ಕರಾವಳಿ

ನೆಲ್ಯಾಡಿ: ರಾ.ಹೆದ್ದಾರಿ 75ರಲ್ಲಿ ಭೀಕರ ಅಪಘಾತ| ಮಂಗಳೂರು ಮೂಲದ ಮೆಡಿಕಲ್ ರೆಪ್ರೆಸೆಂಟೇಟಿವ್ ದುರ್ಮರಣ

ಸಮಗ್ರ ನ್ಯೂಸ್: ಬೈಕ್ ಹಾಗೂ ಪಿಕಪ್ ನಡುವೆ ಡಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಜು.12 ರಂದು ಮಧ್ಯಾಹ್ನ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಕೊಲ್ಪೆಯಲ್ಲಿ ನಡೆದಿದೆ. ಮಂಗಳೂರು ಕೋಡಿಕ್ಕಲ್ ನಿವಾಸಿ, ಬೈಕ್ ಸವಾರ ಪ್ರಣಮ್ ಕೋಟ್ಯಾನ್ ಮೃತಪಟ್ಟ ದುರ್ದೈವಿ . ಮೆಡಿಕಲ್ ರೆಪ್ರಸೆಂಟಿವ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು ಉಪ್ಪಿನಂಗಡಿಯಿಂದ ನೆಲ್ಯಾಡಿಗೆ ಹೋಗುತ್ತಿದ್ದ ವೇಳೆ ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಪಿಕಪ್ ನಡುವೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ […]

ನೆಲ್ಯಾಡಿ: ರಾ.ಹೆದ್ದಾರಿ 75ರಲ್ಲಿ ಭೀಕರ ಅಪಘಾತ| ಮಂಗಳೂರು ಮೂಲದ ಮೆಡಿಕಲ್ ರೆಪ್ರೆಸೆಂಟೇಟಿವ್ ದುರ್ಮರಣ Read More »

ಕಾಪು ಗರುಡ ಗ್ಯಾಂಗ್ ಗೆ ಆರ್ಥಿಕ ನೆರವು| ಉಪ್ಪಿನಂಗಡಿಯ ಯುವತಿ ಈಗ ಉಡುಪಿ ಪೊಲೀಸರ ಅತಿಥಿ!!

ಸಮಗ್ರ ನ್ಯೂಸ್: ಉಡುಪಿಯ ಕಾಪು ಗರುಡ ಗ್ಯಾಂಗ್ ಸದಸ್ಯರಿಗೆ ಆರ್ಥಿಕ ನೆರವು ನೀಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಆರೋಪಿಯೊಬ್ಬನ ಆಪ್ತ ಯುವತಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಕರ್ವೇಲು, ಬಾನೊಟ್ಟು ನಿವಾಸಿ ಝಕರಿಯಾ ಪತ್ನಿ ಸಫಾರ ಯಾನೆ ಸಾಜಿದ (21) ಎಂದು ಗುರುತಿಸಲಾಗಿದೆ. ಗರುಡ ಗ್ಯಾಂಗ್‌ ಸದಸ್ಯರಿಗೆ ಸಫಾರ ಆರ್ಥಿಕ ನೆರವು ಮತ್ತು ಆಶ್ರಯ ವ್ಯವಸ್ಥೆ ಮಾಡಿದ್ದಳು. ಗ್ಯಾಂಗ್ ಸದಸ್ಯರಿಗೆ ಮೊಬೈಲ್‌ ಫೋನ್ ನೀಡಿ ಹಣ ವರ್ಗಾವಣೆ ಮಾಡಿರುವ

ಕಾಪು ಗರುಡ ಗ್ಯಾಂಗ್ ಗೆ ಆರ್ಥಿಕ ನೆರವು| ಉಪ್ಪಿನಂಗಡಿಯ ಯುವತಿ ಈಗ ಉಡುಪಿ ಪೊಲೀಸರ ಅತಿಥಿ!! Read More »

ಕುಕ್ಕೆ ಸುಬ್ರಹ್ಮಣ್ಯ: ಅಪಘಾತದಲ್ಲಿ ಸತ್ತ ನಾಗನಿಗೆ ಸಂಸ್ಕಾರ ನೀಡಲು ಹಿಂದೇಟು| ದೇವಸ್ಥಾನದ ಬಳಿ ಹಾವಿನ ಕಳೇಬರ ಇಟ್ಟು ಪ್ರತಿಭಟನೆ

ಸಮಗ್ರ ನ್ಯೂಸ್: ನಾಗದೋಷ ಪರಿಹಾರ ಮಾಡುವ ಹೆಸರಾಂತ ಧಾರ್ಮಿಕ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯದ ಆಡಳಿತ ಕಚೇರಿ ಮುಂಭಾಗ ವ್ಯಕ್ತಿಯೊಬ್ಬರು ಸತ್ತ ನಾಗರ ಹಾವು ಇಟ್ಟು ಪ್ರತಿಭಟನೆಗೆ ಮುಂದಾದ ಘಟನೆ ಜು.11 ರಂದು ನಡೆದಿದೆ. ಕುಕ್ಕೆ ಬೈಪಾಸ್ ರಸ್ತೆಯಲ್ಲಿ ಯಾವುದೋ ವಾಹನದಡಿಗೆ ಬಿದ್ದು ನಾಗರ ಹಾವು ಸತ್ತು ಬಿದ್ದಿತ್ತು. ಇದನ್ನು ಗಮನಿಸಿದ ಗ್ರಾ.ಪಂ ಸದಸ್ಯ ರಾಜೇಶ್ ಎಂಬವರು ದೇಗುಲದ ಗಮನಕ್ಕೆ ತರಲು ಪ್ರಯತ್ನಿಸಿದ್ದರು ಎಂದು ತಿಳಿದು ಬಂದಿದೆ. ದೇಗುಲದ ಕಡೆಯಿಂದ ಸಕಾಲಕ್ಕೆ ಸ್ಪಂದನೆ ದೊರೆಯದ ಹಿನ್ನೆಲೆ ಆಕ್ರೋಶಕೊಂಡು ದೇವಸ್ಥಾನದ

ಕುಕ್ಕೆ ಸುಬ್ರಹ್ಮಣ್ಯ: ಅಪಘಾತದಲ್ಲಿ ಸತ್ತ ನಾಗನಿಗೆ ಸಂಸ್ಕಾರ ನೀಡಲು ಹಿಂದೇಟು| ದೇವಸ್ಥಾನದ ಬಳಿ ಹಾವಿನ ಕಳೇಬರ ಇಟ್ಟು ಪ್ರತಿಭಟನೆ Read More »

ಟೀಂ ಇಂಡಿಯಾ ತ್ರೋಡೌನ್ ತಜ್ಞ ರಾಘವೇಂದ್ರ ಕುಕ್ಕೆ ಭೇಟಿ

ಸಮಗ್ರ ನ್ಯೂಸ್: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬುಧವಾರ ಟೀಂ ಇಂಡಿಯಾದ ತ್ರೋಡೌನ್ ತಜ್ಞ ರಾಘವೇಂದ್ರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಟೀಂ ಇಂಡಿಯಾದ ತ್ರೋಡೌನ್ ತಜ್ಞರಾಗಿರುವ ರಾಘವೇಂದ್ರ ಅವರು ಟಿ20 ವಿಶ್ವಕಪ್ ಗೆದ್ದ ಬಳಿಕ ಕುಕ್ಕೆ ದೇವಸ್ಥಾನಕ್ಕೆ ಆಗಮಿಸಿದ್ದು, ಈ ಹಿಂದೆ ದೇವಸ್ಥಾನಕ್ಕೆ ಬಂದ ಸಂದರ್ಭ ಟೀಂ ಇಂಡಿಯಾ ವಿಶ್ವಚಾಂಪಿಯನ್ ಆದರೆ ಸೇವೆ ನೆರವೇರಿಸುವುದಾಗಿ ಪ್ರಾರ್ಥನೆ ಸಲ್ಲಿಸಿದ್ದರು.ಈ ಪ್ರಕಾರ ಬುಧವಾರ ಸುಬ್ರಹ್ಮಣ್ಯನಿಗೆ ಸೇವೆ ಸಮರ್ಪಿಸಿದರು.

ಟೀಂ ಇಂಡಿಯಾ ತ್ರೋಡೌನ್ ತಜ್ಞ ರಾಘವೇಂದ್ರ ಕುಕ್ಕೆ ಭೇಟಿ Read More »

ಸುಬ್ರಹ್ಮಣ್ಯ: ಅನುಮತಿ ಪಡೆಯದೇ ಜಾನುವಾರು ಸಾಗಾಟ| ಸಕಲೇಶಪುರದ ಮೂಲದ ಚಾಲಕ, ವಾಹನ ವಶಕ್ಕೆ ಪಡೆದ ಪೊಲೀಸರು

ಸಮಗ್ರ ನ್ಯೂಸ್: ಅಕ್ರಮ ಜಾನುವಾರು ಸಾಗಾಟ ಪ್ರಕರಣ ಪತ್ತೆಯಾಗಿದ್ದು, ಪಿಕಪ್‌ ವಾಹನ, ಪಿಕಪ್‌ ಚಾಲಕ, ಜಾನುವಾರುಗಳನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ಗುರುವಾರ ಠಾಣಾ ವ್ಯಾಪ್ತಿಯ ಪಂಜದಲ್ಲಿ ನಡೆದಿದೆ. ಬೆಳ್ಳಾರೆ ಕಡೆಯಿಂದ ಪಂಜದ ಕಡೆ ಬರುತ್ತಿದ್ದ ಪಿಕಪ್‌ ವಾಹನದಲ್ಲಿ ಎರಡು ದನ ಹಾಗೂ ಎರಡು ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಮಾಹಿತಿ ಪಡೆದ ಪೊಲೀಸರು ವಾಹನ ಸಹಿತ ಚಾಲಕ, ನಾಲ್ಕು ಜಾನುವಾರುಗಳನ್ನು ವಶಕ್ಕೆ ಪಡೆದರು. ವಾಹನ ಚಾಲಕ ಸಕಲೇಶಪುರ ಮೂಲದ ಲೋಹಿತ್‌ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು

ಸುಬ್ರಹ್ಮಣ್ಯ: ಅನುಮತಿ ಪಡೆಯದೇ ಜಾನುವಾರು ಸಾಗಾಟ| ಸಕಲೇಶಪುರದ ಮೂಲದ ಚಾಲಕ, ವಾಹನ ವಶಕ್ಕೆ ಪಡೆದ ಪೊಲೀಸರು Read More »

ಸುಳ್ಯ: ಗಾಂಜಾ ಸಾಗಾಟ ಆರೋಪಿಗಳಿಗೆ ಶಿಕ್ಷೆ ಪ್ರಕಟ

ಸಮಗ್ರ ನ್ಯೂಸ್: ಗಾಂಜಾ ಸಾಗಾಟದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾಗಿದ್ದು ಪ್ರಕರಣದಲ್ಲಿ ಭಾಗಿಯಾದ ಇಬ್ಬರಿಗೂ ಸುಳ್ಯ ನ್ಯಾಯಾಲಯ ಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ. ಪ್ರಕರಣದ ವಿವರ:2018ರ ಮಾರ್ಚ್ 28ರಂದು ಸುಳ್ಯ ಗಾಂಧಿನಗರ ಶಾಲಾ ಕ್ರಾಸ್ ಬಳಿ ಮಾಣಿ- ಮೈಸೂರು ಹೆದ್ದಾರಿಯಲ್ಲಿ ಬ್ಯಾರಿಕೇಡ್ ಇಟ್ಟು ವಾಹನಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದ ಸಮಯ ಸಂಜೆ 6.45 ಗಂಟೆಗೆ ಅರಂಬೂರು ಕಡೆಯಿಂದ ಸುಳ್ಯ ಕಡೆಗೆ ಮೋಟಾರು ಸೈಕಲ್‌ ನಲ್ಲಿ ಬರುತ್ತಿದ್ದ ಪಿ.ಎಂ. ಮೊಯಿದ್ದೀನ್ ಯಾನೆ ತಲವಾರ್ ಮೊಯಿದು ಮತ್ತು ಮುರಳಿ ಸಿ ಎಂಬಿಬ್ಬರನ್ನು

ಸುಳ್ಯ: ಗಾಂಜಾ ಸಾಗಾಟ ಆರೋಪಿಗಳಿಗೆ ಶಿಕ್ಷೆ ಪ್ರಕಟ Read More »

ಕರ್ನಾಟಕಕ್ಕೆ ಮತ್ತೆ ‘ಕಾವೇರಿ’ ಶಾಕ್… ತಮಿಳುನಾಡಿಗೆ ನೀರು ಹರಿಸಲು CWRC ಸೂಚನೆ

ಸಮಗ್ರ ನ್ಯೂಸ್: ಕರ್ನಾಟಕಕ್ಕೆ ಮತ್ತೆ ಶಾಕ್ ಎದುರಾಗಿದೆ. ಹೌದು ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) ಕರ್ನಾಟಕಕ್ಕೆ ಮತ್ತೆ ಶಾಕ್ ನೀಡಿದೆ. ಕರ್ನಾಟಕದ ಜಲಾಶಯಗಳಿಗೆ ಒಳಹರಿವು ಪ್ರಮಾಣ ಕಡಿಮೆ ಇದೆ ಎಂಬುದಾಗಿ ಕರ್ನಾಟಕ ಈ ಹಿಂದೆ ಮನವಿ ಮಾಡಿದರೂ ಜುಲೈ 12ರಿಂದ 31ರವರೆಗೆ ತಮಿಳುನಾಡಿಗೆ ಪ್ರತಿದಿನ 1 ಟಿಎಂಸಿ ಅಡಿ ನೀರು ಹರಿಸಬೇಕು ಎಂದು ಸಮಿತಿ ಸಭೆಯಲ್ಲಿ ಕರ್ನಾಟಕಕ್ಕೆ ಸಿಡಬ್ಲ್ಯೂಆರ್‌ಸಿ ಸೂಚಿಸಿದೆ. ಕರ್ನಾಟಕದಲ್ಲಿ ಮಳೆಯ ಕೊರತೆಯಿಂದ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆ ಆಗಿದೆ. ನಾಲ್ಕೂ ಜಲಾಶಯಗಳಲ್ಲಿ 58.66

ಕರ್ನಾಟಕಕ್ಕೆ ಮತ್ತೆ ‘ಕಾವೇರಿ’ ಶಾಕ್… ತಮಿಳುನಾಡಿಗೆ ನೀರು ಹರಿಸಲು CWRC ಸೂಚನೆ Read More »

ಸುಳ್ಯ: ಕುಡುಕರನ್ನು ಓಡಿಸಲು‌ ಕುಡಿದು ಬಂದ ಹೊಯ್ಸಳ ಪೊಲೀಸರು!? ಗುತ್ತಿಗಾರಿನಲ್ಲೊಂದು ವಿಲಕ್ಷಣ ಘಟನೆ

ಸಮಗ್ರ ನ್ಯೂಸ್: ಬಸ್ ನಿಲ್ದಾಣದಲ್ಲಿ ಮದ್ಯ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರನ್ನು ಅಲ್ಲಿಂದ ಓಡಿಸಲು ಬಂದ ಪೋಲೀಸರೇ ಕುಡಿದು ಬಂದಿದ್ದರೆಂದು ಸಾರ್ವಜನಿಕರಿಗೆ ಅನುಮಾನ ಬಂದು ಪೊಲೀಸರನ್ನೇ ಪ್ರಶ್ನಿಸಿದ ವಿಲಕ್ಷಣ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ‌ಭಾರೀ ವೈರಲ್ ಅಗುತ್ತಿದ್ದು, ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಜು.10 ರಂದು ಗುತ್ತಿಗಾರು ಬಸ್ ನಿಲ್ದಾಣದಲ್ಲಿ ಕೆಲಮದಿ ಕುಡಿದು ಮಲಗಿದ್ದು,‌ ಇವರಿಂದ ತೊಂದರೆ ಆಗುತ್ತಿರುವುದನ್ನು ಗಮನಿಸಿದ ಮಹಿಳೆಯೋರ್ವರು ಪೊಲೀಸ್ ಸಹಾಯವಾಣಿ ಸಂಖ್ಯೆ 112 ಗೆ

ಸುಳ್ಯ: ಕುಡುಕರನ್ನು ಓಡಿಸಲು‌ ಕುಡಿದು ಬಂದ ಹೊಯ್ಸಳ ಪೊಲೀಸರು!? ಗುತ್ತಿಗಾರಿನಲ್ಲೊಂದು ವಿಲಕ್ಷಣ ಘಟನೆ Read More »

ಸುಳ್ಯ: ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ| ಸಮರ್ಥ ವರದಿಯಿಂದ ಸಮಾಜದಲ್ಲಿ ಸ್ವಾಸ್ಥ್ಯ – ಅಜ್ಜಮಾಡ ಕುಟ್ಟಪ್ಪ

ಸಮಗ್ರ ನ್ಯೂಸ್:ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಘದಿಂದ ಪತ್ರಿಕಾ ದಿನಾಚರಣೆಯು ಸುಳ್ಯದ ಕನ್ನಡ ಭವನದಲ್ಲಿ ಜು.10ರಂದು ನಡೆಯಿತು. ಸುಳ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕಲ್ನಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಮಾತನಾಡಿದರು. ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡಲು ಆಗಮಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಮಾಹಿತಿಯ ಕೊರತೆಯಿಂದ, ಗ್ರಹಿಕೆಯ ಕೊರತೆಯಿಂದ ಸುದ್ದಿಗಳು ತಪ್ಪಾಗಿ ಪ್ರಕಟವಾಗದಂತೆ

ಸುಳ್ಯ: ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ| ಸಮರ್ಥ ವರದಿಯಿಂದ ಸಮಾಜದಲ್ಲಿ ಸ್ವಾಸ್ಥ್ಯ – ಅಜ್ಜಮಾಡ ಕುಟ್ಟಪ್ಪ Read More »

ಮಂಗಳೂರು: ಪೇದೆಯಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್ ಪೆಕ್ಟರ್

ಸಮಗ್ರ ನ್ಯೂಸ್: ಕಿರಿಯ ಪೊಲೀಸ್‌ ಅಧಿಕಾರಿಗಳಿಂದ ಲಂಚ ಸ್ವೀಕರಿಸುತ್ತಿದ್ದ ಕೆ.ಎಸ್.ಆರ್.ಪಿ. ಇನ್ಸ್ ಪೆಕ್ಟರ್ ರೆಡ್‌ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಅಸೈಗೋಳಿ ಎಂಬಲ್ಲಿ ನಡೆದಿದೆ. ಕೆ.ಎಸ್.ಆರ್.ಪಿ. ಇನ್ಸ್ ಪೆಕ್ಟರ್ ಮೊಹಮ್ಮದ್ ಆರೀಸ್ ಲೋಕಾಯುಕ್ತ ಬಲೆಗೆ ಬಿದ್ದವ. ಗೆಸ್ಟ್ ಹೌಸ್ ಡ್ಯೂಟಿ ಹಾಕಲು ಲಂಚಕ್ಕೆ ಡಿಮಾಂಡ್ ಮಾಡಿದ್ದ ಆರೀಸ್ ರೂ 18 ಸಾವಿರ ಲಂಚದ ರೂಪದಲ್ಲಿ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಗೆಸ್ಟ್ ಹೌಸ್ ಡ್ಯೂಟಿ ಹಾಕಬೇಕಿದ್ದರೇ ಪ್ರತಿ ತಿಂಗಳು 6

ಮಂಗಳೂರು: ಪೇದೆಯಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್ ಪೆಕ್ಟರ್ Read More »