ಕರಾವಳಿ

ಮಂಗಳೂರು: ಪಾಲಿಕೆ ಹೆಸರಿನಲ್ಲಿ ಅಂಗಡಿಗೆ 50,000 ದಂಡ | ಮಾನವ ಹಕ್ಕು ಕಾರ್ಯಕರ್ತನ ಬಂಧನ | ಮತ್ತಿಬ್ಬರು ಪರಾರಿ

ಮಂಗಳೂರು: ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡು ಕೆಲವು ಅಂಗಡಿಗಳಿಗೆ ತೆರಳಿದ ತಂಡವೊಂದು 50 ಸಾವಿರ ಹಣ ಕೇಳಿ ಸಿಕ್ಕಿ ಬಿದ್ದಿದ್ದು, ಓರ್ವ ಹ್ಯೂಮನ್ ರೈಟ್ಸ್ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತನನ್ನು ದೀಪಕ್ ರಾಜೇಶ್ ಕುವೆಲ್ಲೋ(೪೫) ಎಂದು ಗುರುತಿಸಲಾಗಿದೆ. ಮೂವರು ಯುವಕರ ತಂಡವೊಂದು ಹಂಪನಕಟ್ಟೆಯ ಟೋಕಿಯೋ ಮಾರ್ಕೆಟ್ ಬಿಲ್ಡಿಂಗಿನ ಸಾಗರ್ ಕಲೆಕ್ಷನ್ ಅಂಗಡಿಗೆ ನುಗ್ಗಿ ನಾವು ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ. ಅಲ್ಲದೆ ಲಾಕ್‌ಡೌನ್ ವೇಳೆ ಬಟ್ಟೆ ಅಂಗಡಿ ತೆರೆದು ವ್ಯಾಪಾರ ನಡೆಸಿರುವುದು ಕಾನೂನಿಗೆ ವಿರುದ್ಧವಾಗಿದ್ದು, […]

ಮಂಗಳೂರು: ಪಾಲಿಕೆ ಹೆಸರಿನಲ್ಲಿ ಅಂಗಡಿಗೆ 50,000 ದಂಡ | ಮಾನವ ಹಕ್ಕು ಕಾರ್ಯಕರ್ತನ ಬಂಧನ | ಮತ್ತಿಬ್ಬರು ಪರಾರಿ Read More »

ಮಂಗಳೂರು: ತಂದೆಯಿಂದಲೇ ಇಬ್ಬರು ಪುತ್ರಿಯರ ಮೇಲೆ ನಿರಂತರ ಅತ್ಯಾಚಾರ

ಮಂಗಳೂರು: ಸ್ವತಃ ತಂದೆ ತನ್ನ ಇಬ್ಬರು ಅಪ್ರಾಪ್ತ ಪುತ್ರಿಯರ ಮೇಲೆ ನಿರಂತರವಾಗಿ ಅತ್ಯಾಚಾರಗೈದು ಲೈಂಗಿಕವಾಗಿ ಹಿಂಸೆ ನೀಡುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 17 ಮತ್ತು 18 ವರ್ಷದ ಇಬ್ಬರು ಪುತ್ರಿಯರ ಮೇಲೆ ತಂದೆ ಅತ್ಯಾಚಾರ ನಡೆಸಿದ್ದಾನೆ. ಈತನ ಪತ್ನಿ ಮನೆಯಿಂದ ಹೊರಗೆ ಹೋದ ಕೂಡಲೇ ತನ್ನ ಇಬ್ಬರು ಪುತ್ರಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಇನ್ನೂ ಈ ಕಿರಿಕುಳ ಒಂದೂವರೆ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿತ್ತು ಎನ್ನಲಾಗಿದೆ. ಅದರೆ ಇತ್ತೀಚೆಗೆ ಪುತ್ರಿಯರು ತಾಯಿ ಜೊತೆ

ಮಂಗಳೂರು: ತಂದೆಯಿಂದಲೇ ಇಬ್ಬರು ಪುತ್ರಿಯರ ಮೇಲೆ ನಿರಂತರ ಅತ್ಯಾಚಾರ Read More »

ಮಂಗಳೂರು: 10 ರೂ. ಕೊಟ್ಟು ಹಂತ ಹಂತವಾಗಿ ಲಕ್ಷ ರೂ. ಕಳೆದುಕೊಂಡ ವ್ಯಕ್ತಿ…! | ನೀವು ಈ ರೀತಿ ಮೋಸ ಹೋಗದಿರಿ

ಮಂಗಳೂರು: 10 ರೂ. ಪಾವತಿಸಲು ಹೋಗಿ ವ್ಯಕ್ತಿಯೊಬ್ಬರು ವಂಚನೆಗೊಳಗಾಗಿ ಲಕ್ಷ ರೂ. ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ನಿವಾಸಿಯೊಬ್ಬರಿಗೆ ಕೊರಿಯರ್ ಸಂಸ್ಥೆಯ ಪ್ರತಿನಿಧಿ ಎಂದು ಹೇಳಿ ಕರೆ ಮಾಡಿದ್ದ. ಆತ ತಾನು ಡಿಟಿಡಿಸಿ ಕೊರಿಯರ್ ಸಂಸ್ಥೆ ಪ್ರತಿನಿಧಿ ಎಂದು ಪರಿಚಯಿಸಿಗೊಂಡಿದ್ದ. 9339431456 ದೂರವಾಣಿ ಸಂಖ್ಯೆಯಿoದ ಕರೆ ಮಾಡಿ ತಮ್ಮ ಹೆಸರಿಗೊಂದು ಕೊರಿಯರ್ ಬಂದಿದ್ದು ಅದರಲ್ಲಿ ನಿಮ್ಮ ವಿಳಾಸದ ಪಿನ್ ತಪ್ಪಾಗಿ ನಮೂದಿಸಲಾಗಿದ್ದು ಪಾರ್ಸೆಲ್ ಡೆಲಿವರಿ ಮಾಡಬೇಕಿದ್ದಲ್ಲಿ 10 ರೂ. ಪಾವತಿಸುವಂತೆ ತಿಳಿಸಿದ್ದಾನೆ. ಇದರೊಂದಿಗೆ ಹಣ ಪಾವತಿಸಲು

ಮಂಗಳೂರು: 10 ರೂ. ಕೊಟ್ಟು ಹಂತ ಹಂತವಾಗಿ ಲಕ್ಷ ರೂ. ಕಳೆದುಕೊಂಡ ವ್ಯಕ್ತಿ…! | ನೀವು ಈ ರೀತಿ ಮೋಸ ಹೋಗದಿರಿ Read More »

ಮೀನುಗಾರರ ಬಲೆಗೆ ಬಿತ್ತು ಸಮುದ್ರವಾಸಿ ವಿಷಕಾರಿ ಹಾವು

ಕಾರವಾರ: ಮೀನುಗಾರಿಕೆ ವೇಳೆ ಸಮುದ್ರದಲ್ಲಿ ವಾಸಿಸುವ ವಿಷಕಾರಿ ಹಾವೊಂದು ಮೀನುಗರರ ಬಲೆಗೆ ಬಿದ್ದಿದೆ. ಬಲೆಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಹಾವನ್ನು ರಕ್ಷಿಸಲಾಗಿದೆ. ಇದನ್ನು ‘ಹೈಡ್ರೋಫಿಸ್ ಸ್ಕಿಸ್ಟೋಸಸ್’ ಎಂದು ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. ಕಪ್ಪು ಮತ್ತು ಬಿಳಿ ಬಣ್ಣದ ಪಟ್ಟಿ ಹೊಂದಿರುವ ಹಾವು ನೋಡಲು ವಿಶೇಷವಾಗಿದೆ.‌ ಅಪರೂಪವಾಗಿ ಕಾಣಸಿಗುವ ಈ ಹಾವನ್ನು ನೋಡಿ ಮೀನುಗರಾರು ಮತ್ತು ಸ್ಥಳೀಯರು ಖುಷಿಪಟ್ಟಿದ್ದಾರೆ. ಇದು ಸಮುದ್ರದಲ್ಲಿ ಕ್ಯಾಟ್ ಫಿಶ್‌ಗಳ ಮರಿಗಳನ್ನು ತಿಂದು ಜೀವಿಸುತ್ತದೆ. ಬಹಳ ಶಾಂತ ಸ್ವಭಾವದ ಈ ಹಾವುಗಳು ಕೆಲವೊಮ್ಮೆ ಆಕಸ್ಮಿಕವಾಗಿ ಮೀನುಗಾರರ

ಮೀನುಗಾರರ ಬಲೆಗೆ ಬಿತ್ತು ಸಮುದ್ರವಾಸಿ ವಿಷಕಾರಿ ಹಾವು Read More »

ಬಂಟ್ವಾಳ: ಲಾರಿ ಅಪಘಾತ | ಚಾಲಕ, ಕ್ಲೀನರ್ ಗೆ ಗಾಯ

ಬಂಟ್ವಾಳ: ಲಾರಿಯೊಂದು ಧರೆಗೆ ಡಿಕ್ಕಿ ಹೊಡೆದ ಪರಿಣಾಮಚಾಲಕ ಹಾಗೂ ನಿರ್ವಾಹಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಮುಂಜಾನೆ ಬಂಟ್ವಾಳದಲ್ಲಿ ನಡೆದಿದೆ. ಲಾರಿ ಶಿವಮೊಗ್ಗದಿಂದ ಪುತ್ತೂರಿಗೆ ಅಕ್ಕಿ ಹೇರಿಕೊಂಡು ಕೊಂಡು ಬರುತ್ತಿತ್ತು. ಬಂಟ್ವಾಳದ ಎಸ್ ವಿ‌ಎಸ್ ಶಾಲೆ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಲಾರಿ ರಸ್ತೆ ಬದಿಗೆ ಚಲಿಸಿ ಧರೆಗೆ ಡಿಕ್ಕಿ ಹೊಡೆದಿದೆ. ಲಾರಿ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ ಚಾಲಕ ಹಾಗೂ ನಿರ್ವಾಹಕನಿಗೆ ಗಾಯಗಳಾಗಿದ್ದು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು

ಬಂಟ್ವಾಳ: ಲಾರಿ ಅಪಘಾತ | ಚಾಲಕ, ಕ್ಲೀನರ್ ಗೆ ಗಾಯ Read More »

ಸುಳ್ಯ: ನೇಣು ಬಿಗಿದು ಯುವಕ ಆತ್ಮಹತ್ಯೆ

ಸುಳ್ಯ: ಮನೆಯ ಕೊಟ್ಟಿಗೆಯಲ್ಲಿ ಯುವಕರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತೋಡಿಕಾನದಲ್ಲಿ ನಡೆದಿದೆ. ತೋಡಿಕಾನ ಗ್ರಾಮದ ದೇವರಗುಂಡಿ ಬಳಿಯ ನಿವಾಸಿ ಕೇಪಣ್ಣ ನಾಯ್ಕ್ ರ ಪುತ್ರ ಜಯರಾಮ ನೇಣಿಗೆ ಶರಣಾದವರು. ಅವರಿಗೆ 34 ವರ್ಷ ವಯಸ್ಸಾಗಿತ್ತು. ಅವಿವಾಹಿತರಾಗಿದ್ದ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಸುಳ್ಯ: ನೇಣು ಬಿಗಿದು ಯುವಕ ಆತ್ಮಹತ್ಯೆ Read More »

ಸುಳ್ಯ : ಹಲವು ವರ್ಷದಿಂದ ಕಾಡುತ್ತಿರುವ ನೆಟ್ವರ್ಕ್ ಸಮಸ್ಯೆ | ಕೊಡೆ ಹಿಡಿದು ತಂದೆಯೊಂದಿಗೆ ವಿದ್ಯಾರ್ಥಿನಿ ನೆಟ್ವರ್ಕ್ ಹುಡುಕಾಟ | ಜನಪ್ರತಿನಿಧಿಗಳು ವ್ಯಾಪ್ತಿ ಪ್ರದೇಶದಿಂದ ಹೊರಗೆ

ಸುಳ್ಯ : ನೆಟ್ವರ್ಕ್‌ ಸಮಸ್ಯೆಯಿಂದ ಗುತ್ತಿಗಾರು ಗ್ರಾಮದ ಮೊಗ್ರ, ಬಳ್ಳಕ್ಕ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಮಳೆಯ ನಡುವೆಯೇ ರಸ್ತೆ ಬದಿಗೆ ತಂದೆಯ ಜೊತೆಗೆ ಬಂದು ಕೊಡೆ ಹಿಡಿದು ಆನ್‌ ಲೈನ್‌ ಕ್ಲಾಸ್‌ ಗೆ ಹಾಜರಾಗುತ್ತಿರುವುದು ಹಲವು ದಿನಗಳಿಂದ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆಗೆ ಹಿಡಿದ ಕೈಗನ್ನಡಿ. ಎಸ್‌ ಎಸ್‌ ಎಲ್‌ ಸಿ. ವಿದ್ಯಾರ್ಥಿನಿಯಾಗಿರುವ ಈಕೆ ನೆಟ್ವರ್ಕ್‌ ಇಲ್ಲ, ಸಿಗ್ನಲ್‌ ಇಲ್ಲ ಎಂದು ಕೂತರೆ ಈಡೀ ಭವಿಷ್ಯವೇ ಹಾಳಾಗುತ್ತದೆ ಎಂದು ರಸ್ತೆ ಬದಿ ನೆಟ್ವರ್ಕ್ ಹುಡುಕಿ‌ ಆನ್ ಲೈನ್

ಸುಳ್ಯ : ಹಲವು ವರ್ಷದಿಂದ ಕಾಡುತ್ತಿರುವ ನೆಟ್ವರ್ಕ್ ಸಮಸ್ಯೆ | ಕೊಡೆ ಹಿಡಿದು ತಂದೆಯೊಂದಿಗೆ ವಿದ್ಯಾರ್ಥಿನಿ ನೆಟ್ವರ್ಕ್ ಹುಡುಕಾಟ | ಜನಪ್ರತಿನಿಧಿಗಳು ವ್ಯಾಪ್ತಿ ಪ್ರದೇಶದಿಂದ ಹೊರಗೆ Read More »

ಸುಳ್ಯ: ಕೋವಿಡ್ ಸೋಂಕಿತನಿಂದ ಪಿಡಿಒ ಗೆ ಜೀವ ಬೆದರಿಕೆ, ದೂರು | ಲಕ್ಷ ವ್ಯವಹಾರಕ್ಕೆ ನಷ್ಟವಾಯಿತೆಂದ ಸೋಂಕಿತ

ಸುಳ್ಯ: ಕೋವಿಡ್ ಸೋಂಕಿತನೋರ್ವ ತನ್ನನ್ನು ವಿಚಾರಿಸಲು ಬಂದಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಧಮ್ಕಿ ಹಾಕಿದ್ದು, ಜೀವ ಬೆದರಿಕೆ ಒಡ್ಡಿದ ಘಟನೆ ತಾಲೂಕಿನ ದೇವಚಳ್ಳ ಗ್ರಾಮದಲ್ಲಿ ನಡೆದಿದೆ.ದೇವಚಳ್ಳ ಗ್ರಾ.ಪಂ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಬಹುತೇಕ ಸೊಂಕಿತರನನ್ನು ಪಂಜ ಕೋವಿಡ್ ಸೆಂಟರ್ ಗೆ ಸೇರಿಸಲಾಗಿದೆ. ಕೆಲವರನ್ನು ಹೋಂ ಐಸೋಲೇಶನ್ ನಲ್ಲಿ ಇರಿಸಲಾಗಿದ್ದು, ಈ ಪೈಕಿ ಕಂದ್ರಪ್ಪಾಡಿಯ ಸೋಂಕಿತನೋರ್ವ ಹೋಂ ಐಸೋಲೇಶನ್ ನಿಂದ ಹೊರಗಿದ್ದು, ಊರಿಡೀ ಸುತ್ತಾಡಿಕೊಂಡಿದ್ದ ಬಗ್ಗೆ ಸಾರ್ವಜನಿಕರು ಪಂಚಾಯತ್ ಗೆ ದೂರು ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ

ಸುಳ್ಯ: ಕೋವಿಡ್ ಸೋಂಕಿತನಿಂದ ಪಿಡಿಒ ಗೆ ಜೀವ ಬೆದರಿಕೆ, ದೂರು | ಲಕ್ಷ ವ್ಯವಹಾರಕ್ಕೆ ನಷ್ಟವಾಯಿತೆಂದ ಸೋಂಕಿತ Read More »

ಕಡೆಶಿವಾಲಯ: ಮಳೆಯಬ್ಬರಕ್ಕೆ ಬೃಹತ್ ಮರದ ಜೊತೆ ಧರೆಗುರುಳಿದ ವಿದ್ಯುತ್ ಕಂಬಗಳು

ಬಂಟ್ವಾಳ : ಕರಾವಳಿಯಲ್ಲಿ ಮಳೆಯಬ್ಬರ ಮುಂದುವರಿದಿದೆ. ಬುಧವಾರ ಮಧ್ಯಾಹ್ನ ಸುರಿದ ಭಾರಿ ಗಾಳಿಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡೇಶಿವಾಲಯ ಗ್ರಾಮದ ಸಂಪೋಳಿಯಲ್ಲಿ ಬೃಹತ್‌ ಗಾತ್ರದ ಗೋಳಿ ಮರವೊಂದು ಧರೆಗುರುಳಿದೆ. ಸಂಜೆ 4 ಗಂಟೆಯ ವೇಳೆಗೆ ಬೀಸಿದ ಗಾಳಿಗೆ ಬೃಹತ್‌ ಮರ ರಸ್ತೆಗೆ ಉರುಳಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರ ಉರುಳಿ ಬಿದ್ದ ಪರಿಣಾಮ ಸಮೀಪದಲ್ಲೇ ಇದ್ದ ಐದಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಕೂಡ ಧರೆಗುರುಳಿವೆ. ಇಲ್ಲಿನ ನಾಗೇಶ್‌ ಸಂಪೋಳಿ ಅವರ ಜಮೀನಿನಲ್ಲಿ ಇದ್ದ ಈ ಮರದ ಪಕ್ಕದಲ್ಲೇ

ಕಡೆಶಿವಾಲಯ: ಮಳೆಯಬ್ಬರಕ್ಕೆ ಬೃಹತ್ ಮರದ ಜೊತೆ ಧರೆಗುರುಳಿದ ವಿದ್ಯುತ್ ಕಂಬಗಳು Read More »

ಕಾರ್ಕಳ: ಮೀನು ಹಿಡಿಯಲು ಹೋದ ಬಾಲಕ ನೀರು ಪಾಲು

ಕಾರ್ಕಳ: ಮೀನು ಹಿಡಿಯುಲು ಹೋದ ಬಾಲಕನೊರ್ವ ಆಕಸ್ಮಿಕವಾಗಿ ಮದಗಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಅಜೆಕಾರು ಠಾಣಾ ವ್ಯಾಪ್ತಿಯ ಎಳ್ಳಾರೆ ಎಂಬಲ್ಲಿ ಸಂಭವಿಸಿದೆ. ಎಳ್ಳಾರೆಯ ಸೋಮನಾಥ ಶೇರಿಗಾರ ಎಂಬವರ ಮಗ ಆದಿತ್ಯ (14) ಮೃತಪಟ್ಟ ಬಾಲಕ. ಈತ ತನ್ನ ಗೆಳೆಯರೊಂದಿಗೆ ಮೀನು ಹಿಡಿಯಲೆಂದು ಮನೆಯಿಂದ ಮನೆ ಸಮೀಪದ ಮದಗಕ್ಕೆ ಹೋಗಿದ್ದ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮೀನು ಹಿಡಿಯುತ್ತಿದ್ದಾಗ ಆಯ ತಪ್ಪಿ ನೀರಿಗೆ ಬಿದ್ದಿದ್ದಾನೆ.ಘಟನೆಯ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಮೀನು ಹಿಡಿಯಲು ಹೋದ ಬಾಲಕ ನೀರು ಪಾಲು Read More »