ಕರಾವಳಿ

ಪುತ್ತೂರು: ಲಾರಿ‌ ಟಯರ್ ಬದಲಿಸುವ ವೇಳೆ ಸ್ಪೋಟ| ಇಬ್ಬರು ಕಾರ್ಮಿಕರು ಗಂಭೀರ

ಸಮಗ್ರ ನ್ಯೂಸ್: ಲಾರಿಯೊಂದರ ಟಯರ್ ಬದಲಿಸುವ ವೇಳೆ ಟಯರ್ ಸ್ಪೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯಕ್ಕೆ ಒಳಗಾದ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಸೋಮವಾರ ರಾತ್ರಿ ನಡೆದಿದೆ. ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸ್ಪೋಟದ ಭೀಕರತೆ ತೋರಿಸುತ್ತಿದೆ. ಗಾಯಗೊಂಡವರನ್ನು ಬೆಳ್ತಂಗಡಿ ತಾಲೂಕಿನ ಕರಾಯದ ಜನತಾ ಕಾಲನಿ ನಿವಾಸಿ ರಶೀದ್ ಎಂದು ಗುರುತಿಸಲಾಗಿದೆ. ಕಲ್ಲು ಸಾಗಾಟದ ಲಾರಿಯ ಟಯರ್‌ ಪಂಚರ್ ಆದ ಕಾರಣ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಲಾಗಿತ್ತು. ಬಳಿಕ ಟಯರ್ ಪಂಚರ್ […]

ಪುತ್ತೂರು: ಲಾರಿ‌ ಟಯರ್ ಬದಲಿಸುವ ವೇಳೆ ಸ್ಪೋಟ| ಇಬ್ಬರು ಕಾರ್ಮಿಕರು ಗಂಭೀರ Read More »

ಸುಳ್ಯ: ಚಾಂದಿನಿಯ ಚಿಕಿತ್ಸೆಗಾಗಿ‌‌ ಸಿಎಂ ಪರಿಹಾರ ನಿಧಿಯಿಂದ 9 ಲಕ್ಷ ನೆರವು ಬಿಡುಗಡೆ|

ಸಮಗ್ರ ನ್ಯೂಸ್: ‘ಹೈಪರ್‌ ಐಜಿಇ ಸಿಂಡ್ರೋಮ್‌’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ, ಸುಳ್ಯ ತಾಲೂಕಿನ ಸುಳ್ಯ ನಗರದ ನಾವೂರಿನ ಬಡ ಕುಟುಂಬದ ಚಾಂದಿನಿ ಜಿ.ಡಿ. (33) ಎಂಬುವರ ಚಿಕಿತ್ಸೆ ವೆಚ್ಚ ಭರಿಸಲು ಸರ್ಕಾರ ಮತ್ತೆ ₹ 9 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ₹ 4 ಲಕ್ಷ ಬಿಡುಗಡೆಯಾಗಿತ್ತು. ಉಳಿಕೆ ಮೊತ್ತ ಬಿಡುಗಡೆ ಆಗದ ಕಾರಣ ಚಿಕಿತ್ಸೆ ಮುಂದುವರಿಸಲು ಆಸ್ಪತ್ರೆಯವರು ನಿರಾಕರಿಸಿದ್ದರು. ಚಿಕಿತ್ಸೆ ಕೊಡಿಸಲು ಸಾಧ್ಯವಾಗದೇ ಇದ್ದರೆ ದಯಾಮರಣವನ್ನಾದರೂ ನೀಡಿ’ ಎಂದು ಕೋರಿ

ಸುಳ್ಯ: ಚಾಂದಿನಿಯ ಚಿಕಿತ್ಸೆಗಾಗಿ‌‌ ಸಿಎಂ ಪರಿಹಾರ ನಿಧಿಯಿಂದ 9 ಲಕ್ಷ ನೆರವು ಬಿಡುಗಡೆ| Read More »

ಉಪ್ಪಿನಂಗಡಿ: ಯುವತಿ ಸ್ನಾನ ಮಾಡುತ್ತಿದ್ದಾಗ‌ ಇಣುಕಿದ ಎರಡು ಮಕ್ಕಳ ತಂದೆ| ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

ಸಮಗ್ರ ನ್ಯೂಸ್: ಯುವತಿ ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಕಿಟಕಿಯಿಂದ ನೋಡಲೆತ್ನಿಸಿದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಪೆರಿಯಡ್ಕ‌ ಎಂಬಲ್ಲಿ ಆದಿತ್ಯವಾರ ರಾತ್ರಿ ನಡೆದಿದೆ. ಆರೋಪಿತ ವ್ಯಕ್ತಿ ವಿವಾಹಿತನಾಗಿದ್ದು, 16 ಹಾಗೂ 9 ವರ್ಷದ ಇಬ್ಬರು ಮಕ್ಕಳ ತಂದೆಯಾಗಿದ್ದಾನೆ. ಯುವತಿ ಸ್ನಾನ ಮಾಡುತ್ತಿದ್ದಾಗ ಕಿಟಕಿಯ ಬಾಗಿಲನ್ನು ಸರಿಸಲು ಯತ್ನಿಸಿದ್ದ ವೇಳೆ ಉಂಟಾದ ಶಬ್ದದಿಂದ ಸಂಶಯಗೊಂಡ ಯುವತಿ ತನ್ನ ತಾಯಿಗೆ ಮಾಹಿತಿ ನೀಡಿದರು. ತಾಯಿ ಪರಿಶೀಲಿಸಿದಾಗ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ರಹಿಮಾನ್ ಎಂದು ಗುರುತಿಸಿದ್ದರು.

ಉಪ್ಪಿನಂಗಡಿ: ಯುವತಿ ಸ್ನಾನ ಮಾಡುತ್ತಿದ್ದಾಗ‌ ಇಣುಕಿದ ಎರಡು ಮಕ್ಕಳ ತಂದೆ| ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು Read More »

ಸುಳ್ಯ: ಬಸ್ – ಸ್ಕೂಟಿ ನಡುವೆ ಅಪಘಾತ| ಗ್ರಾ.ಪಂ ಸದಸ್ಯ ದುರ್ಮರಣ

ಸಮಗ್ರ ನ್ಯೂಸ್: ಸ್ಕೂಟಿ ಹಾಗೂ ಬಸ್ ಪರಸ್ಪರ ಅಪಘಾತ ಸಂಭವಿಸಿ ಸ್ಕೂಟಿ ಸವಾರ ಸುಳ್ಯ ತಾಲೂಕಿನ ನೆ.ಕೆಮ್ರಾಜೆ ಗ್ರಾ.ಪಂ. ಸದಸ್ಯ ಹಾಗೂ ಪಿಗ್ಮಿ ಸಂಗ್ರಾಹಕರಾಗಿರುವ ರಾಮಚಂದ್ರ ಪ್ರಭು ಅವರು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಜಾಲ್ಸೂರು – ಸುಬ್ರಹ್ಮಣ್ಯ ರಾ.ಹೆದ್ದಾರಿಯ ಸೋಣಂಗೇರಿಯ ಸುತ್ತುಕೋಟೆ ಬಳಿ ಸಂಭವಿಸಿದೆ. ರಾಮಚಂದ್ರ ಪ್ರಭು ಅವರು ಸ್ಕೂಟಿಯಲ್ಲಿ ಸುಳ್ಯಕ್ಕೆ ಬರುತ್ತಿದ್ದ ವೇಳೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸುತ್ತುಕೋಟೆ ಬಳಿ ಡಿಕ್ಕಿ ಹೊಡೆದಿದ್ದು, ರಾಮಚಂದ್ರ ಪ್ರಭುರವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರೆಂದು

ಸುಳ್ಯ: ಬಸ್ – ಸ್ಕೂಟಿ ನಡುವೆ ಅಪಘಾತ| ಗ್ರಾ.ಪಂ ಸದಸ್ಯ ದುರ್ಮರಣ Read More »

ಹವಾಮಾನ ವರದಿ| ಜು.25ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ‌ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯಾದ್ಯಂತ ಮುಂದಿನ 5 ದಿನಗಳವರೆಗೆ ಮಳೆಯ ತೀವ್ರತೆ ಕಡಿಮೆಯಾಗುವ ಸಾಧ್ಯತೆಗಳಿದ್ದರೂ, ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಜು. 25ರ ವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಜುಲೈ 23ರ ವರೆಗೆ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಈ ಮೂರು ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆ ಮತ್ತು ನಿರಂತರ ಗಾಳಿಯ ವೇಗ 30-40 ಕಿಮೀ ತಲುಪುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಬೆಳಗಾವಿ, ಬೀದರ್‌, ಕಲಬುರಗಿ

ಹವಾಮಾನ ವರದಿ| ಜು.25ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ‌ಮಳೆ ಸಾಧ್ಯತೆ Read More »

ಕಾಣಿಯೂರು: ಕಾಣೆಯಾಗಿದ್ದ ಯುವಕನ ಶವ ನದಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ಪುತ್ತೂರು ತಾಲೂಕಿನ ಸರ್ವೆ ಎಂಬಲ್ಲಿ ಗೌರಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದ್ದ ಕುದ್ಮಾರು ಗ್ರಾಮದ ತೆಕ್ಕಿತ್ತಡಿ ನಿವಾಸಿ ಸನ್ಮಿತ್‌ (21) ಮೃತದೇಹ ಪತ್ತೆಯಾಗಿದೆ. ಸರ್ವೆಯ ಗೌರಿ ಹೊಳೆಯ ಸೇತುವೆಯ ಬಳಿ ಮೃತದೇಹ ಪತ್ತೆಯಾಗಿದೆ. ಜು.19ರ ರಾತ್ರಿಯಿಂದ ಸನ್ಮಿತ್‌ ಕಾಣೆಯಾಗಿದ್ದು, ಆತನ ಸ್ಕೂಟರ್‌ ಮತ್ತಿತರ ವಸ್ತು ಸರ್ವೆ ಗೌರಿ ಹೊಳೆಯ ಸಮೀಪ ಪತ್ತೆಯಾಗಿತ್ತು. ಮೃತ ಸನ್ಮಿತ್‌ ತಂದೆ ಚಂದ್ರಗೌಡ ನೀಡಿದ ದೂರಿನಂತೆ ನಿನ್ನೆ ಬೆಳಿಗ್ಗಿನಿಂದಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತದೇಹಕ್ಕಾಗಿ ಗೌರಿ

ಕಾಣಿಯೂರು: ಕಾಣೆಯಾಗಿದ್ದ ಯುವಕನ ಶವ ನದಿಯಲ್ಲಿ ಪತ್ತೆ Read More »

ಉಡುಪಿ: ಸತ್ತ ನಾಯಿಯ ಕಳೇಬರವನ್ನು ಬೈಕ್ ಗೆ ಕಟ್ಟಿ‌ ಎಳೆದೊಯ್ದು ವಿಕೃತಿ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯಕಾಪು ತಾಲೂಕಿನ ಶಿರ್ವದಲ್ಲಿ ನಾಯಿಯ ಕಳೇಬರವನ್ನು ಸ್ಕೂಟರ್​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ ವಿರುದ್ಧ ಶಿರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿರ್ವಾ ಪಟ್ಟಣದಲ್ಲಿ ಈ ಕ್ರೂರ ಘಟನೆ ನಡೆದಿದೆ. ಕಿಲೋಮೀಟರ್ ಗಟ್ಟಲೆ ನಾಯಿಯನ್ನು ಸ್ಕೂಟರ್‌ಗೆ ಕಟ್ಟಿ ಹಾಕಿ ಎಳೆದೊಯ್ಯಲಾಗಿದೆ. ಮಲ್ಲರ್ ನಿವಾಸಿಯಾಗಿರುವ ಈತ ನಾಯಿ ಮೇಲೆ ಕ್ರೂರವಾಗಿ ವರ್ತಿಸಿದ್ದಾನೆ. ನಾಯಿ ಕೊರಳಿಗೆ ಚೈನ್ ಕಟ್ಟಲಾಗಿದೆ. ಬಳಿಕ ನಾಯಿ ಚೈನ್‌ನ್ನು ಸ್ಕೂಟರ್ ಹಿಂಭಾಗಕ್ಕೆ ಕಟ್ಟಿ ಎಳೆದೊಯ್ಯಲಾಗಿದೆ. ಕೊಂಬಗುಡ್ಡೆಯ ನಿವಾಸಿ ಖಾದ‌ರ್, ಮೃತಪಟ್ಟ ನಾಯಿಯ ಕೊರಳಿಗೆ ಸರಪಳಿ

ಉಡುಪಿ: ಸತ್ತ ನಾಯಿಯ ಕಳೇಬರವನ್ನು ಬೈಕ್ ಗೆ ಕಟ್ಟಿ‌ ಎಳೆದೊಯ್ದು ವಿಕೃತಿ Read More »

ಪುತ್ತೂರು: ಕುದ್ಮಾರು ಗ್ರಾಮದ ಯುವಕ ನಾಪತ್ತೆ|ಗೌರಿ ಹೊಳೆಗೆ ಹಾರಿರುವ ಶಂಕೆ

ಸಮಗ್ರ ನ್ಯೂಸ್: ಕುದ್ಮಾರು ಗ್ರಾಮದ ಯುವಕನೊಬ್ಬ ನಾಪತ್ತೆಯಾಗಿದ್ದು, ಆತನ ದ್ವಿಚಕ್ರ ವಾಹನ ಸರ್ವೆ ಗೌರಿ ಸೇತುವೆ ಬಳಿ ಪತ್ತೆಯಾಗಿದೆ. ಈತ ಗೌರಿ ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಯುವಕ ಹೊಳೆಗೆ ಹಾರಿದ್ದಾನೆಯೇ ಅಥವಾ ಎಲ್ಲಿಗಾದರೂ ಹೋಗಿದ್ದಾನೆಯೇ ಎನ್ನುವ ಸಂಶಯ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಆಗಮಿಸಿದ್ದಾರೆ. ಪೊಲೀಸರು ನಿನ್ನೆ (ಜು.19) ರಾತ್ರಿಯೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು ಎಂದು ತಿಳಿದು ಬಂದಿದೆ. ಸರ್ವೆ ಸೇತವೆ ಹಾಗೂ ರೈಲ್ವೇ ಸೇತುವೆಯ ಮೇಲೆ ಸಾರ್ವಜನಿಕರು ಸೇರಿದ್ದು, ಟ್ರಾಫಿಕ್ ದಟ್ಟನೆ

ಪುತ್ತೂರು: ಕುದ್ಮಾರು ಗ್ರಾಮದ ಯುವಕ ನಾಪತ್ತೆ|ಗೌರಿ ಹೊಳೆಗೆ ಹಾರಿರುವ ಶಂಕೆ Read More »

ಕಡಬ: ನಾಪತ್ತೆಯಾಗಿದ್ದ ಯುವಕನ ಶವ ಕುಮಾರಧಾರ ನದಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ಬೆಳ್ಳಾರೆ ಠಾಣಾ ವ್ಯಾಪ್ತಿಯ ಕಡಬ ತಾಲೂಕಿನ ಕಾಯಿಮಣ ಗ್ರಾಮದ ನಾಯಿತಡ್ಕ ಎಂಬಲ್ಲಿಂದ ನಾಪತ್ತೆಯಾಗಿದ್ದ ಸುರೇಶ್ (40ವ.) ಅವರ ಶವ ಶುಕ್ರವಾರ ಸಂಜೆ ಕುಮಾರಾಧಾರ ನದಿಯಲ್ಲಿ ಪತ್ತೆಯಾಗಿದೆ. ಜು.15ರ ರಾತ್ರಿ ಮನೆಯಿಂದ ಹೊರಟು ಹೋದವರು ನಾಪತ್ತೆಯಾಗಿದ್ದರು. ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಮೃತನ ಸಹೋದರ ಚಿದಾನಂದ ಅವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗಿತ್ತು ನಾಪತ್ತೆಯಾದ ಸುರೇಶ್ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಅವರ ಶರ್ಟ್ ಹಾಗೂ ಛತ್ರಿ ಕಾಪಜಾಲು ಹೊಳೆ ಬದಿಯಲ್ಲಿ

ಕಡಬ: ನಾಪತ್ತೆಯಾಗಿದ್ದ ಯುವಕನ ಶವ ಕುಮಾರಧಾರ ನದಿಯಲ್ಲಿ ಪತ್ತೆ Read More »

ಬೆಳ್ತಂಗಡಿ: ಕೋಳಿಗೂಡೊಳಗೆ ಬೃಹತ್ ಹೆಬ್ಬಾವು ಪತ್ತೆ

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ಕಲಾಯಿತೊಟ್ಟು ಶ್ರೀಮತಿ ರೂಪಾ ರವರ ಮನೆಯ ಕೋಳಿ ಗೂಡಿನಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ.ಹಾಗೂ 1 ಕಿ.ಲೋ ತೂಕದ 5 ಕೋಳಿಗಳನ್ನು ರಾತ್ರಿ ವೇಳೆಯಲ್ಲಿ ನುಂಗಿ ಗೂಡಿನಲ್ಲಿಯೇ ಪತ್ತೆಯಾದ ಘಟನೆ ಜು.19 ರಂದು ನಡೆಯಿತು. ಕಳೆದ 6 ತಿಂಗಳಿಂದ ಉಪ ಕಸುಬಾಗಿ ನಾಟಿ ಕೋಳಿ ಸಾಕಾಣಿಕೆ ಮಾಡಿ ಮಾಡಿಕೊಂಡು ಬರುತ್ತಿದ್ದಾರೆ. ಕೋಳಿ ಗೂಡಿಗೆ ಕಬ್ಬಿಣದ ಮೇಸ್ ಅಳವಡಿಸಿದ ಭದ್ರತೆಯ ಮಧ್ಯೆಯೂ ಸುಮಾರು 35 ಕಿ.ಲೋ ತೂಕದ ಹೆಬ್ಬಾವು ಪತ್ತೆಯಾಗಿದೆ.

ಬೆಳ್ತಂಗಡಿ: ಕೋಳಿಗೂಡೊಳಗೆ ಬೃಹತ್ ಹೆಬ್ಬಾವು ಪತ್ತೆ Read More »