ಕರಾವಳಿ

ಉಪ್ಪಿನಂಗಡಿ: ನೀರೆಂದು ತಿಳಿದು ಪೆಟ್ರೋಲ್ ‌ಕುಡಿದ ಮಹಿಳೆ ಸಾವು

ಉಪ್ಪಿನಂಗಡಿ: ಮಹಿಳೆಯೊಬ್ಬರು ತಪ್ಪಾಗಿ ನೀರಿನ ಬದಲು ಪೆಟ್ರೋಲ್‌ ಕುಡಿದು ಅಸ್ವಸ್ಥಗೊಂಡು ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಪೆರ್ನೆಯ ಸಂಪದಕೋಡಿ ಎಂಬಲ್ಲಿ ನಡೆದಿದೆ. ಮೃತ ಮಹಿಳೆ ಪದ್ಮಾವತಿ (79) ಎಂದು ಗುರುತಿಸಲಾಗಿದೆ. ದೃಷ್ಟಿ ದೋಷದಿಂದ ಬಳಲುತ್ತಿದ್ದ ಈಕೆ ಪೆರ್ನೆಯ ಸಂಪದಕೋಡಿಯಲ್ಲಿರುವ ತನ್ನ ಮಗಳ ಮನೆಗೆ ಬಂದಿದ್ದಾಗ ಅಲ್ಲಿ ಹುಲ್ಲು ಕತ್ತರಿಸುವ ಯಂತ್ರದ ಬಳಕೆಯ ಉದ್ದೇಶದಿಂದ ಮನೆಯಲ್ಲಿ ಬಾಟಲಿಯಲ್ಲಿ ತಂದಿರಿಸಿದ ಪೆಟ್ರೋಲನ್ನು ತಿಳಿಯದೇ ಕುಡಿದಿದ್ದಾರೆ ಎಂದು ಹೇಳಲಾಗಿದೆ. ಆ ಬಳಿಕ ಅಸ್ವಸ್ಥರಾದ ಅವರನ್ನು ಮಂಗಳೂರಿನ ವೆನ್‌ […]

ಉಪ್ಪಿನಂಗಡಿ: ನೀರೆಂದು ತಿಳಿದು ಪೆಟ್ರೋಲ್ ‌ಕುಡಿದ ಮಹಿಳೆ ಸಾವು Read More »

ಸುಳ್ಯ| ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು

ಸುಳ್ಯ: ವ್ಯಕ್ತಿಯೊಬ್ಬರು ರಾತ್ರಿ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಕನಕಮಜಲು ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಗ್ರಾಮದ ಪೆರುಂಬಾರು ನಿವಾಸಿ ಜಯರಾಮ ಗೌಡ(52) ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಜಯರಾಮ ಗೌಡರಿಗೆ ಓಡಾಡುವ ಅಭ್ಯಾಸವಿದ್ದು, ನಿನ್ನೆ ತಡರಾತ್ರಿಯೂ ಮನೆಯಿಂದ ಹೊರಟು ಹೋಗಿದ್ದರೆನ್ನಲಾಗಿದೆ. ಬಳಿಕ ಮನೆಗೆ ಬಾರದಿದ್ದ ಅವರನ್ನು ಇಂದು ಮುಂಜಾನೆ ಹುಡುಕಾಟ ನಡೆಸಿದ್ದು, ಗೌಡರ ಮೃತದೇಹ ಮನೆಯಿಂದ 1 ಕಿ.ಮೀ ದೂರದ ಕಾರಿಂಜ ಸಿಆರ್ ಸಿ‌ ಕಾಲೊನಿ ಬಳಿಯ ಕೆರೆಯಲ್ಲಿ ಪತ್ತೆಯಾಗಿದೆ. ರಾತ್ರಿವೇಳೆ

ಸುಳ್ಯ| ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು Read More »

ಮಂಗಳೂರು: ದೀಪಕ್ ರಾವ್ ಕೊಲೆ ಆರೋಪಿ ಅರೆಸ್ಟ್

ಮಂಗಳೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದ ಹಾಗೂ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಿನ್ನಿಗೋಳಿ ನಿವಾಸಿ ಮಹಮ್ಮದ್ ನೌಶದ್ ಎಂದು ಗುರುತಿಸಲಾಗಿದೆ. ಮಹಮ್ಮದ್ ನೌಶದ್ ವಿರುದ್ದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ ಮೂರು ವರ್ಷಗಳ ಹಿಂದೆ 2018 ರಲ್ಲಿ ಜ.3 ರಂದು ಮಂಗಳೂರಿನ ಕಾಟಿಪಳ್ಳದಲ್ಲಿ ಹಾಡಹಗಲೇ ನಡೆದ

ಮಂಗಳೂರು: ದೀಪಕ್ ರಾವ್ ಕೊಲೆ ಆರೋಪಿ ಅರೆಸ್ಟ್ Read More »

ಬಳ್ಪ: ಕೈಗೆಟುಕದ ಖಾಸಗಿ ಮೊಬೈಲ್ ಟವರ್‌ ಸಿಗ್ನಲ್ : ಗ್ರಾಹಕರಿಗೆ ನಿರಾಸೆ

ಬಳ್ಪ: ಆದರ್ಶ ಗ್ರಾಮ ಬಳ್ಪದ ಎಡೋಣಿ-ಪಾದೆ ಬಳಿಯಲ್ಲಿ ಉದ್ಘಾಟನೆಗೊಂಡ ನೂತನ ಜಿಯೋ ಟವರ್‌ ಮೂಲಕ ಮೊಬೈಲ್ ಸಿಗ್ನಲ್‌ ಲಭ್ಯವಾಗಬಹುದು ಎಂದು ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ಈಗ ನಿರಾಸೆಯಾಗಿದೆ. ಉದ್ಘಾಟನೆಗೊಂಡ ಜಿಯೋ ಟವರ್‌ ಮೂಲಕ ಬಳ್ಪ ಪೇಟೆಯಲ್ಲಿಯೇ ಸರಿಯಾಗಿ ಸಿಗ್ನಲ್‌ ಸಿಗುತ್ತಿಲ್ಲ ಮಾತ್ರವಲ್ಲ ತೀರಾ ಗ್ರಾಮೀಣ ಪ್ರದೇಶ ಎಂದು ಗುರುತಿಸಲಾಗಿದ್ದ ಎಡೋಣಿ-ಪಾದೆ ಪರಿಸರಿಂದ ಸ್ವಲ್ಪ ದೂರದಲ್ಲಿಯೇ ಇರುವ ಮಲ್ಕಜೆ, ಏರಣಗುಡ್ಡೆ ಪ್ರದೇಶದಲ್ಲಿ ಸಿಗ್ನಲ್‌ ಲಭ್ಯವಾಗುತ್ತಿಲ್ಲ ಎಂದು ಗ್ರಾಹಕರು ನಿರಾಸೆ ವ್ಯಕ್ತಪಡಿಸಿದ್ದಾರೆ. ಎಡೋಣಿಯಿಂದ ಸ್ವಲ್ಪ ದೂರವರೆಗೆ ಸಿಗ್ನಲ್‌ ಲಭ್ಯವಾಗುತ್ತದೆ, ಈ ಹಿಂದೆಯೇ

ಬಳ್ಪ: ಕೈಗೆಟುಕದ ಖಾಸಗಿ ಮೊಬೈಲ್ ಟವರ್‌ ಸಿಗ್ನಲ್ : ಗ್ರಾಹಕರಿಗೆ ನಿರಾಸೆ Read More »

ಯುವಶಕ್ತಿ ಬಂಟ್ವಾಳ ವತಿಯಿಂದ ‘ನಂದಕಿಶೋರ’ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಬಂಟ್ವಾಳ: ಟೀಂ ವೈಎಸ್ ಕೆ ವತಿಯಿಂದ ಆಯೋಜಿಸಲಾದ ‘ನಂದಕಿಶೋರ’ ಮಕ್ಕಳ ಕೃಷ್ಣ ವೇಷ ಸ್ಪರ್ಧೆಯ ಬಹುಮಾನವನ್ನು ಸಂಘದ ಪದಾಧಿಕಾರಿಗಳು ವಿತರಿಸಿದರು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಮಂಗಳೂರಿನ ರಕ್ಷಣ್, ದ್ವಿತೀಯ ಬಹುಮಾನವನ್ನು ಮಂಗಳೂರಿನ ಬ್ರಹ್ಮೀ, ತೃತೀಯ ಬಹುಮಾನವನ್ನು ಮಂಗಳೂರಿನಲ್ಲಿ ನೆಲೆಸಿರುವ ಶೌರ್ಯ ಕೊಲ್ಯ‌ರವರಿಗೆ ವಿಜೇತರ ಮನೆಗಳಿಗೆ ಸಂಘದ ಸದಸ್ಯರು ತೆರಳಿ ವಿತರಿಸಿದರು

ಯುವಶಕ್ತಿ ಬಂಟ್ವಾಳ ವತಿಯಿಂದ ‘ನಂದಕಿಶೋರ’ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ Read More »

ನವ ಮಂಗಳೂರು ಬಂದರಿನಲ್ಲಿ ಸಹಾಯಕ ‌ಕಾರ್ಯದರ್ಶಿ ಹುದ್ದೆಗೆ ಅರ್ಜಿ ಆಹ್ವಾನ

ಮಂಗಳೂರು: ನವ ಮಂಗಳೂರು ಬಂದರು ಮಂಡಳಿ (NMPT)ಯಲ್ಲಿ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಬೇರೆ ಇಲಾಖೆಗಳಲ್ಲಿ ಸರ್ಕಾರಿ ಕೆಲಸ ನಿರ್ವಹಿಸುತ್ತಿರುವ ಅರ್ಹ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್​ 16 ಕಡೆಯ ದಿನವಾಗಿದೆ. ಯಾವುದೇ ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಯಾವುದೇ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆ ವಿವರ:ಸಹಾಯಕ ಕಾರ್ಯದರ್ಶಿ ಗ್ರೇಡ್​ 2 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರಿ ಸಂಸ್ಥೆಯಲ್ಲಿ ಮೂರು ವರ್ಷದ ಸೇವಾ ಅನುಭವವನ್ನು

ನವ ಮಂಗಳೂರು ಬಂದರಿನಲ್ಲಿ ಸಹಾಯಕ ‌ಕಾರ್ಯದರ್ಶಿ ಹುದ್ದೆಗೆ ಅರ್ಜಿ ಆಹ್ವಾನ Read More »

ಮಂಗಳೂರು: ಮೇಲಧಿಕಾರಿ ಕಿರುಕುಳದಿಂದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆತ್ಮಹತ್ಯೆ? ಮೃತ ದೇಹದೊಂದಿಗೆ ಠಾಣೆಗೆ ಆಗಮಿಸಿದ ಕುಟುಂಬಸ್ಥರು

ಮಂಗಳೂರು: ಮಂಗಳೂರು ವಿಭಾಗದ ಕೆಎಸ್‌ಆರ್‌ಟಿಸಿ ಚಾಲಕ ಕಂ ನಿರ್ವಾಹಕರಾಗಿದ್ದ ಬಾಗಲಕೋಟೆಯ ಹುನಗುಂದದ ನಿಂಗಪ್ಪ ಇಮರಾಪುರ ಸೆ. 26 ರ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಘಟನೆಗೆ ಮೇಲಧಿಕಾರಿಗಳ ಕಿರುಕುಳ ಕಾರಣ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ಮೂಲದ ರಾಮವಡಗಿ ಗ್ರಾಮದವರಾದ ನಿಂಗಪ್ಪ ಆತ್ಮಹತ್ಯೆ ಮಾಡಿಕೊಂಡವರು. ಇವರು ಮಂಗಳೂರಿನ ಮೂರನೇ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಭಾನುವಾರ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದರು. ಕಳೆದ 6 ತಿಂಗಳ ಹಿಂದೆ ಕರ್ತವ್ಯಲೋಪದ ಅಡಿಯಲ್ಲಿ ಅವರನ್ನು

ಮಂಗಳೂರು: ಮೇಲಧಿಕಾರಿ ಕಿರುಕುಳದಿಂದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆತ್ಮಹತ್ಯೆ? ಮೃತ ದೇಹದೊಂದಿಗೆ ಠಾಣೆಗೆ ಆಗಮಿಸಿದ ಕುಟುಂಬಸ್ಥರು Read More »

ಮಂಗಳೂರು: ಪೊಲೀಸರ ಎದುರೇ ನೈತಿಕ ಪೊಲೀಸ್ ಗಿರಿ| ಐವರು ಅಂದರ್

ಮಂಗಳೂರು: ಪೊಲೀಸ್ ಇನ್ಸ್ಪೆಕ್ಟರ್ ಎದುರೇ ನೈತಿಕ ಪೊಲೀಸ್ ಗಿರಿ ನಡೆದಿದೆ. ಮಂಗಳೂರಿನ ಸುರತ್ಕಲ್ ಟೋಲ್‌ಗೇಟ್ ಬಳಿ ಭಾನುವಾರ ಸಂಜೆ ಹಿಂದೂ ಸಂಘಟನೆ ಯುವಕರು ಹಾಗೂ ಅನ್ಯಕೋಮಿನ ಯುವಕ, ಯುವತಿಯರ ನಡುವೆ ಮಾತಿನ ಚಕಮಕಿಯಾಗಿದ್ದು 5 ಜನರನ್ನು ಬಂಧಿಸಲಾಗಿದೆ. ಮಂಗಳೂರಿನ ಮೆಡಿಕಲ್ ಕಾಲೇಜೊಂದರ ಹಿಂದೂ-ಮುಸ್ಲಿಂ ಯುವಕ-ಯುವತಿಯರ ಒಟ್ಟು 6 ಜನ ಸ್ನೇಹಿತರು ವೀಕೆಂಡ್ ಎಂದು ಮಲ್ಪೆ ಬೀಚ್ ಗೆ ಹೋಗಿ ವಾಪಸ್ ಬರುವಾಗ ಮಂಗಳೂರಿನ ಸುರತ್ಕಲ್ ಟೋಲ್‌ಗೇಟ್ ಬಳಿ ಹಿಂದೂ ಸಂಘಟನೆ ಗುಂಪೊಂದು ಅನ್ಯಕೋಮಿನ ಯುವಕ, ಯುವತಿಯರ ಕಾರನ್ನು

ಮಂಗಳೂರು: ಪೊಲೀಸರ ಎದುರೇ ನೈತಿಕ ಪೊಲೀಸ್ ಗಿರಿ| ಐವರು ಅಂದರ್ Read More »

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಶೇಷ ಟ್ರಾಫಿಕ್ ಡ್ರೈವ್| ದಾಖಲೆ ಇಲ್ಲದಿದ್ದರೆ ಬಿಳುತ್ತೆ ದಂಡ|

ಮಂಗಳೂರು: ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ವಾಹನಗಳ ದಾಖಲೆ ತಪಾಸಣೆಗೆ ವಿಶೇಷ ಟ್ರಾಫಿಕ್ ಡ್ರೈವ್ ನ್ನು ಇಂದಿನಿಂದ ಅಕ್ಟೋಬರ್ 2 ರವರೆಗೆ ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ. ಈ ವೇಳೆ ವಾಹನಗಳ ದಾಖಲೆ ತಪಾಸಣೆ ಸೇರಿದಂತೆ ಟ್ರಾಫಿಕ್ ನಿಯಮಗಳ ಬಗ್ಗೆಯೂ ತಪಾಸಣೆ ನಡೆಯಲಿದೆ. ಈ ಬಗ್ಗೆ ನಗರ ಪೊಲೀಸ್‌ ಆಯುಕ್ತ ಎನ್‌ ಶಶಿಕುಮಾರ್‌ ಮಾಹಿತಿ ನೀಡಿದ್ದು, “ಸೆ.27ರಿಂದ ಅ.2ರವರೆಗೆ ಒಂದು ವಾರಗಳ ಕಾಲ ನಾವು ನಿರಂತರವಾಗಿ ಪ್ರತಿದಿನಕ್ಕೆ ಒಂದೊಂದು ಆದ್ಯತೆ ನೀಡಿ ಟ್ರಾಫಿಕ್‌

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಶೇಷ ಟ್ರಾಫಿಕ್ ಡ್ರೈವ್| ದಾಖಲೆ ಇಲ್ಲದಿದ್ದರೆ ಬಿಳುತ್ತೆ ದಂಡ| Read More »

ಸಂಪಾಜೆ|ಎರಡು ಮದುವೆ ನಂತರ, ಮೂರನೇ ವಿವಾಹಕ್ಕೆ ತಯಾರಿ- ಸುಳ್ಳು ಹೇಳಿ ಮದುವೆ ಆಗುವ ಈತ ಜಗತ್ ಕಿಲಾಡಿ!

ಮಡಿಕೇರಿ: ಇವನಿಗೆ ಮದುವೆ ಆಗೋದೆ ಒಂದು ಖಯಾಲಿ. ಮದುವೆ ಆಗೋದು, ಒಂದೆರಡು ವರ್ಷ ಅವರೊಂದಿಗೆ ಸಂಸಾರ ಮಾಡೋದು, ಬಳಿಕ ಅವರನ್ನು ಬಿಟ್ಟು ಬೇರೆ ಮದುವೆ ಆಗೋದು. ಇದರಿಂದ ಸಂಸಾರದ ಕನಸುಗಳನ್ನು ಕಂಡು ಜೀವನ ಕಳೆಯಲು ಬಯಸುವ ಯುವತಿಯರು ಇವನಿಂದ ಮೋಸ ಹೋಗತ್ತಲೇ ಇದ್ದಾರೆ. ಮದುವೆಯನ್ನೇ ವೃತ್ತಿ ಮಾಡುತ್ತಿರುವ ಭೂಪ ಇರೋದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಪಂಚಾಯತಿಯ ದಬ್ಬಡ್ಕದಲ್ಲಿ. ಪ್ರದೀಪ್ ಎಂಬಾತನೇ ಯುವತಿಯರಿಗೆ ಮೋಸ ಮಾಡುತ್ತಿರುವ ಆಸಾಮಿ. ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ ಯುವತಿಯೋರ್ವಳನ್ನು

ಸಂಪಾಜೆ|ಎರಡು ಮದುವೆ ನಂತರ, ಮೂರನೇ ವಿವಾಹಕ್ಕೆ ತಯಾರಿ- ಸುಳ್ಳು ಹೇಳಿ ಮದುವೆ ಆಗುವ ಈತ ಜಗತ್ ಕಿಲಾಡಿ! Read More »