ಕರಾವಳಿ

ಬೆಳ್ಳಾರೆ: ಮಹಿಳೆಯ ತಲೆಗೆ ಕಲ್ಲೆತ್ತಿ‌ ಹಾಕಿ ಕೊಲೆಗೈದ ಪ್ರಕರಣ| ಮದ್ಯದ ಅಮಲಲ್ಲಿ ನಡೆದಿತ್ತು ಹತ್ಯೆ!!

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಬೆಳ್ಳಾರೆ ಪೇಟೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಮಹಿಳೆಯ ಕೊಲೆಗೈದ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬೆಳ್ಳಾರೆಯ ಪಾಟಾಜೆಯ ನಳಿನಿ ಅವರನ್ನು ರವಿವಾರ ರಾತ್ರಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ಆರೋಪಿ ಕಲ್ಮಡ್ಕದ ಜೋಗಿಯಡ್ಕದ ವೆಂಕಪ್ಪ ಅವರ ಪುತ್ರ ಜಯರಾಮ ನಾಯ್ಕನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಹಿನ್ನೆಲೆ:ಬೆಳ್ಳಾರೆ ಗ್ರಾಮದ ಪಾಟಾಜೆ ನಿವಾಸಿ ಸುಂದರ ಅವರ ಪತ್ನಿ ನಳಿನಿ (55) ಅವರನ್ನು […]

ಬೆಳ್ಳಾರೆ: ಮಹಿಳೆಯ ತಲೆಗೆ ಕಲ್ಲೆತ್ತಿ‌ ಹಾಕಿ ಕೊಲೆಗೈದ ಪ್ರಕರಣ| ಮದ್ಯದ ಅಮಲಲ್ಲಿ ನಡೆದಿತ್ತು ಹತ್ಯೆ!! Read More »

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಡಾ. ಎಸ್.ಪಿ. ಬಾಲಸುಬ್ರಮಣ್ಯಂ ಸಂಗೀತ ಸಂಭ್ರಮ

ಸಮಗ್ರ ನ್ಯೂಸ್: ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಸ್ವರ ಮಾಂತ್ರಿಕ, ಗಾನಗಂಧರ್ವ, ಪದ್ಮಭೂಷಣ ಡಾ. ಎಸ್.ಪಿ. ಬಾಲಸುಬ್ರಮಣ್ಯಂ ಅವರ 78ನೇ ಜನ್ಮದಿನಾಚರಣೆಯ ಪ್ರಯುಕ್ತ ಎಸ್.ಪಿ.ಬಿ. ಸಂಗೀತ ಸಂಭ್ರಮ ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ನ ಸಭಾಂಗಣದ ವೇದಿಕೆಯಲ್ಲಿ ಜೂನ್ 9ರಂದು ನಡೆಸಲಾಯಿತು. ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷರು, ಗಾಯಕರು ಮತ್ತು ಚಿತ್ರ ನಿರ್ದೇಶಕ ಹೆಚ್. ಭೀಮರಾವ್ ವಾಷ್ಠರ್ ರವರು ವಹಿಸಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸಾಧನೆ, ವ್ಯಕ್ತಿತ್ವದ ಗುಣಗಾನ ಮಾಡಿದರು.

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಡಾ. ಎಸ್.ಪಿ. ಬಾಲಸುಬ್ರಮಣ್ಯಂ ಸಂಗೀತ ಸಂಭ್ರಮ Read More »

ಬಂಟ್ವಾಳ: ವಿಜಯೋತ್ಸವದ ವೇಳೆ ಚೂರಿ ಇರಿತ ಪ್ರಕರಣ| ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್

ಸಮಗ್ರ ನ್ಯೂಸ್: ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಕೊಣಾಜೆ ಠಾಣಾ ವ್ಯಾಪ್ತಿಯ ಬೊಳಿಯಾರ್ ನಲ್ಲಿ ವಿಜಯೋತ್ಸವ ಆಚರಿಸುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿದ ಪ್ರಕರಣದಲ್ಲಿ ಆರೋಪಿಗಳನ್ನ ಬಂಧಿಸಲಾಗಿದೆ. ಜೊತೆಗೆ ಪ್ರಚೋದನಾಕಾರಿ ಘೋಷಣೆ ಕೂಗಿದ ಆರೋಪದಡಿ ಐವರು ಬಿಜೆಪಿ ಕಾರ್ಯಕರ್ತರ ವಿರುದ್ಧವೂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಘಟನೆ ಬಗ್ಗೆ ಬಿಜೆಪಿ ಕಾರ್ಯಕರ್ತರ ವಿರುದ್ಧವೂ ದೂರು ನೀಡಿರುವ ಬೋಳಿಯಾರ್ ಜುಮ್ಮಾ ಮಸೀದಿ ಅಧ್ಯಕ್ಷ ಪಿ.ಕೆ.ಅಬ್ದುಲ್ಲ, ನಿನ್ನೆ ರಾತ್ರಿ 8.50

ಬಂಟ್ವಾಳ: ವಿಜಯೋತ್ಸವದ ವೇಳೆ ಚೂರಿ ಇರಿತ ಪ್ರಕರಣ| ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್ Read More »

ಎಸ್ಡಿಪಿಐ ಕಡಬ ಬ್ಲಾಕ್ ನ ಕಡಬ ಪಟ್ಟಣ ಪಂಚಾಯತ್ ಸಮಿತಿಯ ಸಭೆ| ನೂತನ ಪದಾಧಿಕಾರಿಗಳ ಆಯ್ಕೆ

ಸಮಗ್ರ ನ್ಯೂಸ್: ಎಸ್ಡಿಪಿಐ (SDPI) ಕಡಬ ಬ್ಲಾಕ್ ನ ಕಡಬ ಪಟ್ಟಣ ಪಂಚಾಯತ್ ಸಮಿತಿಯ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಬ್ಲಾಕ್ ಸಮಿತಿಯ ಅಧ್ಯಕ್ಷ ಹಾರೀಸ್ ಕಡಬ ರವರ ನೇತೃತ್ವದಲ್ಲಿ ಜೂನ್ 8ರಂದು ಕಲಾರದಲ್ಲಿ ನಡೆಯಿತು. ಸಭೆಯಲ್ಲಿ ಕಡಬ ಪಟ್ಟಣ ಪಂಚಾಯತ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. ಅಧ್ಯಕ್ಷರಾಗಿ ನವಾಜ್ ಕಡಬ, ಕಾರ್ಯದರ್ಶಿಯಾಗಿ ಶಕೀಲ್ ರಹೀಮನ್ ಕಳಾರ, ಕೋಶಾಧಿಕಾರಿಯಾಗಿ ಕಮರುದ್ದಿನ್ ಅಲೆಕ್ಕಾಡಿ,ಉಪಾಧ್ಯಕ್ಷರಾಗಿ ರಫೀಕ್ ಕಳಾರ, ಜೊತೆ ಕಾರ್ಯದರ್ಶಿ ಯಾಗಿ ಆಶೀಕ್ ಕಡಬಇವರನ್ನು ಆರಿಸಲಾಯಿತು. ಸಭೆಯಲ್ಲಿ

ಎಸ್ಡಿಪಿಐ ಕಡಬ ಬ್ಲಾಕ್ ನ ಕಡಬ ಪಟ್ಟಣ ಪಂಚಾಯತ್ ಸಮಿತಿಯ ಸಭೆ| ನೂತನ ಪದಾಧಿಕಾರಿಗಳ ಆಯ್ಕೆ Read More »

ಸುಳ್ಯ: ಚಂದನ ಸಾಹಿತ್ಯ ವೇದಿಕೆಯಿಂದ ಮುಂಗಾರು ಕವಿಗೋಷ್ಠಿ, ಕೃತಿ ಬಿಡುಗಡೆ

ಸಮಗ್ರ ನ್ಯೂಸ್: ಜೂ.9 ರಂದು ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ದೇವಮ್ಮ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ಮುಂಗಾರು ಕವಿಗೋಷ್ಠಿ ಮತ್ತು ಧಾರ್ಮಿಕ ಕೃತಿ ಬಿಡುಗಡೆ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ, ಜ್ಯೋತಿಷ್ಯ, ಗಾಯಕ ಮತ್ತು ಚಿತ್ರ ನಿರ್ದೇಶಕ ಎಚ್. ಭೀಮರಾವ್ ವಾಷ್ಠರ್ ರವರು ವಹಿಸಿದ್ದರು. ಉದ್ಘಾಟನೆಯನ್ನು ಚೈತನ್ಯ ಸೇವಾಶ್ರಮ ಇದರ ಸಂಚಾಲಕ ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ಳಾರೆಯ ಕೆ. ಶಿವರಾಮ ಕಾರಂತ್

ಸುಳ್ಯ: ಚಂದನ ಸಾಹಿತ್ಯ ವೇದಿಕೆಯಿಂದ ಮುಂಗಾರು ಕವಿಗೋಷ್ಠಿ, ಕೃತಿ ಬಿಡುಗಡೆ Read More »

ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತ ಮಿಂಚುಬಂಧಕ ಅಳವಡಿಕೆ – ಸಚಿವ ದಿನೇಶ್ ಗುಂಡೂರಾವ್

ಸಮಗ್ರ ನ್ಯೂಸ್: ದ.ಕ. ಜಿಲ್ಲೆಯಲ್ಲಿ ಸಿಡಿಲು-ಗುಡುಗಿನಿಂದ ಸಾವು ಪ್ರಕರಣ ಹೆಚ್ಚಾಗಿ ಸಂಭವಿಸುವ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಿಂಚು ಪ್ರತಿಬಂಧಕ ವ್ಯವಸ್ಥೆಯನ್ನು ಅಳವಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆಗಾಲದ ಸಂದರ್ಭ ಸಂಭವನೀಯ ಪ್ರಾಕೃತಿಕ ವಿಕೋಪದ ಸಿದ್ಧತೆ ಸೇರಿದಂತೆ ವಿವಿಧ ವಿಷಯಗಳ ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಸಚಿವರು ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಆರಂಭಿಕ

ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತ ಮಿಂಚುಬಂಧಕ ಅಳವಡಿಕೆ – ಸಚಿವ ದಿನೇಶ್ ಗುಂಡೂರಾವ್ Read More »

ಬೆಳ್ಳಾರೆ: ತಲೆಗೆ ಕಲ್ಲು ಎತ್ತಿ ಹಾಕಿ ಮಹಿಳೆಯ ಬರ್ಬರ ಕೊಲೆ!!

ಸಮಗ್ರ ನ್ಯೂಸ್: ತಲೆಗೆ ಕಲ್ಲನ್ನು ಎತ್ತಿಹಾಕಿ‌ ಕೊಲೆ ಮಾಡಿದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಸುಳ್ಯ ತಾಲೂಕಿನ ಬೆಳ್ಳಾರೆಯ ಎಪಿಎಂಸಿ ಸಂತೆ ಮಾರುಕಟ್ಟೆಯಲ್ಲಿ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಬೆಳ್ಳಾರೆ ಗ್ರಾಮದ ನಳಿನಿ ಪಾಟಾಜೆ ಎಂದು ಗುರುತಿಸಲಾಗಿದೆ. ಮಹಿಳೆಯ ತಲೆಗೆ ಕೆಂಪುಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತಲೆ ಒಡೆದು ರಕ್ತ ಹರಿದುಹೋಗಿದೆ. ಸ್ಥಳದಲ್ಲಿ ಕೆಂಪು ಕಲ್ಲಿದ್ದು, ಅದನ್ನೇ ತಲೆಗೆ ಎತ್ತಿಹಾಕಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಜೂ.10ರ ಮುಂಜಾನೆ ಪ್ರಕರಣ‌ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಬೆಳ್ಳಾರೆ ಠಾಣಾಧಿಕಾರಿ

ಬೆಳ್ಳಾರೆ: ತಲೆಗೆ ಕಲ್ಲು ಎತ್ತಿ ಹಾಕಿ ಮಹಿಳೆಯ ಬರ್ಬರ ಕೊಲೆ!! Read More »

ಕಡಬ: ಪ್ರಿಡ್ಜ್ ಸ್ಪೋಟಗೊಂಡು ಅನಾಹುತ| ಸ್ವಲದರಲ್ಲೇ ಪ್ರಾಣಾಪಾಯದಿಂದ ಪಾರಾದ ಮನೆಯವರು

ಸಮಗ್ರ ನ್ಯೂಸ್: ಮನೆಯೊಳಗಿದ್ದ ರೆಫ್ರಿಜರೇಟರ್ ಸ್ಪೋಟಗೊಂಡು ವಿದ್ಯುತ್ ಉಪಕರಣ ಸೇರಿದಂತೆ ಮನೆಯ ದಾಖಲೆ ಪತ್ರಗಳು ಸುಟ್ಟುಹೋದ ಘಟನೆ ಭಾನುವಾರ( ಜೂ. 9 ರಂದು) ಕಡಬದಲ್ಲಿ ನಡೆದಿದೆ. ಕಡಬದ ಅಡ್ಡಗದ್ದೆ ಅಂಗನವಾಡಿ ಬಳಿ ಇರುವ ಫಾರುಕ್ ಎಂಬವರ ಮನೆಯಲ್ಲಿ ಈ ಅವಘಡ ಭಾನುವಾರ 3 ಘಂಟೆ ಸುಮಾರಿಗೆ ನಡೆದಿದೆ. ಮದ್ಯಾಹ್ನದ ವೇಳೆ ಫಾರುಕ್ ಮತ್ತು ಅವರ ಪತ್ನಿ ಸಹಿತ ಮಕ್ಕಳು ಮನೆಯಲ್ಲಿದ್ದರು. ಬಳಿಕ ಪತ್ನಿ ಮಕ್ಕಳು ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದು ಫಾರುಕ್ ಅವರು ತಹಶಿಲ್ದಾರ್ ಕಚೇರಿ ಬಳಿ ಇರುವ

ಕಡಬ: ಪ್ರಿಡ್ಜ್ ಸ್ಪೋಟಗೊಂಡು ಅನಾಹುತ| ಸ್ವಲದರಲ್ಲೇ ಪ್ರಾಣಾಪಾಯದಿಂದ ಪಾರಾದ ಮನೆಯವರು Read More »

ಬಂಟ್ವಾಳ: ಬಿಜೆಪಿ ವಿಜಯೋತ್ಸವದ ಬಳಿಕ ಚಾಕು ಇರಿತ; ಇಬ್ಬರು ಗಂಭೀರ

ಸಮಗ್ರ ನ್ಯೂಸ್: ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರು ಎಂಬಲ್ಲಿ ಘಟನೆ ನಡೆದಿದೆ. ಬೋಳಿಯಾರು ನಿವಾಸಿಗಳಾದ ಸುರೇಶ್ ‌ಹಾಗೂ ನಂದ ಕುಮಾರ್‌ಗೆ ಚೂರಿ ಇರಿಯಲಾಗಿದೆ. ಮೋದಿ ಪದಗ್ರಹಣ ಹಿನ್ನೆಲೆಯಲ್ಲಿ ಬೋಳಿಯಾರ್‌ನಲ್ಲಿ ವಿಜಯೋತ್ಸವ ಆಯೋಜಿಸವಾಗಿತ್ತು. ವಿಜಯೋತ್ಸವ ಮುಗಿಸಿ ಬೋಳಿಯಾರು ಪೇಟೆಯಲ್ಲಿ ನಿಂತಿದ್ದ ಇಬ್ಬರು ಯುವಕರ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ಬಂದ ಅಪರಿಚಿತ ದುಷ್ಕರ್ಮಿಗಳ ತಂಡದಿಂದ ಏಕಾಏಕಿ ಯುವಕರ ಮೇಲೆ ಅಟ್ಯಾಕ್ ನಡೆದಿದೆ. ಈ

ಬಂಟ್ವಾಳ: ಬಿಜೆಪಿ ವಿಜಯೋತ್ಸವದ ಬಳಿಕ ಚಾಕು ಇರಿತ; ಇಬ್ಬರು ಗಂಭೀರ Read More »

ಹವಾಮಾನ ವರದಿ| ಕರಾವಳಿಗೆ ಜೂ.9ರಂದು ರೆಡ್ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಧಾರಾಕಾರ ಮಳೆ ಸುರಿಯುತ್ತಿದ್ದು, ಕೆಲಜಿಲ್ಲೆಗಳಲ್ಲಿ ಭಾರಿ ಮಳೆ ಅವಾಂತರವನ್ನು ಸೃಷ್ಟಿಸಿದೆ. ಸದ್ಯ ಭಾರಿ ಮಳೆ ಸಂಭವವಿರುವ ಕಾರಣ ಮುಂದಿನ 24 ಗಂಟೆಗಳಿಗೆ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಅರೇಂಜ್ ಅಲರ್ಟ್. ದಕ್ಷಿಣ ಕನ್ನಡ, ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ

ಹವಾಮಾನ ವರದಿ| ಕರಾವಳಿಗೆ ಜೂ.9ರಂದು ರೆಡ್ ಅಲರ್ಟ್ ಘೋಷಣೆ Read More »