ರಾಜಕೀಯ

ಲೋಕಸಭಾ ಚುನಾವಣೆಗೆ ದ.ಕ ಕ್ಷೇತ್ರದಿಂದ ಟಿಕೆಟ್| ಬಿಜೆಪಿ ಹೈಕಮಾಂಡ್ ಬಗ್ಗೆ ಪುತ್ತಿಲ ಹೇಳಿದ್ದೇನು?

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಸಂಸದ ಸ್ಥಾನಕ್ಕೆ ಪುತ್ತಿಲ ಅಭ್ಯರ್ಥಿ ಆಗಬೇಕು ಎಂಬ ಒತ್ತಡ ಕೇಳಿಬರುತ್ತಿದ್ದು‌ ಈ ಕುರಿತಂತೆ ಅರುಣ್ ಕುಮಾರ್ ಪುತ್ತಿಲ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ದ.ಕ ಲೋಕಸಭಾ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಬಿಜೆಪಿ ಹೈಕಮಾಂಡಿಗೆ ಬಿಟ್ಟು ವಿಚಾರ. ಸಾಮಾಜಿಕ ವ್ಯವಸ್ಥೆಯಲ್ಲಿ ಕಾರ್ಯಕರ್ತರಿಗೆ ಅಭ್ಯರ್ಥಿ ಯಾರು ಎಂದು ನಿರೀಕ್ಷೆ ಇರೋದು ಸಹಜ. ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆ ಎಂದು ಮುಂದಿನ ದಿನದಲ್ಲಿ ಕಾದು ನೋಡೋಣ ಎಂದಿದ್ದಾರೆ. ಮಾಜಿ ಸಿಎಂ ಸದಾನಂದ ಗೌಡ ಬಿಜೆಪಿ […]

ಲೋಕಸಭಾ ಚುನಾವಣೆಗೆ ದ.ಕ ಕ್ಷೇತ್ರದಿಂದ ಟಿಕೆಟ್| ಬಿಜೆಪಿ ಹೈಕಮಾಂಡ್ ಬಗ್ಗೆ ಪುತ್ತಿಲ ಹೇಳಿದ್ದೇನು? Read More »

ಸ್ಪೀಕರ್ ಯು.ಟಿ ಖಾದರ್ ವಿರುದ್ಧ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ| ಕೋಮು ಪ್ರಚೋದನಕಾರಿ ಪೇಪರ್ ಕಟ್ಟಿಂಗ್ ವಿರುದ್ದ ಕ್ರಮಕ್ಕೆ ಮುಂದಾದ ಕಾಂಗ್ರೆಸ್| ಶೇರ್ ಮಾಡುವವರ ಮಾಹಿತಿ ನೀಡಲು ಮನವಿ

ಸಮಗ್ರ ನ್ಯೂಸ್: ಸ್ಪೀಕರ್ ಯು.ಟಿ ಖಾದರ್ ಅವರು ಹೇಳಿದ್ದಾರೆ ಎನ್ನಲಾದ ಪೇಪರ್ ಕಟ್ಟಿಂಗ್ ಒಂದು ಭಾರಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಮಾಹಿತಿ ತಿಳಿದ ಖಾದರ್ ಇದೊಂದು ನಕಲಿ ಸೃಷ್ಟಿ ಎಂದಿದ್ದು ಕೋಮು ದ್ವೇಷ ಹರಡಲು ಕುಮ್ಮಕ್ಕು ನೀಡುವ ಶಕ್ತಿಗಳ ವಿರುದ್ಧ ಗಂಭೀರ ಕ್ರಮಕ್ಕೆ ಮುಂದಾಗಿದ್ದಾರೆ. ಕಾಂಗ್ರೇಸ್ ನ ಕಾನೂನು ಘಟಕದ ನಂಬರ್ ಗೆ 9343346439 ಗೆ ಈ ನಕಲಿ ಪೇಪರ್ ಕಟ್ಟಿಂಗ್ ಶೇರ್ ಮಾಡುವವರ ಫೋನ್ ನಂಬರ್ ಸಹಿತ ಸ್ಕ್ರೀನ್ ಶಾಟ್ ಕಳುಹಿಸುವಂತೆ ಮನವಿ ಮಾಡಿದ್ದಾರೆ.

ಸ್ಪೀಕರ್ ಯು.ಟಿ ಖಾದರ್ ವಿರುದ್ಧ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ| ಕೋಮು ಪ್ರಚೋದನಕಾರಿ ಪೇಪರ್ ಕಟ್ಟಿಂಗ್ ವಿರುದ್ದ ಕ್ರಮಕ್ಕೆ ಮುಂದಾದ ಕಾಂಗ್ರೆಸ್| ಶೇರ್ ಮಾಡುವವರ ಮಾಹಿತಿ ನೀಡಲು ಮನವಿ Read More »

ಬಸ್ ನ ಮೆಟ್ಟಿಲಿಗೆ ನಮಸ್ಕರಿಸಿದ ಅಜ್ಜಿಯ ಫೋಟೋ ವೈರಲ್| ಬಹುಕಾಲ ನೆನಪುಳಿಯುವ ಫೋಟೋ ಎಂದ ಸಿಎಂ ಸಿದ್ದು

ಸಮಗ್ರ ನ್ಯೂಸ್: ಉಚಿತ ಬಸ್ ಪ್ರಯಾಣ ಯೋಜನೆ ನಿನ್ನೆಯಿಂದ ಜಾರಿಯಾಗಿದ್ದು, ಮೊದಲ ದಿನ ಮೆಟ್ಟಿಲಿಗೆ ನಮಸ್ಕರಿಸಿ ಬಸ್ ಹತ್ತಿದ ಅಜ್ಜಿ ಫೋಟೋ ಭಾರಿ ವೈರಲ್ ಆಗಿದೆ. ಬಸ್ ಹತ್ತುವ ಮುನ್ನ ಮೆಟ್ಟಿಲಿಗೆ ನಮಸ್ಕಾರ ಮಾಡಿ ಅಜ್ಜಿ ಬಸ್ ಹತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಗೆ ವ್ಯಕ್ತವಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ನೆನಪಿನಲ್ಲಿ ಉಳಿಯುವ ಚಿತ್ರ ಇದು ಎಂದು ಟ್ವೀಟ್ ಮಾಡಿದ್ದಾರೆ. ನಾವು ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿದಾಗ ಶ್ರಮಪಡದೆ ಸಮಾಜದ

ಬಸ್ ನ ಮೆಟ್ಟಿಲಿಗೆ ನಮಸ್ಕರಿಸಿದ ಅಜ್ಜಿಯ ಫೋಟೋ ವೈರಲ್| ಬಹುಕಾಲ ನೆನಪುಳಿಯುವ ಫೋಟೋ ಎಂದ ಸಿಎಂ ಸಿದ್ದು Read More »

‘ಮೈತ್ರಿ ಬಗ್ಗೆ ಮಾತುಕತೆ ನನಗೆ ಗೊತ್ತಿಲ್ಲ’|ಕುಕ್ಕೆಯಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ

ಸಮಗ್ರ ನ್ಯೂಸ್: ದೇವೆಗೌಡರು ದೆಹಲಿಗೆ ತೆರಳಿ ಮೈತ್ರಿ ಬಗ್ಗೆ ಮಾತನಾಡಿದ್ದಾರೆಯೋ, ಇಲ್ಲವೋ ಅದು ಮಾಧ್ಯಮದವರು ಹೇಳುತ್ತಿರುವುದು ನಿಮಗೆ ಗೊತ್ತಿರುವ ವಿಷಯ, ಅದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಮಾಜಿ ಸಚಿವ ಜೆಡಿಎಸ್‌ನ ಎಚ್.ಡಿ.ರೇವಣ್ಣ ಹೇಳಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ರವಿವಾರ ಭೇಟಿ ನೀಡಿದ್ದ ಅವರು ಶ್ರೀ ದೇವರ ದರುಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಚುನಾವಣೆಯಲ್ಲಿ ಜನರ ತೀರ್ಪಿಗೆ ತಲೆಬಾಗುತ್ತೇವೆ. ಮುಂದೆ ಜೆಡಿಎಸ್ ಪಕ್ಷವನ್ನು ಕಟ್ಟುತ್ತೇವೆ, ಬೆಳೆಸುತ್ತೇವೆ. ಇವತ್ತೇ ಮುಗಿದು ಹೋಗಲ್ಲ. ದೇವೆಗೌಡರು, ಕುಮಾರಣ್ಣ ಎಲ್ಲರೂ

‘ಮೈತ್ರಿ ಬಗ್ಗೆ ಮಾತುಕತೆ ನನಗೆ ಗೊತ್ತಿಲ್ಲ’|ಕುಕ್ಕೆಯಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ Read More »

‘ಕೃಷ್ಣಪ್ಪ ಹಠಾವೋ ಸುಳ್ಯ ಕಾಂಗ್ರೆಸ್ ಬಚಾವೋ’ | ಬ್ಲಾಕ್ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದ ಕಾರ್ಯಕರ್ತರು

ಸಮಗ್ರ ನ್ಯೂಸ್: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನಲೆಯಲ್ಲಿ ತಾ. ಪಂ ಮಾಜಿ ಸದಸ್ಯೆಯರಿಬ್ಬರ ಸಹಿತ 17 ಮಂದಿಯನ್ನು ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ. ಇದರಿಂದ ಸುಳ್ಯ‌ ಬ್ಲಾಕ್ ಕಾಂಗ್ರೆಸ್ ವಿರುದ್ಧ ಕಾರ್ಯಕರ್ತರು ಗರಂ ಆಗಿದ್ದಾರೆ. ಉಚ್ಛಾಟನೆಗೊಂಡ ಕಾರ್ಯಕರ್ತರು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷೊಯಾಗಿದ್ದ ನಂದಕುಮಾರ್ ಜೊತೆ ಗುರುತಿಸಿಕೊಂಡಿದ್ದರು.‌ ಆದರೆ ಟಿಕೇಟ್ ಘೋಷಣೆ ಆದ ನಂತರ ಕೃಷ್ಣಪ್ಪರಿಗೆ ದುಡಿದಿದ್ದರು ಎನ್ನಲಾಗಿದೆ. ಕಡಬ ತಾಲೂಕು ಪಂಚಾಯಿತಿ

‘ಕೃಷ್ಣಪ್ಪ ಹಠಾವೋ ಸುಳ್ಯ ಕಾಂಗ್ರೆಸ್ ಬಚಾವೋ’ | ಬ್ಲಾಕ್ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದ ಕಾರ್ಯಕರ್ತರು Read More »

ಕರೆಂಟ್ ಬಿಲ್‌ ಹೆಚ್ಚಾಗಲು‌ ನಮ್ಮ ಸರ್ಕಾರ ಕಾರಣವಲ್ಲ – ಗೃಹ ಸಚಿವ ಪರಮೇಶ್ವರ್

ಸಮಗ್ರ ನ್ಯೂಸ್: ನಮ್ಮ ಸರ್ಕಾರ ಕರೆಂಟ್​ ಬಿಲ್​ ಜಾಸ್ತಿ ಮಾಡಿಲ್ಲ. ಹಿಂದಿನ ಸರ್ಕಾರದಲ್ಲಿಯೇ ವಿದ್ಯುತ್​ ದರ ಏರಿಕೆ ಮಾಡಲಾಗಿತ್ತು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್​ ಹೇಳಿದ್ದಾರೆ. ತುಮಕೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್​ ವಿದ್ಯುತ್​ ಬಿಲ್ ಏರಿಕೆ ಮಾಡಿದೆ ಎಂದು ಕೆಲವರು ಸುಮ್ಮನೆ ಕತೆ ಕಟ್ಟುತ್ತಿದ್ದಾರೆ ಎಂದು ಹೇಳಿದ್ದಾರೆ ಕರೆಂಟ್​ ಬಿಲ್​ ಜಾಸ್ತಿ ಬರೋಕೆ ನಮ್ಮ ಸರ್ಕಾರ ಕಾರಣವಲ್ಲ. ನೀವು ಯುನಿಟ್​ ಜಾಸ್ತಿ ಬಳಕೆ ಮಾಡಿದ್ದರೆ ನೀವೇ ಬಿಲ್​ ಕಟ್ಟಬೇಕು . ಹಿಂದಿನ ಸರ್ಕಾರ

ಕರೆಂಟ್ ಬಿಲ್‌ ಹೆಚ್ಚಾಗಲು‌ ನಮ್ಮ ಸರ್ಕಾರ ಕಾರಣವಲ್ಲ – ಗೃಹ ಸಚಿವ ಪರಮೇಶ್ವರ್ Read More »

ಸುಳ್ಯ: ‘ಶಕ್ತಿ’ ಯೋಜನೆಗೆ ಚಾಲನೆ ನೀಡುವ ವೇಳೆ ಕೈ ನಾಯಕರ “ಸ್ವಶಕ್ತಿ” ಪ್ರದರ್ಶನ| ಮತ್ತೊಮ್ಮೆ ಬೀದಿಗೆ ಬಂದ ಕಾಂಗ್ರೆಸ್ ನ ಒಳಜಗಳ

ಸಮಗ್ರ ನ್ಯೂಸ್: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಗೆ ಚಾಲನೆ ನೀಡುವ ವೇಳೆ ಸುಳ್ಯ ಕಾಂಗ್ರೆಸ್ ನಲ್ಲಿ ನಾಯಕರ ಸ್ವಶಕ್ತಿ ಪ್ರದರ್ಶನ(!) ನಡೆದಿದೆ. ಈ ಮೂಲಕ ಕಾಂಗ್ರೆಸ್ ನ ನಾಯಕರ ಒಳಜಗಳ ಬೀದಿಗೆ ಬಿದ್ದಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ‌ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆ ‘ಶಕ್ತಿ’ಗೆ ಚಾಲನೆ ನೀಡಲಾಗಿದೆ. ಸುಳ್ಯದಲ್ಲಿ ಈ ಕಾರ್ಯಕ್ರಮದ ಉದ್ಘಾಟನೆ ವೇಳೆ ಸ್ವತಃ ಕಾಂಗ್ರೆಸ್ ನಾಯಕರು ಕಿತ್ತಾಟ ನಡೆಸಿರುವುದುಗಾಗಿ ತಿಳಿದುಬಂದಿದೆ. ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಕ್ತಿ ಯೋಜನೆಯ ಚಾಲನಾ

ಸುಳ್ಯ: ‘ಶಕ್ತಿ’ ಯೋಜನೆಗೆ ಚಾಲನೆ ನೀಡುವ ವೇಳೆ ಕೈ ನಾಯಕರ “ಸ್ವಶಕ್ತಿ” ಪ್ರದರ್ಶನ| ಮತ್ತೊಮ್ಮೆ ಬೀದಿಗೆ ಬಂದ ಕಾಂಗ್ರೆಸ್ ನ ಒಳಜಗಳ Read More »

ಇರಲಾರದೆ ಇರುವೆ ಬಿಟ್ಕೊಂಡ ಸುಳ್ಯ ಕಾಂಗ್ರೆಸ್| ಪಕ್ಷ ವಿರೋಧಿ ಚಟುವಟಿಕೆ ಆರೋಪಿಸಿ 17 ಮಂದಿ ಅಮಾನತು

ಸಮಗ್ರ ನ್ಯೂಸ್: 2023ರ ವಿಧಾನಸಭಾ ಚುನಾವಣೆಯ ಸಂದರ್ಭ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿದ್ದಾರೆಂಬ ಕಾರಣಕ್ಕೆ ಕೆಪಿಸಿಸಿ ಸಂಯೋಜಕ ನಂದಕುಮಾರ್ ಮಡಿಕೇರಿ, ಕೆಪಿಸಿಸಿ ಮುಖಂಡ ಎಂ. ವೆಂಕಪ್ಪ ಗೌಡ, ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಶಿಫಾರಸ್ಸು ಮಾಡಿದೆ. ಅಲ್ಲದೇ ಸುಳ್ಯ ಮತ್ತು ಕಡಬ ಸೇರಿ ಸುಳ್ಯ ವಿಧಾನ ಸಭಾ ಕ್ಷೇತ್ರದ 17 ಮಂದಿ ಕಾಂಗ್ರೆಸ್ ಮುಖಂಡರನ್ನು ಅಮಾನತುಗೊಳಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಆದೇಶ ಮಾಡಿದೆ.

ಇರಲಾರದೆ ಇರುವೆ ಬಿಟ್ಕೊಂಡ ಸುಳ್ಯ ಕಾಂಗ್ರೆಸ್| ಪಕ್ಷ ವಿರೋಧಿ ಚಟುವಟಿಕೆ ಆರೋಪಿಸಿ 17 ಮಂದಿ ಅಮಾನತು Read More »

ನಾಳೆಯಿಂದ ರಾಜ್ಯಾದ್ಯಂತ ‘ಶಕ್ತಿ’ ಯೋಜನೆ‌ ಅಧಿಕೃತ ಜಾರಿ| ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ

ಸಮಗ್ರ ನ್ಯೂಸ್: ರಾಜ್ಯ ಸರಕಾರದ ೫ ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ನಾಳೆಯಿಂದಲೇ ಶುರುವಾಗಲಿದ್ದು, ಸ್ಟಿಕ್ಕರ್ ಇರುವ ಬಸ್ ಗಳಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸದ್ಯ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಬೇಡ.ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು. ಆದರೆ 3 ತಿಂಗಳ ಬಳಿಕ ಸ್ಮಾರ್ಟ್ ಕಾರ್ಡ್ ಕಡ್ಡಾಯ. ಮೂರು ತಿಂಗಳ ಒಳಗಾಗಿ ಉಚಿತ ಪ್ರಯಾಣ ಮಾಡುವ ಮಹಿಳೆಯರು ಸ್ಮಾರ್ಟ್ ಕಾರ್ಡ್ ಪಡೆದಿರಬೇಕು

ನಾಳೆಯಿಂದ ರಾಜ್ಯಾದ್ಯಂತ ‘ಶಕ್ತಿ’ ಯೋಜನೆ‌ ಅಧಿಕೃತ ಜಾರಿ| ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ Read More »

ಸಿಎಂ ಸಿದ್ದರಾಮಯ್ಯ ಅವರಿಂದ ಹಿಂದೂ ಕಾರ್ಯಕರ್ತರ ಹತ್ಯೆ ಹೇಳಿಕೆ| ಶಾಸಕ ಹರೀಶ್ ಪೂಂಜಾಗೆ ಬಿಗ್ ರಿಲೀಫ್

ಸಮಗ್ರ ನ್ಯೂಸ್: ಸಿದ್ದರಾಮಯ್ಯ ಅವರಿಂದ 24 ಹಿಂದೂ ಕಾರ್ಯಕರ್ತರ ಹತ್ಯೆ ಹೇಳಿಕೆ ಕುರಿತಂತೆ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧದ ಕೇಸ್ ಗೆ ಹೈಕೋರ್ಟ್ ಶುಕ್ರವಾರ ತಡೆ ವಿಧಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ್ದಾರೆ ಎಂದು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹರೀಶ್ ಪೂಂಜಾ ಹೇಳಿಕೆ ನೀಡಿದ್ದರು. ಈ ವಿವಾದಾತ್ಮಕ ಹೇಳಿಕೆ ವಿರುದ್ಧ ಕಾಂಗ್ರೆಸ್ ದೂರು ದಾಖಲಿಸಿತ್ತು. ಇದಕ್ಕೆ ತಡೆ ನೀಡುವಂತೆ ಹರೀಶ್ ಪೂಂಜಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ

ಸಿಎಂ ಸಿದ್ದರಾಮಯ್ಯ ಅವರಿಂದ ಹಿಂದೂ ಕಾರ್ಯಕರ್ತರ ಹತ್ಯೆ ಹೇಳಿಕೆ| ಶಾಸಕ ಹರೀಶ್ ಪೂಂಜಾಗೆ ಬಿಗ್ ರಿಲೀಫ್ Read More »