ತನ್ನದಲ್ಲದ ಎರಡೂ ಕ್ಷೇತ್ರಗಳಲ್ಲಿ ಸಚಿವ ವಿ.ಸೋಮಣ್ಣಗೆ ಸೋಲುವ ಭೀತಿ| ಕೈ ಮುಗಿತೀನಿ ವಾಪಾಸ್ ತಗೋ ಎಂದು ಜೆಡಿಎಸ್ ಅಭ್ಯರ್ಥಿಗೆ ದಮ್ಮಯ್ಯ ಹಾಕಿದ ಹಿರಿಯ ನಾಯಕ
ಸಮಗ್ರ ನ್ಯೂಸ್: ತನ್ನ ಸ್ವಂತ ಕ್ಷೇತ್ರ ಗೋವಿಂದರಾಜನಗರ ಬಿಟ್ಟು ವರುಣಾ ಹಾಗೂ ಚಾಮರಾಜನಗರದ ವಿಧಾನಸಭಾ ಕ್ಷೇತ್ರಗಳೆರಡಲ್ಲೂ ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಸ್ಪರ್ಧೆ ಮಾಡುತ್ತಿರುವ ಸಚಿವ ವಿ ಸೋಮಣ್ಣ ಅವರಿಗೆ ಎರಡೂ ಕ್ಷೇತ್ರಗಳಲ್ಲಿ ಸೋಲುವ ಆತಂಕ ಹೆಚ್ಚಾಗಿದೆ. ವರುಣಾ ವಿಧಾನಸಭಾ ಕ್ಷೇತ್ರದ ಎರಡು ಹಳ್ಳಿಗಳಲ್ಲಿ ಮತಯಾಚನೆ ಮಾಡುವ ವೇಳೆ ಗ್ರಾಮಸ್ಥರಿಂದ ತರಾಟೆಗೆ ಒಳಗಾಗಿದ್ದ ಸೋಮಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಇಲ್ಲಿ ಸಚಿವ ವಿ ಸೋಮಣ್ಣ ಅವರು ಚಾಮರಾಜನಗರ ಜೆಡಿಎಸ್ ಅಭ್ಯರ್ಥಿಗೆ ನಿನ್ನ ಕೈಮುಗಿತಿನಿ […]










