ಕರಾವಳಿ

ಈಗಲ್ಲ, ನಾಲ್ಕು ವರ್ಷದ ಹಿಂದೆಯೇ ರೋಗಿಯನ್ನು ಹೊತ್ತೊಯ್ಯಲಾಗಿತ್ತು…! ಮರಸಂಕದ ಪರಿಸ್ಥಿತಿ ಗೊತ್ತಿದ್ದರೂ ಶಾಸಕರೇನು ಮಾಡ್ತಿದ್ರು…?

ಮಂಗಳೂರು: ಹೌದು, ಕಳೆದ ವಾರ ಸುಳ್ಯದ ಜಾಲ್ಸೂರು ಗ್ರಾಮದ ಮರಸಂಕದ ವೃದ್ದೆಯೊಬ್ಬರನ್ನು ತುಂಬಿದ ಹೊಳೆಯಲ್ಲಿ ಹೊತ್ತೊಯ್ದು ಆಸ್ಪತ್ರೆ ಸೇರಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾಜ್ಯದ ಎಲ್ಲಾ ಮಾಧ್ಯಮಗಳು ಇದನ್ನು ಸುದ್ದಿ ಮಾಡಿದ್ದು, ಕ್ಷೇತ್ರದ ಶಾಸಕರೂ, ಸದ್ಯ ಬಂದರು ಹಾಗೂ ಮೀನುಗಾರಿಕಾ ಸಚಿವರಾಗಿರುವ ಎಸ್.ಅಂಗಾರರನ್ನು ತರಾಟೆಗೆ ತೆಗೆದುಕೊಂಡಿದ್ದವು. ಜನಪ್ರತಿನಿಧಿಗಳಿಗೆ ಜನರು ಹಿಡಿಶಾಪ ಹಾಕಿದ್ದರು. ಆದರೆ ಈ ಘಟನೆ ಇದೇ ಮೊದಲಲ್ಲ. ಈ ಹಿಂದೆಯೂ ಈ ಭಾಗದ ರೋಗಿಯೊಬ್ಬರು ಬಿದ್ದಾಗ‌ ಚಯರ್ ಮೂಲಕ ಎತ್ತಿಕೊಂಡು ಹೋದ […]

ಈಗಲ್ಲ, ನಾಲ್ಕು ವರ್ಷದ ಹಿಂದೆಯೇ ರೋಗಿಯನ್ನು ಹೊತ್ತೊಯ್ಯಲಾಗಿತ್ತು…! ಮರಸಂಕದ ಪರಿಸ್ಥಿತಿ ಗೊತ್ತಿದ್ದರೂ ಶಾಸಕರೇನು ಮಾಡ್ತಿದ್ರು…? Read More »

ಬೆಳ್ತಂಗಡಿ | ಏಕಾಏಕಿ ಅಂಗಡಿಗೆ ನುಗ್ಗಿದ ಕಾರು | ತಪ್ಪಿದ ಅನಾಹುತ |ಪೋಷಕರೇ ಮಕ್ಕಳನ್ನು ವಾಹನದಲ್ಲಿ ಬಿಟ್ಟು ಹೋಗುವಾಗ ಇರಲಿ ಎಚ್ಚರ

ಬೆಳ್ತಂಗಡಿ: ಅಂಗಡಿಯ ಮುಂದೆ ನಿಲ್ಲಿಸಿದ್ದ ಓಮ್ನಿಯೊಂದು ಏಕಾಏಕಿ ಮುಂದೆ ಇದ್ದ ಅಂಗಡಿಗೆ ಅಪ್ಪಳಿಸಿದ ಘಟನೆ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಅಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಉಜಿರೆಯ ಶಾರ್ವರಿ ಕಾಂಪ್ಲೆಕ್ಸ್ ಮುಂಭಾಗ ಓಮ್ನಿ ನಿಲ್ಲಿಸಿ ಚಾಲಕ ಹೊರಹೋಗಿದ್ದಾನೆ. ಜೊತೆಗೆ ಮಗುವನ್ನು ಕರೆದೊಯ್ಯದೆ ವಾಹನದೊಳಗೆ ಬಿಟ್ಟು ತೆರಳಿದ್ದಾನೆ. ಸ್ವಲ್ಪ ಸಮಯದ ಬಳಿಕ ಓಮ್ನಿ ಸಡನ್ ಮುಂದೆ ಚಲಿಸಿದೆ. ಮುಂದೆ ಇದ್ದ ತರಕಾರಿ ಅಂಗಡಿಗೆ ಅಪ್ಪಳಿಸಿದೆ. ಅದೇ ಜಾಗದಲ್ಲಿ ಇಬ್ಬರು ಹುಡುಗಿಯರು ನಿಂತಿದ್ದರು. ಆದರೆ ಚಾಲಕನಿಲ್ಲದೆ ವಾಹನ ತಮ್ಮೆಡೆಗೆ ಬರುತ್ತಿರುವುದನ್ನು

ಬೆಳ್ತಂಗಡಿ | ಏಕಾಏಕಿ ಅಂಗಡಿಗೆ ನುಗ್ಗಿದ ಕಾರು | ತಪ್ಪಿದ ಅನಾಹುತ |ಪೋಷಕರೇ ಮಕ್ಕಳನ್ನು ವಾಹನದಲ್ಲಿ ಬಿಟ್ಟು ಹೋಗುವಾಗ ಇರಲಿ ಎಚ್ಚರ Read More »

6 ತಿಂಗಳ ಮಗುವಿನ ಕೋವಿಡ್ ರಿಪೋರ್ಟ್ ಕೇಳಿದ ಏರ್ಪೋರ್ಟ್ ಸಿಬ್ಬಂದಿ | ತಕ್ಷಣ ಸ್ಪಂದಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ | 20 ನಿಮಿಷ ತಡವಾಗಿ ಹೊರಟ ಏರ್ ಇಂಡಿಯಾ

ಮಂಗಳೂರು: ವಿಮಾನ ನಿಲ್ದಾಣ ಸಿಬ್ಬಂದಿ, ತಾಯಿಯೊಂದಿಗೆ ತವರಿಗೆ ಹೊರಟ ಆರು ತಿಂಗಳ ಮಗುವಿನ ನೆಗೆಟಿವ್ ರಿಪೋರ್ಟ್ ಕೇಳಿ ಗೊಂದಲ ಉಂಟಾದ ಘಟನೆ ಕುವೈತ್ ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಭಾರತೀಯ ವಿದೇಶಾಂಗ ಇಲಾಖೆ ತಾಯಿ-ಮಗುವಿನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದೆ. ಕುವೈತ್ ನಲ್ಲಿದ್ದ ಮಂಗಳೂರು ಮೂಲದ ಅದಿತಿ ಸುದೇಶ್ ಎಂಬ ಮಹಿಳೆ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ತುರ್ತಾಗಿ ಮಂಗಳೂರಿಗೆ ಆಗಮಿಸುವವರಿದ್ದರು. ಇದಕ್ಕಾಗಿ ತನ್ನ ಕೋವಿಡ್ ನೆಗೆಟಿವ್ ರಿಪೋರ್ಟ್ ತಂದಿದ್ದರು. ಆದರೆ ಜೊತೆಗಿದ್ದ ತನ್ನ

6 ತಿಂಗಳ ಮಗುವಿನ ಕೋವಿಡ್ ರಿಪೋರ್ಟ್ ಕೇಳಿದ ಏರ್ಪೋರ್ಟ್ ಸಿಬ್ಬಂದಿ | ತಕ್ಷಣ ಸ್ಪಂದಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ | 20 ನಿಮಿಷ ತಡವಾಗಿ ಹೊರಟ ಏರ್ ಇಂಡಿಯಾ Read More »

ಪುತ್ತೂರು: ವಿಸ್ಟಾಡೋಂ ರೈಲಿನ ಮೇಲೆ ಕುಸಿದ ಧರೆ, ಗಾರ್ಡ್ ಗೆ ಹಾನಿ

ಪುತ್ತೂರು ಜುಲೈ 18: ಚಲಿಸುತ್ತಿದ್ದ ರೈಲಿನ ಮೇಲೆ ಧರೆ ಕುಸಿದು ರೈಲಿನ ಎದುರಿನ ಗಾರ್ಡ್ ಗೆ ಹಾನಿಯಾಗಿರುವ ಘಟನೆ ಪುತ್ತೂರು ಕಬಕ -ಸುಬ್ರಹ್ಮಣ್ಯ ರೈಲ್ವೇ ಹಳಿಯ ನಡುವೆ ವೀರಮಂಗಲ ಗಡಿಪಿಲ ಸಮೀಪದಲ್ಲಿ ನಡೆದಿದೆ. ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಂಗಳೂರು-ಬೆಂಗಳೂರು ರೈಲು ಈ ಹಳಿಯಲ್ಲಿ ಹಾದು ಹೋಗುತ್ತಿದ್ದಾಗ ಏಕಾ ಏಕಿ ಧರೆ ಕುಸಿದಿದ್ದು,ಮಣ್ಣು ರೈಲು ಎಂಜಿನ್ ನ ಮುಂಭಾಗಕ್ಕೆ ಕುಸಿದಿದ್ದು,ರೈಲಿನ ಗಾರ್ಡ್ ಗೆ ಹಾನಿಯಾಗಿದೆ. ರೈಲು ಈಗ ಹಳಿಯಲ್ಲಿ ಬಾಕಿಯಾಗಿದ್ದು,ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು,ಮಣ್ಣು ತೆರವು ಕಾರ್ಯಾಚರಣೆ

ಪುತ್ತೂರು: ವಿಸ್ಟಾಡೋಂ ರೈಲಿನ ಮೇಲೆ ಕುಸಿದ ಧರೆ, ಗಾರ್ಡ್ ಗೆ ಹಾನಿ Read More »

ಪುತ್ತೂರು: ಎಸ್ಸೆಸೆಲ್ಸಿ ಪರೀಕ್ಷೆಗೆ ಸಕಲ ಸಿದ್ದತೆ

ಪುತ್ತೂರು: ಕುತೂಹಲ ಕೆರಳಿಸಿದ್ದ SSLC ಪರೀಕ್ಷೆ ಸೋಮವಾರದಿಂದ ರಾಜ್ಯಾದ್ಯಂತ ನಡೆಯುತ್ತಿದೆ. ಕೊರೋನ ರಣಕೇಕೆಯ ಕಾರಣ ಪರೀಕ್ಷೆ ನಡೆಸಲು ಸರಕಾರ ಒಪ್ಪಿಗೆ ಸೂಚಿಸಿರಲಿಲ್ಲ. ವರ್ಷಂಪ್ರತಿ ಏಪ್ರೀಲ್ ಅಥವಾ ಮಾರ್ಚ್ ತಿಂಗಳಿನಲ್ಲಿ ರಾಜ್ಯದ್ಯಾಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ ಈ ಸಲ ಜುಲೈನಲ್ಲಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸೂಚಿಸಿದ್ದು ಇದಕ್ಕೆ ನ್ಯಾಯಾಲವು ಒಪ್ಪಿಗೆ ಸೂಚಿಸಿದೆ. ಅದರಂತೆ ಪುತ್ತೂರು ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇಲ್ಲಿ ಇಲಾಖೆಯ ಆದೇಶದಂತೆ ಎಲ್ಲಾ ಮುಂಜಾಗ್ರತಾ ಸಿದ್ದತೆಗಳನ್ನು ಮಾಡಲಾಗಿದೆ.

ಪುತ್ತೂರು: ಎಸ್ಸೆಸೆಲ್ಸಿ ಪರೀಕ್ಷೆಗೆ ಸಕಲ ಸಿದ್ದತೆ Read More »

ಕಂಬಳದ ಉಸೇನ್ ಬೋಲ್ಟ್ ಗೆ ಪ್ರಾಣ ಬೆದರಿಕೆ, ‘ಬೆನ್ನಿಗೆ ಹಾಳೆ ಕಟ್ಟಿಕೊಂಡು‌ ಬಾ’ ಎಂದವರಾರು?

ಮಂಗಳೂರು: ಕಂಬಳದ ಗದ್ದೆಯಲ್ಲಿ ಅತಿವೇಗವಾಗಿ ಓಡಿ ಕಂಬಳದ ಉಸೇನ್ ಬೋಲ್ಟ್ ಎಂದೇ ಪ್ರಸಿದ್ಧ ಪಡೆದ, ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಅಶ್ವತ್ಥಪುರ ಶ್ರೀನಿವಾಸ ಗೌಡ ಅವರಿಗೆ ವ್ಯಕ್ತಿಯೊಬ್ಬರು ಮೊಬೈಲ್‌ ಫೋನ್ ಕರೆ ಮಾಡಿ, ಬೆದರಿಕೆ ಹಾಕಿ ನಿಂದಿಸಿದ್ದು, ಇದರ ಧ್ವನಿಮುದ್ರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆದರಿಕೆ ಒಡ್ಡಿದ ವ್ಯಕ್ತಿ ಕರೆ ಮಾಡಿ, ‘ನಾನು ಪ್ರಶಾಂತ್ ಬಂಗೇರ, ಶ್ರೀರಾಮ ಸೇನೆಯಲ್ಲಿದ್ದೇನೆ ಎಂದು ಪರಿಚಯಿಸಿಕೊಂಡು ಮಂಗಳೂರು ಕಾರ್ ಸ್ಟ್ರೀಟ್‌ನಲ್ಲಿ ರಿಯಲ್ ಎಸ್ಟೇಟ್ ಕಚೇರಿ ಇದೆ ಅಲ್ಲಿಗೆ ಬನ್ನಿ ಕಂಬಳದ ಇತಿಹಾಸ

ಕಂಬಳದ ಉಸೇನ್ ಬೋಲ್ಟ್ ಗೆ ಪ್ರಾಣ ಬೆದರಿಕೆ, ‘ಬೆನ್ನಿಗೆ ಹಾಳೆ ಕಟ್ಟಿಕೊಂಡು‌ ಬಾ’ ಎಂದವರಾರು? Read More »

ನೆಲ್ಯಾಡಿ: ಅಪರಿಚಿತ ವಾಹನ ಡಿಕ್ಕಿ | ಬೈಕ್ ಸವಾರ ಸಾವು ಸಹಸವಾರ ಗಂಭೀರ

ಬೆಳ್ತಂಗಡಿ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಓರ್ವ ಬೈಕ್ ಸವಾರ ಮೃತಪಟ್ಟು ಸಹಸವಾರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ, ತಾಲೂಕಿನ ನೆಲ್ಯಾಡಿಯಲ್ಲಿ ನಡೆದಿದೆ. ಗುಂಡ್ಯದಿಂದ ನೆಲ್ಯಾಡಿ ಕಡೆ ತೆರಳುತ್ತಿದ್ದ ಬೈಕ್ ಗೆ ನೆಲ್ಯಾಡಿ ಕಡೆಯಿಂದ ಬಂದ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಗಂಭೀರ ಗಾಯಗೊಂಡ ಸಹಸವಾರನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ವ್ಯಕ್ತಿಯ ಗುರುತು ಇನ್ನಷ್ಟೇ ಪತ್ತೇಯಾಗಬೇಕಿದೆ. ಗಾಯಗೊಂಡವರನ್ನು ಸಕಲೇಶಪುರದ ಮೋಹನ್ ಎಂದು ಗುರುತಿಸಲಾಗಿದೆ. ಡಿಕ್ಕಿ ಹೊಡೆದ ವಾಹನ ಪರಾರಿಯಾಗಿದ್ದು,

ನೆಲ್ಯಾಡಿ: ಅಪರಿಚಿತ ವಾಹನ ಡಿಕ್ಕಿ | ಬೈಕ್ ಸವಾರ ಸಾವು ಸಹಸವಾರ ಗಂಭೀರ Read More »

ಬೆಳ್ತಂಗಡಿ: ಪತಿ-ಪತ್ನಿಯನ್ನು ಒಂದೇ ದಿನ ಬಲಿ ತೆಗೆದುಕೊಂಡ ಕೊರೊನಾ

ಬೆಳ್ತಂಗಡಿ: ಗಂಡ ಹೆಂಡತಿ ಇಬ್ಬರೂ ಒಂದೇ ದಿನ ಕೊರೊನಾ ಹೆಮ್ಮಾರಿಗೆ ತುತ್ತಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಕೊಕ್ಕಡದಲ್ಲಿ ನಡೆದಿದೆ. ಗ್ರಾಮದ ದಂಪತಿ ನಿನ್ನೆ ಒಂದೇ ದಿನ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪುನ್ನತ್ ನಾಥ್ ನಿವಾಸಿ ವಗೀ೯ಸ್ (74ವ) ಹಾಗೂ ಅವರ ಪತ್ನಿ ಮೇರಿ ವಗೀ೯ಸ್ (73ವ) ಮೃತ ಪಟ್ಟ ದುದೈ೯ವಿಗಳು. ಮೃತ ದಂಪತಿಗೆ ಕಳೆದ ತಿಂಗಳು ಜ್ವರ ಕಾಣಿಸಿಕೊಂಡಿತ್ತು. ಅವರು ಔಷದಿ ತೆಗೆದುಕೊಂಡು ಗುಣಮುಖರಾಗಿದ್ದರು. ಬಳಿಕ ಮನೆಯಲ್ಲಿದ್ದ ದಂಪತಿಗೆ ಕೆಲ ದಿನಗಳ ಹಿಂದೆ ತೀವ್ರ ಜ್ವರ ಕಾಣಿಸಿಕೊಂಡಿದೆ.

ಬೆಳ್ತಂಗಡಿ: ಪತಿ-ಪತ್ನಿಯನ್ನು ಒಂದೇ ದಿನ ಬಲಿ ತೆಗೆದುಕೊಂಡ ಕೊರೊನಾ Read More »

ಪುತ್ತೂರು: ಮಾಜಿ ಪ್ರಿಯಕರ ಕಳಿಸಿದ ಬೆಡ್ ರೂಂ ವಿಡಿಯೋದಿಂದ ಒಡೆದ ಸಂಸಾರ | ಅಂದು ಸುಖ ಪಡೆದವಳಿಂದ ಈಗ ಅತ್ಯಾಚಾರದ ದೂರು…!

ಪುತ್ತೂರು: ಮಾಜಿ ಪ್ರಿಯಕರನೋರ್ವ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ ಹಳೆಯ ವೀಡಿಯೊವೊಂದನ್ನು ಆಕೆಯ ಪತಿಯ ಮೊಬೈಲ್ ಫೋನ್ ಗೆ ರವಾನಿಸಿದ್ದಾನೆ. ವೀಡಿಯೋ ನೋಡಿದ ಪತಿ ವಿಚ್ಛೇದನಕ್ಕೆ ಮುಂದಾದಾಗ ಯುವತಿ ಅದು ಅತ್ಯಾಚಾರವೆಂದು ಯೂ ಟರ್ನ ಹೊಡೆದ ಪ್ರಕರಣಯೊಂದು ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ವಿಜೇಶ್ ಹಾಗೂ ಸುಬ್ರಹ್ಮಣ್ಯದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿ ಉತ್ಕಟಕ್ಕೆ ಏರಿದ್ದು ಪರಿಣಾಮ ದೈಹಿಕ ಸಂಪರ್ಕ ನಡೆಸಿದ್ದಾರೆ. ಹಾಗಾಗಿ 2016ರ ನವೆಂಬರ್‌ನಲ್ಲಿ ಆಕೆ ಪುತ್ತೂರಿನ ದರ್ಬೆಯಲ್ಲಿ ಕೆಲಸ ಮಾಡುತ್ತಿದ್ದು, ಒಂದು ದಿನ ಚಹಾ

ಪುತ್ತೂರು: ಮಾಜಿ ಪ್ರಿಯಕರ ಕಳಿಸಿದ ಬೆಡ್ ರೂಂ ವಿಡಿಯೋದಿಂದ ಒಡೆದ ಸಂಸಾರ | ಅಂದು ಸುಖ ಪಡೆದವಳಿಂದ ಈಗ ಅತ್ಯಾಚಾರದ ದೂರು…! Read More »

ಮಂಗಳೂರು: ಮಹಿಳೆಗೆ ಹಲ್ಲೆ ಮಾಡಿ ಹಣ ಎಗರಿಸಿದ ಪ್ರಕರಣ | ಪೊಲೀಸರಿಂದ ಸಿಸಿಟಿವಿ ದೃಶ್ಯ ಬಿಡುಗಡೆ

ಮಂಗಳೂರು: ನಗರದ ಯೂನಿಸೆಕ್ಸ್ ಸಲೂನ್ ನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿ ಹಣ ಹೊತ್ತೊಯ್ದ ಪ್ರಕರಣಕ್ಕೆ ಸಂಭಂದಿಸಿದ ಸಿಸಿಟಿವಿ ದೃಶ್ಯವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಜುಲೈ 1 ರಂದು ಸಂಜೆ ಸಲೂನ್ ಗೆ ನುಗ್ಗಿದ ಆರೋಪಿ ಅಬ್ದುಲ್ ದಾವೂದ್ ಎಂಬಾತ ಮಹಿಳೆಗೆ ಹಲ್ಲೆ ನಡೆಸಿ, 14,000 ರೂ. ದರೋಡೆ ಮಾಡಿದ್ದ. ಈ ಸಂಬಂಧ ಮಹಿಳೆ ನಗರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.ಇದೀಗ

ಮಂಗಳೂರು: ಮಹಿಳೆಗೆ ಹಲ್ಲೆ ಮಾಡಿ ಹಣ ಎಗರಿಸಿದ ಪ್ರಕರಣ | ಪೊಲೀಸರಿಂದ ಸಿಸಿಟಿವಿ ದೃಶ್ಯ ಬಿಡುಗಡೆ Read More »