ಕರಾವಳಿ

ದ ಕ: ಕಪ್ಪು ಶಿಲೀಂದ್ರ ಕ್ಕೆ ಮತ್ತೆರಡು ಬಲಿ

ಮಂಗಳೂರು: ಮಾರಕ ಕಪ್ಪು ಶಿಲೀಂದ್ರ ಸೊಂಕಿಗೆ ಜಿಲ್ಲೆಯಲ್ಲಿ ಮತ್ತೆರಡು ಸಾವು ಸಂಭವಿಸಿದ್ದು ಮೂರು ಹೊಸ ಪ್ರಕರಣಗಳು ವರದಿಯಾಗಿದೆ. ಮೃತಪಟ್ಟವರು ಮತ್ತು ಹೊಸದಾಗಿ ಸೋಂಕಿಗೊಳಗಾದ ವರು ಎಲ್ಲರೂ ಹೊರಜಿಲ್ಲೆಯವರಗಿದ್ದಾರೆ. ಪತ್ತೆಯಾದ ಮೂರು ಹೊಸ ಪ್ರಕರಣಗಳು ಉತ್ತರ ಕನ್ನಡ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗೆ ಸಂಬಂಧಿಸಿದ್ದಾಗಿವೆ. ಎಲ್ಲರನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇನ್ನು ಈ ಹಿಂದೆ ಸೊಂಕಿಗೊಳಗಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ನಿನ್ನೆ ಮೃತಪಟ್ಟಿದ್ದಾರೆ. ಅವರಲ್ಲಿ ಒಬ್ಬರು ಚಿಕ್ಕಮಗಳೂರು ಮತ್ತು ಇನ್ನೊಬ್ಬರು ಉತ್ತರ ಕನ್ನಡ ಜಿಲ್ಲೆಗೆ ಸೇರಿದವರಾಗಿದ್ದಾರೆ. […]

ದ ಕ: ಕಪ್ಪು ಶಿಲೀಂದ್ರ ಕ್ಕೆ ಮತ್ತೆರಡು ಬಲಿ Read More »

ಕರಾವಳಿಯಲ್ಲಿ ಅಕ್ರಮವಾಗಿ ನೆಲೆಸಿದ್ದಳು ಪಾಕಿಸ್ತಾನಿ ಮಹಿಳೆ…! | ಪೊಲೀಸರಿಂದ ತನಿಖೆ ಚುರುಕು

ಭಟ್ಕಳ: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನ ಮೂಲದ ಖತೀಜಾ ಮೆಹರಿನ್ ಎಂಬಾಕೆ ಇಲ್ಲಿ ನೆಲೆಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭಟ್ಕಳ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.‌ ಕಳೆದ ಎಂಟು ವರ್ಷಗಳ ಹಿಂದೆ ಈಕೆಯನ್ನು ಸ್ಥಳೀಯ ನಿವಾಸಿ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್‌ ಎಂಬಾತ ದುಬೈನಲ್ಲಿ ವಿವಾಹವಾಗಿದ್ದ. ಈಕೆ ಮದುವೆ ನಂತರ 2014ರಲ್ಲಿ ಪ್ರವಾಸಿ ವೀಸಾ ಪಡೆದು 3 ತಿಂಗಳು ಭಾರತಕ್ಕೆ ಬಂದು ವಾಪಸ್ಸಾಗಿದ್ದಳು. ಆ ಬಳಿಕ 2015ರಲ್ಲಿ ಅಕ್ರಮವಾಗಿ ಭಾರತ ಪ್ರವೇಶ

ಕರಾವಳಿಯಲ್ಲಿ ಅಕ್ರಮವಾಗಿ ನೆಲೆಸಿದ್ದಳು ಪಾಕಿಸ್ತಾನಿ ಮಹಿಳೆ…! | ಪೊಲೀಸರಿಂದ ತನಿಖೆ ಚುರುಕು Read More »

ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಉಡುಪಿ ಮೂಲದ ಪದ್ದು ಬಂಗೇರ ವಿಧಿವಶ

ಉಡುಪಿ: 80ರ ದಶಕದಲ್ಲಿ ಭಾರತ ಫುಟ್ಬಾಲ್ ತಂಡವನ್ನೂ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ್ದ ಶೇಖರ್ ಪದ್ದು ಬಂಗೇರ (75ವ.) ಇಂದು ಮೃತಪಟ್ಟಿದ್ದಾರೆ. ಜಿಲ್ಲೆಯ ಬಡಾನಿಡಿಯೂರು ಮೂಲದವರಾದ ಅವರಿಗೆ ಕೆಲ ದಿನಗಳ ಹಿಂದೆ ಅವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಭಾರತ ತಂಡದಲ್ಲಿ ಗೋಲ್ಕೀಪರ್ ಹಾಗೂ ನಾಯಕನಾಗಿದ್ದ ಇವರು ದೇಶಕ್ಕೆ ಹಲವಾರು ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಹಾಗೂ ಹಲವಾರು ಪ್ರತಿಷ್ಠಿತ

ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಉಡುಪಿ ಮೂಲದ ಪದ್ದು ಬಂಗೇರ ವಿಧಿವಶ Read More »

ಕರಾವಳಿಯಲ್ಲಿ ಇಂದಿನಿಂದ ಭಾರಿ ಮಳೆ: ರೆಡ್ ಅಲರ್ಟ್ ಘೋಷಣೆ

ಬೆಂಗಳೂರು: ಇಂದಿನಿಂದ ಒಂದು ವಾರಗಳ ಕಾಲ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು ಸಾರ್ವಜನಿಕರು ಎಚ್ಚರದಿಂದಿರುವಂತೆ ಸೂಚಿಸಲಾಗಿದೆ. ಇಂದಿನಿಂದ ಅಂದರೆ ಜೂನ್ 10 ರಿಂದ ಮೂರು ದಿನ ಎಲ್ಲೊ ಅಲರ್ಟ್ ಹಾಗೂ ನಂತರದ ಮೂರು ದಿನಗಳಲ್ಲಿ (13 ರಿಂದ 15) ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಉತ್ತರ ಒಳನಾಡಿನ ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ,

ಕರಾವಳಿಯಲ್ಲಿ ಇಂದಿನಿಂದ ಭಾರಿ ಮಳೆ: ರೆಡ್ ಅಲರ್ಟ್ ಘೋಷಣೆ Read More »

ಜೂ.14ರ ನಂತರವೂ ದಕ್ಷಿಣ ಕನ್ನಡಕ್ಕಿಲ್ಲ ಅನ್ ಲಾಕ್ ಭಾಗ್ಯ…!?

ಮಂಗಳೂರು: ಕೋವಿಡ್ ಎರಡನೆಯ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಂತಹಂತದ ಅನ್ಲಾಕ್ ಗೆ ಸಿದ್ಧತೆ ನಡೆಸುತ್ತಿದ್ದು ದಕ್ಷಿಣ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಮುಂದುವರಿಸುವ ಸಾಧ್ಯತೆ ಎದ್ದು ಕಾಣುತ್ತಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಕೋವಿಡ್ ಪಾಸಿಟಿವ್ ಪ್ರಮಾಣ ನಿಯಂತ್ರಣಕ್ಕೆ ಬರುತ್ತಿದೆ. ಸದ್ಯ ಅಂತಹ ಜಿಲ್ಲೆಗಳಲ್ಲಿ ಹಂತಹಂತವಾಗಿ ನಿರ್ಬಂಧ ತೆರವು ಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇನ್ನು ದಕ್ಷಿಣ ಕನ್ನಡ ಸೇರಿದಂತೆ ಮೈಸೂರು ಶಿವಮೊಗ್ಗ ಹಾಸನ ತುಮಕೂರು ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ

ಜೂ.14ರ ನಂತರವೂ ದಕ್ಷಿಣ ಕನ್ನಡಕ್ಕಿಲ್ಲ ಅನ್ ಲಾಕ್ ಭಾಗ್ಯ…!? Read More »

ಮಂಗಳೂರು: ಕಟೀಲ್ ಸಂದರ್ಶನದ ಆಡಿಯೋ ತಿರುಚಿದ ಪ್ರಕರಣ | ಸಾಮಾಜಿಕ ಕಾರ್ಯಕರ್ತ ಅರೆಸ್ಟ್

ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ಅವರೊಂದಿಗಿನ ಸಂದರ್ಶನ ಒಂದರ ಆಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಆರೋಪ ಅಡಿಯಲ್ಲಿ ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಖಾಸಗಿ ಟಿವಿ ಚಾನೆಲೊಂದು ಸಂದರ್ಶನ ನಡೆಸಿತ್ತು. ಸಂದರ್ಶನದಲ್ಲಿ ವೀಕ್ಷಕರಿಗೆ ಸಂಸದರೊಂದಿಗೆ ಪ್ರಶ್ನೆ ಕೇಳುವ ಅವಕಾಶ ಕಲ್ಪಿಸಲಾಗಿತ್ತು. ಹಾಗೆ ಪ್ರೇಕ್ಷಕರೊಬ್ಬರು ಪ್ರಶ್ನೆ ಕೇಳಿದ ವಿಡಿಯೋ ತುಣುಕೊಂದನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುನಿಲ್

ಮಂಗಳೂರು: ಕಟೀಲ್ ಸಂದರ್ಶನದ ಆಡಿಯೋ ತಿರುಚಿದ ಪ್ರಕರಣ | ಸಾಮಾಜಿಕ ಕಾರ್ಯಕರ್ತ ಅರೆಸ್ಟ್ Read More »

ಸುಳ್ಯ : ಪಿಕಪ್ – ಲಾರಿ ಢಿಕ್ಕಿ : ಓರ್ವ ಮೃತ್ಯು: ನಾಲ್ವರಿಗೆ ಗಾಯ

ಸುಳ್ಯ: ಪಿಕಪ್ ಹಾಗೂ ಕಂಟೈನರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಗಾಯಗೊಂಡ ಘಟನೆ ತಾಲೂಕಿನ ಅಡ್ಕಾರ್ ಸಮೀಪದ ಮಾವಿನಕಟ್ಟೆ ಯಲ್ಲಿ ನಡೆದಿದೆ. ಗಾಯಾಳುಗಳ ಪೈಕಿ ಓರ್ವ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತ ಪಟ್ಟವನನ್ನು ಪೆರಾಜೆಯ ದಿನಕರ ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದ ಸ್ಥಳ ಅಪಾಯಕಾರಿ ಜಾಗವಾಗಿದ್ದು, ಹಿಂದೆ ಇಲ್ಲಿ ಹಲವಾರು ಅಪಘಾತಗಳು ಸಂಭವಿಸಿ ಜೀವಹಾನಿಗಳಾ ಗಿತ್ತು. ಪುತ್ತೂರಿನಿಂದ ಸಂಪಾಜೆಗೆ ತೆರಳುತ್ತಿದ್ದ ಪಿಕಪ್ ಮತ್ತು ಮಡಿಕೇರಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಂಟೈನರ್ ನಡುವೆ ಅಪಘಾತ ಸಂಭವಿಸಿದೆ.

ಸುಳ್ಯ : ಪಿಕಪ್ – ಲಾರಿ ಢಿಕ್ಕಿ : ಓರ್ವ ಮೃತ್ಯು: ನಾಲ್ವರಿಗೆ ಗಾಯ Read More »

ವಿಟ್ಲ: ಬಾಲಕಿಯ ಎದುರು ಪ್ಯಾಂಟ್ ಜಾರಿಸಿದ ಅನ್ಯಕೋಮಿನ ಯುವಕ

ವಿಟ್ಲ: ಯುವಕನೋರ್ವ ಪಕ್ಕದ ಮನೆಯ ಬಾಲಕಿಯ ಎದುರು ಪ್ಯಾಂಟ್ ಜಾರಿಸಿ ಪೊಲೀಸರ ಅತಿಥಿಯಾದ ಘಟನೆ ವಿಟ್ಲದಿಂದ ವರದಿಯಾಗಿದೆ. ವಿಟ್ಲ ಸಮೀಪದ ಬೆದ್ರಕಾಡು ಎಂಬಲ್ಲಿ ಪಕ್ಕದ ಮನೆಯ ಆಡುಗಳು ತಮ್ಮ ಮನೆಯ ಕೃಷಿಯನ್ನು ಹಾಳು ಮಾಡುತ್ತಿದೆ ಎಂದು ಬಾಲಕಿ ಆಡುಗಳ lನ್ನು ಓಡಿಸಿದ್ದಾಳೆ. ಇದಕ್ಕಾಗಿ ಕೋಪಗೊಂಡ ಆಡಿನ ಮಾಲಿಕ ನಜೀರ್ ಎಂಬ ಯುವಕ ಬಾಲಕಿಯ ಎದುರು ತನ್ನ ಪ್ಯಾಂಟ್ ಜಾರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಮತ್ತು ಬಾಲಕಿಯ ಮನೆಯವರನ್ನು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ವಿಟ್ಲ

ವಿಟ್ಲ: ಬಾಲಕಿಯ ಎದುರು ಪ್ಯಾಂಟ್ ಜಾರಿಸಿದ ಅನ್ಯಕೋಮಿನ ಯುವಕ Read More »

ಮಂಗಳೂರು: ಪತ್ನಿಯೊಂದಿಗೆ ತಬಲ ಕಲಾವಿದ ಆತ್ಮಹತ್ಯೆ

ಮಂಗಳೂರು: ಡೆತ್ ನೋಟ್ ಬರೆದಿಟ್ಟು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕದ್ರಿಯಲ್ಲಿ ನಡೆದಿದೆ. ಕದ್ರಿ ಪಿಂಟೋ ಲೇನ್ ನಿವಾಸಿ ಸುರೇಶ್ 55 ಮತ್ತು ಪತ್ನಿ ವಾಣಿಶ್ರೀ ಆತ್ಮಹತ್ಯೆ ಮಾಡಿಕೊಂಡವರು. ಇಂದು ಬೆಳಿಗ್ಗೆ ಸುರೇಶ್ ಅವರ ಮೃತದೇಹ ಮನೆಯ ಪಕ್ಕದ ಬಾವಿಯಲ್ಲಿ ಹಾಗೂ ಪತ್ನಿಯ ಮೃತದೇಹ ಮನೆಯ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಡೆತ್ ನೋಟ್ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.

ಮಂಗಳೂರು: ಪತ್ನಿಯೊಂದಿಗೆ ತಬಲ ಕಲಾವಿದ ಆತ್ಮಹತ್ಯೆ Read More »

ಮಂಗಳೂರು: ಪಾಲಿಕೆ ಕಾರ್ಯಾಚರಣೆ 76 ಸಾವಿರ ದಂಡ 30 ಅಂಗಡಿಗಳ ಲೈಸನ್ಸ್ ಕ್ಯಾನ್ಸಲ್

ಮಂಗಳೂರು: ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಗಾಳಿಗೆ ತೂರಿದ ಸಾರ್ವಜನಿಕರಿಗೆ ಹಾಗೂ ಅಂಗಡಿ ಮಾಲೀಕರಿಗೆ 76 ಸಾವಿರ ರೂ ದಂಡ ವಿಧಿಸಿ, 30 ಅಂಗಡಿಗಳ ಪರವಾನಗಿ ರದ್ದುಗೊಳಿಸಲಾಗಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೋವಿಡ್ ಲಾಕ್ಡೌನ್ ನಿಯಮ ಮುರಿದು ಸಾರ್ವಜನಿಕರು ವ್ಯಾಪಾರ ವಹಿವಾಟಿನಲ್ಲಿ ತೊಡಗಿರುವುದನ್ನು ಗಮನಿಸಿದ ಪಾಲಿಕೆ ಅಧಿಕಾರಿಗಳು ತಂಡತಂಡವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಿಗ್ಗೆ 10 ಗಂಟೆ ಬಳಿಕವೂ ಅಂಗಡಿಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದ ಮಾಲಿಕರಿಂದ ಹಾಗೂ ಅನಗತ್ಯವಾಗಿ ಸಂಚಾರ ನಡೆಸುತ್ತಿದ್ದ ವಾಹನ ಸವಾರರಿಂದ 76

ಮಂಗಳೂರು: ಪಾಲಿಕೆ ಕಾರ್ಯಾಚರಣೆ 76 ಸಾವಿರ ದಂಡ 30 ಅಂಗಡಿಗಳ ಲೈಸನ್ಸ್ ಕ್ಯಾನ್ಸಲ್ Read More »