ರಾಜಕೀಯ

ಕರ್ನಾಟಕದ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ, ನಾಳೆಯೇ ಪ್ರಮಾಣವಚನ

ಬೆಂಗಳೂರು : ಬಿ.ಎಸ್ ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿರುವಂತ ಮುಖ್ಯಮಂತ್ರಿ ಸ್ಥಾನಕ್ಕೆ, ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ನೂತನ ಸಿಎಂ ಆಯ್ಕೆ ಕುರಿತಂತೆ ರಾಜ್ಯಕ್ಕೆ ಕೇಂದ್ರದಿಂದ ವೀಕ್ಷಕರಾಗಿ ಕೇಂದ್ರ ಸಚಿವರಾದಂತ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ , , ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತ್ರತ್ವದಲ್ಲಿ ಹಂಗಾಮಿ ಸಿಎಂ ಯಡಿಯೂರಪ್ಪ ನೂತನ ಮುಖ್ಯಮಂತ್ರಿಗಳನ್ನು ಘೋಷಿಸಿದ್ದಾರೆ. ಬೆಂಗಳೂರಿನ ಕ್ಯಾಪಿಟಲ್ ಹೊಟೇಲ್ ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ನೂತನ ಸಿಎಂ ಆಯ್ಕೆಯ ಕುರಿತಂತೆ ಚರ್ಚೆ ನಡೆದಿದ್ದು, ಸಭೆಯ […]

ಕರ್ನಾಟಕದ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ, ನಾಳೆಯೇ ಪ್ರಮಾಣವಚನ Read More »

ರಾಜಕೀಯ ಮೇಲಾಟದ ನಡುವೆ ರಾಜ್ಯಕ್ಕೆ ಪ್ರವಾಹ ಪರಿಹಾರ ಘೋಷಿಸಿದ ಕೇಂದ್ರ

ರಾಜಕೀಯ ಮೇಲಾಟದ ನಡುವೆ ರಾಜ್ಯಕ್ಕೆ ಪ್ರವಾಹ ಪರಿಹಾರ ಘೋಷಿಸಿದ ಕೇಂದ್ರ ನವದೆಹಲಿ: ಒಂದೆಡೆ ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆ ಸಂಬಂಧ ಕ್ಷೀಪ್ರ ಬೆಳವಣಿಗೆಗಳು ನಡೆಯುತ್ತಿದ್ದು, ಮತ್ತೊಂದೆಡೆ ರಾಜ್ಯದಲ್ಲಿ ಭಾರೀ ಮಳೆಯಿಂದ ಹಲವೆಡೆ ಪ್ರವಾಹ ಎದುರಾಗಿದೆ. ಇದರ ಮಧ್ಯೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರ 629.03 ಕೋಟಿ ರೂ ಪರಿಹಾರ ಘೋಷಣೆ ಮಾಡಿದೆ. ಈ ಬಗ್ಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದ್ದಾರೆ. ಈ ಬಾರಿಯ ಮಳೆಗಾಲದಲ್ಲಿ ಈವರೆಗಿನ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಗೆ

ರಾಜಕೀಯ ಮೇಲಾಟದ ನಡುವೆ ರಾಜ್ಯಕ್ಕೆ ಪ್ರವಾಹ ಪರಿಹಾರ ಘೋಷಿಸಿದ ಕೇಂದ್ರ Read More »

ಸಚಿವ ಸ್ಥಾನಕ್ಕಾಗಿ ಬಿಎಸ್‍ವೈ ನಿವಾಸದಲ್ಲಿ ಶಾಸಕರು ಠಿಕಾಣಿ

ದಾವಣಗೆರೆ: ನೂತನ ಸಿಎಂ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ಕೆಲವು ಶಾಸಕರು ಸಚಿವ ಸ್ಥಾನಕ್ಕಾಗಿ ಕಳೆದ ಎರಡು ದಿನಗಳಿಂದ ಸಿಎಂ ಯಡಿಯೂರಪ್ಪನವರ ಮನೆಯಲ್ಲಿಯೇ ಠಿಕಾಣಿ ಹೂಡಿದ್ದಾರೆ. ಈ ಕುರಿತು ಮಾತನಾಡಿದ ಶಾಸಕ ಎಸ್.ವಿ.ರಾಮಚಂದ್ರಪ್ಪ, ನಾನು ಮೂರು ಬಾರಿ ಗೆಲುವು ಸಾಧಿಸಿದ್ದು, ಪಕ್ಷಕ್ಕೆ ನನ್ನದೇಯಾದ ಕೊಡುಗೆ ಇದೆ. ಅಲ್ಲದೆ ಸಿಎಂ ಯಡಿಯೂರಪ್ಪನವರಿಗೆ ನನ್ನ ಬಗ್ಗೆ ಒಲವು ಇದೆ. ಹೀಗಾಗಿ ಈ ಬಾರಿ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದರು. ಇನ್ನೂ ಜಿಲ್ಲೆಯ ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ನಿನ್ನೆಯಿಂದ ಸಿಎಂ

ಸಚಿವ ಸ್ಥಾನಕ್ಕಾಗಿ ಬಿಎಸ್‍ವೈ ನಿವಾಸದಲ್ಲಿ ಶಾಸಕರು ಠಿಕಾಣಿ Read More »

ಯಡಿಯೂರಪ್ಪನವರಿಗೆ ಮದುವೆ ಮಾಡಿದರೆ 2 ಮಕ್ಕಳು ಮಾಡ್ತಾರೆ – ನಾಲಿಗೆ ಹರಿಬಿಟ್ಟ ಸಿ.ಎಂ ಇಬ್ರಾಹಿಂ‌

ಬೆಂಗಳೂರು: ಬಿ.ಎಸ್‌. ವೈ ರಾಜೀನಾಮೆಗೆ ಒತ್ತಡ ಹಾಕಿರುವುದು ಸರಿಯಲ್ಲ. ಅವರಿಗೆ ಈಗ ಮದುವೆ ಮಾಡಿದರೆ ಎರಡು ಮಕ್ಕಳು ಮಾಡುತ್ತಾರೆ. ಅಷ್ಟು ಶಕ್ತಿ ಅವರಲ್ಲಿದೆ ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಹೇಳಿದ್ದಾರೆ. ರಾಜಕೀಯ ಬದಲಾವಣೆಗಳ ಬಗ್ಗೆ ಮಾತನಾಡಿದ ಅವರು, ಹೀಗೆ ಅಧಿಕಾರ ಹಿಂಪಡೆಯುವುದು ಒಳ್ಳೇ ಸಂಪ್ರದಾಯವಲ್ಲ. ನಾನು ಅವರ ಜಿಲ್ಲೆಯವನು. ಅವರ ಜಿಲ್ಲೆಯವನಾಗಿ ನಾನು ಅವರಿಗೆ ಧೈರ್ಯ ಹೇಳಲು ಬಂದಿದ್ದೆ. ನಾನು ಕಾಂಗ್ರೆಸ್ ಪಕ್ಷದವನಾಗಿ ಬಂದಿಲ್ಲ. ಮಲೆನಾಡಿನವನಾಗಿ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.ವಲಸಿಗರ ಸ್ಥಿತಿ ಶೋಚನೀಯಕ್ಕೆ ತಿರುಗಿದೆ. ನಾನು

ಯಡಿಯೂರಪ್ಪನವರಿಗೆ ಮದುವೆ ಮಾಡಿದರೆ 2 ಮಕ್ಕಳು ಮಾಡ್ತಾರೆ – ನಾಲಿಗೆ ಹರಿಬಿಟ್ಟ ಸಿ.ಎಂ ಇಬ್ರಾಹಿಂ‌ Read More »

ತಾಯಿಯ ಆಶೀರ್ವಾದ, ತರವಾಡು ಮನೆ ಭೇಟಿ: ಸ್ಪಷ್ಟನೆ ನೀಡಿದ ನಳಿನ್ ಕುಮಾರ್

ಸವಣೂರು: ದ.ಕ.ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಾಯಿಯ ಆಶೀರ್ವಾದ ಹಾಗೂ ದೈವ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಅವರು ಹೇಳಿದ್ದಾರೆ. ನಳಿನ್ ಕುಮಾರ್ ತನ್ನ ಹುಟ್ಟೂರು ಕಡಬದ ಪಾಲ್ತಾಡಿ ಗ್ರಾಮದ ಕುಂಜಾಡಿಗೆ ಬಂದು ತಾಯಿಯ ಆಶೀರ್ವಾದ ಹಾಗೂ ದೈವ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿದ್ದರು. ಬಳಿಕ ಅವರು ದೆಹಲಿಗೆ ತೆರಳಿದ್ದರು. ಈ ವಿಚಾರ ಬಹಿರಂಗವಾಗುತ್ತಿದ್ದಂಂತೆ ಮುಂದಿನ ಸಿಎಂ ನಳಿನ್ ಕುಮಾರ ಎಂದು ಕೆೆಲವು ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ

ತಾಯಿಯ ಆಶೀರ್ವಾದ, ತರವಾಡು ಮನೆ ಭೇಟಿ: ಸ್ಪಷ್ಟನೆ ನೀಡಿದ ನಳಿನ್ ಕುಮಾರ್ Read More »