ಬಂಟ್ವಾಳ: ಸಂಬಂಧಿ ಯುವತಿಯ ಗರ್ಭವತಿ ಮಾಡಿದಾತ ಅರೆಸ್ಟ್
ಸಮಗ್ರ ನ್ಯೂಸ್: ಸಂಬಂಧಿ ಯುವತಿಯನ್ನು ಅತ್ಯಾಚಾರ ಮಾಡಿ ಗರ್ಭವತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿವಾಹಿತನಾಗಿರುವ ಅಮ್ಟಾಡಿ ನಿವಾಸಿ ಗುರುಪ್ರಸಾದ್ ಬಂಧಿತ ಆರೋಪಿಯಾಗಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಘಟನೆಯ ಕುರಿತು ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಒಂದು ವರ್ಷದಲ್ಲಿ 2 ಬಾರಿ ಬಲವಂತವಾಗಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ಘಟನೆಯ ಕುರಿತು ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಬಂಟ್ವಾಳ: ಸಂಬಂಧಿ ಯುವತಿಯ ಗರ್ಭವತಿ ಮಾಡಿದಾತ ಅರೆಸ್ಟ್ Read More »