ಸಿನಿಮಾ

ಸಂಗೀತದ ಮಹಾ ಸಂಗ್ರಾಮ ಆರಂಭ|ಅ.18ರಿಂದ ಬರ್ತಾ‌ ಇದೆ‌ ‘ಸರಿಗಮಪ’ ರಿಯಾಲಿಟಿ ಶೋ|

ಬೆಂಗಳೂರು: ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮವಾದ ‘ಸರಿಗಮಪ’, ಹೊಸ ರೂಪದಲ್ಲಿ ಮತ್ತೊಮ್ಮೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದೆ. ಇದೇ 18ರಿಂದ ಈ ಕಾರ್ಯಕ್ರಮವು ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಒಂದಿಷ್ಟು ಬದಲಾವಣೆಗಳಾಗಿವೆ. ಈ ಹಿಂದಿನ ವರ್ಷಗಳಲ್ಲಿ ತೀರ್ಪಗಾರರಾಗಿ ವಿಜಯಪ್ರಕಾಶ್, ಅರ್ಜುನ್ ಜನ್ಯ ಮತ್ತು ರಾಜೇಶ್ ಕೃಷ್ಣನ್ ಇದ್ದರು. ಮಹಾಗುರುಗಳಾಗಿ ಹಂಸಲೇಖ ಇದ್ದರು. ಈ ಬಾರಿ ರಾಜೇಶ್ ಕೃಷ್ಣನ್ ಬದಲಿಗೆ ಹಂಸಲೇಖ, ಅರ್ಜುನ್ ಜನ್ಯ ಮತ್ತು ವಿಜಯ ಪ್ರಕಾಶ್ ತೀರ್ಪಗಾರರಾಗಿರಲಿದ್ದಾರೆ. ಇನ್ನು, […]

ಸಂಗೀತದ ಮಹಾ ಸಂಗ್ರಾಮ ಆರಂಭ|ಅ.18ರಿಂದ ಬರ್ತಾ‌ ಇದೆ‌ ‘ಸರಿಗಮಪ’ ರಿಯಾಲಿಟಿ ಶೋ| Read More »

ಮಂಗಳೂರು: ‘ ಇಂಡಿಯಾ ಡಿಟೆಕ್ಟಿವ್ಸ್ ‘ವೆಬ್ ಸರಣಿಯಲ್ಲಿ ಪೊಲೀಸ್ ಆಯುಕ್ತ ಶಶಿಕುಮಾರ್…!

ಮಂಗಳೂರು: ವಿಶ್ವದ ಒಟಿಟಿ ದೈತ್ಯ ಕಂಪನಿ ನೆಟ್​ಫ್ಲಿಕ್ಸ್ ಹಲವಾರು ಡಾಕ್ಯುಮೆಂಟರಿ ಹಾಗೂ ವೆಬ್​ ಸಿರೀಸ್ ಗಳನ್ನು ಹೊರತರುತ್ತಿದೆ. ಇದೀಗ ಹೊಸ ವೆಬ್ ಸರಣಿಯ ಮುಖಾಂತರ ಕ್ರೈಂ ಲೋಕದ ನೈಜ ಕಥೆಯನ್ನು ಪ್ರೇಕ್ಷಕರ ಮುಂದಿಡಲು ತಯಾರಾಗಿದೆ. ಕರ್ನಾಟಕದಲ್ಲಿ ನಡೆದ ಅಪರಾಧ ಜಗತ್ತಿನ 4 ವಿಶೇಷ ಪ್ರಕರಣಗಳನ್ನು ತೆರೆಯ ಮೇಲೆ ತರಲು ನೆಟ್​ಫ್ಲಿಕ್ಸ್ ಸಿದ್ಧಗೊಂಡಿದೆ. ಈ ಚಿತ್ರಕ್ಕೆ ‘ಕ್ರೈಂ ಸ್ಟೋರೀಸ್, ಇಂಡಿಯಾ ಡಿಟೆಕ್ಟಿವ್ಸ್’ಎಂದು ಹೆಸರಿಡಲಾಗಿದ್ದು, ಸೆಪ್ಟೆಂಬರ್ 22ಕ್ಕೆ ಬಿಡುಗಡೆಗೊಳ್ಳಲಿದ್ದು, ನೆಟ್​ಫ್ಲಿಕ್ಸ್​ನಲ್ಲಿ ತನ್ನ ಬಳಕೆದಾರರಿಗೆ ವೀಕ್ಷಿಸಲು ಲಭ್ಯವಾಗಲಿದೆ. ಲಂಡನ್ ಮೂಲದ ನೆಟ್‌ಫ್ಲಿಕ್ಸ್

ಮಂಗಳೂರು: ‘ ಇಂಡಿಯಾ ಡಿಟೆಕ್ಟಿವ್ಸ್ ‘ವೆಬ್ ಸರಣಿಯಲ್ಲಿ ಪೊಲೀಸ್ ಆಯುಕ್ತ ಶಶಿಕುಮಾರ್…! Read More »

ಗಣೇಶ ಹಬ್ಬಕ್ಕೆ ‘ಲಂಕೆ’ ಬಿಡುಗಡೆ| ಬ್ರೇಕ್ ನ ನಿರೀಕ್ಷೆಯಲ್ಲಿ ಲೂಸ್ ಮಾದ ಯೋಗಿ

ಲೂಸ್ ಮಾದ ಯೋಗಿ ಅಭಿನಯದ ಲಂಕೆ ಚಿತ್ರ ಗಣೇಶ ಹಬ್ಬದ ಹಬ್ಬದ ಸಮಯದಲ್ಲಿ ತೆರೆಗೆ ಬರಲು ಸಿದ್ಧವಾಗಿದ್ದು ಸೆಪ್ಟೆಂಬರ್ 10ಕ್ಕೆ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಂತಿಮಗೊಳಿಸಿದೆ. ರಾಮ್ ಪ್ರಸಾದ್ ನಿರ್ದೇಶನದ ಲಂಕೆ ಚಿತ್ರವನ್ನು ಆರಂಭದಲ್ಲಿ ಜುಲೈ 19ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಕೊರೋನಾ ಅಬ್ಬರ ಹಿನ್ನಲೆಯಲ್ಲಿ ಸರ್ಕಾರ ಚಿತ್ರಮಂದಿರಗಳಲ್ಲಿ ಶೇಕಡ 50ರಷ್ಟು ಮಾತ್ರ ಆಸನಗಳ ಭರ್ತಿಗೆ ಅವಕಾಶ ನೀಡಿದ್ದರಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು. ನಂತರ ಬಿಡುಗಡೆ ದಿನಾಂಕವನ್ನು ಆಗಸ್ಟ್ 20ಕ್ಕೆ ಮುಂದೂಡಲಾಯಿತು. ಅಂದ ಸಹ ಚಿತ್ರ ಬಿಡುಗಡೆಯಾಗಲಿಲ್ಲ.

ಗಣೇಶ ಹಬ್ಬಕ್ಕೆ ‘ಲಂಕೆ’ ಬಿಡುಗಡೆ| ಬ್ರೇಕ್ ನ ನಿರೀಕ್ಷೆಯಲ್ಲಿ ಲೂಸ್ ಮಾದ ಯೋಗಿ Read More »

ಮತ್ತೆ ಮದುವೆಯಾದ ಪ್ರಕಾಶ್ ರಾಜ್

ಬಹುಭಾಷಾ ನಟ ಪ್ರಕಾಶ್‌ ರಾಜ್‌ ಮತ್ತೆ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಅರೆ ಪ್ರಕಾಶ್​ ರಾಜ್​ ಮತ್ತೆ ಮದುವೆಯಾದ್ರಾ ಅಂತ ಯೋಚಿಸಬೇಡಿ. ಅವರು ಇದೀಗ ತಮ್ಮ ಮಗ ವೇದಾಂತ್​ ಆಸೆಯಂತೆ ಪತ್ನಿಯೊಂದಿಗೆ ಮತ್ತೆ ಮದುವೆಯಾಗಿದ್ದಾರೆ. ಪ್ರಕಾಶ್​ ರಾಜ್​ ಮತ್ತು ಪೋನಿ ವರ್ಮಾ ದಂಪತಿ ನಿನ್ನೆ (ಆಗಸ್ಟ್ 24) ತಮ್ಮ 11ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇವರ ಪುತ್ರ ವೇದಾಂತ್​ಗೆ ತನ್ನ ತಂದೆ-ತಾಯಿ ಮದುವೆಯನ್ನು ನೋಡುವ ಬಯಕೆ ಇತ್ತಂತೆ. ಅದನ್ನು ಅಪ್ಪ-ಅಮ್ಮನ ಬಳಿ ಹೇಳಿಕೊಂಡಿದ್ದ. ಮಗನ ಆಸೆಯಂತೆ ಪ್ರಕಾಶ್​ ರಾಜ್​

ಮತ್ತೆ ಮದುವೆಯಾದ ಪ್ರಕಾಶ್ ರಾಜ್ Read More »

ಕಿಚ್ಚನ ಹೊಸ ಹೇರ್ ಸ್ಟೈಲ್‍ಗೆ ಹೇಗಿದೆ ನೋಡಿ

ಬೆಂಗಳೂರು: ಕಿಚ್ಚ ಸುದೀಪ್ ಅವರ ಹೊಸ ಹೇರ್ ಸ್ಟೈಲ್ ಸಖತ್ ವೈರಲ್ ಆಗುತ್ತಿದಂತೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದರೆ. ಕಿಚ್ಚ ಸುದೀಪ್ ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಅವರು ಸಿನಿಮೇತರ ವಿಚಾರಕ್ಕೂ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈಗ ಸುದೀಪ್ ಅವರು ಹೊಸ ಕೇಶ ವಿನ್ಯಾಸ ಮಾಡಿಸಿದ್ದಾರೆ. ಈ ಫೋಟೋ ಹಾಗೂ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಕೋಟಿಗೊಬ್ಬ 3 ಹಾಗೂ ವಿಕ್ರಾಂತ್ ರೋಣ ಸಿನಿಮಾ ಕೆಲಸಗಳಲ್ಲಿ ಸುದೀಪ್ ಬ್ಯುಸಿ ಇದ್ದಾರೆ. ಎರಡೂ ಚಿತ್ರಗಳ ಬಹುತೇಕ

ಕಿಚ್ಚನ ಹೊಸ ಹೇರ್ ಸ್ಟೈಲ್‍ಗೆ ಹೇಗಿದೆ ನೋಡಿ Read More »

ಕೆಜಿಎಫ್ ಬಿಡುಗಡೆಗೆ ದಿನಾಂಕ ಫಿಕ್ಸ್

ಬೆಂಗಳೂರು: ಸ್ಯಾಂಡಲ್‍ವುಡ್ ಬಹುನೀರಿಕ್ಷಿತ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬಿಡಿಗಡೆಯ ದಿನಾಂಕವನ್ನು ನಟ ಯಶ್ ಟ್ವೀಟ್ ಮಾಡುವ ಮೂಲಕವಾಗಿ ತಿಸಳಿಸಿದ್ದಾರೆ. ಟ್ವೀಟ್‍ನಲ್ಲಿ ಏನಿದೆ?ಇಂದಿನ ಅನಿಶ್ಚಿತತೆಗಳು ನಮ್ಮ ಸಂಕಲ್ಪವನ್ನು ವಿಳಂಬಗೊಳಿಸುತ್ತವೆ. ಆದರೆ ನಾವು ಈ ಮೊದಲೇ ಭರವಸೆ ನೀಡಿದಂತೆ 2022ರ ಏಪ್ರಿಲ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಮಾಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಕೆಜಿಎಫ್ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಸಹ ಸದ್ದು ಮಾಡಿದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಕೆಜಿಎಫ್ ಮೊದಲ ಭಾಗವನ್ನು ನೋಡಿದ ಅಭಿಮಾನಿಗಳು 2ನೇ

ಕೆಜಿಎಫ್ ಬಿಡುಗಡೆಗೆ ದಿನಾಂಕ ಫಿಕ್ಸ್ Read More »

ಮತ್ತೆ ಕಿರುತೆರೆಯತ್ತ ಮುಖ ಮಾಡಿದ ಉಮಾಶ್ರೀ – ಶುರುವಾಗ್ತಿದೆ ‘ಪುಟ್ಟಕ್ಕನ ಮಕ್ಕಳು’

ಕನ್ನಡ ಚಿತ್ರರಂಗ ಎಂದೂ ಮರೆಯಲಾಗದ ಹಲವು ಪಾತ್ರಗಳಲ್ಲಿ ನಟಿಸಿರುವ ಉಮಾಶ್ರಿ ಇದೀಗ ಮತ್ತೆ ಕಿರುತೆರೆಗೆ ಬಂದಿದ್ದಾರೆ. ಹಿರಿತೆರೆಯಲ್ಲಿ ಪುಟ್ಮಲ್ಲಿಯಾಗಿ ಈಗಾಗಲೇ ಮೋಡಿ ಮಾಡಿರುವ ಉಮಾಶ್ರೀ ಕಿರುತೆರೆಯಲ್ಲಿ ಪುಟ್ಟಕ್ಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಮಾಶ್ರೀ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು ಕೆಲವೇ ದಿನಗಳಲ್ಲಿ ಧಾರಾವಾಹಿ ಪ್ರಸಾರ ಆರಂಭವಾಗಲಿದೆ.ಧಾರಾವಾಹಿಯ ಕೇಂದ್ರ ಪಾತ್ರ ಉಮಾಶ್ರೀ ಅವರದ್ದೇ ಆಗಿರುತ್ತದೆ. ಉಮಾಶ್ರೀಗೆ ಕಿರುತೆರೆ ಹೊಸದೇನೂ ಅಲ್ಲ ಈಗಾಗಲೇ ಹಲವು ಧಾರಾವಾಹಿಗಳಲ್ಲಿ ಉಮಾಶ್ರೀ ನಟಿಸಿದ್ದಾರೆ. ಆದರೆ ಬಹುದಿನಗಳಿಂದ ಕಿರುತುರೆಯಿಂದ ದೂರವೇ

ಮತ್ತೆ ಕಿರುತೆರೆಯತ್ತ ಮುಖ ಮಾಡಿದ ಉಮಾಶ್ರೀ – ಶುರುವಾಗ್ತಿದೆ ‘ಪುಟ್ಟಕ್ಕನ ಮಕ್ಕಳು’ Read More »

‘5ಡಿ’ ಶೂಟಿಂಗ್ ಮುಗಿಸಿದ ಚಿತ್ರತಂಡ

ಬೆಂಗಳೂರು : ಬಹುನಿರೀಕ್ಷಿತ ‘5ಡಿ’ ಚಿತ್ರದ ಚಿತ್ರೀಕರಣವು ಆಗಸ್ಟ್ 4ಕ್ಕೆ ಪೂರ್ಣಗೊಂಡಿದ್ದು , ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ. ಚಿತ್ರೀಕರಣ ಮುಗಿದ ಬಳಿಕ ಮಾಧ್ಯಮದ ಮುಂದೆ ಚಿತ್ರತಂಡವು ಮಾತನಾಡಿ ಆ ಚಿತ್ರದ ಅನುಭವವನ್ನು ಹಂಚಿಕೊಂಡಿದ್ದಾರೆ. ಹಾಗೇ ಈ ಚಿತ್ರದಲ್ಲಿ ನಾಯಕನಾಗಿ ಆದಿತ್ಯ, ನಾಯಕಿಯಾಗಿ ಆದಿತಿ ಅವರು ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಆದಿತ್ಯ ಅವರು ‘ನಾನು ಎಸ್ ನಾರಾಯಣ್ ಅವರ ಜೊತೆ ಕೆಲಸ ಮಾಡಿದ್ದೆ, ಆದರೆ ಅವರ ಚಿತ್ರದಲ್ಲಿ ನಟಿಸುವ ಅವಕಾಶ

‘5ಡಿ’ ಶೂಟಿಂಗ್ ಮುಗಿಸಿದ ಚಿತ್ರತಂಡ Read More »

ಡಾಲಿ ಧನಂಜಯ್ ‘ಹೆಡ್ ಬುಷ್’ ಗೆ ಪಾಯಲ್ ರಜಪೂತ್ ನಾಯಕಿ

ಬೆಂಗಳೂರು: ನಟ ಡಾಲಿ ಧನಂಜಯ್‌ ನಾಯಕರಾಗಿ ನಟಿಸುತ್ತಿರುವ ಡಾನ್‌ ಜಯರಾಜ್‌ ಜೀವನಕಥೆ ಆಧಾರಿತ ‘ಹೆಡ್‌ಬುಷ್‌’ ಚಿತ್ರಕ್ಕೆ ತೆಲುಗಿನ ಖ್ಯಾತ ನಟಿ ಪಾಯಲ್‌ ರಾಜ್‌ಪುತ್‌ ನಾಯಕಿಯಾಗಿ ಜೋಡಿಯಾಗಲಿದ್ದಾರೆ. ನಟಿ ಪಾಯಲ್‌ ಅವರು ತೆಲುಗಿನ ‘ಆರ್‌ಎಕ್ಸ್‌ 100, ಆರ್‌ಡಿಎಕ್ಸ್‌ ಲವ್‌’ ಮುಂತಾದ ಹಿಟ್‌ ಚಿತ್ರಗಳಲ್ಲಿ ನಟಿಸಿದ್ದರು. ಡಾಲಿ ಪಿಕ್ಚರ್ಸ್‌ ಮತ್ತು ಸೋಮಣ್ಣ ಟಾಕೀಸ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ, ಅಗ್ನಿ ಶ್ರೀಧರ್‌ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರವನ್ನು ಶೂನ್ಯ ಅವರು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಶರಣ್‌

ಡಾಲಿ ಧನಂಜಯ್ ‘ಹೆಡ್ ಬುಷ್’ ಗೆ ಪಾಯಲ್ ರಜಪೂತ್ ನಾಯಕಿ Read More »

ಬಿಗ್ ಬಾಸ್ ಸೀಸನ್ 8| ಮಂಜು ಪಾವಗಡ ವಿನ್ನರ್

ಕನ್ನಡ ಬಿಗ್​ ಬಾಸ್​ ಸೀಸನ್​ 8ರ ವಿನ್ನರ್​ ಆಗಿ ಮಂಜು ಪಾವಗಡ ಹೊರ ಹೊಮ್ಮಿದ್ದಾರೆ. ಈ ಬಗ್ಗೆ ಸುದೀಪ್​ ಅವರು ಅದ್ದೂರಿ ವೇದಿಕೆ ಮೇಲೆ ಘೋಷಣೆ ಮಾಡಿದರು. ಈ ಮೂಲಕ ಬಿಗ್​ಬಾಸ್​ ಟ್ರೋಫಿ​ ಹಾಗೂ 53 ಲಕ್ಷ ನಗದು ಬಹುಮಾನ ಮಂಜು ಪಾವಗಡ ಅವರಿಗೆ ಸಿಕ್ಕಿದೆ. ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಳೆ ಹರಿದು ಬಂದಿದೆ. ಬಿಗ್ ಬಾಸ್ ಕನ್ನಡ ಸೀಸನ್ 8 ಈ ಬಾರಿ ಹಲವು ವಿಷಯಗಳಲ್ಲಿ ದಾಖಲೆ ಬರೆದಿದೆ. ಪ್ರತಿ ಸೀಸನ್​ನಲ್ಲಿ ಸ್ಪರ್ಧಿಗಳು ಎಲಿಮಿನೇಟ್

ಬಿಗ್ ಬಾಸ್ ಸೀಸನ್ 8| ಮಂಜು ಪಾವಗಡ ವಿನ್ನರ್ Read More »