ಮಂಗಳೂರು: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಞಳ್ ಇನ್ನಿಲ್ಲ
ಸಮಗ್ರ ನ್ಯೂಸ್: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ಕೂರ ತಂಙಲ್ ನಿಧನರಾಗಿದ್ದಾರೆ. ಉಳ್ಳಾಲ ಅಬ್ದುರ್ರಹ್ಮಾನ್ ಕುಂಞಿಕೋಯ ತಂಙಳ್ ಅವರ ಪುತ್ರರೂ ಆಗಿರುವ ಫಝಲ್ ಕೋಯಮ್ಮ ತಂಙಲ್ ಉಳ್ಳಾಲ ಖಾಝಿಯಾಗಿದ್ದರು. ಕೇರಳದ ಎಟ್ಟಿಕುಳಂನಲ್ಲಿರುವ ಅವರು ರಾತ್ರಿ ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಈಗ ಕೂರತ್ ತಂಙಳ್ ರ ಜನಾಝ ಎಟ್ಟಿಕ್ಕುಳಂ ಸ್ವಂತ ಮನೆಯಲ್ಲಿದ್ದು, ಸಂಜೆ 5 ಗಂಟೆಗೆ ಶೈಖುನಾ ಸುಲ್ತಾನುಲ್ ಉಲಮಾರ ನೇತೃತ್ವದಲ್ಲಿ ಪುತ್ತೂರಿನ ಕೂರತ್ ನಲ್ಲಿ ಜನಾಝ ನಮಾಝ್ ನಡೆಯಲಿದೆ.
ಮಂಗಳೂರು: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಞಳ್ ಇನ್ನಿಲ್ಲ Read More »