ರಾಜಕೀಯ

ನಾಳೆ ಜೆಡಿಎಸ್ ರಾಜ್ಯಾದ್ಯಕ್ಷರಾಗಿ ಸಿ.ಎಂ ಇಬ್ರಾಹಿಂ ಪದಗ್ರಹಣ

ಸಮಗ್ರ ನ್ಯೂಸ್: ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್‍ ರಾಜ್ಯಾಧ್ಯಕ್ಷರಾಗಿ ಎ.17ರಂದು ಪದಗ್ರಹಣ ಮಾಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎನ್. ತಿಪ್ಪೇಸ್ವಾಮಿ ಅವರು ತಿಳಿಸಿದ್ದಾರೆ. ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಪ್ರಸ್ತುತ ರಾಜ್ಯಾಧ್ಯಕ್ಷರಾಗಿರುವ ಹೆಚ್.ಕೆ. ಕುಮಾರಸ್ವಾಮಿ ಅವರಿಗೆ ಪಾರ್ಲಿಮೆಂಟರಿ ಬೋರ್ಡ್ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು. ನಾಳೆ ಬೆಳಗ್ಗೆ 10.15ಕ್ಕೆ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಪ್ರಧಾನಿ, ಜೆಡಿಎಸ್‍ ವರಿಷ್ಠ ಹೆಚ್.ಡಿ.ದೇವೇಗೌಡರು, […]

ನಾಳೆ ಜೆಡಿಎಸ್ ರಾಜ್ಯಾದ್ಯಕ್ಷರಾಗಿ ಸಿ.ಎಂ ಇಬ್ರಾಹಿಂ ಪದಗ್ರಹಣ Read More »

ರಾಜೀನಾಮೆ ಮೊದಲೇ ತರಾತುರಿಯಲ್ಲಿ 29 ಪಿಡಿಓಗಳ ವರ್ಗಾವಣೆ| ಇದರಲ್ಲಿ ಎಷ್ಟು ಪರ್ಸೆಂಟ್ ಹಗರಣವಿದೆ ಈಶ್ವರಪ್ಪರವರೇ?

ಸಮಗ್ರ ನ್ಯೂಸ್ : ಈಶ್ವರಪ್ಪ ರಾಜೀನಾಮೆ ಘೋಷಣೆ ಮಾಡಿದ ಬಳಿಕ ತರಾತುರಿಯಲ್ಲಿ 29 ಪಿಡಿಓಗಳ ವರ್ಗಾವಣೆ ಮಾಡಿರುವುದರಲ್ಲಿ ಕಮಿಷನ್ ಪಡೆದಿರುವ ಬಗ್ಗೆ ಕಾಂಗ್ರೆಸ್ ಆರೋಪಿಸಿದೆ. ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ಘೋಷಣೆ ಮಾಡಿ ಅಧಿಕೃತವಾಗಿ ನೀಡಲು ಸಾಕಷ್ಟು ಸಮಯ ತೆಗೆದುಕೊಂಡು, ತರಾತುರಿಯಲ್ಲಿ 29 ಪಿಡಿಓಗಳನ್ನು ವರ್ಗಾವಣೆ ಮಾಡಿದ್ದಾರೆ. ಈ ತರಾತುರಿಯ ವರ್ಗಾವಣೆಯಲ್ಲಿ ಎಷ್ಟು ಪರ್ಸೆಂಟ್ ಹಗರಣವಿದೆ? ಇನ್ನುಳಿದ ಗುತ್ತಿಗೆದಾರರಿಂದ ಬಾಕಿಯಿದ್ದ 40 ಪರ್ಸೆಂಟ್‌ ವಸೂಲಿಗಾಗಿಯೇ ಇಷ್ಟು ಸಮಯ ತಗೆದುಕೊಂಡಿದ್ದಾ? ಎಂದು ಸರ್ಕಾರವನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.

ರಾಜೀನಾಮೆ ಮೊದಲೇ ತರಾತುರಿಯಲ್ಲಿ 29 ಪಿಡಿಓಗಳ ವರ್ಗಾವಣೆ| ಇದರಲ್ಲಿ ಎಷ್ಟು ಪರ್ಸೆಂಟ್ ಹಗರಣವಿದೆ ಈಶ್ವರಪ್ಪರವರೇ? Read More »

ಈಶ್ವರಪ್ಪ ರಾಜೀನಾಮೆ ಪಡೆದು ತಿಪ್ಪೆ ಸಾರಿಸುವುದಲ್ಲ, ಬಂಧಿಸಿ ಜೈಲಿಗಟ್ಟಬೇಕು: ಕಾಂಗ್ರೆಸ್‌
ಮೊನ್ನೆ, ನೂರಕ್ಕೆ ನೂರು ರಾಜೀನಾಮೆ ಕೊಡುವುದಿಲ್ಲ, ನಿನ್ನೆ, ರಾಜೀನಾಮೆ ನೀಡುತ್ತೇನೆ: ಯಾಕೀ ಸದಾರಮೆ ನಾಟಕ?

ಬೆಂಗಳೂರು: ಈಶ್ವರಪ್ಪನವರ ರಾಜೀನಾಮೆ ಪಡೆದು ತಿಪ್ಪೆ ಸಾರಿಸುವುದಲ್ಲ, ಅವರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಸರ್ಕಾರವನ್ನು ರಾಜ್ಯ ಕಾಂಗ್ರೆಸ್‌ ಒತ್ತಾಯಿಸಿದೆ. ಈಶ್ವರಪ್ಪ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಈಶ್ವರಪ್ಪ ಅವರನ್ನು ಜೈಲಿಗಟ್ಟಬೇಕು. ಭ್ರಷ್ಟಾಚಾರ ನಿಗ್ರಹದ ಪ್ರಕರಣ ದಾಖಲಾಗಬೇಕು. ಇದ್ಯಾವುದನ್ನೂ ಮಾಡದೆ ಸರ್ಕಾರ ರಕ್ಷಣೆಗೆ ನಿಂತರೆ ಹಿಂದೂ ಕಾರ್ಯಕರ್ತ ಸಂತೋಷ್ ಪಾಟೀಲ್‌ಗೆ ಅವಮಾನಿಸಿದಂತೆ. ದೇಶದ ಕಾನೂನಿನ ಮೇಲಿನ ಜನರ ನಂಬಿಕೆಯನ್ನು ಅಪಹಾಸ್ಯ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದೆ. ಇದ್ಯಾವುದನ್ನೂ ಮಾಡದೆ ಸರ್ಕಾರ ರಕ್ಷಣೆಗೆ ನಿಂತರೆ ಹಿಂದೂ ಕಾರ್ಯಕರ್ತ ಸಂತೋಷ್ ಪಾಟೀಲ್‌ಗೆ

ಈಶ್ವರಪ್ಪ ರಾಜೀನಾಮೆ ಪಡೆದು ತಿಪ್ಪೆ ಸಾರಿಸುವುದಲ್ಲ, ಬಂಧಿಸಿ ಜೈಲಿಗಟ್ಟಬೇಕು: ಕಾಂಗ್ರೆಸ್‌
ಮೊನ್ನೆ, ನೂರಕ್ಕೆ ನೂರು ರಾಜೀನಾಮೆ ಕೊಡುವುದಿಲ್ಲ, ನಿನ್ನೆ, ರಾಜೀನಾಮೆ ನೀಡುತ್ತೇನೆ: ಯಾಕೀ ಸದಾರಮೆ ನಾಟಕ?
Read More »

ಸಿಎಂಗೆ ರಾಜೀನಾಮೆ ಪತ್ರ ಸಲ್ಲಿಸಿದ ಕೆ.ಎಸ್.ಈಶ್ವರಪ್ಪ| 40% ಆರೋಪದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಬಿಜೆಪಿ ಕಟ್ಟಾಳು

ಸಮಗ್ರ ನ್ಯೂಸ್: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಸಂಬಂಧಿಸಿದಂತೆ ತಮ್ಮ ವಿರುದ್ದ ಕೇಳಿ ಬಂದಿರುವ ಆರೋಪಕ್ಕೆ ಕೆ.ಎಸ್. ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ, ತಮ್ಮ ರಾಜೀನಾಮೆ ಪತ್ರವನ್ನು ನೀಡಿದರು. ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ತೆರಳಿ ಅಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದಕ್ಕೂ ಮೊದಲು ಶಿವಮೊಗ್ಗದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಶುಕ್ರವಾರ ಸಿಎಂ ಭೇಟಿಯಾಗಿ ತಮ್ಮ ಸಚಿವ

ಸಿಎಂಗೆ ರಾಜೀನಾಮೆ ಪತ್ರ ಸಲ್ಲಿಸಿದ ಕೆ.ಎಸ್.ಈಶ್ವರಪ್ಪ| 40% ಆರೋಪದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಬಿಜೆಪಿ ಕಟ್ಟಾಳು Read More »

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ| ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ – ನಳಿನ್ ಕುಮಾರ್

ಸಮಗ್ರ ನ್ಯೂಸ್: ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆಗೆ ಸಂಬಂಧಿಸಿ ರಾಜ್ಯ ಸರ್ಕಾರ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಮಂಗಳೂರಿನಲ್ಲಿ ಘಟನೆ ಕುರಿತು ಪ್ರತಿಕ್ರಿಯಿಸಿದ ಅವರು, ತಪ್ಪಿತಸ್ಥರ ವಿರುದ್ಧ ಪಕ್ಷ ಮತ್ತು ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್ ಪಾಟೀಲರದು ವಾಟ್ಸ್‌ಆಯಪ್ ಸಂದೇಶ ಇದೆಯೇ ಹೊರತು, ಡೆತ್ ನೋಟ್ ಅಲ್ಲ. ಈ ಎಲ್ಲ ಸಂಗತಿಗಳನ್ನು

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ| ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ – ನಳಿನ್ ಕುಮಾರ್ Read More »

ಹೈಕಮಾಂಡ್ ಸೂಚನೆಗೆ ಡೋಂಟ್ ಕೇರ್| ನಾ ರಾಜೀನಾಮೆ ಕೊಡಲ್ಲ ಎಂದ ಈಶ್ವರಪ್ಪ| ಮಂಕಾದ ಪ್ರತಿಪಕ್ಷಗಳ ಅಬ್ಬರದ ಹೋರಾಟ

ಸಮಗ್ರ ನ್ಯೂಸ್: ಗುತ್ತಿಗೆದಾರ ಸಂತೋಷ್ ಪಾಟೀಲ್ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎಂಬ ಕೆ.ಎಸ್.ಈಶ್ವರಪ್ಪ ಅವರ ಅಚಲ ನಿಲುವು ಆಡಳಿತಾರೂಢ ಬಿಜೆಪಿ ನಾಯಕರನ್ನು ಚಂಚಲ ಮನಸ್ಥಿತಿಗೆ ದೂಡಿದೆ. ಬುಧವಾರ ಈಶ್ವರಪ್ಪ ರಾಜೀನಾಮೆ ನೀಡಬಹುದೆಂಬ ವಾತಾವರಣ ಇತ್ತಾದರೂ ಪ್ರಬಲ ನಾಯಕರೊಬ್ಬರ ಸೂಚನೆ ಈಶ್ವರಪ್ಪನವರನ್ನು ರಕ್ಷಿಸಿದೆ. ಪಕ್ಷದೊಳಗೆ ರಾಜೀನಾಮೆ ಅಭಿಪ್ರಾಯದ ಬೆನ್ನಲ್ಲೇ ರಾಜಿ ಕೂಗು ಸಹ ಪ್ರತಿಧ್ವನಿಸಿತು. ಈ ನಡುವೆ, ಪ್ರತಿಪಕ್ಷಗಳ ಹೋರಾಟದಿಂದ ರಾಜ್ಯದ ಜನರಿಗೆ ತಪ್ಪು ಸಂದೇಶ ರವಾನೆಯಾಗುವುದನ್ನು ತಡೆಯಲು ಘಟನೆ ನಡೆದ

ಹೈಕಮಾಂಡ್ ಸೂಚನೆಗೆ ಡೋಂಟ್ ಕೇರ್| ನಾ ರಾಜೀನಾಮೆ ಕೊಡಲ್ಲ ಎಂದ ಈಶ್ವರಪ್ಪ| ಮಂಕಾದ ಪ್ರತಿಪಕ್ಷಗಳ ಅಬ್ಬರದ ಹೋರಾಟ Read More »

ಸಚಿವ ಈಶ್ವರಪ್ಪ ರಾಜೀನಾಮೆಗೆ ಹೈಕಮಾಂಡ್ ಸೂಚನೆ

ಸಮಗ್ರ ನ್ಯೂಸ್: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್​.ಈಶ್ವರಪ್ಪ ರಾಜೀನಾಮೆಗೆ ಹೈಕಮಾಂಡ್​ ಸೂಚನೆ ನೀಡಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್​​ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್, ಈಶ್ವರಪ್ಪ ರಾಜೀನಾಮೆಗೆ ಸೂಚನೆ ನೀಡಿದೆ. ಹೀಗಾಗಿ, ನಾಳೆ ಸಂಜೆಯೊಳಗೆ ಈಶ್ವರಪ್ಪ ರಾಜೀನಾಮೆ ಸಲ್ಲಿಸಲಿದ್ದಾರೆ. ಈ ಸಂಬಂಧ ಸಚಿವ ಈಶ್ವರಪ್ಪ ಈಗಾಗಲೇ ಸಿಎಂ ಜೊತೆಗೆ ಚರ್ಚೆ ನಡೆಸಿದ್ದಾರೆ. ಈಶ್ವರಪ್ಪ ಬೆಳಗ್ಗೆಯೇ ಮೈಸೂರಿನಿಂದ ತವರು ಜಿಲ್ಲೆ ಶಿವಮೊಗ್ಗಕ್ಕೆ ತೆರಳುತ್ತಿದ್ದು, ಇಂದು ಮಧ್ಯಾಹ್ನ 1 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಸಚಿವ ಈಶ್ವರಪ್ಪ ರಾಜೀನಾಮೆಗೆ ಹೈಕಮಾಂಡ್ ಸೂಚನೆ Read More »

ಬಿಜೆಪಿ ಯನ್ನು ಕಿತ್ತೆಸೆಯೋಕೆ‌‌ ಬಿಜೆಪಿ ಏನು ಕೊತ್ತಂಬರಿ ಸೊಪ್ಪಾ? ಸಿದ್ದು ಮಾತಿಗೆ ತಿರುಗೇಟು ನೀಡಿದ ಶ್ರೀರಾಮುಲು

ಸಮಗ್ರ ನ್ಯೂಸ್: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಜೆಪಿಯನ್ನು ಕಿತ್ತೊಗೆಯಿರಿ ಹೇಳಿಕೆಗೆ ಸಚಿವ ಶ್ರೀರಾಮುಲು ಬಿಜೆಪಿ ಯನ್ನು ಕಿತ್ತೆಸೆಯೋಕೆ‌‌ ಬಿಜೆಪಿ ಏನು ಕೊತ್ತಂಬರಿ ಸೊಪ್ಪಾ? ಎಂದು ಪ್ರಶ್ನಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಯಾರಿಗೂ ಬೇಡವಾದ ಕೂಸಾಗಿದ್ದಾರೆ. ಹೀಗಾಗಿ ಬಿಜೆಪಿಯನ್ನು ಕಿತ್ತೊಗೆಯಿರಿ ಎಂದು ಹೇಳಿದ್ದು, ಬಿಜೆಪಿ ಯನ್ನು ಕಿತ್ತೆಸೆಯೋಕೆ‌‌ ಬಿಜೆಪಿ ಏನು ಕೊತ್ತಂಬರಿ ಸೊಪ್ಪಾ?, ಬಿಜೆಪಿ ರಾಜ್ಯದಲ್ಲಿ ದೇಶದಲ್ಲಿ ಆಲದ ಮರವಾಗಿ ಬೆಳೆದಿದೆ. ಬಿಜೆಪಿ ಕಾರ್ಮಿಕ ವರ್ಗಕ್ಕೆ ಶಕ್ತಿಯನ್ನು ತುಂಬಿದೆ. ಪ್ರಧಾನಿ

ಬಿಜೆಪಿ ಯನ್ನು ಕಿತ್ತೆಸೆಯೋಕೆ‌‌ ಬಿಜೆಪಿ ಏನು ಕೊತ್ತಂಬರಿ ಸೊಪ್ಪಾ? ಸಿದ್ದು ಮಾತಿಗೆ ತಿರುಗೇಟು ನೀಡಿದ ಶ್ರೀರಾಮುಲು Read More »

ಈಶ್ವರಪ್ಪ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಸಂತೋಷ್ ಆತ್ಮಹತ್ಯೆ| ಕೇಸ್ ದಾಖಲಿಸಿದ ಕುಟುಂಬ| ರಾಜೀನಾಮೆ ಕೊಡ್ತಾರಾ ಈಶ್ವರಪ್ಪ?

ಸಮಗ್ರ ನ್ಯೂಸ್: ನನ್ನ ಸಾವಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರುವುದು ಸಚಿವ ಈಶ್ವರಪ್ಪ ಅವರಿಗೆ ಸಂಕಷ್ಟ ತಂದೊಡ್ಡಿದ್ದು, ಅವರ ತಲೆದಂಡ ಆಗುವುದು ಖಚಿತ ಎನ್ನಲಾಗಿದೆ. ರಾಜ್ಯದಲ್ಲಿ 2-3 ತಿಂಗಳಿಂದ ಒಂದೊಂದೆ ವಿವಾದ ಹುಟ್ಟುತ್ತಿದ್ದು, ಬಿಜೆಪಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಗುತ್ತಿಗೆದಾರರಿಂದ ಶೇ. 40 ಕಮಿಷನ್ ಆರೋಪ, ರಾಷ್ಟ್ರಧ್ವಜ ಕುರಿತು ಈಶ್ವರಪ್ಪನವರ ವಿವಾದಾತ್ಮಕ ಹೇಳಿಕೆ, ಹರ್ಷ ಕೊಲೆ ಪ್ರಕರಣ, ಹಿಜಾಬ್, ಹಲಾಲ್,

ಈಶ್ವರಪ್ಪ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಸಂತೋಷ್ ಆತ್ಮಹತ್ಯೆ| ಕೇಸ್ ದಾಖಲಿಸಿದ ಕುಟುಂಬ| ರಾಜೀನಾಮೆ ಕೊಡ್ತಾರಾ ಈಶ್ವರಪ್ಪ? Read More »

ಕಾಂಗ್ರೆಸ್ ಮುಕ್ತ ಭಾರತಕ್ಕೆ ಸಿದ್ದರಾಮಯ್ಯ ಕರೆ! ಬಿಜೆಪಿ ಟೀಕಿಸುವ ಭರದಲ್ಲಿ ಮಾಜಿ ಸಿಎಂ ಎಡವಟ್ಟು

ಸಮಗ್ರ ನ್ಯೂಸ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಕಾಂಗ್ರೆಸ್‌ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಭಾಷಣದ ವೇಳೆ ಮಾತಿನ ಭರಾಟೆಯಲ್ಲಿ ‘ಕಾಂಗ್ರೆಸ್‌ ಮುಕ್ತ ಭಾರತ’ಕ್ಕೆ ಕರೆ ನೀಡಿ ಪೇಚೆಗೆ ಸಿಲುಕಿದ ಪ್ರಸಂಗ ನಡೆಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್‌ ಮುಕ್ತ ಭಾರತ ಮಾಡಬೇಕು ಎಂದು ಹೇಳಿ ನಂತರ ಕ್ಷಮಿಸಿ ಬಿಜೆಪಿ ಮುಕ್ತ ಭಾರತ ಎಂದು ಹೇಳಲು ಹೋಗಿ ಕಾಂಗ್ರೆಸ್‌ ಮುಕ್ತ ಅಂದುಬಿಟ್ಟೆ ಎಂದು ಹೇಳಿದರು. ಸಿದ್ದರಾಮಯ್ಯ

ಕಾಂಗ್ರೆಸ್ ಮುಕ್ತ ಭಾರತಕ್ಕೆ ಸಿದ್ದರಾಮಯ್ಯ ಕರೆ! ಬಿಜೆಪಿ ಟೀಕಿಸುವ ಭರದಲ್ಲಿ ಮಾಜಿ ಸಿಎಂ ಎಡವಟ್ಟು Read More »