೂರು ಭೀಕರ ಅಪಘಾತ: ಕೋಡಿಬೈಲು ಕೃಷಿ ಏಜೆನ್ಸೀಸ್‌ನ ಮಾಲಕ ಮೃತ್ಯು

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯ ತೆಂಕಿಲದಲ್ಲಿ ಲಾರಿ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ, ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮೇ. ೧೭ರಂದು ಬೆಳಗ್ಗಿನ ಜಾವ ನಡೆದಿದೆ. ಸ್ಕೂಟರ್ ಸವಾರ ಬೆಳ್ಳಾರೆ ಕೋಡಿಬೈಲು ನಿವಾಸಿ ಕೋಡಿಬೈಲು ಕೃಷಿ ಏಜೆನ್ಸೀಸ್‌ನ ಮಾಲಕ ಸತ್ಯನಾರಾಯಣ ಭಟ್ ರವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ಬೆಳ್ಳಾರೆಯಿಂದ ಮಂಗಳೂರು ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿ ನಡುವೆ ಢಿಕ್ಕಿ ಸಂಭವಿಸಿದೆ. ಢಿಕ್ಕಿ ರಭಸಕ್ಕೆ ಸ್ಕೂಟರ್ ಸವಾರ

ಪುತ್ತೂರು ಭೀಕರ ಅಪಘಾತ: ಕೋಡಿಬೈಲು ಕೃಷಿ ಏಜೆನ್ಸೀಸ್‌ನ ಮಾಲಕ ಮೃತ್ಯು Read More »

ಉಡುಪಿ: ಅನಾಥಾಶ್ರಮದಲ್ಲಿದ್ದ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ 

ಉಡುಪಿ: ಹಿರಿಯಡ್ಕದ ‘ಅಪ್ಪ-ಅಮ್ಮ’ ಅನಾಥಾಶ್ರಮದಲ್ಲಿ ಆಶ್ರಯ ಪಡೆದುಕೊಂಡಿದ್ದ  ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೋಡಿಬೆಟ್ಟು ನಿವಾಸಿ ದಾಕ್ಷಾಯಿಣಿ(47) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅವಿವಾಹಿತೆಯಾಗಿದ್ದು ಇವರು ಅನಾಥಾಶ್ರಮದ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕವಾಗಿ ನೊಂದುಕೊಂಡಿದ್ದು  ಸೂಕ್ತ ಚಿಕಿತ್ಸೆ ಇಲ್ಲದೆ, ಮಾನಸಿಕವಾಗಿ ಅಸ್ವಸ್ಥಗೊಂಡಿದ್ದರು. ಕಳೆದ ಐದು ತಿಂಗಳಿನಿಂದ ವರಂಬಳ್ಳಿ ಬಳಿಯ ‘ಅಪ್ಪ-ಅಮ್ಮ’ ಅನಾಥಾಶ್ರಮದಲ್ಲಿ ಆಕೆಗೆ ಆಶ್ರಯ ನೀಡಲಾಗಿತ್ತು. ಆದರೆ, ಮೇ. 16 ರಂದು ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ

ಉಡುಪಿ: ಅನಾಥಾಶ್ರಮದಲ್ಲಿದ್ದ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ  Read More »

ಬಿಜೆಪಿ ಅಧಿಕಾರದಲ್ಲಿರದಿದ್ದರೆ ಕೊರೊನ ನಿರ್ವಹಣೆ ಕಷ್ಟವಾಗುತ್ತಿತ್ತು – ನಳೀನ್ ಕುಮಾರ್ ಕಟೀಲ್

ಬೆಂಗಳೂರು: ದೇಶದಲ್ಲಿ ಕೊರೊನಾ ವಿಷಮ ಪರಿಸ್ಥಿತಿಯಲ್ಲಿ ಬಿಜೆಪಿ ಹೊರತು ಬೇರಾವುದೇ ಪಕ್ಷ ಅಧಿಕಾರದಲ್ಲಿದ್ದಿದ್ದರೆ ಪರಿಸ್ಥಿತಿ ನಿರ್ವಹಣೆ ಕಷ್ಟವಾಗುತಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಬಿಜೆಪಿ ಕರ್ನಾಟಕದ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಳೀನ್ ಕುಮಾರ್ ಕಟೀಲ್ ಸರಣಿ ಟ್ವಿಟ್ ಗಳ ಮೂಲಕ ಇಂತಹ ಹೇಳಿಕೆ ನೀಡಿದ್ದಾರೆ. ಆರೋಗ್ಯ ತುರ್ತು ಪರಿಸ್ಥಿತಿ ಸಮಯದಲ್ಲಿಯೂ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ. ಕಟೀಲ್ ರ ಸಮರ್ಥನೆ ಈಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.ದೇಶವನ್ನು ಬಹುಕಾಲ ಆಳಿದ

ಬಿಜೆಪಿ ಅಧಿಕಾರದಲ್ಲಿರದಿದ್ದರೆ ಕೊರೊನ ನಿರ್ವಹಣೆ ಕಷ್ಟವಾಗುತ್ತಿತ್ತು – ನಳೀನ್ ಕುಮಾರ್ ಕಟೀಲ್ Read More »

ಬೆಳ್ತಂಗಡಿ | ವಿದ್ಯುತ್ ಆಘಾತಕ್ಕೊಳಗಾಗಿ ಲೈನ್ ಮ್ಯಾನ್ ಮೃತ್ಯು

ಬೆಳ್ತಂಗಡಿ: ತಂತಿ ದುರಸ್ತಿಗೊಳಿಸುತ್ತಿದ್ದಾಗ ಲೈನ್ ಮ್ಯಾನ್ ಒಬ್ಬರು ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟ ಘಟನೆ ಇಂದು ತಾಲೂಕಿನ ತೆಕ್ಕಾರು ಸಮೀಪದ ಪಿಂಡಿಕಲ್ಲು ಎಂಬಲ್ಲಿ ನಡೆದಿದೆ.ಕಲ್ಲೇರಿ ಸೆಕ್ಷನ್ ಮೆಸ್ಕಾಂನ ಲೈನ್ ಮ್ಯಾನ್ ವಿಕಾಸ್ ಮೃತಪಟ್ಟವರು. ಇವರು ಕಳೆದೆರಡು ದಿನಗಳಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಹಾಗಾಗಿ ಸರಿಪಡಿಸುವ ಕಾರ್ಯ ನಡೆಯುತ್ತಿತ್ತು. ಇದೇ ವೇಳೆ ಸ್ಥಳದಲ್ಲಿ ಕಂಬದ ಮೇಲೆ ದುರಸ್ತಿಕಾರ್ಯ ಕೈಗೊಂಡಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಬೇಟಿ ನೀಡಿದ್ದು,

ಬೆಳ್ತಂಗಡಿ | ವಿದ್ಯುತ್ ಆಘಾತಕ್ಕೊಳಗಾಗಿ ಲೈನ್ ಮ್ಯಾನ್ ಮೃತ್ಯು Read More »

ತೌಕ್ತೆ ಪರಿಣಾಮ: ಬೆಳ್ತಂಗಡಿಯ ಹಳ್ಳದಲ್ಲಿ ಕಾಣಿಸಿಕೊಂಡ ನೀರು ನಾಯಿಗಳು ಹಿಂಡು…!ಸ್ಥಳೀಯರಲ್ಲಿ ಅಚ್ಚರಿ

ಬೆಳ್ತಂಗಡಿ: ಮೇ17: ತೌಕ್ತೆ ಚಂಡಮಾರುತದಿಂದಾಗಿ ಕರಾವಳಿ ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು, ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಹೀಗಿರುವಾಗಲೇ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗರ್ಡಾಡಿಯಲ್ಲಿನ ಫಲ್ಗುಣಿ ನದಿ ಸಂಪರ್ಕಿಸುವ ಹಳ್ಳದಲ್ಲಿ ನೀರು ನಾಯಿಗಳು ಕಂಡು ಬಂದು ಅಚ್ಚರಿ ಮೂಡಿಸಿವೆ. ನೀರು ನಾಯಿಗಳು ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಇವುಗಳು ಇಲ್ಲಿ ಕಾಣಿಸಿಕೊಂಡಿರೋದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿವೆ. ನೀಳ ದೇಹ, ನೀರಿನಲ್ಲಿ ತೋಯ್ದ ತುಪ್ಪಳದ ಚರ್ಮ,ಚಪ್ಪಟೆಯಾದ ತಲೆ, ಬಲವಾದ ಬಾಲ, ಹುಟ್ಟುಗಳಿಂತಿರುವ ಪಾದಗಳು, ಸ್ಪರ್ಶಸೂಕ್ಷ್ಮ ಮೀಸೆಗೂದಲು

ತೌಕ್ತೆ ಪರಿಣಾಮ: ಬೆಳ್ತಂಗಡಿಯ ಹಳ್ಳದಲ್ಲಿ ಕಾಣಿಸಿಕೊಂಡ ನೀರು ನಾಯಿಗಳು ಹಿಂಡು…!ಸ್ಥಳೀಯರಲ್ಲಿ ಅಚ್ಚರಿ Read More »

ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಬೋಟ್ ಪಲ್ಟಿ – ಓರ್ವ ಸಾವು 

ಪಡುಬಿದ್ರೆ: ತೌಕ್ತೆ ಚಂಡಮಾರುತಕ್ಕೆ ಸಿಲುಕಿದ ಬೋಟು ಪಲ್ಟಿಯಾಗಿ ಓರ್ವ ಮೃತಪಟ್ಟು, ಐವರು ನಾಪತ್ತೆಯಾದ ಘಟನೆ ಪಡುಬಿದ್ರೆ ಬಿಚ್‌ನಲ್ಲಿ ನಡೆದಿದೆ. ಬೆಳಿಗ್ಗೆ 10ಗಂಟೆಯಿಂದ ಈ ಸಿಂಗಲ್ ಮೆಂಟೆನೆನ್ಸ್ ಬೋಟ್ ಸಂಪರ್ಕ ಕಡಿದು ಕಂಡಿತ್ತು. ಬೋಟಿನಲ್ಲಿ ಎಂಟು ಜನರಿದ್ದು ಇಬ್ಬರು ಈಜಿಕೊಂಡು ಮಟ್ಟು ಬೀಚಿನಲ್ಲಿ ದಡ ಸೇರಿದ್ದಾರೆ. ಇನ್ನು ಒಂದು ಮೃತ ದೇಹ ಪತ್ತೆಯಾಗಿದ್ದು, ಕಾಣೆಯಾದ ಐವರಿಗೆ ಹುಡುಕಾಟ ನಡೆಸುತ್ತಿದ್ದೇವೆ ಎಂದು ಕರಾವಳಿ ಪೋಲೀಸ್ ಅಧಿಕಾರಿ ಚೇತನ್ ಐಪಿಎಸ್ ತಿಳಿಸಿದ್ದಾರೆ. ಇನ್ನು  ಚಂಡಮಾರುತ ಬೀಸಿದ ಪರಿಣಾಮ ಹವಾಮಾನ ವೈಪರೀತ್ಯಕ್ಕೆ ಸಿಲುಕಿ ಸಮುದ್ರ

ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಬೋಟ್ ಪಲ್ಟಿ – ಓರ್ವ ಸಾವು  Read More »