ಸಿನಿಮಾ

ನಟ ಶರತ್ ಬಾಬು ಆರೋಗ್ಯ ಸ್ಥಿರ| ವದಂತಿಗಳನ್ನು ನಂಬದಂತೆ ಕುಟುಂಬಸ್ಥರ ಮನವಿ

ಸಮಗ್ರ ನ್ಯೂಸ್: ಶರತ್ ಬಾಬು ಇನ್ನಿಲ್ಲ ಎಂಬ ಎಲ್ಲಾ ವರದಿಗಳನ್ನ ನಟನ ಸಹೋದರಿ ತಳ್ಳಿಹಾಕಿದ್ದು, ವದಂತಿಗಳನ್ನು ನಂಬದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಶರತ್ ಬಾಬು ಆರೋಗ್ಯದ ಕುರಿತು ಹೇಳಿಕೆ ನೀಡಿರುವ ಕುಟುಂಬ, ಹಿರಿಯ ನಟನ ಆರೋಗ್ಯ ಸ್ಥಿರವಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಂಡು ಮನೆಗೆ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ. ಶರತ್ ಬಾಬು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೊದಲಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದ ಶರತ್ ಬಾಬು ಅವರನ್ನು ನಂತರ ಹೈದ್ರಾಬಾದ್’ನ ಎಐಜಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಸದ್ಯ ಅಲ್ಲಿಯೇ ಚಿಕಿತ್ಸೆ […]

ನಟ ಶರತ್ ಬಾಬು ಆರೋಗ್ಯ ಸ್ಥಿರ| ವದಂತಿಗಳನ್ನು ನಂಬದಂತೆ ಕುಟುಂಬಸ್ಥರ ಮನವಿ Read More »

ನಾನು ಗೌಡ್ತಿಯಾಗಿಯೇ ಇರ್ತೇನೆ; ಗೌಡ ಹುಡುಗನ ಹುಡುಕಿ| ಮದುವೆ ಬಗ್ಗೆ ಮನದಾಳ ಬಿಚ್ಚಿಟ್ಟ ರಮ್ಯಾ

ಸಮಗ್ರ ನ್ಯೂಸ್: ನಾನು ಮದುವೆಯಾಗಲು ಸಿದ್ಧಳಿದ್ದು, ನೀವೇ ಸ್ವಯಂವರ ಏರ್ಪಡಿಸಿ ಗೌಡರ ಹುಡುಗನನ್ನು ಹುಡುಕಿ ಎಂದು ಅಭಿಮಾನಿಗಳಿಗೆ ನಟಿ ರಮ್ಯಾ ಮನವಿ ಮಾಡಿದ್ದಾರೆ. ನಾನು ಮಂಡ್ಯದ ಜನರನ್ನು ತುಂಬಾ ಗೌರವಿಸುತ್ತೇನೆ, ಪ್ರೀತಿಸುತ್ತೇನೆ. ನಾನು ಸಂಕಷ್ಟದಲ್ಲಿದ್ದಾಗ ಇಲ್ಲಿನ ಜನ ನನಗೆ ಸಹಾಯ ಮಾಡಿದ್ದಾರೆ. ಅಲ್ಲದೆ ನನ್ನ ತಾಯಿ ಇಲ್ಲಿನವರೇ, ನಾನು ಹುಟ್ಟಿದ್ದೂ ಇಲ್ಲಿಯೇ. ಮಂಡ್ಯ ಜನತೆಯೊಂದಿಗೆ ನನಗೆ ಕೌಟುಂಬಿಕ ಸಂಬಂಧವಿದೆ. ಹಾಗಾಗಿ ನಾನು ಈಗಲೂ ಗೌಡ್ತಿಯೇ, ಮುಂದೆಯೂ ಗೌಡ್ತಿಯಾಗಿಯೇ ಇರುವೆ ಎಂದಿದ್ದಾರೆ. ರಮ್ಯಾ ಮದುವೆ ಯಾವಾಗ ಎಂದು ಹಲವು

ನಾನು ಗೌಡ್ತಿಯಾಗಿಯೇ ಇರ್ತೇನೆ; ಗೌಡ ಹುಡುಗನ ಹುಡುಕಿ| ಮದುವೆ ಬಗ್ಗೆ ಮನದಾಳ ಬಿಚ್ಚಿಟ್ಟ ರಮ್ಯಾ Read More »

ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ ‘ಬೇರ’ ಸಿನಿಮಾದ ಟೀಸರ್

ಎಸ್‌ಎಲ್‌ವಿ ಕಲರ್ಸ್ ಲಾಂಛನದಲ್ಲಿ ದಿವಾಕರ ದಾಸ್ ನೇರ್ಲಾಜೆ ನಿರ್ಮಾಣದ ‘ಬೇರ’ ಸಿನಿಮಾ Samagra news: ಕೋಸ್ಟಲ್‌ವುಡ್‌ನ ಅಪ್ಪಟ ಪ್ರತಿಭೆಗಳು ಸ್ಯಾಂಡಲ್‌ವುಡ್‌ಗೆ ಅತ್ಯುತ್ತಮ ಚಿತ್ರಗಳನ್ನು ನೀಡುತ್ತಿರುವ ಪಾಸಿಟಿವ್ ಟ್ರೆಂಡ್ ಶುರುವಾಗಿದೆ. ಕನ್ನಡ ಚಿತ್ರರಂಗದಲ್ಲಿ 100 ದಿನಗಳಿಗಿಂತಲೂ ಹೆಚ್ಚು ಪ್ರದರ್ಶನ ಕಂಡು ಸೂಪರ್ ಹಿಟ್ ಸಿನಿಮಾಗಳ ಹಿಂದೆ ಕರಾವಳಿಯ ಅಪ್ಪಟ ಟ್ಯಾಲೆಂಟ್‌ಗಳು ಕೆಲಸ ಮಾಡುತ್ತಿವೆ ಎಂಬುವುದು ಉಲ್ಲೇಖನೀಯ. ಚಿತ್ರದ ನಿರ್ಮಾಣ, ನಿರ್ದೇಶನ, ನಟನೆ, ಸಂಗೀತ, ಸಾಹಿತ್ಯ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಕೋಸ್ಟಲ್ ಪ್ರತಿಭೆಗಳು ಸೈ ಅನ್ನಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕರಾವಳಿಗರ ಸಿನಿಮಾ

ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ ‘ಬೇರ’ ಸಿನಿಮಾದ ಟೀಸರ್ Read More »

ಪಂಜುರ್ಲಿಯ ಆಶೀರ್ವಾದ ಪಡೆದ ರಿಷಭ್ ಶೆಟ್ಟಿ| ದೈವನರ್ತಕ ಮತ್ತು ಕಾಂತಾರದ ರಿಷಬ್ ಸೇಮ್ ಟು ಸೇಮ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಮುತ್ತೂರು ನಟ್ಟಿಲ ಪಂಜುರ್ಲಿ ದೈವದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದು, ಈ ವೇಳೆ ರಿಷಬ್​ ಪಂಜುರ್ಲಿ ದೈವದ ಆಶೀರ್ವಾದ ಪಡೆದಿದ್ದಾರೆ. ಇನ್ನು ಕಾಂತಾರ ಚಿತ್ರದಲ್ಲಿ ರಿಷಬ್​ ಪಂಜುರ್ಲಿ ದೈವದ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಸಿನಿಮಾ ಗ್ರ್ಯಾಂಡ್​​​ ಸಕ್ಸಸ್​ ನಂತರ ರಿಷಬ್ ಕುಟುಂಬ ಸಮೇತ ಬಂದು ದೈವಕ್ಕೆ ವಿಶೇಷ ಪೂಜೆ ಕೂಡ ಸಲ್ಲಿಸಿದ್ದರು. ಇದೀಗ ಪಂಜುರ್ಲಿ ದೈವದ ಆಶೀರ್ವಾದವನ್ನ ರಿಷಬ್ ಪಡೆದುಕೊಂಡಿದ್ದಾರೆ. ಸದ್ಯ ನಟ ರಿಷಬ್​​​ ಶೆಟ್ಟಿ ಕಾಂತಾರ 2 ಸಿನಿಮಾದ ಕೆಲಸದಲ್ಲಿ

ಪಂಜುರ್ಲಿಯ ಆಶೀರ್ವಾದ ಪಡೆದ ರಿಷಭ್ ಶೆಟ್ಟಿ| ದೈವನರ್ತಕ ಮತ್ತು ಕಾಂತಾರದ ರಿಷಬ್ ಸೇಮ್ ಟು ಸೇಮ್ Read More »

ಮಲೆಯಾಳಂನ ಹಿರಿಯ ನಟ ಮಾಮುಕೋಯ ನಿಧನ

ಸಮಗ್ರ ನ್ಯೂಸ್: ಮಲಯಾಳಂ ಸಿನಿಮಾ ರಂಗದ ದಿಗ್ಗಜ ನಟ ಮಾಮುಕೋಯ (76) ಬುಧವಾರ ಮಧ್ಯಾಹ್ನ ( ಎ.26 ರಂದು) ನಿಧನರಾಗಿದ್ದಾರೆ. ಇತ್ತೀಚೆಗೆ ಮಲಪ್ಪುರಂಗೆ ಫುಟ್‌ ಬಾಲ್ ಪಂದ್ಯಾಕೂಟವೊಂದನ್ನು ಉದ್ಘಾಟನೆ ಮಾಡಲು ಬಂದಿದ್ದ ವೇಳೆ ಅವರು ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಆರೋಗ್ಯ ಮೊದಲಿಗೆ ಸ್ಥಿರವಾಗಿತ್ತು. ಆದರೆ ಆ ಬಳಿಕ ಆರೋಗ್ಯ ಮತ್ತಷ್ಟು ಹದಗೆಟ್ಟು, ಬೇರೊಂದು ಆಸ್ಪತ್ರಗೆ ದಾಖಲು ಮಾಡಲಾಗಿತ್ತು, ಅಲ್ಲಿ ವೆಂಟಿಲೇಟರ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ಮಧ್ಯಾಹ್ನ

ಮಲೆಯಾಳಂನ ಹಿರಿಯ ನಟ ಮಾಮುಕೋಯ ನಿಧನ Read More »

ಸ್ಯಾಂಡಲ್ ವುಡ್ ನಟ, ನಿರ್ದೇಶಕ ಟಪೋರಿ ಸತ್ಯ ನಿಧನ

ಸಮಗ್ರ ನ್ಯೂಸ್: ಸ್ಯಾಂಡಲ್‌ವುಡ್‌ ನಟ ಹಾಗೂ ನಿರ್ದೇಶಕ ಟಪೋರಿ ಸತ್ಯ ನಿಧನರಾಗಿದ್ದಾರೆ. ಟಪೋರಿ ಸತ್ಯ ನಂದ ಲವ್ಸ್ ನಂದಿತಾ ಸಿನಿಮಾ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ‘ಮೇಳ’ ಎನ್ನುವ ಸಿನಿಮಾವನ್ನು ನಿರ್ದೇಶನವನ್ನು ಮಾಡಿದ್ದಾರೆ. ಅನಾರೋಗ್ಯದಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅವರು ಪತ್ನಿ, ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

ಸ್ಯಾಂಡಲ್ ವುಡ್ ನಟ, ನಿರ್ದೇಶಕ ಟಪೋರಿ ಸತ್ಯ ನಿಧನ Read More »

ಕಟೀಲು ದುರ್ಗೆಯ ದರ್ಶನ ಪಡೆದ ನಟಿ‌ ಶಿಲ್ಪಾ ಶೆಟ್ಟಿ

ಸಮಗ್ರ ನ್ಯೂಸ್: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಯವರು ಇಂದು ಕಟೀಲಿಗೆ ಭೇಟಿ ನೀಡಿದ್ದರು. ಕುಟುಂಬ ಸಮೇತವಾಗಿ ಆಗಮಿಸಿದ್ದ ಶಿಲ್ಪಾ ಶೆಟ್ಟಿ ದುರ್ಗಾ ಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.‌ಮೂಲತಃ ಕತಾವಳಿಯವರಾದ ಶಿಲ್ಪಾಶೆಟ್ಟಿ ಮುಂಬೈನಲ್ಲಿ ನೆಲೆಸಿದ್ದಾರೆ.ಆದರೆ ಅವರು ತಮ್ಮ ಹುಟ್ಟೂರನ್ನು ಮರೆತಿಲ್ಲ. ಆಗಾಗ, ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುತ್ತಿರುತ್ತಾರೆ. ಭೂತ ಕೋಲಾ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರುತ್ತಾರೆ. ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಗಳ ದೇಗುಲಗಳ ದರ್ಶನವೂ ಮಾಡುತ್ತಿದ್ದಾರೆ.

ಕಟೀಲು ದುರ್ಗೆಯ ದರ್ಶನ ಪಡೆದ ನಟಿ‌ ಶಿಲ್ಪಾ ಶೆಟ್ಟಿ Read More »

Serial actor Sampath suicide| ಕನ್ನಡದ ಕಿರುತೆರೆ ಖ್ಯಾತನಟ ಸಂಪತ್ ಜಯರಾಮ್ ಆತ್ಮಹತ್ಯೆ

ಸಮಗ್ರ ನ್ಯೂಸ್: ಕನ್ನಡದ ಕೆಲವು ಸಿನಿಮಾ ಮತ್ತು ಸೀರಿಯಲ್​ಗಳಲ್ಲಿ ನಟಿಸಿದ್ದ ಖ್ಯಾತ ನಟ ಸಂಪತ್​ ಜಯರಾಮ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಂಪತ್​ ಜಯರಾಮ್​ ತೊಡಗಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸೂಕ್ತ ಅವಕಾಶ ಇಲ್ಲದೇ ಕಂಗಾಲಾಗಿದ್ದರು ಎನ್ನಲಾಗಿದೆ. ಅವರ ನಿಧನದ ಸುದ್ದಿ ತಿಳಿದು ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಂಪತ್​ ಜಯರಾಮ್​ ತೊಡಗಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸೂಕ್ತ ಅವಕಾಶ ಇಲ್ಲದೇ ಕಂಗಾಲಾಗಿದ್ದರು ಎನ್ನಲಾಗಿದೆ. ಶನಿವಾರ (ಏಪ್ರಿಲ್​ 22) ನೆಲಮಂಗಲದಲ್ಲಿ

Serial actor Sampath suicide| ಕನ್ನಡದ ಕಿರುತೆರೆ ಖ್ಯಾತನಟ ಸಂಪತ್ ಜಯರಾಮ್ ಆತ್ಮಹತ್ಯೆ Read More »

ನೃತ್ಯ ‌ನಿರ್ದೇಶಕ‌ ರಾಜೇಶ್ ಮಾಸ್ಟರ್‌ ನಿಗೂಢ ಸಾವು

ಸಮಗ್ರ ನ್ಯೂಸ್: ನೃತ್ಯ ನಿರ್ದೇಶಕ ರಾಜೇಶ್ ಮಾಸ್ಟರ್ ನಿಗೂಢವಾಗಿ ಸಾವನ್ನಪ್ಪಿರುವ ಆಘಾತದ ಸುದ್ದಿ ಹೊರಬಿದ್ದಿದೆ. ಅವರ ಸಾವಿನ ಕಾರಣದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣಗಳಿಲ್ಲದಿದ್ದರೂ, ನಿಗೂಢ ಕಾರಣಕ್ಕಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹಲವಾರು ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ರಾಜೇಶ್ ಮಾಸ್ಟರ್ ಸಾವಿನ ಸುದ್ದಿ ಬಗ್ಗೆ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಮಲಯಾಳಂ ಚಿತ್ರರಂಗದ ನಟಿ ದೇವಿ ಚಂದನಾ ಅವರು ಫೇಸ್‌ಬುಕ್‌ ನಲ್ಲಿ ರಾಜೇಶ್ ಮಾಸ್ಟರ್ ಅವರೊಂದಿಗಿನ ಕೆಲವು ಫೋಟೋಗಳನ್ನು ಹಂಚಿಕೊಂಡು ತಮ್ಮ ಆಘಾತವನ್ನು

ನೃತ್ಯ ‌ನಿರ್ದೇಶಕ‌ ರಾಜೇಶ್ ಮಾಸ್ಟರ್‌ ನಿಗೂಢ ಸಾವು Read More »