ಅಳಿವಿನಂಚಿನಲ್ಲಿರುವ ಅಳಿಯಬಾರದವು

ತಾಯಿಯ ಅಗಲಿಕೆಯಿಂದ ಅನಾಥವಾಗಿ ಹಸುಗಳ ಜೊತೆ ಊರಿಗೆ ಬಂದ ಆನೆಮರಿ| ಅರಣ್ಯ ಇಲಾಖೆ ಮತ್ತು ಊರವರಿಂದ‌‌ ರಕ್ಷಣೆ

ಸಮಗ್ರ ನ್ಯೂಸ್: ತಾಯಿ ಆನೆಯ ಅಗಲಿಕೆಯಿಂದ ಅನಾಥವಾಗಿ ದನಗಳ ಹಿಂಡಿನ ಜೊತೆ ನಾಡಿನತ್ತ ಬಂದ ಆನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಆರೈಕೆ ಮಾಡುತ್ತಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸೋಲಿಗೆರೆ, ಪೋಡನಗುಂದಿಯಲ್ಲಿ ಮೇಯಲು ಬಿಟ್ಟ ದನಗಳೊಂದಿಗೆ ಮರಿ ಆನೆಯೂ ಊರಿನತ್ತ ಹೆಜ್ಜೆ ಹಾಕಿತ್ತು. ಒಂದೂವರೆ ತಿಂಗಳ ಪ್ರಾಯದ ಮರಿ ಇದಾಗಿದೆ. ಕಾವೇರಿ ವನ್ಯಜೀವಿ ಧಾಮಕ್ಕೆ ಹೊಂದಿಕೊಂಡಂತೆ ಇರುವ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಓಡಾಟ ಸಾಮಾನ್ಯ. ಇತ್ತೀಚೆಗೆ ಮರಿಗೆ […]

ತಾಯಿಯ ಅಗಲಿಕೆಯಿಂದ ಅನಾಥವಾಗಿ ಹಸುಗಳ ಜೊತೆ ಊರಿಗೆ ಬಂದ ಆನೆಮರಿ| ಅರಣ್ಯ ಇಲಾಖೆ ಮತ್ತು ಊರವರಿಂದ‌‌ ರಕ್ಷಣೆ Read More »

ಹೊಗೆ ಬಿಡುವ ಆನೆ ನೋಡಿದ್ದೀರಾ? ಇಲ್ಲಿದೆ ವೈರಲ್ ವಿಡಿಯೋ

ಸಮಗ್ರ ನ್ಯೂಸ್: ಸಾಮಾಜಿಕ ಮಾಧ್ಯಮದಲ್ಲಿ ಕೆಲವೊಂದು ವಿಡಿಯೋಗಳು ತುಂಬಾ ವೈರಲ್ ಆಗುತ್ತವೆ. ಕೆಲವರು ಪ್ರಾಣಿಗಳ ವಿಡಿಯೋಗಳನ್ನು ಬಹಳ ಇಷ್ಟ ಪಟ್ಟು ನೋಡುತ್ತಾರೆ. ಪ್ರಾಣಿಗಳಿಗೆ ಸಂಬಂಧಪಟ್ಟ ವಿಡಿಯೋಗಳಿದ್ದರೆ ಜನ ಅದನ್ನು ಬಹಳ ಇಷ್ಟಪಡುತ್ತಾರೆ. ಪ್ರಾಣಿಗಳು ಯಾವ ಹೊತ್ತಿನಲ್ಲಿ ಹೇಗೆ ಪ್ರತಿಕ್ರಿಯಿಸುತ್ತವೆ ಎಂದು ಹೇಳುವುದು ಸಾಧ್ಯವಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ಮನಸ್ಸಿಗೆ ಮುದ ನೀಡುತ್ತವೆ. ಆನೆಗೆ ಸಂಬಂಧಪಟ್ಟ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ. ಆನೆಗಳು ವಿಶ್ವದ ಅತಿದೊಡ್ಡ ಭೂ ಪ್ರಾಣಿಗಳಾಗಿವೆ. ಆನೆಯು ಸರಿಯಾದ ಬೆಳವಣಿಗೆ ಹೊಂದಲು 16

ಹೊಗೆ ಬಿಡುವ ಆನೆ ನೋಡಿದ್ದೀರಾ? ಇಲ್ಲಿದೆ ವೈರಲ್ ವಿಡಿಯೋ Read More »

ಮೂಡಿಗೆರೆ: ಕಾಡಿನಿಂದ ನಾಡಿಗೆ ಬಂದ ಜಿಂಕೆ ಸಾವು

ಮೂಡಿಗೆರೆ: ಕಾಡಿನಿಂದ ನಾಡಿಗೆ ಬಂದ ಜಿಂಕೆ ಸಾವನಪ್ಪಿದ ಘಟನೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ. ಜಿಂಕೆ ಕಾಡಿನಿಂದ ನಾಡಿಗೆ ಬಂದಾಗ ನಾಯಿಗಳು ಬೆದರಿಸಿದ ಹಿನ್ನೆಲೆ ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.ಸ್ಥಳೀಯರಾದ ರವೀಂದ್ರ ಎಂಬವರು ನೀರು ಕುಡಿಸಿ ಜಿಂಕೆಯನ್ನು ಬದುಕಿಸಲು ಪ್ರಯತ್ನ ಪಟ್ಟಿದ್ದಾರೆ. ಅರಣ್ಯ ರಕ್ಷಕ ಅಭಿಜಿತ್ ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಪರಿಶೀಲನೆ ನಡೆಸಿದ್ದಾರೆ.

ಮೂಡಿಗೆರೆ: ಕಾಡಿನಿಂದ ನಾಡಿಗೆ ಬಂದ ಜಿಂಕೆ ಸಾವು Read More »

ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಲಿ

ಸಮಗ್ರ ನ್ಯೂಸ್: ಪರಿಸರ ರಕ್ಷಿಸುವ ಜವಾಬ್ದಾರಿ ನಮ್ಮದು. ಆದರೆ ಬಹುಪಾಲು ಜನರು ಇದನ್ನು ಸರಿಯಾಗಿ ನಿಭಾಯಿಸಿಲ್ಲ. ಜೂನ್‌ 5ರಂದು ಶಾಲೆಗಳಲ್ಲಿ ಸೇರಿದಂತೆ ಹಲವೆಡೆ ಗಿಡಗಳನ್ನು ನೀಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಆದರೆ ಇದು ಇನ್ನೂ ಆಚರಣೆಗೆ ಮಾತ್ರ ಸೀಮಿತವಾಗಿದೆ. ಮಾತ್ರವಲ್ಲದೇ ಪರಿಸರವು ಕೇವಲ ಪರಿಸರ ದಿನಾಚರಣೆಗೆ ಮಾತ್ರವೇ ಸೀಮಿತವಾದಂತಿದೆ. ಜತೆಗೆ ಕೆಲವು ಭಾಷಣಗಳಿಗೆ ಮಾತ್ರ ಸಾಕ್ಷಿಯಾಗಿದೆ. ಈ ದಿನಕ್ಕಿರುವ ಮಹತ್ವವನ್ನು ಪ್ರತಿಯೊಬ್ಬ ವ್ಯಕ್ತಿಯೂ ತಿಳಿಯಬೇಕಾಗಿದೆ. ಇಂದಿನ ದಿನಗಳಲ್ಲಿ ಜೂನ್‌ 5ರಂದು ಮಾತ್ರ ಗಿಡ ನೆಡುವ ಮೂಲಕ

ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಲಿ Read More »

ಮಂಗಳೂರು: ಅಪರೂಪದ ನೇರಳೆ ಏಡಿ ಪತ್ತೆ

ಮಂಗಳೂರು: ಉತ್ತರಕನ್ನಡ ಜಿಲ್ಲೆಯ ಕಾರವಾರ ವಲಯದ ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಅಪರೂಪದ ಪ್ರಭೇದಗಳಲ್ಲಿ ಒಂದಾದ ನೇರಳೆ ಏಡಿ ಪತ್ತೆಯಾಗಿದೆ. ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ, ಬಂಟ್ವಾಳ ಎಸ್‌ವಿಎಸ್‌‌ ಕಾಲೇಜು ಉಪನ್ಯಾಸಕ ಸುಪ್ರೀತ್‌‌ ಕಡಕೋಳ್‌‌ ಅವರ ತಂಡಕ್ಕೆ ಸೆ.11ರಂದು ರಸ್ತೆಬದಿಯಲ್ಲಿ ಏಡಿ ಕಾಣಿಸಿದೆ. ಈ ನೇರಳೆ ಬಣ್ಣದ ಏಡಿಗಳು 2015ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದ ಅಂಬೋಲಿಯಲ್ಲಿ ಮರದ ಪೊಟರೆಯ ನೀರಿನಲ್ಲಿ ಪತ್ತೆಯಾಗಿತ್ತು. ಸಾಗರ ತಾಲೂಕಿನ ಶರಾವತಿ ನದಿ ಕಣಿವೆ ಪ್ರದೇಶದಲ್ಲಿ 2017ರಲ್ಲಿ ಕಂಡುಬಂದಿತ್ತು. ನಂತರ

ಮಂಗಳೂರು: ಅಪರೂಪದ ನೇರಳೆ ಏಡಿ ಪತ್ತೆ Read More »

-ಇರುವುದೊಂದೇ ಭೂಮಿ ಉಳಿಸಿಕೊಳ್ಳೋಣ ಬನ್ನಿ- ‘ವಿಶ್ವ ಪರಿಸರ ದಿನ’ ವಿಶೇಷ

ಸಮಾಚಾರ ವರದಿ: ಎಲ್ಲಾ ಬಗೆಯ ಮಾಲಿನ್ಯದಿಂದ ಪರಿಸರವನ್ನು ರಕ್ಷಿಸುವುದು ಇಂದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಆಶಯದೊಂದಿಗೆ ಪ್ರತೀ ವರ್ಷ ಜೂನ್‌ 5ರಂದು ವಿಶ್ವ ಪರಿಸರ ದಿನಾಚರಣೆ ಆಚರಣೆ ಮಾಡುವುದರ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುವುದು. ಈಗ ನಮ್ಮ ಪರಿಸರ ಹೇಗಿದೆ, ಇದನ್ನು ರಕ್ಷಣೆ ಮಾಡದಿದ್ದರೆ ಮುಂದೇನು ಆಗುವುದು ಎಂಬ ಕಟು ವಾಸ್ತವ ಎಲ್ಲರಿಗೂ ಗೊತ್ತು. ಆದರೂ ಅಭಿವೃದ್ಧಿಯ ಹೆಸರಿನಲ್ಲಿ ಜಾಣ ಕುರುಡರಾಗಿ ವರ್ತಿಸುವುದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಎಷ್ಟೋ ಮರ ಗಿಡಗಳನ್ನು ಕಡೆಯಲಾಗಿದೆ, ನದಿ

-ಇರುವುದೊಂದೇ ಭೂಮಿ ಉಳಿಸಿಕೊಳ್ಳೋಣ ಬನ್ನಿ- ‘ವಿಶ್ವ ಪರಿಸರ ದಿನ’ ವಿಶೇಷ Read More »

ಆತ್ಮವಿಶ್ವಾಸಕ್ಕೆ ಪ್ರೇರಣೆ ನೀಡುವ ಮುಗುಡು ಮೀನು

ಮುಗುಡು ಮೀನು ಇಂಗ್ಲೀಷಲ್ಲಿ ‘ಕ್ಯಾಟ್ ಫಿಷ್’ ಎಂದು ಕರೆಯಲ್ಪಡುವ ಮೀನು ಅತ್ಯಂತ ವಿಚಿತ್ರವಾದ ಮೀನಾಗಿದೆ. ಈ ಮೀನಿನಿಂದ ಕಲಿಯುವುದು ಬೇಕಾದಷ್ಟಿದೆ. ಮನುಷ್ಯರಾದ ನಾವು ಚಿಕ್ಕ ಕಷ್ಟ ಬಂದಾಗಲೂ ಆತ್ಮಹತ್ಯೆ ಮಾಡಲು ಬಯಸುವ ಈ ಸಂದರ್ಭದಲ್ಲಿ ಈ ಮೀನು ಬದುಕಲು ಸ್ಫ್ಪೂರ್ತಿ ನೀಡುತ್ತದೆ.ತುಳುನಾಡಿನಲ್ಲಿ ಇಂದಿಗೂ ಅನೇಕ ಮಂದಿ ಉಬರ್ ಹಿಡಿಯಲು ಹೋಗುತ್ತಾರೆ. ಉಬರ್ ಎಂದರೆ ತುಳುವಲ್ಲಿ ಮಳೆಗಾಲದ ಮೊದಲ ಜೋರು ಮಳೆಗೆ ಮೀನು, ಏಡಿಗಳನ್ನು ಬೇಟೆಯಾಡಲು ಹೋಗುವುದು. ಉಬರ್ ಎಂಬುದೇ ಒಂದು ರೋಚಕ ಅನುಭವ. ಅದನ್ನು ಬರೆಯುತ್ತಾ ಹೋದರೆ

ಆತ್ಮವಿಶ್ವಾಸಕ್ಕೆ ಪ್ರೇರಣೆ ನೀಡುವ ಮುಗುಡು ಮೀನು Read More »