ಕರಾವಳಿ

ಕಾರ್ಕಳ ಎಪಿಎಂಸಿ ಅಧ್ಯಕ್ಷ ಕೊರೊನಾಗೆ ಬಲಿ

ಕಾರ್ಕಳ: ಕಾರ್ಕಳದ ಎಪಿಎಂಸಿ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ (65) ಅವರು ಕೋವಿಡ್ ಗೆ ಬಲಿಯಾಗಿದ್ದಾರೆ. ಬೆಳ್ಮಣ್ಣ್ ಶಾಲೆ ಬಳಿಯ ನಿವಾಸಿ ಯಾಗಿದ್ದ ಇವರಿಗೆ ಕೆಲ ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಬಂದಿತ್ತು. ಆ ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಇ ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೆಳ್ಮಣ್ ರೋಟರಿ ಕ್ಲಬ್ ನ ಕ್ರಿಯಾಶೀಲ ಸದಸ್ಯರಾಗಿದ್ದ ಇವರು, ನಂದಳಿಕೆ ಬೋರ್ಡ್ ಶಾಲೆ, ಬೆಳ್ಮಣ್ ಸರಕಾರಿ ಪ್ರೌಢಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಪ್ರಸ್ತುತ […]

ಕಾರ್ಕಳ ಎಪಿಎಂಸಿ ಅಧ್ಯಕ್ಷ ಕೊರೊನಾಗೆ ಬಲಿ Read More »

ದಕ ಜಿಲ್ಲೆಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಮದ್ಯಾಹ್ನ 2 ರವರೆಗೆ ಓಪನ್: ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು: ಜಿಲ್ಲೆಯಲ್ಲಿ ನಾಳೆಯಿಂದ ಎಲ್ಲಾ ಅಂಗಡಿ ಮುಂಗಟ್ಟುಗಳಿಗೆ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಜಿಲ್ಲೆಯ ಅಂಗಡಿ ಮಾಲಕರು ವ್ಯವಹಾರ ಇಲ್ಲದೆ ಭಾರಿ ನಷ್ಟ ಅನುಭವಿಸುತ್ತಿದ್ದು, ಅಂಗಡಿ ತೆರೆಯಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ನಾಳೆಯಿಂದ ಜಿಲ್ಲೆಯ ಎಲ್ಲ ಅಂಗಡಿಗಳು ಬೆಳಿಗ್ಗೆ ಆರರಿಂದ ಮಧ್ಯಾಹ್ನ ಎರಡು

ದಕ ಜಿಲ್ಲೆಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಮದ್ಯಾಹ್ನ 2 ರವರೆಗೆ ಓಪನ್: ಕೋಟ ಶ್ರೀನಿವಾಸ ಪೂಜಾರಿ Read More »

ಸಾಂಕ್ರಾಮಿಕ ರೋಗಗಳ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ: ದ.ಕ ಡಿಸಿ ರಾಜೇಂದ್ರ

ಮಂಗಳೂರು : ಜಿಲ್ಲೆಯಲ್ಲಿ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ, ಸೇರಿದಂತೆ ಮತ್ತಿತರ ರೋಗಗಳ ನಿಯಂತ್ರಣ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ. ವಿ ಸೂಚನೆ ನೀಡಿದ್ದಾರೆ. ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಮಲೇರಿಯಾ, ಡೆಂಗ್ಯೂ ನಿಯಂತ್ರಣದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭಗೊಂಡಿದ್ದು, ಮಳೆ ನೀರು ಎಲ್ಲೆಂದರಲ್ಲಿ ನಿಂತು ಅದರಲ್ಲಿ ಸೊಳ್ಳೆ ಉತ್ಪತ್ತಿ ಹೆಚ್ಚಾಗಿ ಮಲೇರಿಯಾ, ಡೆಂಗ್ಯೂ, ಚಿಕುಂಗುನ್ಯಾ ಸೇರಿದಂತೆ ಮತ್ತಿತರ ರೋಗಗಳು

ಸಾಂಕ್ರಾಮಿಕ ರೋಗಗಳ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ: ದ.ಕ ಡಿಸಿ ರಾಜೇಂದ್ರ Read More »

ಮಂಗಳೂರು: ಟಿಪ್ಪರ್ ಸಹಿತ ಸಮುದ್ರ ಪಾಲಾದವರ ಶವಗಳು ಹೊರಕ್ಕೆ

ಮಂಗಳೂರು: ಪಣಂಬೂರು ಎನ್‌ಎಂಪಿಟಿ ಬಂದರಿನಲ್ಲಿ ಹಡಗಿನಿಂದ ಅದಿರು ಹೊತ್ತೊಯ್ಯಲು ಬಂದಿದ್ದ ಟಿಪ್ಪರ್ ಸಹಿತ ಚಾಲಕ ಮತ್ತು ನಿರ್ವಹಾಕ ಸಮುದ್ರಪಾಲದ ಘಟನೆಯಲ್ಲಿ ಚಾಲಕನ ಶವ ನಿನ್ನೆ ರಾತ್ರಿ ಪತ್ತೆಯಾದರೆ ನಿರ್ವಾಹಕನ ಶವ ಇಂದು ಸಂಜೆ ಪತ್ತೆಯಾಗಿದೆ. ಡೆಲ್ಟಾ ಕಂಪನಿಗೆ ಸೇರಿದ ಟ್ರಕ್ ಜೂ.20 ರ ರಾತ್ರಿ 10:30 ರ ಸುಮಾರಿಗೆ ಹಡಗಿನಿಂದ ಕಬ್ಬಿಣದ ಅದಿರು ಅನ್ಲೋಡ್ ಮಾಡಿ ತುಂಬಿಸಿಕೊಳ್ಳಲು 14ನೇ ಬರ್ತ್ ಗೆ ಬಂದಿತ್ತು. ಆದರೆ ಖಾಲಿಯಿದ್ದ ಟ್ರಕ್ ಅಕಸ್ಮಾತ್ ಸಮುದ್ರಕ್ಕೆ ಬಿದ್ದು ಮುಳುಗಿದ್ದು ಅದರಲ್ಲಿದ್ದ ಚಾಲಕ ಮತ್ತು

ಮಂಗಳೂರು: ಟಿಪ್ಪರ್ ಸಹಿತ ಸಮುದ್ರ ಪಾಲಾದವರ ಶವಗಳು ಹೊರಕ್ಕೆ Read More »

ಕುಂದಾಪುರ: ವಿವಾಹಿತನೊಂದಿಗೆ ಯುವತಿ ಪರಾರಿ

ಕುಂದಾಪುರ: ವಿವಾಹಿತನೊಂದಿಗೆ ಯುವತಿಯೋರ್ವಳು ಪರಾರಿಯಾದ ಘಟನೆ ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ. ಆಲೂರು ಗ್ರಾಮದ ಹಳ್ಳಿ ಹೆಬ್ಬಾಗಿಲು ನಿವಾಸಿ ಚಂದ್ರ (೪೨) ಹಾಗೂ ನೆರೆಮನೆಯಲ್ಲಿ ವಾಸಿಸುತ್ತಿದ್ದ ವನಜಾ (೨೯) ಎಂಬವರು ಒಂದ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಜೂನ್ ೭ರಂದು ಚಂದ್ರ ಪೇಟೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆ ಬಿಟ್ಟು ನಾಪತ್ತೆಯಾಗಿದ್ದಾರೆ. ಅದೇ ದಿನ ವನಜಾ ಕೂಡಾ ಪೇಟೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದು, ಇಬ್ಬರೂ ಕೂಡಾ ಇಲ್ಲಿಯವರೆಗೆ ಮನೆಗೆ ವಾಪಾಸ್ಸಾಗದೇ ನಾಪಾತ್ತೆಯಾಗಿದ್ದಾರೆ ಎಂದು

ಕುಂದಾಪುರ: ವಿವಾಹಿತನೊಂದಿಗೆ ಯುವತಿ ಪರಾರಿ Read More »

ಮಗನ ಕೇಶ ಅರ್ಪಿಸಿ ಕೊಲ್ಲೂರು ದೇವಿಯ ಹರಕೆ ತೀರಿಸಿದ ರಿಷಬ್ ಶೆಟ್ಟಿ

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯವರು ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ಮಗನ ತಲೆ ಕೂದಲು ತೆಗೆಸಿ ಹರಕೆಯನ್ನು ತೀರಿಸಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರಾದ ರಿಷಬ್ ಶೆಟ್ಟಿಯವರು, ಪತ್ನಿ ಪ್ರಗತಿ ಹಾಗೂ ಮಗ ರನ್ವಿತ್ ಸಮೇತ ಕೊಲ್ಲೂರಿಗೆ ಭೇಟಿ ನೀಡಿ ದೇವಿ ದರ್ಶನ ಪಡೆದುಕೊಂಡಿದ್ದಾರೆ. ಅನ್‌ಲಾಕ್ ಆರಂಭವಾದ ಮೊದಲ ದಿನವೇ ದೇವಾಲಯಕ್ಕೆ ಭೇಟಿ ನೀಡಿದ ರಿಷಭ್ ಶೆಟ್ಟಿ ಅವರು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ರಿಷಬ್ ಶೆಟ್ಟಿ ಫಿಲ್ಮ್ಸ್

ಮಗನ ಕೇಶ ಅರ್ಪಿಸಿ ಕೊಲ್ಲೂರು ದೇವಿಯ ಹರಕೆ ತೀರಿಸಿದ ರಿಷಬ್ ಶೆಟ್ಟಿ Read More »

ಸೋಮೇಶ್ವರ: ಕೋವಿಡ್ ನಿಂದ ಮೃತಪಟ್ಟ 12 ಜನ ಅನಾಥರ ಪಿಂಡಪ್ರದಾನ ಮಾಡಿದ ಜಿಲ್ಲಾಡಳಿತ

ಸೋಮೇಶ್ವರ: ಕೋವಿಡ್ ನಿಂದ ಮೃತಪಟ್ಟ 12 ಜನ ಅನಾಥರ ಮೋಕ್ಷಕ್ಕೆ ದ.ಕ. ಜಿಲ್ಲಾಡಳಿತದ ವತಿಯಿಂದ ತಿಲಹೋಮ ಮತ್ತು ಪಿಂಡ ಪ್ರದಾನ ಕಾರ್ಯಕ್ರಮ ಸೋಮೇಶ್ವರದ ಸೋಮನಾಥೇಶ್ವರ ದೇವಾಲಯದಲ್ಲಿ ನಡೆಯಿತು. ಸ್ಥಳೀಯ ಅರ್ಚಕರಾದ ಶಂಕರ್ ಅಡಿಗ ಅವರ ಮಾರ್ಗದರ್ಶನದಲ್ಲಿ ಮೃತರ ಪರವಾಗಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ರವಿಶಂಕರ್ ಸೋಮೇಶ್ವರ ವಿಧಿವಿಧಾನಗಳನ್ನು ನೆರವೇರಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಸೋಮೇಶ್ವರ ಸಮುದ್ರಕಿನಾರೆಯಲ್ಲಿ ಪಿಂಡಪ್ರದಾನ ಮಾಡಿದರು. ದ ಕ ಜಿಲ್ಲಾಸ್ಪತ್ರೆಯಲ್ಲಿ 12 ಜನ ಅನಾಥರು ಕೊರೋನಾಗೆ ತುತ್ತಾಗಿ ಸಾವನ್ನಪ್ಪಿದ್ದರು. ಅವರೆಲ್ಲರ ಅಂತ್ಯಸಂಸ್ಕಾರ

ಸೋಮೇಶ್ವರ: ಕೋವಿಡ್ ನಿಂದ ಮೃತಪಟ್ಟ 12 ಜನ ಅನಾಥರ ಪಿಂಡಪ್ರದಾನ ಮಾಡಿದ ಜಿಲ್ಲಾಡಳಿತ Read More »

ಮಂಗಳೂರು ಬಂದರಿನಲ್ಲಿ ನೀರಿಗೆ ಬಿದ್ದ ಲಾರಿ |ಚಾಲಕರಿಬ್ಬರು ಸಾವು ಶಂಕೆ

ಮಂಗಳೂರು: ನವಮಂಗಳೂರು ಬಂದರಿನಲ್ಲಿ ನಿನ್ನೆ ರಾತ್ರಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಇಳಿದಿದ್ದು ಚಾಲಕರಿಬ್ಬರು ಲಾರಿ ಸಹಿತ ಕಣ್ಮರೆಯಾಗಿದ್ದಾರೆ. ಎನ್ಎಂಪಿಟಿ ಯ 14ನೇ ಬರ್ತ್ ನಲ್ಲಿ ನಿನ್ನೆ ಮಧ್ಯರಾತ್ರಿ ಘಟನೆ ಸಂಭವಿಸಿದೆ. ಕಣ್ಮರೆಯಾದ ವರನ್ನು ಚಾಲಕ ರಾಜೇಶಾಬ್ (25) ಮತ್ತು ಬದಲಿ ಚಾಲಕ ಮಾಲಕಪ್ಪ (35) ಎಂದು ಗುರುತಿಸಲಾಗಿದೆ. ಇಬ್ಬರೂ ಚಾಲಕರು ಸಾವವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಲಾರಿಗೆ ಹಡಗಿನಿಂದ ಸರಕು ತುಂಬಿಸಲು ತರುತ್ತಿದ್ದಾಗ ಆಕಸ್ಮಿಕವಾಗಿ ಲಾರಿ ನೀರಿಗೆ ಬಿದ್ದಿದೆ. ಸ್ಥಳದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಮಂಗಳೂರು ಬಂದರಿನಲ್ಲಿ ನೀರಿಗೆ ಬಿದ್ದ ಲಾರಿ |ಚಾಲಕರಿಬ್ಬರು ಸಾವು ಶಂಕೆ Read More »

ಉಪ್ಪಿನಂಗಡಿ : ಆಕಸ್ಮಿಕವಾಗಿ ವಿಷ ತಿಂದು 2 ವರ್ಷದ ಮಗು ಸಾವು

ಉಪ್ಪಿನಂಗಡಿ : ಆಕಸ್ಮಿಕವಾಗಿ ವಿಷ ತಿಂದು 2 ವರ್ಷದ ಮಗು ಸಾವು ಉಪ್ಪಿನಂಗಡಿ : ಇಲಿ ವಿಷ ತಿಂದು 2ವರ್ಷದ ಮಗು ಮೃತಪಟ್ಟಿರುವ ಘಟನೆ ನೆಲ್ಯಾಡಿಯ ಬಜತ್ತೂರಿನಲ್ಲಿ ನಡೆದಿದೆ. ಬಜತ್ತೂರಿನ ಕೆಮ್ಮಾರದ ನಿವೃತ್ತ ಸೈನಿಕ ಸೈಜು ಎಂಬವರು ಪುತ್ರಿ ಶ್ರೇಯಾ (2) ಮೃತಪಟ್ಟ ಮಗು. ಶ್ರೇಯಾ ತಂದೆ-ತಾಯಿ ಮನೆಯಲ್ಲಿ ಹಳೇ ವಸ್ತುಗಳನ್ನು ಕ್ಲೀನ್ ಮಾಡುತ್ತಿದ್ದರು. ಪಕ್ಕದಲ್ಲೇ ಇದ್ದ ಶ್ರೇಯಾ ಇಲಿ ವಿಷ ತೆಗೆದು ತಿಂದಿದ್ದಾಳೆ. ಇದು ಪೋಷಕರ ಗಮನಕ್ಕೆ ಬರುವುದು ಕೊಂಚ ತಡವಾಗಿದ್ದು, ಮಗು ವಿಷ ತಿಂದಿರುವುದನ್ನು ತಿಳಿದ ತಕ್ಷಣ

ಉಪ್ಪಿನಂಗಡಿ : ಆಕಸ್ಮಿಕವಾಗಿ ವಿಷ ತಿಂದು 2 ವರ್ಷದ ಮಗು ಸಾವು Read More »

ಮಂಗಳಾದೇವಿ ದೇವಸ್ಥಾನದಲ್ಲಿ ಅದ್ದೂರಿ ಮದುವೆ | ಪ್ರಕರಣ ದಾಖಲು

ಮಂಗಳೂರು: ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಅದ್ದೂರಿ ಮದುವೆ ಏರ್ಪಡಿಸಲಾಗಿತ್ತು. ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಸ್ವಲ್ಪಮಟ್ಟಿಗೆ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆಯಾದರೂ ಅದ್ದೂರಿ ಮದುವೆ ಇನ್ನಿತರ ಸಮಾರಂಭಗಳಿಗೆ ಅವಕಾಶವಿಲ್ಲ. ಮನೆಯಲ್ಲಿ ಮದುವೆಗೆ ಅವಕಾಶವಿದ್ದು ನಿಗದಿತ ಜನ ಸೇರಿಸಬಹುದಾಗಿದೆ. ದೇವಸ್ಥಾನದಲ್ಲಿ ನಡೆದ ಮದುವೆಯಲ್ಲಿ ನಿಯಮ ಮೀರಿ ಜನ ಸೇರಿಸಲಾಗಿದೆ. ಪಾಲಿಕೆಯ ನಾಮನಿರ್ದೇಶಿತ ಸದಸ್ಯರೊಬ್ಬರ ಮಗಳು ಸೇರಿದಂತೆ ಐದಾರು ಜೋಡಿ ಮದುವೆ ನಡೆಯುತ್ತಿತ್ತು. ಸುಮಾರು 40ಕ್ಕೂ ಹೆಚ್ಚು ವಾಹನಗಳಲ್ಲಿ

ಮಂಗಳಾದೇವಿ ದೇವಸ್ಥಾನದಲ್ಲಿ ಅದ್ದೂರಿ ಮದುವೆ | ಪ್ರಕರಣ ದಾಖಲು Read More »