ರಾಜಕೀಯ

ಲಾಕ್ ಡೌನ್ ಕರ್ಪ್ಯೂ ವಿರುದ್ದ ಕೆರಳಿದ ಸಿಂಹ| ವ್ಯಾಕ್ಸಿನ್ ಕೊಟ್ಟ ಮೇಲೆ ನಿರ್ಬಂಧ ಏಕೆಂದು ಪ್ರಶ್ನಿಸಿದ ಮೈಸೂರು ಸಂಸದ

ಮೈಸೂರು : ಲಾಕ್ ಡೌನ್, ಕರ್ಫ್ಯೂ ವಿಧಿಸುವುದಾದಾಗಿದ್ದರೆ ವ್ಯಾಕ್ಸಿನ್ ಯಾಕೆ ಬೇಕಿತ್ತು ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಸರಕಾರವನ್ನು ಪ್ರಶ್ನಿಸಿ ಬುಧವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ, ಅವುಗಳಿಗೆ ನಿರ್ಬಂಧವಿಲ್ಲ, ಹೀಗಿರುವಾಗ ಕರ್ನಾಟಕದಲ್ಲಿ ಯಾಕೆ ಕರ್ಫ್ಯೂ, ಲಾಕ್ ಡೌನ್ ಅಂತಾ ಜನರನ್ನು ಮತ್ತೆ ಕಂಗಾಲು ಮಾಡುತ್ತಿದ್ದೀರಿ? ಜನರನ್ನು ಭೀತಿಯಲ್ಲಿ ಇಡುವುದನ್ನು ಮೊದಲು ಸರಕಾರ ನಿಲ್ಲಿಸಲಿ ಎಂದರು. ಕರ್ಫ್ಯೂ, ಲಾಕ್ ಡೌನ್ ನಿಂದ ಜನರಿಗೆ ಬಹಳ ತೊಂದರೆಯಾಗಿದೆ. ಜನರ […]

ಲಾಕ್ ಡೌನ್ ಕರ್ಪ್ಯೂ ವಿರುದ್ದ ಕೆರಳಿದ ಸಿಂಹ| ವ್ಯಾಕ್ಸಿನ್ ಕೊಟ್ಟ ಮೇಲೆ ನಿರ್ಬಂಧ ಏಕೆಂದು ಪ್ರಶ್ನಿಸಿದ ಮೈಸೂರು ಸಂಸದ Read More »

ಸಿಎಂ ಮನೆಮುಂದೆ ಏಕಾಂಗಿ ಧರಣಿ ಕುಳಿತ ಎಚ್.ಡಿ ರೇವಣ್ಣ

ಬೆಂಗಳೂರು: ಹೊಳೆನರಸೀಪುರ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನಲ್ಲಿ ಎಂಎಸ್‍ಸಿ ಸೈಕಾಲಜಿ ಮತ್ತು ಫುಡ್ ಮತ್ತು ನ್ಯೂಟ್ರೀಷಿಯನ್ ಕೋರ್ಸ್‍ಗಳ ಆರಂಭಕ್ಕೆ ಆಗ್ರಹಿಸಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಇಂದು ಏಕಾಂಗಿ ಧರಣಿ ನಡೆಸಿದರು. ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾ ಆವರಣದಲ್ಲಿ ಧರಣಿ ನಡೆಸಿ 2022-23ನೆ ಶೈಕ್ಷಣಿಕ ಸಾಲಿನಲ್ಲಿ ಎರಡು ಹೊಸ ಕೋರ್ಸ್‍ಗಳ ಪ್ರಾರಂಭಕ್ಕೆ ಸರ್ಕಾರ ಅನುಮತಿ ನೀಡಬೇಕೆಂದು ಒತ್ತಾಯಿಸಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಎರಡೂ ಕೋರ್ಸ್‍ಗಳ ಉಪನ್ಯಾಸಕರಿಗೆ ತಗುಲುವ ವೇತನ ವೆಚ್ಚವನ್ನು ತಾತ್ಕಾಲಿಕವಾಗಿ ಸಿಡಿಸಿ ಸಮಿತಿ ಅಥವಾ

ಸಿಎಂ ಮನೆಮುಂದೆ ಏಕಾಂಗಿ ಧರಣಿ ಕುಳಿತ ಎಚ್.ಡಿ ರೇವಣ್ಣ Read More »

ಪಂಜಾಬ್ ವಿಧಾನಸಭಾ ಚುನಾವಣೆ ಮುಂದೂಡಿಕೆ| ಫೆ.14 ರಂದು ನಡೆಯಬೇಕಿದ್ದ‌ ಮತದಾನ|

ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣಾ ದಿನಾಂಕ ಮುಂದೂಡಲಾಗಿದ್ದು, ಫೆ.20ರಂದು ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಫೆ.14ರಂದು ನಡೆಯಬೇಕಿದ್ದ ವಿಧಾನಸಭಾ ಚುನಾವಣೆ ದಿನಾಂಕವನ್ನು ಮುಂದೂಡುವಂತೆ ಪಂಜಾಬ್ ಆಡಳಿತ ಹಾಗೂ ವಿಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು. ಮನವಿಗೆ ಸ್ಪಂದಿಸಿದ ಆಯೋಗ ಇದೀಗ ಫೆ.14 ರ ಬದಲು ಫೆ.20ಕ್ಕೆ ಮುಂದೂಡಿದೆ. ಚುನಾವಣೆ ಮುಂದೂಡುವಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮುಖ್ಯಚುನಾವಣಾ ಆಯುಕ್ತರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆ ದಿನಾಂಕ ಮುಂದೂಡಲಾಗಿದ್ದು, ಪಂಜಾಬ್

ಪಂಜಾಬ್ ವಿಧಾನಸಭಾ ಚುನಾವಣೆ ಮುಂದೂಡಿಕೆ| ಫೆ.14 ರಂದು ನಡೆಯಬೇಕಿದ್ದ‌ ಮತದಾನ| Read More »

ಹೈಕೋರ್ಟ್ ಆದೇಶಿಸಿದರೆ ಪಾದಯಾತ್ರೆ ಕೈಬಿಡಲು ಸಿದ್ಧ – ಸಿದ್ದರಾಮಯ್ಯ

ರಾಮನಗರ: ಹೈಕೋರ್ಟ್ ಆದೇಶದ ವಿರುದ್ಧ ಕಾಂಗ್ರೆಸ್ ನಡೆದುಕೊಳ್ಳುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲಿಯೇ ಅವರು ಈ ಕುರಿತು ಮಾತನಾಡಿದ್ದಾರೆ. ಪಾದಯಾತ್ರೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಾನೂನಿಗೆ ತಲೆ ಬಾಗುತ್ತೇವೆ. ಹೈಕೋರ್ಟ್ ಪಾದಯಾತ್ರೆ ನಿಲ್ಲಿಸಲು ಸೂಚಿಸಿದರೆ, ನಾವು ಕೋರ್ಟ್ ಗೆ ತಲೆ ಬಾಗುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಯಾವಾಗಲೂ ಕಾನೂನನ್ನು ಗೌರವಿಸುತ್ತದೆ. ಆದರೆ, ಬಿಜೆಪಿಗೆ ಕಾನೂನಿನ ಬಗ್ಗೆ ಗೌರವವಿಲ್ಲ. ಕೋವಿಡ್ ನಿಯಮವನ್ನು ಉಲ್ಲಂಘಿಸಿದ್ದು, ಬಿಜೆಪಿಯೇ ಹೊರತು, ಕಾಂಗ್ರೆಸ್ ಅಲ್ಲ.

ಹೈಕೋರ್ಟ್ ಆದೇಶಿಸಿದರೆ ಪಾದಯಾತ್ರೆ ಕೈಬಿಡಲು ಸಿದ್ಧ – ಸಿದ್ದರಾಮಯ್ಯ Read More »

“ಇದು ಬಿಜೆಪಿ ಲಾಕ್ ಡೌನ್”| ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ|

ಬೆಂಗಳೂರು : ಇದು ಕೋವಿಡ್ ಲಾಕ್ ಡೌನ್, ಕೋವಿಡ್ ಕರ್ಪ್ಯೂ ಅಲ್ಲ. ಇದು ಬಿಜೆಪಿ ಕರ್ಪ್ಯೂ, ಬಿಜೆಪಿಯ ಲಾಕ್ ಡೌನ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರಿಗೆ ರಾಜಕಾರಣ ಮಾಡಲು ಈಗ ಟಫ್ ಆಗುತ್ತಿದೆ. ಹೀಗಾಗಿ ಟಫ್ ರೂಲ್ಸ್ ಜಾರಿಗೆ ತಂದಿದ್ದಾರೆ. ಇದು ಕೋವಿಡ್ ಲಾಕ್ ಡೌನ್, ಕೋವಿಡ್ ಕರ್ಪ್ಯೂ ಅಲ್ಲ. ಇದು ಬಿಜೆಪಿ ಕರ್ಪ್ಯೂ, ಬಿಜೆಪಿಯ ಲಾಕ್ ಡೌನ್ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ

“ಇದು ಬಿಜೆಪಿ ಲಾಕ್ ಡೌನ್”| ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ| Read More »

ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆಗೆ ಬಿಗ್ ಶಾಕ್| ಲಾಕ್ ಡೌನ್ ಮಾರ್ಗಸೂಚಿಯಿಂದ ನಿರ್ಬಂಧ|

ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಕೈಗೊಂಡಿದ್ದ ಕಾಂಗ್ರೆಸ್ ನಾಯಕರಿಗೆ ಕೊರೋನಾ ತಡೆಗೆ ಕೈಗೊಂಡ ಹೊಸ ಮಾರ್ಗಸೂಚಿ ಶಾಕ್ ನೀಡಿದೆ. ರಾಜ್ಯದಲ್ಲಿ ಯಾವುದೇ ಸಭೆ, ಸಮಾರಂಭ, ಜಾತ್ರೆ, ರ್ಯಾಲಿ, ಪ್ರತಿಭಟನೆ ನಡೆಸದಂತೆ ನಿರ್ಬಂಧ ಹೇರಲಾಗಿದೆ. ಈ ನಿಯಮಗಳು ಜನವರಿ 19 ರ ವರೆಗೆ ಜಾರಿಯಲ್ಲಿರುತ್ತವೆ. ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆಗಾಗಿ ಜನವರಿ 9 ರಿಂದ 19ರ ವರೆಗೆ ಪಾದಯಾತ್ರೆ ಕೈಗೊಂಡಿದೆ. ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವುದರಿಂದ ಕಾಂಗ್ರೆಸ್ ಪಾದಯಾತ್ರೆ ಕೂಡ ನಿಷೇಧವಾಗಿರುತ್ತದೆ. ಸಚಿವರಾದ ಆರ್. ಅಶೋಕ್ ಮತ್ತು

ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆಗೆ ಬಿಗ್ ಶಾಕ್| ಲಾಕ್ ಡೌನ್ ಮಾರ್ಗಸೂಚಿಯಿಂದ ನಿರ್ಬಂಧ| Read More »

ರಾಮನಗರದಲ್ಲಿ ಸಿಎಂ ಎದುರೇ ಗಂಡಸ್ತನ ಪ್ರದರ್ಶನಕ್ಕೆ ಮುಂದಾದ ಸಚಿವ ಡಾ. ಅಶ್ವತನಾರಾಯಣ ಮತ್ತು ಸಂಸದ ಡಿ.ಕೆ ಸುರೇಶ್

ರಾಮನಗರ: ರಾಮನಗರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಭಾಗವಹಿಸಿದ್ದ ವಿವಿಧ ಕಾಮಗಾರಿಗಳ ಚಾಲನೆ ಕಾರ್ಯಕ್ರಮದಲ್ಲಿ ಸಚಿವ, ಸಂಸದರ ಗಲಾಟೆ ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಎದುರೇ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಸಂಸದ‌ ಡಿ.ಕೆ.‌ ಸುರೇಶ್ ಹೊಡೆದಾಟಕ್ಕೆ ಮುಂದಾದ‌ ಪ್ರಸಂಗ ನಡೆಯಿತು. ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಚಿವ ಅಶ್ವತ್ಥನಾರಾಯಣ ‘ಇವತ್ತು ಏನು ತಪ್ಪಾಗಿದೆ ಎಂದು ನಾಲ್ಕು ಜನರನ್ನು‌ ಸೇರಿಸಿ ಘೋಷಣೆ ಕೂಗುತ್ತೀರಿ. ನಾನೇನು ಯಾರ ಜಮೀನಿಗೂ ಕೈ ಹಾಕಿಲ್ಲ. ಯಾವನೋ ಅವನು‌ ಗಂಡಸು

ರಾಮನಗರದಲ್ಲಿ ಸಿಎಂ ಎದುರೇ ಗಂಡಸ್ತನ ಪ್ರದರ್ಶನಕ್ಕೆ ಮುಂದಾದ ಸಚಿವ ಡಾ. ಅಶ್ವತನಾರಾಯಣ ಮತ್ತು ಸಂಸದ ಡಿ.ಕೆ ಸುರೇಶ್ Read More »

ಸಿಎಂ ಸಮ್ಮುಖದಲ್ಲೇ ಭಾರೀ ಹೈಡ್ರಾಮಾ| ಗಂಡಸ್ತನಕ್ಕೆ ಸವಾಲೆಸೆದ ಸಂಸದ ಡಿ.ಕೆ ಸುರೇಶ್| ಕೈ ಕೈ ಮಿಲಾಯಿಸಲು ರೆಡಿಯಾದ ಜನಪ್ರತಿನಿಧಿಗಳು|

ರಾಮನಗರ: ಸಿಎಂ ಬಸವರಾಜ್ ಬೊಮ್ಮಾಯಿ ಸಮ್ಮುಖದಲ್ಲೇ ವೇದಿಕೆ ಮೇಲೆ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಅಶ್ವತ್ಥನಾರಾಯಣ ನಡುವೆ ಗಲಾಟೆ ನಡೆದು, ಪರಸ್ಪರ ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ. ರಾಮನಗರಕ್ಕೆ ಭೇಟಿ ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, ಕೆಲವರು ವೋಟ್ ಪಡೆದು ಸುಮ್ಮನೆ ಕುಳಿತುಕೊಳ್ಳುತ್ತಾರೆ. ನಮ್ಮ ಕಾಲದಲ್ಲೇ ಎಲ್ಲಾ ಕಾಮಗಾರಿಗಳಿಗೆ ಅಡಿಗಲ್ಲು, ನಮ್ಮ ಕಾಲದಲ್ಲೇ ಕಾರ್ಯಕ್ರಮಗಳಿಗೆ ಚಾಲನೆ

ಸಿಎಂ ಸಮ್ಮುಖದಲ್ಲೇ ಭಾರೀ ಹೈಡ್ರಾಮಾ| ಗಂಡಸ್ತನಕ್ಕೆ ಸವಾಲೆಸೆದ ಸಂಸದ ಡಿ.ಕೆ ಸುರೇಶ್| ಕೈ ಕೈ ಮಿಲಾಯಿಸಲು ರೆಡಿಯಾದ ಜನಪ್ರತಿನಿಧಿಗಳು| Read More »

ಯೋಗಿ ಆದಿತ್ಯನಾಥ್ ಸರ್ಕಾರ ಕ್ರಿಮಿನಲ್‌ಗಳೊಂದಿಗೆ ಜೈಲ್‌-ಜೈಲ್ ಆಟವಾಡುತ್ತಿದೆ: ನರೇಂದ್ರ ಮೋದಿ

ಉತ್ತರ ಪ್ರದೇಶ: “ಉತ್ತರ ಪ್ರದೇಶದಲ್ಲಿ ಈ ಹಿಂದೆ ಅಪರಾಧಿಗಳು ಮತ್ತು ಮಾಫಿಯಾದವರು ಆಟವಾಡುತ್ತಿದ್ದರು. ಆದರೆ ಈಗ ಯೋಗಿ ಆದಿತ್ಯನಾಥ್ ಸರ್ಕಾರ ಅವರೊಂದಿಗೆ ’ಜೈಲ್‌-ಜೈಲ್‌’ ಆಟವಾಡುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಹಿಂದಿನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೀರತ್‌ನ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದರು. ‘ಹಿಂದಿನ ಸರ್ಕಾರದ ಅವಧಿಯಲ್ಲಿ ಕ್ರಿಮಿನಲ್‌ಗಳು, ಮಾಫಿಯಾ ಆಟವಾಡುತ್ತಿತ್ತು. ಈ ಹಿಂದೆ ಅಕ್ರಮವಾಗಿ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿತ್ತು.

ಯೋಗಿ ಆದಿತ್ಯನಾಥ್ ಸರ್ಕಾರ ಕ್ರಿಮಿನಲ್‌ಗಳೊಂದಿಗೆ ಜೈಲ್‌-ಜೈಲ್ ಆಟವಾಡುತ್ತಿದೆ: ನರೇಂದ್ರ ಮೋದಿ Read More »

ಕೋಟ ಎಸ್‌ಐ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದಾನೆ : ಗೃಹ ಸಚಿವ ಅರಗ ಜ್ಞಾನೇಂದ್ರ‌

ಕೋಟ: ಕೊರಗ ಸಮುದಾಯದವರ ಮೇಲೆ ಪೊಲೀಸ್ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ ಗೃಹ ಸಚಿವ ಅರಗ ಜ್ಞಾನೆಂದ್ರ ಕೋಟ ಎಸ್‌ಐ ನಾನೇ ಸುಪ್ರೀಂ ಅನ್ನುವಂತೆ ವರ್ತಿಸಿದ್ದಲ್ಲದೆ ಮನುಷ್ಯತ್ವವನ್ನೇ ಕಳೆದುಕೊಂಡು ಹಲ್ಲೆ ಮಾಡಿದ್ದಾರೆ. ಆತ ಪೊಲೀಸ್ ಇಲಾಖೆಗೆ ಸರಿಯಾದ ವ್ಯಕ್ತಿ ಹೌದೋ, ಅಲ್ಲವೋ ಎಂಬ ಬಗ್ಗೆ ಸರ್ಕಾರ ಖಂಡಿತ ಮಾಡುತ್ತೆ ಎಂದು ಹೇಳಿದ್ದಾರೆ. ಪೊಲೀಸರಿಂದ ಹಲ್ಲೆಗೊಳಗಾದ ಕೊರಗರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಗೃಹ ಸಚಿವರು ಬಳಿಕ ಮಾತನಾಡಿದ ಈ ಘಟನೆ ಬಗ್ಗೆ ಯಾರೂ ಹೆದರಬೇಕಾದ ಅವಶ್ಯಕತೆ ಇಲ್ಲ.

ಕೋಟ ಎಸ್‌ಐ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದಾನೆ : ಗೃಹ ಸಚಿವ ಅರಗ ಜ್ಞಾನೇಂದ್ರ‌ Read More »