ಸುಳ್ಯ | ರಿಕ್ಷಾ ಡಿಕ್ಕಿ – ಬೈಕ್ ಸವಾರನಿಗೆ ಗಾಯ
ಸುಳ್ಯ: ತಾಲೂಕಿನ ಬೆಳ್ಳಾರೆಯ ನೆಟ್ಟಾರು ಎಂಬಲ್ಲಿ ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಾಯಗೊಂಡಿದ್ದಾರೆ. ಬಾಯಂಬಾಡಿಯಿಂದ ಬರುತ್ತಿದ್ದ ಬೈಕ್ ಗೆ ಬೆಳ್ಳಾರೆ ಕಡೆಯಿಂದ ಹೋಗುತ್ತಿದ್ದ ರಿಕ್ಷಾ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರನ ತಲೆಗೆ ಗಾಯಗಳಾಗಿವೆ. ಬಾಯಂಬಾಡಿ ನಿವಾಸಿ ಇಂದ್ರೇಶ್ ತನ್ನ ಬೈಕ್ ನಲ್ಲಿ ಬಸ್ಸನ್ನು ಓವರ್ ಟೆಕ್ ಮಾಡುವ ವೇಳೆ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ್ದಾರೆ. ಗಾಯಗೊಂಡ ಅವರನ್ನು ಪುತ್ತೂರಿನ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಷಾದಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಾಗಿವೆ.
ಸುಳ್ಯ | ರಿಕ್ಷಾ ಡಿಕ್ಕಿ – ಬೈಕ್ ಸವಾರನಿಗೆ ಗಾಯ Read More »