ಇಂದು ಪರಿಷತ್ ಚುನಾವಣೆ| 25 ಸ್ಥಾನಕ್ಕೆ 90 ಅಭ್ಯರ್ಥಿಗಳು ಕಣದಲ್ಲಿ| ಡಿ. 14ರಂದು ಫಲಿತಾಂಶ
ಬೆಂಗಳೂರು: ಇಪ್ಪತ್ತು ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಇಂದು (ಡಿ.9) ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಒಟ್ಟು 90 ಅಭ್ಯರ್ಥಿಗಳು ಕಣದಲ್ಲಿದ್ದು, ಡಿಸೆಂಬರ್ 14ರಂದು ಫಲಿತಾಂಶ ಹೊರ ಬರಲಿದೆ. ಬುಧವಾರ ಸಂಜೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಗುರುವಾರ ಮತದಾರರನ್ನು ನೇರವಾಗಿ ಭೇಟಿಯಾಗಿ ಮತ ಯಾಚಿಸುವ ಕೊನೆಯ ಕ್ಷಣದ ಕಸರತ್ತು ನಡೆಯಿತು. ನವೆಂಬರ್ 16ರಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ತಲಾ 20 ಕ್ಷೇತ್ರಗಳಲ್ಲಿ ಪೈಪೋಟಿಯಲ್ಲಿವೆ. […]
ಇಂದು ಪರಿಷತ್ ಚುನಾವಣೆ| 25 ಸ್ಥಾನಕ್ಕೆ 90 ಅಭ್ಯರ್ಥಿಗಳು ಕಣದಲ್ಲಿ| ಡಿ. 14ರಂದು ಫಲಿತಾಂಶ Read More »