ಕರಾವಳಿ

ಕೋವಿಡ್ ಮೂರನೇ ಅಲೆ ಭೀತಿ | ಕೇಂದ್ರದಿಂದ ಎಚ್ಚರಿಕೆ | ದ ಕ ಸೇರಿದಂತೆ ರಾಜ್ಯದ 10 ಜಿಲ್ಲೆಗಳು ರೆಡ್’ಜೋನ್’ಗೆ

ಬೆಂಗಳೂರು: ಕೋವಿಡ್ ಮೂರನೇ ಅಲೆ ಭೀತಿ ಎದುರಾಗಿದ್ದು ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 10 ಜಿಲ್ಲೆಗಳನ್ನು ರೇಡ್’ಝೋನ್ ನಲ್ಲಿರಿಸಿ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ದೇಶದಲ್ಲಿ ಕೋವಿಡ್ ಎರಡನೆಯ ಅಲೆ ಕೊಂಚ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಮೂರನೆ ಅಲೆಯ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವ ಸಲುವಾಗಿ ದೇಶದ ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಕೆಲವು ಜೋನ್ ಗಳಾಗಿ ವಿಂಗಡಿಸಿದೆ. ಇದರಲ್ಲಿ ಎರಡನೆಯ ಅಲೆಯಲ್ಲಿ ತೀವ್ರವಾಗಿ ತತ್ತರಿಸಿರುವ ಜಿಲ್ಲೆಗಳನ್ನು ರೆಡ್’ಜೋನ್’ನಲ್ಲಿ ಗುರುತಿಸಲಾಗಿದೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ […]

ಕೋವಿಡ್ ಮೂರನೇ ಅಲೆ ಭೀತಿ | ಕೇಂದ್ರದಿಂದ ಎಚ್ಚರಿಕೆ | ದ ಕ ಸೇರಿದಂತೆ ರಾಜ್ಯದ 10 ಜಿಲ್ಲೆಗಳು ರೆಡ್’ಜೋನ್’ಗೆ Read More »

ಬಂಟ್ವಾಳ: ಯುವಕನನ್ನು ಉಸಿರುಗಟ್ಟಿಸಿ ಕೊಲೆಗೈದ ಗ್ಯಾಸ್ ಗೀಸರ್..!!!

ಬಂಟ್ವಾಳ: ಯುವಕನನ್ನು ಉಸಿರು ಗಟ್ಟಿಸಿ ಕೊಲೆಗೈದ ಗ್ಯಾಸ್ ಗೀಸರ್..!!!ಬಂಟ್ವಾಳ: ಸ್ನಾನ ಮಾಡುತ್ತಿದ್ದ ವೇಳೆ ಗ್ಯಾಸ್ ಗೀಸರ್‌ನಿಂದ ಬಿಡುಗಡೆಯಾದ ವಿಷ ಅನಿಲ ಯುವಕನ ಪ್ರಾಣಕ್ಕೆ ಕುತ್ತು ತಂದ ಘಟನೆ ಫರಂಗಿಪೇಟೆಯ ಮಾರಿಪಳ್ಳ ಎಂಬಲ್ಲಿ ಜು.12 ರ ಸೋಮವಾರ ಸಂಜೆ ನಡೆದಿದೆ.ಮೃತ ಯುವಕನನ್ನು ಇಸ್ಮಾಯಿಲ್ ಅವರ ಪುತ್ರ ಇಜಾಝ್ ಅಹ್ಮದ್ (23) ಎಂದು ಗುರುತಿಸಲಾಗಿದೆ. ಈತ ಹುಬ್ಬಳ್ಳಿಯ ಅಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ತಂದೆಯ ಅನಾರೋಗ್ಯದ ಹಿನ್ನಲೆಯಲ್ಲಿ ವಾರದ ಹಿಂದೆಯಷ್ಟೇ ಊರಿಗೆ ಬಂದಿದ್ದು ಸೋಮವಾರ ಸಂಜೆ ಗ್ಯಾಸ್ ಗೀಸರ್ ಬಳಸಿ

ಬಂಟ್ವಾಳ: ಯುವಕನನ್ನು ಉಸಿರುಗಟ್ಟಿಸಿ ಕೊಲೆಗೈದ ಗ್ಯಾಸ್ ಗೀಸರ್..!!! Read More »

ಅಗ್ನಿಕುಂಡದಲ್ಲಿ ಶವ ಹೋಮ ಪ್ರಕರಣ: ರಾಜೇಶ್ವರಿ ಗ್ಯಾಂಗ್’ನಿಂದ ಹೈಕೋರ್ಟ್’ಗೆ ಮೇಲ್ಮನವಿ

ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಮಾಡಿ ಹೋಮಕುಂಡದಲ್ಲಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿರುವ ದಿ.ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ಪುತ್ರ ನವನೀತ್ ಶೆಟ್ಟಿ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ಕೋರಿ ಹೈ ಕೋರ್ಟ್ ನಲ್ಲಿ ಮೇಲ್ಮನವಿ ಮತ್ತು ಜಾಮೀನು ಅರ್ಜಿ ಸಲ್ಲಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಐದು ವರ್ಷಗಳ ಹಿಂದೆ ಉಡುಪಿಯ ಇಂದ್ರಾಳಿಯ ಎನ್‌ಆರ್‌ಐ ಉದ್ಯಮಿ ಭಾಸ್ಕರ್ ಶೆಟ್ಟಿ (52)ಯನ್ನು ಅಗ್ನಿಕುಂಡದಲ್ಲಿ ಸುಟ್ಟು ಭಸ್ಮ ಮಾಡಿದ ಅಮಾನುಷ

ಅಗ್ನಿಕುಂಡದಲ್ಲಿ ಶವ ಹೋಮ ಪ್ರಕರಣ: ರಾಜೇಶ್ವರಿ ಗ್ಯಾಂಗ್’ನಿಂದ ಹೈಕೋರ್ಟ್’ಗೆ ಮೇಲ್ಮನವಿ Read More »

ಬ್ರಹ್ಮಾವರ: ಫ್ಲಾಟ್’ನಲ್ಲಿ ವಿದೇಶದಿಂದ ಬಂದ ಮಹಿಳೆಯ ಉಸಿರುಗಟ್ಟಿಸಿ ಕೊಲೆ

ಉಡುಪಿ: ಜಿಲ್ಲೆಯ ಬ್ರಹ್ಮಾವರದ ಫ್ಲಾಟ್ ಒಂದರಲ್ಲಿ ಕೆಲ ದಿನಗಳ ಹಿಂದೆ ವಿದೇಶದಿಂದ ವಾಪಾಸಾಗಿದ್ದ ಮಹಿಳೆಯನ್ನು ಕತ್ತುಹಿಸುಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗಂಗೊಳ್ಳಿ ಮೂಲದ ವಿಶಾಲ (35 ವ.) ಕೊಲೆಯಾದ ಮಹಿಳೆ. ಕೆಲವು ದಿನಗಳ ಹಿಂದೆಯಷ್ಟೇ ವಿದೇಶದಿಂದ ಆಗಮಿಸಿದ್ದ ವಿಶಾಲ, ನಗರದಲ್ಲಿ ಕೆಲವು ಅಗತ್ಯ ಕೆಲಸಗಳಿರುವ ಕಾರಣ ಅಪಾರ್ಟ್ ಮೆಂಟ್ ನಲ್ಲಿ ಉಳಿದುಕೊಂಡಿದ್ದರು. ಕೊಲೆಯಾದ ದಿನ ಸಂಜೆ ವೇಳೆಗೆ ಮನೆಗೆ ಬರುವುದಾಗಿ ಹೇಳಿದ್ದರು. ಆದರೆ, ವಿಶಾಲ ಸಂಜೆಯಾದರೂ ಮನೆಗೆ ಬಾರದ ಕಾರಣ ಅವರ ತಂದೆ ಹುಡುಕಿಕೊಂಡು ನಗರಕ್ಕೆ ಬಂದಾಗ

ಬ್ರಹ್ಮಾವರ: ಫ್ಲಾಟ್’ನಲ್ಲಿ ವಿದೇಶದಿಂದ ಬಂದ ಮಹಿಳೆಯ ಉಸಿರುಗಟ್ಟಿಸಿ ಕೊಲೆ Read More »

ಬೆಳ್ತಂಗಡಿ: ಮಗಳನ್ನು ಕೊಡಲೊಪ್ಪದ ತಂದೆ | ಕತ್ತಿಯಿಂದ ಕಡಿದ ಸುಬ್ರಮಣ್ಯದ ಯುವಕ

ಬೆಳ್ತಂಗಡಿ: ಮಗಳನ್ನು ವಿವಾಹ ಮಾಡಿ ಕೊಡಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಯುವತಿಯ ತಂದೆಗೆ ಯುವಕನೊಬ್ಬ ಕತ್ತಿಯಿಂದ ಕಡಿದ ಘಟನೆ ತಾಲೂಕಿನ ಲಾಯಿಲ ಗ್ರಾಮದಲ್ಲಿ ನಡೆದಿದೆ. ಲಾಯಿಲ ವಿವೇಕಾನಂದ ನಗರದ ಸೋಮನಾಥ ಕಲಾಲ್ ಗಾಯಗೊಂಡವರು. ಸುಬ್ರಹ್ಮಣ್ಯದ ಕೈಕಂಬ ನಿವಾಸಿ ದಿನೇಶ್ ಆರೋಪಿ. ದಿನೇಶ್ ಹಲವು ದಿನಗಳಿಂದ ಸೋಮನಾಥ ಅವರ ಮಗಳನ್ನು ಮದುವೆ ಮಾಡಿಕೊಡುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ಅವರು ಒಪ್ಪದಿದ್ದಾಗ ಹಲವು ಬಾರಿ ಬೆದರಿಕೆಗಳನ್ನು ಒಡ್ಡಿದ್ದ. ಇದ್ಯಾವುದಕ್ಕೂ ಸೋಮನಾಥ ಅವರು ಬಗ್ಗಿರಲಿಲ್ಲ. ಇದರಿಂದ ಕುಪಿತಗೊಂಡ ದಿನೇಶ್ ಮನೆಗೆ ಬಂದು ಸೋಮನಾಥ್

ಬೆಳ್ತಂಗಡಿ: ಮಗಳನ್ನು ಕೊಡಲೊಪ್ಪದ ತಂದೆ | ಕತ್ತಿಯಿಂದ ಕಡಿದ ಸುಬ್ರಮಣ್ಯದ ಯುವಕ Read More »

ಮಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು

ಮಂಗಳೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ವಾಮಂಜೂರು ನಿವಾಸಿ ವಿನೋದ್ ರಾಜ್ ಅಮೀನ್ ಎಂಬವರ ಪತ್ನಿ ಪ್ರಿಯಾಂಕ (31) ಎಂದು ಗುರುತಿಸಲಾಗಿದೆ. ಇವರು ದ್ವಿಚಕ್ರ ವಾಹನದಲ್ಲಿ ಜು.10ರ ಶನಿವಾರ ಯೆಯ್ಯಾಡಿ ಹರಿಪದವು ಎಂಬಲ್ಲಿ ತೆರಳುತ್ತಿದ್ದಾಗ ವಿರುದ್ಧ ದಿಕ್ಕಿನಲ್ಲಿ ಬಂದ ಆಲ್ಟೊ ಕಾರು ಢಿಕ್ಕಿಯಾಗಿತ್ತು. ಪರಿಣಾಮ ಪ್ರಿಯಾಂಕ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದ ಬಳಿಕ ಕೋಮಾದಲ್ಲಿದ್ದ ಪ್ರಿಯಾಂಕ ಚಿಕಿತ್ಸೆ ಫಲಕಾರಿಯಾಗದೇ

ಮಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು Read More »

ಮಂಗಳೂರು: ಮಹಿಳೆಗೆ ಹಲ್ಲೆ ನಡೆಸಿ ದರೋಡೆ – ಓರ್ವ ಬಂಧನ

ಮಂಗಳೂರು: ಯುನಿಸೆಕ್ಸ್ ಸಲೂನ್‌ನಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ, ಹಲ್ಲೆ ನಡೆಸಿ ದರೋಡೆ ಮಾಡಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಿ ಘಟನೆ ನಗರದಲ್ಲಿ ನಡೆದಿದೆ. ಆರೋಪಿಯನ್ನು ಅತ್ತಾವರದ ಅಬ್ದುಲ್ ದಾವೂದ್ ಎಂದು ಗುರುತಿಸಲಾಗಿದೆ. ಈತ ಜುಲೈ 1 ರಂದು ಕದ್ರಿಯ ಸಲೂನ್‌ನಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ ಮತ್ತು ಹಲ್ಲೆ ನಡೆಸಿ 14,000 ರೂ. ಪಡೆದುಕೊಂಡಿದ್ದಾನೆ ಎಂದು ಆರೋಪಿಸಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳೂರು: ಮಹಿಳೆಗೆ ಹಲ್ಲೆ ನಡೆಸಿ ದರೋಡೆ – ಓರ್ವ ಬಂಧನ Read More »

ಉಡುಪಿ: ಅಪಹರಣಕ್ಕೊಳಗಾದ ಮಗು ರಕ್ಷಣೆ | ಆರೋಪಿ ಪೊಲೀಸ್ ವಶಕ್ಕೆ

ಉಡುಪಿ: ಕರಾವಳಿ ಬೈಪಾಸ್‌‌ ಬಳಿಯಿಂದ ಭಾನುವಾರ ಬೆಳಗ್ಗೆ ಅಪಹರಣಕ್ಕೊಳಗಾದ ಮಗುವನ್ನು ಉಡುಪಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಆರೋಪಿ ಸಹಿತ ಕುಮುಟಾದಲ್ಲಿ ಪತ್ತೆ ಮಾಡಿದ್ದಾರೆ. ಆರೋಪಿಯನ್ನು ಬಾಗಲಕೋಟೆಯ ಪರಶು ಎಂದು ಗುರುತಿಸಲಾಗಿದೆ. ಕುಮುಟಾದಲ್ಲಿ ರೈಲ್ವೆ ಪೊಲೀಸರ ಸಹಕಾರದೊಂದಿಗೆ ಪತ್ತೆ ಹಚ್ಚಿ, ಮಗು ಶಿವರಾಜ್‌ (2.5 ವರ್ಷ) ಹಾಗೂ ಆರೋಪಿಯನ್ನು ಇಂದು ಬೆಳಗ್ಗೆ ಪೊಲೀಸರು ಉಡುಪಿಗೆ ಕರೆತಂದಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ಬೆಳಗ್ಗೆ ಪರಶು ಮಗುವನ್ನು ಅಪಹರಿಸಿ ಕರಾವಳಿ ಬೈಪಾಸ್‌ನಿಂದ ಸಿಟಿಬಸ್‌‌ನಲ್ಲಿ ಪ್ರಯಾಣಿಸಿ ಸಂತೆಕಟ್ಟೆಯಲ್ಲಿ ಇಳಿದಿದ್ದನು. ಸಂತೆಕಟ್ಟೆಯಲ್ಲಿ ಆತ

ಉಡುಪಿ: ಅಪಹರಣಕ್ಕೊಳಗಾದ ಮಗು ರಕ್ಷಣೆ | ಆರೋಪಿ ಪೊಲೀಸ್ ವಶಕ್ಕೆ Read More »

ತಲಪಾಡಿ: ಹಠಾತ್ ಬ್ರೇಕ್ ಹಾಕಿದ ಬಸ್ ಚಾಲಕ | ಸಂಪೂರ್ಣ ಬಸ್ಸಿನಡಿ ನುಗ್ಗಿದ ಬೈಕ್ | ಸವಾರ ಗಂಭೀರ

ಮಂಗಳೂರು: ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಬೈಕ್ ಬಸ್ಸಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಗರ ಹೊರವಲಯದ ಉಚ್ಚಿಲ ಎಂಬಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ಸಂಭವಿಸಿದೆ. ಮಂಗಳೂರು ತಲಪಾಡಿ ನಡುವೆ ಸಂಚರಿಸುತ್ತಿದ್ದ ಸಿಟಿ ಬಸ್ ಚಾಲಕ ಹೆದ್ದಾರಿಯಲ್ಲಿ ಒಮ್ಮೆಗೆ ಬಸ್ಸನ್ನು ನಿಲ್ಲಿಸಿದ್ದಾನೆ. ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಬಸ್ಸಿನ ಹಿಂಬದಿ ಯಿಂದ ಸಂಪೂರ್ಣವಾಗಿ ಒಳಗೆ ನುಗ್ಗಿದೆ. ಬೈಕ್ ಸವಾರರಾದ, ಆಂಧ್ರ ಮೂಲದ

ತಲಪಾಡಿ: ಹಠಾತ್ ಬ್ರೇಕ್ ಹಾಕಿದ ಬಸ್ ಚಾಲಕ | ಸಂಪೂರ್ಣ ಬಸ್ಸಿನಡಿ ನುಗ್ಗಿದ ಬೈಕ್ | ಸವಾರ ಗಂಭೀರ Read More »

ಮಂಗಳೂರು: ಅಪಘಾತ ಕಂಡು ಸಹಾಯಕ್ಕೆ ಧಾವಿಸಿದಾಗ ಬಂದೆರಗಿದ ಟ್ಯಾಂಕರ್ | ಸುಳ್ಯ ಮೂಲದ ಯುವಕ ಸಾವು

ಮಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಉಪಚರಿಸುತ್ತಿದ್ದ ವೇಳೆ ಯುವಕನೊಬ್ಬನಿಗೆ ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಯುವಕ ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತಪಟ್ಟವರನ್ನು ಸುಳ್ಯ ತಾಲೂಕಿನ ಮೇರ್ಕಜೆ ಪುರುಷೋತ್ತಮ ಎಂಬವರ ಮಗ ತೇಜಸ್ (28) ಎಂದು ಗುರುತಿಸಲಾಗಿದೆ. ನಗರದಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದ ತೇಜಸ್ ನಿನ್ನೆ ಸಂಜೆ ಕೆಲಸ ಮುಗಿಸಿ ರೂಮ್ ಕಡೆ ತೆರಳುತ್ತಿದ್ದರು. ಈ ಸಂದರ್ಭ ನಗರದ ಬೈಕಂಪಾಡಿ ಬಳಿ ತೇಜಸ್ ಗೆ ಬೇರೊಂದು ಬೈಕ್ ಅಪಘಾತ ಗೊಂಡಿರುವುದು ಕಂಡುಬಂದಿದೆ. ತಕ್ಷಣ ಸಹಾಯಕ್ಕೆ

ಮಂಗಳೂರು: ಅಪಘಾತ ಕಂಡು ಸಹಾಯಕ್ಕೆ ಧಾವಿಸಿದಾಗ ಬಂದೆರಗಿದ ಟ್ಯಾಂಕರ್ | ಸುಳ್ಯ ಮೂಲದ ಯುವಕ ಸಾವು Read More »