ಕಲ್ಲಾಪು ಬುರ್ದುಗೋಳಿ ಶ್ರೀ ಕೊರಜ್ಜನ ಉದ್ಭವ ಶಿಲೆಯ ಆದಿಸ್ಥಳದಲ್ಲಿ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದ ಬಿಗ್ ಬಾಸ್ ಶೈನ್ ಶೆಟ್ಟಿ
ಸಮಗ್ರ ನ್ಯೂಸ್:ಉಳ್ಳಾಲ ನ.19ರಂದು ತೆರೆಕಾಣಲಿರುವ ಶೈನ್ ಶೆಟ್ಟಿ, ಪ್ರಭು ಮುಂಡ್ಕೂರು ಅಭಿನಯದ ಮರ್ಯಾದೆ ಪ್ರಶ್ನೆ ಯಶಸ್ಸಿಗಾಗಿ ಕಲ್ಲಾಪು ಬುರ್ದುಗೋಳಿ ಕೊರಗಜ್ಜ ಉದ್ಬವ ಶಿಲೆಯ ಆದಿಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿ, ನಾವು ದಿನನಿತ್ಯ ನಮ್ಮ ಕಾರ್ಯ ಪ್ರಾರಂಭಿಸುವಾಗ ಅಜ್ಜನನ್ನು ನೆನಪಿಸಿಕೊಂಡು ಸಾಕಷ್ಟು ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು. ಈ ಚಿತ್ರವೂ ಜನರ ಮನಗೆಲ್ಲುವಲ್ಲಿ ಕೊರಗಜ್ಜ ಹರಸಲಿ ಎಂದು ಪ್ರಾರ್ಥಿಸಲು ಈಕ್ಷೇತ್ರಕ್ಕೆ ಬಂದಿದ್ದೇವೆ ಖಂಡಿತ ದೈವ ಬಲ ಇರುತ್ತದೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.ಈ ಸಂದರ್ಭದಲ್ಲಿ ಬುರ್ದುಗೋಳಿ ಕ್ಷೇತ್ರದ ಅಧ್ಯಕ್ಷರಾದ ವಿಶ್ವನಾಥ್ ನಾಯಕ್ ಕ್ಷೇತ್ರದ […]