ರಾಜಕೀಯ

ಕಾಂಗ್ರೆಸ್ ಗೆಲುವಿನ ಬೆನ್ನಲ್ಲೇ ಜಿಹಾದಿಗಳ ಅಟ್ಟಹಾಸ| ಬೆಳಗಾವಿಯಲ್ಲಿ ಮೊಳಗಿದ ‘ಪಾಕಿಸ್ತಾನ್ ಜಿಂದಾಬಾದ್’

ಸಮಗ್ರ ನ್ಯೂಸ್: ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ, ಸೋನಿಯಾ ಗಾಂಧಿಯವರ ರಾಜಕೀಯ ತಂತ್ರಗಳು, ಪ್ರಿಯಾಂಕಾ ಗಾಂಧಿಯವರ ಪರಿಶ್ರಮ, ಸಿದ್ದರಾಮಯ್ಯನವರ ಮಾಸ್ ಇಮೇಜ್, ಡಿ.ಕೆ.ಶಿವಕುಮಾರ್ ಅವರ ಪಕ್ಷ ಸಂಘಟನೆ, ಕಾರ್ಯಕರ್ತರ ಶ್ರಮ ಇವೆಲ್ಲದರ ಫಲವಾಗಿ ಕಾಂಗ್ರೆಸ್ ಗೆದ್ದಿದೆ ಇಂತಹ ವಿಜಯೋತ್ಸವವನ್ನು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅತ್ಯಂತ ಸಂಭ್ರಮದಿಂದ ಆಚರಿಸಬೇಕು ನಿಜ. ಆದರೆ, ಕೆಲವರು ಕಿಡಿಗೇಡಿಗಳ ಕೃತ್ಯದಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುವಂತೆ ಮಾಡಿದ್ದಾರೆ. ಕಾಂಗ್ರೆಸ್ ಪಡೆದ ಗೆಲುವಿನಿಂದ ಕರ್ನಾಟಕ ಮಾತ್ರವಲ್ಲದೆ ದೇಶದ ಹಲವೆಡೆ ಸಂಭ್ರಮ ಆಚರಿಸಲಾಗುತ್ತಿದೆ. ಅದೇ ರೀತಿ […]

ಕಾಂಗ್ರೆಸ್ ಗೆಲುವಿನ ಬೆನ್ನಲ್ಲೇ ಜಿಹಾದಿಗಳ ಅಟ್ಟಹಾಸ| ಬೆಳಗಾವಿಯಲ್ಲಿ ಮೊಳಗಿದ ‘ಪಾಕಿಸ್ತಾನ್ ಜಿಂದಾಬಾದ್’ Read More »

ಸುಳ್ಯಕ್ಕೆ ಆಗಮಿಸಿದ ಭಾಗೀರಥಿ ಮುರುಳ್ಯ

ಸಮಗ್ರ ನ್ಯೂಸ್: ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಗೆದ್ದ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಶನಿವಾರ ರಾತ್ರಿ ಸುಳ್ಯಕ್ಕೆ ಆಗಮಿಸಿದ್ದರು. ಸುಳ್ಯಕ್ಕೆ ಆಗಮಿಸಿದ ಭಾಗೀರಥಿ ಮುರುಳ್ಯ ಅವರಿಗೆ ಕನಕಮಜಲು, ಜಾಲ್ಸೂರಿನಲ್ಲಿ ಅದ್ದೂರಿ ಸ್ವಾಗತಿಸಿ, ಅಭಿನಂದಿಸಲಾಯಿತು. ಸುಳ್ಯಕ್ಕೆ ಆಗಮಿಸಿದ ಭಾಗೀರಥಿ ಮುರುಳ್ಯ ಅವರು ಸುಳ್ಯ ಬಿಜೆಪಿ ಕಛೇರಿ ಬಳಿಕ ಮಾತನಾಡಿ, ಸುಳ್ಯದ ಅಭಿವೃದ್ಧಿಗೆ ಎಲ್ಲರ ಸಹಕಾರ ಯಾಚಿಸಿ ಗೆಲುವಿಗೆ ಕಾರಣಕರ್ತರಾದವರಿಗೆ ಕೃತಜ್ಞತೆ ಸಲ್ಲಿಸಿದರು. ಬಳಿಕ ಬಿಜೆಪಿ ಕಛೇರಿಗೆ ತೆರಳಿದರು. ಬಿಜೆಪಿ ಪಕ್ಷದ ಪ್ರಮುಖರಾದ ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ,

ಸುಳ್ಯಕ್ಕೆ ಆಗಮಿಸಿದ ಭಾಗೀರಥಿ ಮುರುಳ್ಯ Read More »

ಸುಳ್ಯ: ನಮ್ಮ ಅಭ್ಯರ್ಥಿ ಸೋತರೂ ಸರಕಾರದ ಯೋಜನೆ ಪ್ರತಿಯೊಬ್ಬ ಅರ್ಹರಿಗೆ ತಲುಪಿಸುತ್ತೇವೆ – ಪಿ ಸಿ ಜಯರಾಮ.

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯಾಗಬೇಕಾದರೆ ಸುಳ್ಯದಲ್ಲೂ ಕಾಂಗ್ರೆಸ್ ಶಾಸಕರು ಗೆಲ್ಲಬೇಕೆಂಬ ನಿಟ್ಟಿನಲ್ಲಿ ಪ್ರತೀ ಗ್ರಾಮ ಮಟ್ಟದಲ್ಲೂ ನಮ್ಮ ಪಕ್ಷದ ನಾಯಕರುಗಳು ಮತ್ತು ಕಾರ್ಯಕರ್ತರು ಉತ್ತಮವಾಗಿ ಪ್ರಚಾರ ಸಮಿತಿಯ ನೇತೃತ್ವದಲ್ಲಿ ಪ್ರಚಾರ ಕಾರ್ಯ ನಡೆಸಿದ್ದರು ಆದರೆ ಅಷ್ಟು ಪರಿಣಾಮಕಾರಿ ಫಲ ನೀಡಿಲ್ಲ. ಇಂದಿನ ಜನಾಭಿಪ್ರಾಯವನ್ನು ಗೌರವದಿಂದ ನಾವು ಸ್ವೀಕರಿಸುತ್ತೇವೆ. ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು ನಮ್ಮ ಪಕ್ಷ ಚುನಾವಣಾ ಪ್ರಚಾರ ಸಂದರ್ಭದಲ್ಲಿ ನೀಡಿದ

ಸುಳ್ಯ: ನಮ್ಮ ಅಭ್ಯರ್ಥಿ ಸೋತರೂ ಸರಕಾರದ ಯೋಜನೆ ಪ್ರತಿಯೊಬ್ಬ ಅರ್ಹರಿಗೆ ತಲುಪಿಸುತ್ತೇವೆ – ಪಿ ಸಿ ಜಯರಾಮ. Read More »

ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಸವರಾಜ ಬೊಮ್ಮಾಯಿ

ಸಮಗ್ರ ನ್ಯೂಸ್: ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರ ರಚಿಸುವತ್ತ ದಾಪುಗಾಲಿಟ್ಟಿದೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಹಾವೇರಿಯ ಶಿಗ್ಗಾಂವಿಯಿಂದ ಬೆಂಗಳೂರಿಗೆ ಆಗಮಿಸಿದಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನೇರವಾಗಿ ರಾಜಭವನಕ್ಕೆ ತೆರಳಿ, ರಾಜ್ಯಪಾಲರಿಗೆ ತನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ನಡೆದಂತ ಮತದಾನ ಮತಎಣಿಕೆ ಕಾರ್ಯ ಇಂದು ನಡೆಯಿತು. ಕಾಂಗ್ರೆಸ್ ಸ್ಪಷ್ಟ ಬಹುಮತದ ಮೂಲಕ ಸರ್ಕಾರ ರಚನೆಯತ್ತ ದಾಪುಗಾಲು ಇಟ್ಟಿದೆ. 224 ಕ್ಷೇತ್ರಗಳಲ್ಲಿ

ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಸವರಾಜ ಬೊಮ್ಮಾಯಿ Read More »

ಕಾಂಗ್ರೆಸ್ ಎಂದಿಗೂ ಬಿಜೆಪಿಗೆ ಸಮಾನವಲ್ಲ; ಉಚಿತಗಳಿಗೆ ಮನಸೋಲದೇ ಇದು ಕರುನಾಡ ಜನತೆ ನೀಡಿದ ಭಿಕ್ಷೆಯಿದು ನೆನಪಿರಲಿ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಬಿಜೆಪಿ ಆಡಳಿತವನ್ನು ಕೊನೆಗಾಣಿಸಿ ಕಾಂಗ್ರೆಸ್ ಗೆ 136 ಸ್ಥಾನವನ್ನು ಕೊಟ್ಟು ಜನತೆ ಗೆಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹವ್ಯಾಸಿ ಪತ್ರಕರ್ತ ಎಲ್.ಕೆ ಮಂಜುನಾಥ್ ಬರೆದುಕೊಂಡ ಪೇಸ್ ಬುಕ್ ಬರಹವನ್ನು ಯಥಾವತ್ ಪ್ರಕಟಿಸಲಾಗಿದೆ. ಸದ್ಯದ ಕಾಲಘಟ್ಟದಲ್ಲಿ ಇದು ಅರ್ಥಪೂರ್ಣವಾಗಿದೆ – ಸಂ ಕಾಂಗ್ರೆಸ್‌ ಪಕ್ಷದ ನಾಯಕರು ಹಣಬಲದಿಂದ, ಕಾರ್ಯಕರ್ತರ ಶ್ರಮದಿಂದ, ನೇಮಿಸಿಕೊಂಡ ಏಜೆನ್ಸಿಗಳಿಂದ, ಐದು ಗ್ಯಾರಂಟಿಗಳುಳ್ಳ ಪ್ರಣಾಳಿಕೆಯಿಂದ ಚುನಾವಣೆ ಗೆದ್ದಿದ್ದೇವೆ ಎಂದು ಭಾವಿಸಿಕೊಂಡರೆ, ಮೆರೆದಾಡಿದರೆ ಮುಠ್ಠಾಳತನವಾಗುತ್ತದೆ. ಈ ಯಾವ ಬಲಾಬಲಗಳಲ್ಲೂ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್‌ ಸರಿಸಮವಾಗಲಾರದು.

ಕಾಂಗ್ರೆಸ್ ಎಂದಿಗೂ ಬಿಜೆಪಿಗೆ ಸಮಾನವಲ್ಲ; ಉಚಿತಗಳಿಗೆ ಮನಸೋಲದೇ ಇದು ಕರುನಾಡ ಜನತೆ ನೀಡಿದ ಭಿಕ್ಷೆಯಿದು ನೆನಪಿರಲಿ Read More »

ಮೋಡಿ ಮಾಡದ ಮೋದಿ ರೋಡ್ ಶೋ ಪ್ರಚಾರ| ಮೋದಿಯ‌ನ್ನು ನೋಡಿದ್ದಷ್ಟೇ ಓಟು ಹಾಕಿಲ್ಲ!!

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಆಡಳಿತ ನಡೆಸಿದ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇದ್ದುದು ಚುನಾವಣಾ ಫಲಿತಾಂಶದ ಮೂಲಕ ಸ್ಪಷ್ಟವಾಗಿದೆ. ಜನರ ಅಸಮಾಧಾನದ ಮುಂದೆ ಪ್ರಧಾನಿ ನರೇಂದ್ರ ಮೋದಿ ಎಷ್ಟೇ ಮೋಡಿ ಮಾಡಿದರೂ ಅದು ಮತದಾನರ ಮುಂದೆ ಕಮಾಲ್ ಮಾಡಲು ಸಾಧ್ಯವಾಗಿಲ್ಲ ಎಂಬುದು ನಿಜವಾಗುತ್ತಿದೆ. ಪ್ರಧಾನಿ ಮೋದಿ ಅವರು ಚುನಾವಣೆಗೆ ಇನ್ನೂ ಮೂರು ವಾರ ಬಾಕಿ ಇರುವಾಗಲೇ ರಾಜ್ಯ ಪ್ರವಾಸ ಆರಂಭಿಸಿದರು. ಹಿಂದೆಲ್ಲಾ ಪ್ರಧಾನಿಯಾದವರು ಕೇವಲ ಒಂದು ಅಥವಾ ಹೆಚ್ಚೆಂದರೆ ಎರಡು ಬಾರಿ ಬೆಂಗಳೂರಿಗೆ

ಮೋಡಿ ಮಾಡದ ಮೋದಿ ರೋಡ್ ಶೋ ಪ್ರಚಾರ| ಮೋದಿಯ‌ನ್ನು ನೋಡಿದ್ದಷ್ಟೇ ಓಟು ಹಾಕಿಲ್ಲ!! Read More »

‘ಬಿಜೆಪಿ ಸೋಲಿನ ಹೊಣೆ ಹೊತ್ತುಕೊಳ್ಳುತ್ತೇನೆ’- ಕಟೀಲ್

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿದ್ದು ಇದರ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಮತದಾರರಿಗೆ ಧನ್ಯವಾದ ತಿಳಿಸುತ್ತ ಒಳ್ಳೆಯಕಾರ್ಯಗಳಿಗೆ ಸಹಕಾರ ನೀಡುತ್ತ, ವಿರೋಧ ಪಕ್ಷವಾಗಿ ಜವಬ್ದಾರಿಯುತ ಕಾರ್ಯ ನಿರ್ವಹಿಸುತ್ತೇವೆ. ಹಾಗೇ ಬಿಜೆಪಿಯ ಸೋಲಿನ ಹೊಣೆ ನನ್ನದು, ಮುಂಬರುವ ಎಂಪಿ ಚುನಾವಣೆಯತ್ತ ಗಮನ ಹರಿಸಿ ಗೆಲ್ಲುತ್ತೇನೆ. ಈ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

‘ಬಿಜೆಪಿ ಸೋಲಿನ ಹೊಣೆ ಹೊತ್ತುಕೊಳ್ಳುತ್ತೇನೆ’- ಕಟೀಲ್ Read More »

ಹೊಸ ಇತಿಹಾಸ ದಾಖಲಿಸಿದ ಸುಳ್ಯ| ಕರ್ನಾಟಕದ ವಿಧಾನಸಭೆಗೆ ಸುಳ್ಯದ ದ್ರೌಪದಿ ಮುರ್ಮು ಭಾಗೀರಥಿ ಮುರುಳ್ಯ ಭರ್ಜರಿ ಎಂಟ್ರಿ| ಸಾಮಾನ್ಯ ಕಾರ್ಯಕರ್ತೆಯನ್ನು ಶಾಸಕಿಯನ್ನಾಗಿಸಿದ ಸುಳ್ಯದ ಜನತೆ

ಸಮಗ್ರ ನ್ಯೂಸ್: ವೃತ್ತಿಯಲ್ಲಿ ಟೈಲರಿಂಗ್, ಹೈನುಗಾರಿಕೆ, ಗೌರವ ಶಿಕ್ಷಕಿಯಾಗಿ ಕೆಲಸ ಮಾಡಿ, ಪ್ರಸ್ತುತ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯದಿಂದ ಸ್ಪರ್ಧಿಸಿ ಸುಮಾರು 35 ವರ್ಷಗಳ ನಂತರ ಇಂದು ಸುಳ್ಯ ಮೀಸಲು ಕ್ಷೇತ್ರದ ನೂತನ ಶಾಸಕಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಆಯ್ಕೆಯಾಗಿದ್ದಾರೆ. ಸತತವಾಗಿ 35 ವರ್ಷಗಳಿಂದ ಬಿಜೆಪಿಯ ಹಿಡಿತದಲ್ಲಿರುವ ಸುಳ್ಯ ಮೀಸಲು ಕ್ಷೇತ್ರದಲ್ಲಿ ಈ ಸಲ ಎಸ್.ಅಂಗಾರ ಅವರನ್ನು ಬದಲಾವಣೆ ಮಾಡಿ ಹೊಸ ಮುಖಕ್ಕೆ ಟಿಕೆಟ್‌ ನೀಡಿದ್ದು,

ಹೊಸ ಇತಿಹಾಸ ದಾಖಲಿಸಿದ ಸುಳ್ಯ| ಕರ್ನಾಟಕದ ವಿಧಾನಸಭೆಗೆ ಸುಳ್ಯದ ದ್ರೌಪದಿ ಮುರ್ಮು ಭಾಗೀರಥಿ ಮುರುಳ್ಯ ಭರ್ಜರಿ ಎಂಟ್ರಿ| ಸಾಮಾನ್ಯ ಕಾರ್ಯಕರ್ತೆಯನ್ನು ಶಾಸಕಿಯನ್ನಾಗಿಸಿದ ಸುಳ್ಯದ ಜನತೆ Read More »

ಪುತ್ತೂರಲ್ಲಿ ಪ್ರಯಾಸದ ಗೆಲುವು ಕಂಡ ಅಶೋಕ್ ರೈ| ಕೊನೆವರೆಗೂ ಹೋರಾಡಿ ಸೋಲು ಕಂಡ ಪುತ್ತಿಲ| ಮಕಾಡೆ ಮಲಗಿದ ಬಿಜೆಪಿ

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು, ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್‍ ರೈ ಮತ್ತು ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ನಡುವೆ ಹಾವು ಏಣಿ ಆಟ ನಡೆಯುತ್ತಿತ್ತು. ಇದೀಗ ಮತ ಎಣಿಕೆ ಪೂರ್ಣಗೊಂಡಿದ್ದು ಪುತ್ತೂರು ಕ್ಷೇತ್ರದಿಂದ ಕಾಂಗ್ರೇಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ವಿಜಯಶಾಲಿಯಾಗಿದ್ದಾರೆ. ಇನ್ನು ಬಿಜೆಪಿಯ ಆಶಾ ತಿಮ್ಮಪ್ಪ 31000 ಗಳಷ್ಟು ಮತ ಪಡೆಯಲು ಶಕ್ತರಾದರು. ಅಶೋಕ್ ರೈ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ವಿರುದ್ಧ ಪ್ರಯಾಸದ ಗೆಲುವು

ಪುತ್ತೂರಲ್ಲಿ ಪ್ರಯಾಸದ ಗೆಲುವು ಕಂಡ ಅಶೋಕ್ ರೈ| ಕೊನೆವರೆಗೂ ಹೋರಾಡಿ ಸೋಲು ಕಂಡ ಪುತ್ತಿಲ| ಮಕಾಡೆ ಮಲಗಿದ ಬಿಜೆಪಿ Read More »

Breaking:ಡಾ.ಸುಧಾಕರ್ ಗೆ ಸೋಲುಣಿಸಿದ ಪ್ರದೀಪ್ ಈಶ್ವರ್

ಸಮಗ್ರ ನ್ಯೂಸ್: ಮೇ 10ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ಭಾರೀ ಕುತೂಹಲ ಮೂಡಿಸಿತ್ತು. ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಹೋದ ನಂತರ ಆರೋಗ್ಯ ಸಚಿವರಾಗಿ ಗಮನ ಸೆಳೆದಿದ್ದ ಸುಧಾಕರ್ ಗೆಲುವು ನಿಶ್ಚಿತ ಎಂದೇ ಹೇಳಲಾಗುತ್ತಿತ್ತು. ಆದರೆ ಸುಧಾಕರ್ ಅವರ ದೌರ್ಜನ್ಯ ಹಾಗೂ ಬಿಜೆಪಿಯ ದುರಾಡಳಿತದಿಂದ ಬೇಸತ್ತ ಜನರು ಈ ಬಾರಿ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಆಯ್ಕೆಯ ಗೊಂದಲದಲ್ಲಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಟಿಕೆಟ್ ಸಿಕ್ಕರೂ ಅತ್ಯಲ್ವ ಅವಧಿಯಲ್ಲಿ ಜನರ ಮನಸ್ಸನ್ನು

Breaking:ಡಾ.ಸುಧಾಕರ್ ಗೆ ಸೋಲುಣಿಸಿದ ಪ್ರದೀಪ್ ಈಶ್ವರ್ Read More »