ಕರಾವಳಿ

ಕಡಬ: ಕಾರುಗಳ ನಡುವೆ ಅಪಘಾತ | ಇಬ್ಬರು ಗಂಭೀರ

ಕಡಬ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ-ಸುಬ್ರಮಣ್ಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಗೋಳಿತ್ತಡಿ ಕುಂಡಾಜೆ ಎಂಬಲ್ಲಿ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಕಾರುಗಳೆರಡು ಜಖಂಗೊಂಡಿದೆ. ಗಾಯಗೊಂಡವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಡಬ: ಕಾರುಗಳ ನಡುವೆ ಅಪಘಾತ | ಇಬ್ಬರು ಗಂಭೀರ Read More »

ಮನೆ ಗೋಡೆ ಕುಸಿದು ಓರ್ವ ಸಾವು | ಇನ್ನೋರ್ವ ಗಂಭೀರ

ಕಾರವಾರ: ಮನೆ ದುರಸ್ತಿ ವೇಳೆ ಗೋಡೆ ಕುಸಿದು ಕಾರ್ಮಿಕ ಸಾವನ್ನಪ್ಪಿದ್ದು, ಇನ್ನೋರ್ವ ಕಾರ್ಮಿಕನ ಸ್ಥಿತಿ ಗಂಭೀರವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸದಾಶಿವಘಡದ ವೈಶ್ಯವಾಡದಲ್ಲಿ ನಡೆದಿದೆ. ಹುಚ್ಚಪ್ಪ (35) ಸ್ಥಳದಲ್ಲೇ ಸಾವು ಕಂಡ ಕಾರ್ಮಿಕನಾಗಿದ್ದು, ಗೋಡೆಯ ಅಡಿಯಲ್ಲಿ ಸಿಲುಕಿಕೊಂಡಿದ್ದ ಇನ್ನೋರ್ವ ಕಾರ್ಮಿಕನನ್ನು ಅಗ್ನಿಶಾಮ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಇಂದು ಸದಾಶಿವಘಡದ ತುಳಸಿ ಬಾಯಿ ಅವರ ಮನೆಯ ದುರಸ್ತಿ ಕಾರ್ಯ ಮಾಡಲು ಕಾರ್ಮಿಕರು ತೆರಳಿದ್ದರು. ಈ ವೇಳೆ ಗೋಡೆ ಕೆಡವುವಾಗ ಘಟನೆ ನಡೆದಿದೆ. ಈ

ಮನೆ ಗೋಡೆ ಕುಸಿದು ಓರ್ವ ಸಾವು | ಇನ್ನೋರ್ವ ಗಂಭೀರ Read More »

ದಕ ದಲ್ಲಿ ವೀಕೆಂಡ್ ಕರ್ಫ್ಯೂ ಆನ್ | ಜಿಲ್ಲೆಯಲ್ಲಿ ಹೇಗಿದೆ ಕೋವಿಡ್ ಪರಿಸ್ಥಿತಿ | ಜಿಲ್ಲಾಧಿಕಾರಿ ನೀಡಿದ ಮಾಹಿತಿಯ ವಿಡಿಯೋ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲ್ಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಇನ್ನು ಈ ಅವಧಿಯಲ್ಲಿ ಹಾಲು, ಪತ್ರಿಕೆ, ಮೆಡಿಕಲ್ ಹಾಗೂ ತುರ್ತು ಸೇವೆಗಳಿಗಷ್ಟೇ ಅವಕಾಶವಿದೆ. ವೀಕೆಂಡ್ ಕರ್ಫ್ಯೂವಿನಲ್ಲಿ ದಿನಸಿ ಅಂಗಡಿ, ಮದ್ಯದಂಗಡಿ ಸೇರಿದಂತೆ ಎಲ್ಲಾ ಅಂಗಡಿಗಳು ಬಂದ್ ಆಗಲಿದ್ದು, ತುರ್ತು ಸೇವೆಗಳಿಗೆ ಮಾತ್ರ ಅವಕಾಶವಿರಲಿದೆ.ಎಲ್ಲಾ ರಾಜ್ಯ ಮತ್ತು ಕೇಂದ್ರ ಸರಕಾರದ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ತುರ್ತು ಅಗತ್ಯ ಸೇವೆಗಳು ಮತ್ತು ಕೋವಿಡ್

ದಕ ದಲ್ಲಿ ವೀಕೆಂಡ್ ಕರ್ಫ್ಯೂ ಆನ್ | ಜಿಲ್ಲೆಯಲ್ಲಿ ಹೇಗಿದೆ ಕೋವಿಡ್ ಪರಿಸ್ಥಿತಿ | ಜಿಲ್ಲಾಧಿಕಾರಿ ನೀಡಿದ ಮಾಹಿತಿಯ ವಿಡಿಯೋ Read More »

ಉಡುಪಿ : ಚೆಕ್ ದುರ್ಬಳಕೆ | 10 ಲಕ್ಷ ರೂ. ವಂಚನೆ

ಉಡುಪಿ: ಪ್ರೋವಿಶನ್ ಸ್ಟೋರ್ಸ್ ಮಾಲೀಕರ ಸ್ಕೂಟರ್‌ನಲ್ಲಿದ್ದ ಬ್ಯಾಗ್ ಕದ್ದು ಅದರಲ್ಲಿದ್ದ ಚೆಕ್‌ಗಳನ್ನು ದುರ್ಬಳಕೆ ಮಾಡಿ ೧೦ ಲಕ್ಷ ರೂ. ವಂಚಿಸಿದ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬ್ರಹ್ಮಾವರ ದೂಪದಕಟ್ಟೆ ನಿವಾಸಿ ಗೋಪಾಲ ಅಮೀನ್ (55) ಎಂದು ಗುರುತಿಸಲಾಗಿದೆ. ಈತ 2019ರ ಜುಲೈ 13ರಂದು ಕರಾವಳಿ ಬೈಪಾಸ್‌ನ ಬಳಿ ಸಂತೆಕಟ್ಟೆಯಲ್ಲಿರುವ ದಶಮಿ ಪ್ರೋವಿಶನ್ ಸ್ಟೋರ್ಸ್ ಮಾಲೀಕರಾದ ಉಡುಪಿಯ ತೋನ್ಸೆ ಗ್ರಾಮದ ನಿವಾಸಿ ಉದಯ ಕುಮಾರ ಎಂಬವರ ಸ್ಕೂಟರ್‌ನ ಬ್ಯಾಗ್‌ನಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಲ್ಯಾಣಪುರ ಶಾಖೆಯ

ಉಡುಪಿ : ಚೆಕ್ ದುರ್ಬಳಕೆ | 10 ಲಕ್ಷ ರೂ. ವಂಚನೆ Read More »

ಮಂಗಳೂರು : ಸಮುದ್ರಕ್ಕೆ ಹಾರಿ ಇಂಜಿನಿಯರಿಂಗ್ ಪದವೀಧರ ಯುವಕ ಆತ್ಮಹತ್ಯೆ

ಉಳ್ಳಾಲ: ಸೋಮೇಶ್ವರ ಕಡಲ ಕಿನಾರೆಯ ರುದ್ರಪಾದೆಯಿಂದ ಹಾರಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದ ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸೋಮೇಶ್ವರ ಪುರಸಭಾ ಕಚೇರಿ ಬಳಿಯ ನಿವಾಸಿ ಪವನ್ ಭಟ್ (೩೦) ಆತ್ಮಹತ್ಯೆಗೈದ ಯುವಕ. ಗಣೇಶ್ ಪ್ರಸನ್ನ ಮತ್ತು ರಾಜೇಶ್ವರಿ ದಂಪತಿಯ ಹಿರಿಯ ಮಗನಾದ ಪವನ್ ಮೈಸೂರಲ್ಲಿ ಇಂಜಿನಿಯರಿಂಗ್ ಮುಗಿಸಿದ್ದ ಎನ್ನಲಾಗಿದೆ. ಮೈಸೂರಿನಿಂದ ಬಂದ ಬಳಿಕ ನಿತ್ಯವೂ ಸೋಮೇಶ್ವರ ದೇವಸ್ಥಾನಕ್ಕೆ ಪವನ್ ಬಂದು ಹೋಗುತ್ತಿದ್ದರೆನ್ನಲಾಗಿದೆ. ಇಂದು ಸಂಜೆ 4:30ರ ಹೊತ್ತಿಗೆ ಸಮುದ್ರ ಕಿನಾರೆಗೆ ಬಂದಿದ್ದ ಪವನ್, ರುದ್ರಪಾದೆಯ ಮೇಲಿಂದ

ಮಂಗಳೂರು : ಸಮುದ್ರಕ್ಕೆ ಹಾರಿ ಇಂಜಿನಿಯರಿಂಗ್ ಪದವೀಧರ ಯುವಕ ಆತ್ಮಹತ್ಯೆ Read More »

ದ. ಕ : ಜೂನ್ ಅಂತ್ಯದವರೆಗೂ ಖಾಸಗಿ ಬಸ್ ಗಳು ರಸ್ತೆಗಿಳಿಯಲ್ಲ : ದಿಲ್ ರಾಜ್ ಆಳ್ವ ಸ್ಪಷ್ಟನೆ

ಮಂಗಳೂರು: ಜಿಲ್ಲೆಯಲ್ಲಿ ಬುಧವಾರದಿಂದ ಬೆಳಗ್ಗೆ 7ರಿಂದ ಮಧ್ಯಾಹ್ನ 1 ರವರೆಗೆ ಬಸ್ ಸಂಚಾರಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದರೂ, ಖಾಸಗಿ ಬಸ್‌ಗಳು ರಸ್ತೆಗಿಳಿಯವುದಿಲ್ಲ ಎಂದು ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ. ಬಸ್‌ಗಳು ಸ್ಥಗಿತಗೊಂಡು ಎರಡು ತಿಂಗಳು ಕಳೆದಿದೆ. ತಾಂತ್ರಿಕ ಕಾರಣದಿಂದ ಏಕಾಏಕಿ ಬಸ್‌ಗಳನ್ನು ರಸ್ತೆಗಿಳಿಸಲು ಸಾಧ್ಯವಿಲ್ಲ. ಜೂನ್‌ನಲ್ಲಿ ಮುಂದಿನ ಒಂದು ವಾರದ ಅವಧಿಗೆ ಇಡೀ ತಿಂಗಳ ತೆರಿಗೆ ಪಾವತಿ ಸಾಧ್ಯವಿಲ್ಲ. ಶೇ. 50ರಷ್ಟು ಪ್ರಯಾಣಿಕರಿಗೆ ನಾವು ಪೂರ್ತಿ ತೆರಿಗೆ ಪಾವತಿಸಬೇಕು. ಅದು ಕಷ್ಟದ

ದ. ಕ : ಜೂನ್ ಅಂತ್ಯದವರೆಗೂ ಖಾಸಗಿ ಬಸ್ ಗಳು ರಸ್ತೆಗಿಳಿಯಲ್ಲ : ದಿಲ್ ರಾಜ್ ಆಳ್ವ ಸ್ಪಷ್ಟನೆ Read More »

ಗಳಿಗೆಗೊಂದು ರೂಲ್ಸ್, ಜನರು ಫುಲ್ ಕನ್’ಫ್ಯೂಸ್: ಪ್ರಭಾವಿಗಳ ಒತ್ತಡಕ್ಕೆ ಮಣಿಯಿತಾ ದ.ಕ ಜಿಲ್ಲಾಡಳಿತ?

ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೋವಿಡ್ ಅಬ್ಬರ ಕೊಂಚ ಸಂಪೂರ್ಣ ಕಡಿಮೆಯಾಗದೇ ಲಾಕ್ ಡೌನ್ ವಿನಾಯಿತಿ ನೀಡುವುದಿಲ್ಲ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಜಿಲ್ಲಾಧಿಕಾರಿ ರಾಜೇಂದ್ರ ಅವರು ಎರಡೇ ದಿನದಲ್ಲಿ ಎರಡೆರಡು ಬಾರಿ ಮಾರ್ಗಸೂಚಿ ಬದಲಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗಳಿಗೆಗೊಂದು ಆದೇಶ ಹೊರತರುತ್ತಿರುವ ಜಿಲ್ಲಾಡಳಿತದ ಕ್ರಮದಿಂದಾಗಿ ಪ್ರಭಾವಿಗಳ ಒತ್ತಡಕ್ಕೆ ಡಿಸಿ ಮತ್ತು ಸಚಿವರು ಮಣಿಯುತ್ತಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಜೂ.21 ರಂದು ಅಗತ್ಯವಸ್ತುಗಳ ಖರೀದಿಗೆ ಡಿಸಿ ಮಧ್ಯಾಹ್ನ 1 ಗಂಟೆವರೆಗೆ ಸಮಯ ವಿಸ್ತರಿಸಿ ಆದೇಶಿಸಿದ್ದರು‌.

ಗಳಿಗೆಗೊಂದು ರೂಲ್ಸ್, ಜನರು ಫುಲ್ ಕನ್’ಫ್ಯೂಸ್: ಪ್ರಭಾವಿಗಳ ಒತ್ತಡಕ್ಕೆ ಮಣಿಯಿತಾ ದ.ಕ ಜಿಲ್ಲಾಡಳಿತ? Read More »

ದ.ಕ. ಜಿಲ್ಲಾಡಳಿತದಿಂದ ಹೊಸ ಮಾರ್ಗಸೂಚಿ ಪ್ರಕಟ | ಬಸ್ ಸಂಚಾರಕ್ಕೆ ಅನುಮತಿ | 18 ವರ್ಷಕ್ಕಿಂತ ಕೆಳಗಿನ ಮಕ್ಕಳು ಹೊರ ಬರುವಂತಿಲ್ಲ

ಮಂಗಳೂರು: ದ.ಕ. ಜಿಲ್ಲಾಡಳಿತವು ಹೊಸ ಕೋವಿಡ್ ಮಾರ್ಗಸೂಚಿ ಪ್ರಕಟಿಸಿದ್ದು ಜಿಲ್ಲೆಯಲ್ಲಿ ನಾಳೆಯಿಂದ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ನಾಳೆಯಿಂದ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಉಸ್ತುವಾರಿ ಸಚಿವರು ಇಂದು ಬೆಳಿಗ್ಗೆ ತಿಳಿಸಿದ್ದರುರು. ಇದೀಗ ಜಿಲ್ಲಾಧಿಕಾರಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಜಿಲ್ಲೆಯಲ್ಲಿ ನಾಳೆಯಿಂದ ಶುಕ್ರವಾರದವರೆಗೆ ಖಾಸಗಿ ಮತ್ತು ಸರ್ಕಾರಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶೇಕಡಾ 50ಕ್ಕಿಂತ ಹೆಚ್ಚು ಜನರನ್ನು ಬಸ್ಸಿಗೆ ಹತ್ತಿಸುವಂತಿಲ್ಲ. ಶುಕ್ರವಾರ ಸಂಜೆ ಏಳರಿಂದ ಸೋಮವಾರ ಬೆಳಿಗ್ಗೆ 7:00 ವರೆಗೆ ವಾರಂತ್ಯ

ದ.ಕ. ಜಿಲ್ಲಾಡಳಿತದಿಂದ ಹೊಸ ಮಾರ್ಗಸೂಚಿ ಪ್ರಕಟ | ಬಸ್ ಸಂಚಾರಕ್ಕೆ ಅನುಮತಿ | 18 ವರ್ಷಕ್ಕಿಂತ ಕೆಳಗಿನ ಮಕ್ಕಳು ಹೊರ ಬರುವಂತಿಲ್ಲ Read More »

ಮಂಗಳೂರಿನ ವ್ಯಕ್ತಿಗೆ ಫೇಸ್ಬುಕ್ ಗೆಳೆಯನಿಂದ 1.15 ಲಕ್ಷ ರೂ. ಪಂಗನಾಮ

ಮಂಗಳೂರು: ವಿದ್ಯಾವಂತರೇ ದಿನೇದಿನೇ ಆನ್ಲೈನ್ ವಂಚನೆಗೊಳಗಾಗುತ್ತಿರುವ ಘಟನೆಗಳು ನಮ್ಮೂರಲ್ಲಿ ನಡೆಯುತ್ತಿದ್ದರು ವಂಚನೆಗೊಳಗಾದವರು ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಇದೀಗ ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಅವರ ಫೇಸ್ಬುಕ್ ಗೆಳೆಯನೊಬ್ಬ 1.5 ಲಕ್ಷ ರೂ ಪಂಗನಾಮ ಹಾಕಿದ ಘಟನೆ ನಡೆದಿದೆ. ಮಂಗಳೂರಿನ ವ್ಯಕ್ತಿಯೊಬ್ಬರಿಗೆ ನೆಲ್ಸನ್ ಮಾರ್ಕ್ ಎಂಬಾತ ಫೇಸ್ಬುಕ್ನಲ್ಲಿ ಪರಿಚಿತನಾಗಿದ್ದಾನೆ. ಕೆಲವೇ ದಿನಗಳಲ್ಲಿ ಇವರಿಬ್ಬರು ಸ್ನೇಹಿತರಾಗಿದ್ದು ವಾಟ್ಸಪ್ ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಸ್ನೇಹ ಬೆಳೆಸಿದ್ದ ವ್ಯಕ್ತಿ ಮಂಗಳೂರಿನ ವ್ಯಕ್ತಿಯನ್ನು ಯಾಮಾರಿಸಿ ಬ್ಯಾಂಕ್ ಖಾತೆಯ ಮಾಹಿತಿ ಪಡೆದುಕೊಂಡಿದ್ದಾನೆ. ಆ ಖಾತೆಗೆ

ಮಂಗಳೂರಿನ ವ್ಯಕ್ತಿಗೆ ಫೇಸ್ಬುಕ್ ಗೆಳೆಯನಿಂದ 1.15 ಲಕ್ಷ ರೂ. ಪಂಗನಾಮ Read More »

ಮಂಗಳೂರು: ಆಟೋಗೆ ಕಾಯುತಿದ್ದ ವೃದ್ದ ದಂಪತಿಗೆ ನೆರವಾದ ಕ ಮಿಷನರ್, ಡಿಸಿಪಿ

ಮಂಗಳೂರು : ಲಾಕ್ ಡೌನ್ ನಿಂದಾಗಿ ವಾಹನ ಇಲ್ಲದೆ ಮನೆ ತಲುಪಲು ಪರದಾಟುತ್ತಿದ್ದ ವೃದ್ಧ ದಂಪತಿಗಳಿಗೆ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ಸಹಾಯ ಮಾಡಿ ಮಾನವಿಯತೆ ಮೆರೆದಿದ್ದಾರೆ. ಜೂ. 22 ರ ಮಂಗಳವಾರ ಕುಲಶೇಖರದ ಇಬ್ಬರು ಹಿರಿಯ ನಾಗರಿಕರು ಬ್ಯಾಂಕ್‌ಗೆ ಬಂದು ಕ್ಲಾಕ್ ಟವರ್ ಬಳಿ ಒಂದು ಗಂಟೆಗೂ ಹೆಚ್ಚು ಕಾಲ ಆಟೋ ರಿಕ್ಷಕ್ಕಾಗಿ ಕಾಯುತ್ತಿದ್ದರು. ಹಿರಿಯ ದಂಪತಿಯನ್ನು ಗಮನಿಸಿದ ಪೊಲೀಸ್ ಕಮಿಷನರ್ ಅವರನ್ನು ತಮ್ಮ ನಿವಾಸಕ್ಕೆ ತಲುಪಿಸಲು ಪೊಲೀಸ್ ವಾಹನದಲ್ಲೇ

ಮಂಗಳೂರು: ಆಟೋಗೆ ಕಾಯುತಿದ್ದ ವೃದ್ದ ದಂಪತಿಗೆ ನೆರವಾದ ಕ ಮಿಷನರ್, ಡಿಸಿಪಿ Read More »