ಕರಾವಳಿ

ಹವಾಮಾನ ವರದಿ|ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ| ವಾರಂತ್ಯದಲ್ಲೂ ಭಾರೀ ಗಾಳಿ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಅರಬ್ಬಿ ಸಮುದ್ರದ ಪೂರ್ವಭಾಗದಲ್ಲಿ ಟ್ರಫ್ ಹಾಗೂ ವಾಯುಭಾರ ಉಂಟಾಗಿರುವ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಮಳೆಯೊಂದಿಗೆ ಗಾಳಿ ವೇಗವು 50 ಕಿ.ಮೀ ತಲುಪುವ ಸಾಧ್ಯತೆ ಇದೆ.ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಶನಿವಾರದಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಜತೆಗೆ ನಿರಂತರ ಗಾಳಿಯ ವೇಗವು 40-50 ಕಿಮೀ ತಲುಪುವ ಸಾಧ್ಯತೆಯಿದೆ. ಇನ್ನೂ […]

ಹವಾಮಾನ ವರದಿ|ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ| ವಾರಂತ್ಯದಲ್ಲೂ ಭಾರೀ ಗಾಳಿ ಮಳೆ ಸಾಧ್ಯತೆ Read More »

ರೆಡ್ ಅಲರ್ಟ್, ಭಾರೀ ಮಳೆ‌ ಹಿನ್ನೆಲೆ| ಜು.20ರಂದು ಉಡುಪಿ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜು. 20ರಂದು ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವೆಡೆ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಅಲ್ಲಲ್ಲಿ ವಿಪತ್ತು ಸಂಭವಿಸಿದ್ದು ಜಿಲ್ಲಾಡಳಿತ ಸಕ್ರಿಯವಾಗಿ ಕಾರ್ಯಾಚರಣೆ ನಡೆಸುತ್ತಿದೆ.

ರೆಡ್ ಅಲರ್ಟ್, ಭಾರೀ ಮಳೆ‌ ಹಿನ್ನೆಲೆ| ಜು.20ರಂದು ಉಡುಪಿ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Read More »

ಭಾರೀ ಮಳೆ‌ ಹಿನ್ನಲೆ| ಜು. 20ರಂದು ದ.ಕ ಜಿಲ್ಲೆಯಾದ್ಯಂತ ಶಾಲೆ, ಪಿಯು ಕಾಲೇಜುಗಳಿಗೆ ರಜೆ

ಸಮಗ್ರ ನ್ಯೂಸ್: ದ.ಕ.ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಎಲ್ಲ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ , ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಜು.20ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಭಾರೀ ಮಳೆ‌ ಹಿನ್ನಲೆ| ಜು. 20ರಂದು ದ.ಕ ಜಿಲ್ಲೆಯಾದ್ಯಂತ ಶಾಲೆ, ಪಿಯು ಕಾಲೇಜುಗಳಿಗೆ ರಜೆ Read More »

ಸುಳ್ಯ: ಕಳಪೆ ಗುಣಮಟ್ಟದ ಕಾಮಗಾರಿಯಿಂದ ಕುಸಿದ ಮೋರಿ

ಸಮಗ್ರ ನ್ಯೂಸ್: ಈ ಬಾರಿಯ ಮಳೆಗೆ ಕೆಮನಬಳ್ಳಿಯ ಹೊಸ ಮೋರಿ ಕುಸಿದು ಹೋಗಿದ್ದು, ಒಂದೂವರೆ ವರ್ಷದ ಹಿಂದೆ ಈ ಮೋರಿಯನ್ನು ಕಳಪೆ ಗುಣಮಟ್ಟದ ಕಾಮಗಾರಿಯಾಗಿ ಮಾಡಿದ್ದು ಇದೀಗ ರಸ್ತೆಯನ್ನು ನಂಬಿದಂತಹ ಐದು ಮನೆಗಳಿಗೆ ಸಂಕಷ್ಟ ಎದುರಾಗಿದೆ. ಯಾವುದೇ ರೀತಿಯ ವಾಹನದಲ್ಲಿ ಸಂಚಾರ ಮಾಡಲು ಜೀವ ಕೈಯಲ್ಲಿಟ್ಟುಕೊಂಡು ಹೋಗುವಂತಾಗಿದೆ. ಅದೇ ರಸ್ತೆಯ ಇನ್ನೊಂದು ಭಾಗದಲ್ಲಿರುವ ದೊಡ್ಡ ಕಾಲು ಸೇತುವೆಯ ಅಪಾಯ ಮಟ್ಟದಲ್ಲಿದೆ.ಇದೀಗ ಅದರ ಒಂದು ಬದಿ ಕುಸಿದು ಬಿದ್ದು ಹೋಗಿದೆ. ಈ ಎರಡು ಸೇತುವೆಗಳು ಅಪಾಯದಲ್ಲಿದ್ದು ಇಲ್ಲಿನ ಜನರು

ಸುಳ್ಯ: ಕಳಪೆ ಗುಣಮಟ್ಟದ ಕಾಮಗಾರಿಯಿಂದ ಕುಸಿದ ಮೋರಿ Read More »

ಮಂಗಳೂರು: ವಿದ್ಯುತ್ ಸ್ಪರ್ಶಿಸಿ‌ ಸಾಯುವ ಸ್ಥಿತಿಯಲ್ಲಿದ್ದ ನಾಯಿಯನ್ನು ರಕ್ಷಿಸಲು ಹೋದ ಯುವತಿ ಸಾವು

ಸಮಗ್ರ ನ್ಯೂಸ್: ಕಳೆದ ಹಲವು ದಿನಗಳಿಂದ ಸುರಿಯುವ ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ಅನೇಕ ಸಾವುನೋವುಗಳು ಸಂಭವಿಸಿದೆ. ಇಂದು ಮುಂಜಾನೆಯ ವೇಳೆ ಮಂಗಳೂರು ತಾಲೂಕಿನ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿಗೆ ತಗುಲಿದ ಕಾಲೇಜಿ ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತ ದುರ್ದೈವಿ ವಿದ್ಯಾರ್ಥಿನಿ ಅಶ್ವಿನಿ ಶೆಟ್ಟಿ(೨೧) ಎಂದು ತಿಳಿದುಬಂದಿದೆ. ಈಕೆ ಗುರುಪುರ ಕಲ್ಲಕಲಂಬಿ ನಿವಾಸಿ ಹರೀಶ್ ಶೆಟ್ಟಿ ಎಂಬವರ ಪುತ್ರಿಯಾಗಿದ್ದು,ಮಂಗಳೂರಿನ ಕಾಲೇಜಲ್ಲಿ ಚಾರ್ಟೆಡ್ ಅಕೌಂಟೆಂಟ್ ವಿಧ್ಯಾಭ್ಯಾಸ

ಮಂಗಳೂರು: ವಿದ್ಯುತ್ ಸ್ಪರ್ಶಿಸಿ‌ ಸಾಯುವ ಸ್ಥಿತಿಯಲ್ಲಿದ್ದ ನಾಯಿಯನ್ನು ರಕ್ಷಿಸಲು ಹೋದ ಯುವತಿ ಸಾವು Read More »

ಯೋಗಾಸನದಲ್ಲಿ 3ನೇ ವಿಶ್ವ ದಾಖಲೆ ಮಾಡಿದ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ

ಸಮಗ್ರ ನ್ಯೂಸ್: ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ, 01 ನಿಮಿಷದಲ್ಲಿ 29 ಬಾರಿ ಉಪವಿಷ್ಠ ಕೋನಾಸನದಿಂದ ರಾಮದೂತಾನಸನಕ್ಕೆ ಪರಿವರ್ತಿಸುವ ಮೂಲಕ ಅಂತಾರಾಷ್ಟ್ರೀಯ ಯೋಗ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ಇವರು ವಾಲ್ತಾಜೆ ಪ್ರಶಾಂತ್ ವಾಲ್ತಾಜೆ ಮತ್ತು ಚೈತ್ರರವರ ಪುತ್ರಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರಿನ ಅಮರ ಯೋಗ ತರಬೇತಿ ಕೇಂದ್ರ ದ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಅವರಿಂದ ಯೋಗ ತರಬೇತಿ ಪಡೆಯುತ್ತಿದ್ದಾರೆ. ಪ್ರಸ್ತುತ

ಯೋಗಾಸನದಲ್ಲಿ 3ನೇ ವಿಶ್ವ ದಾಖಲೆ ಮಾಡಿದ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ Read More »

ಸುಳ್ಯ: ಕಮರಿಗೆ ಉರುಳಿದ ಕಾರು| ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದವರು ಆಸ್ಪತ್ರೆಗೆ

ಸಮಗ್ರ ನ್ಯೂಸ್: ಎಡೆಬಿಡದೆ ಸುರಿಯುವ ಮಳೆಯ ನಡುವೆ ಸುಳ್ಯ ವ್ಯಾಪ್ತಿಯಲ್ಲಿ ಹಲವೆಡೆ ರಸ್ತೆ ಅಪಘಾತಗಳು ಸುದ್ದಿಯಾಗುತ್ತಿವೆ. ವಿಪರೀತ ಮಳೆಗೆ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಕಮರಿಗೆ ಪಲ್ಟಿಯಾದ ಘಟನೆ ಸುಳ್ಯದಿಂದ ವರದಿಯಾಗಿದೆ. ಪೆರಾಜೆ ಗ್ರಾಮದ ದಾಸರಹಿತ್ಲುವಿನಲ್ಲಿ ಜು.18ರಂದು ಬೆಳಿಗ್ಗೆ ಈ ಘಟನೆ ಸಂಭವಿಸಿದೆ .ಕಾಸರಗೋಡಿನಿಂದ ಮಡಿಕೇರಿಗೆ ಮದುವೆ ಕಾರ್ಯಕ್ರಮಕ್ಕೆಂದು ತೆರಳುತ್ತಿದ್ದ ಕಾಸರಗೋಡು ಮೂಲದ ಮೂವರು ಪ್ರಯಾಣಿಕರಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕಮರಿಗೆ ಬಿದ್ದಿದೆ. ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವುದಾಗಿ

ಸುಳ್ಯ: ಕಮರಿಗೆ ಉರುಳಿದ ಕಾರು| ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದವರು ಆಸ್ಪತ್ರೆಗೆ Read More »

ಬೆಳ್ತಂಗಡಿ: ಉಕ್ಕಿ ಹರಿದ ಕಪಿಲಾ ನದಿ| ಶಿಶಿಲದ ಶಿಶಿಲೇಶ್ವರ ದೇವಸ್ಥಾನ ಜಲಾವೃತ

ಸಮಗ್ರ ನ್ಯೂಸ್: ಮತ್ಸ್ಯತೀರ್ಥ ಎಂದೇ ಪ್ರಸಿದ್ಧವಾದ ಶಿಶಿಲ ಶಿಶಿಲೇಶ್ವರ ದೇವಸ್ಥಾನದ ಸಮೀಪ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಗುರುವಾರ ಸಂಜೆಯಿಂದ ಪ್ರವಾಹ ಏರಿಕೆಯಾಗುತ್ತಿದ್ದು, ನೀರು ದೇವಸ್ಥಾನದ ಒಳಗೆ ನೀರು ನುಗ್ಗಿದೆ. ಬೈರಾಪುರ ಘಾಟಿಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕಪಿಲಾ ನದಿಯಲ್ಲಿ ಪ್ರವಾಹ ಉಕ್ಕಿ ಹರಿಯಲಾರಂಭಿಸಿದೆ. ಪ್ರವಾಹದ ಜತೆಗೆ ಭಾರಿ ಗಾತ್ರದ ಮರಗಳೂ ಬರುತ್ತಿದ್ದು, ಶಿಶಿಲದ ಕಿಂಡಿ ಅಣೆಕಟ್ಟೆಯಲ್ಲಿ ಸಿಕ್ಕಿಹಾಕಿಕೊಂಡಿವೆ. ಇದರಿಂದಾಗಿ ಪ್ರವಾಹ ಹರಿಯಲು ಅಡ್ಡಿಯಾಗಿ ನೀರು ಏರುತ್ತಿದೆ. ಈ ವರ್ಷ ಪ್ರಥಮ ಬಾರಿಗೆ ನೀರು ದೇವಸ್ಥಾನದ ಒಳಗೆ ನುಗ್ಗಿದೆ. ದೇವಸ್ಥಾನದ

ಬೆಳ್ತಂಗಡಿ: ಉಕ್ಕಿ ಹರಿದ ಕಪಿಲಾ ನದಿ| ಶಿಶಿಲದ ಶಿಶಿಲೇಶ್ವರ ದೇವಸ್ಥಾನ ಜಲಾವೃತ Read More »

ಭಾರೀ ಮಳೆ, ಭೂಕುಸಿತ ಭೀತಿ| ಮಂಗಳೂರು-ಬೆಂಗಳೂರು ಹೆದ್ದಾರಿ ಸಂಚಾರ ಭಾಗಶಃ ಬಂದ್| ರಾತ್ರಿ ಸಂಚಾರ ಸಂಪೂರ್ಣ ಬಂದ್ ಮಾಡಿ ಆದೇಶ

ಸಮಗ್ರ ನ್ಯೂಸ್: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಧಾರಾಕಾರ ಸುರಿಯುತ್ತಿದೆ. ಇದರಿಂದ ಮಳೆ ಆರ್ಭಟಕ್ಕೆ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದ್ದು, ಹಲವೆಡೆ ರಸ್ತೆಗಳು ಜಲಾವೃತವಾಗಿವೆ. ಈ ಹಿನ್ನೆಲೆಯಲ್ಲಿ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಅದರಂತೆ ಬೆಂಗಳೂರು ಟು ಮಂಗಳೂರು ಅಥವಾ ಮಂಗಳೂರು ಟು ಬೆಂಗಳೂರು ಮಾರ್ಗ ರಸ್ತೆಗಳು ಸಹ ಬಂದ್​ ಆಗಿವೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳಬೇಕಾದರೆ ಚಾರ್ಮಾಡಿ ಘಾಟ್, ಶಿರಾಡಿಘಾಟ್ ಮತ್ತು ಮಡಿಕೇರಿಯ ಸಂಪಾಜೆ ಘಾಟ್​ ಮೂಲಕ ಹೋಗಬೇಕು. ಆದರೆ, ಇದೀಗ ಈ ಮಾರ್ಗಗಳಲ್ಲಿ

ಭಾರೀ ಮಳೆ, ಭೂಕುಸಿತ ಭೀತಿ| ಮಂಗಳೂರು-ಬೆಂಗಳೂರು ಹೆದ್ದಾರಿ ಸಂಚಾರ ಭಾಗಶಃ ಬಂದ್| ರಾತ್ರಿ ಸಂಚಾರ ಸಂಪೂರ್ಣ ಬಂದ್ ಮಾಡಿ ಆದೇಶ Read More »

ಮುಂದುವರಿದ ಭಾರೀ ಮಳೆ| ಜು.19ರಂದು ದಕ್ಷಿಣ ಕನ್ನಡದ 5 ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜು.18 ರಂದು ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜು. 19ರಂದು ಜಿಲ್ಲೆಯ ಸುಳ್ಯ, ಪುತ್ತೂರು, ಕಡಬ, ಬಂಟ್ವಾಳ, ಬೆಳ್ತಂಗಡಿ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ‌‌ ಮುಗಿಲನ್ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ನೇತ್ರಾವತಿ, ಕುಮಾರಧಾರ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವೆಡೆ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಅಲ್ಲಲ್ಲಿ ವಿಪತ್ತು ಸಂಭವಿಸಿದ್ದು

ಮುಂದುವರಿದ ಭಾರೀ ಮಳೆ| ಜು.19ರಂದು ದಕ್ಷಿಣ ಕನ್ನಡದ 5 ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Read More »