ರಾಜಕೀಯ

ದುಬೈನಲ್ಲಿ ಮೋದಿ ಕಾರ್ಯಕ್ರಮ ಆಯೋಜಿಸಿದ್ದ ಉದ್ಯಮಿ ಬಿ.ಆರ್.ಶೆಟ್ಟಿ ಮಂಗಳೂರಿನಲ್ಲಿ ಮೂಲೆಗುಂಪು

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು 3,800 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗಿಯಾಗಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ವೀಕ್ಷಿಸಲು ಬಂದ ಉದ್ಯಮಿ ಬಿ.ಆರ್.ಶೆಟ್ಟಿ ಮೂಲೆಗುಂಪಾಗಿದ್ದಾರೆ. ಪೊಲೀಸರು ಅವರನ್ನು ಗೇಟ್ ಒಳಗೆ ಪ್ರವೇಶವನ್ನು ನಿರಾಕರಿಸಿದ ಹಿನ್ನೆಲೆ ಸಭಾಂಗಣಕ್ಕೆ ಹೋಗಲಾರದೆ ಬಿ.ಆರ್. ಶೆಟ್ಟಿ ವಾಪಾಸಾಗಿದ್ದಾರೆ. ಅಂದು ದುಬೈನಲ್ಲಿನ ಪ್ರಧಾನಿ ಮೋದಿ ಅವರ ಕಾರ್ಯಕ್ರಮವನ್ನು ಆಯೋಜಿಸಿದ್ದ ಉದ್ಯಮಿ ಬಿ.ಆರ್.ಶೆಟ್ಟಿ ಅವರು ಇಂದು ಮಂಗಳೂರಿನಲ್ಲಿ ಮೂಲೆಗುಂಪಾಗಿದ್ದಾರೆ. ವಿಶ್ವದ […]

ದುಬೈನಲ್ಲಿ ಮೋದಿ ಕಾರ್ಯಕ್ರಮ ಆಯೋಜಿಸಿದ್ದ ಉದ್ಯಮಿ ಬಿ.ಆರ್.ಶೆಟ್ಟಿ ಮಂಗಳೂರಿನಲ್ಲಿ ಮೂಲೆಗುಂಪು Read More »

ಬಹಿಷ್ಕಾರದ ಭೀತಿಯಿಂದ ಅಧಿಕಾರಿಗಳ ಕುತ್ತಿಗೆ ಹಿಡಿದ ಬಿಜೆಪಿ ಸರ್ಕಾರ| ಉಚಿತ ಬಸ್, ಊಟದ ವ್ಯವಸ್ಥೆ ಸೇರಿ‌ ಖರ್ಚುವೆಚ್ಚವೆಲ್ಲಾ ಜಿಲ್ಲಾಡಳಿತದ ಖಾತೆಗೆ!!

ಸಮಗ್ರ ನ್ಯೂಸ್: ಸಪ್ಟೆಂಬರ್ 2 ರಂದು ಮಂಗಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಆಯೋಜಿಸಿದ್ದ ಮೋದಿ ಕಾರ್ಯಕ್ರಮವನ್ನು ಸಾರ್ವಜನಿಕರು ಬಹಿಷ್ಕರಿಸುವ ಭೀತಿಯಿಂದ ಸರಕಾರ ಹಲವು ಕಸರತ್ತು ಮಾಡಿದ್ದು ಕಾರ್ಯಕ್ರಮಕ್ಕೆ ಜನಸೇರಿಸಲು ಪಂಚಾಯತಿ ನೌಕರರಿಗೆ ಸುತ್ತೋಲೆಯನ್ನೂ ಹೊರಡಿಸಿದ್ದಾರೆ. ಬಿಜೆಪಿ ಕಾರ್ಯಕ್ರಮವನ್ನು‌ ಸಾರ್ವಜನಿಕರು ಬಹಿಷ್ಕರಿಸುತ್ತಾರೆ ಎಂಬ ಹೆದರಿಕೆಯಿಂದ ಸರ್ಕಾರದ ಕಾರ್ಯಕ್ರಮ ಎಂದು ಬಿಂಬಿಸಿ, ನಿಟ್ಟಿನಲ್ಲಿ ಜನರನ್ನು ಸೇರಿಸಬೇಕೆಂಬ ಸಾಹಸಕ್ಕಿಳಿದ ಬಿಜೆಪಿ ಹಲವಾರು ತಂತ್ರ ಮಾಡಿದೆ ಎನ್ನಲಾಗಿದೆ. ಮಂಗಳೂರು ನಗರದಲ್ಲಿ ಶಾಲಾ ಕಾಲೇಜುಗಳಿಗೆ ರಜೆ, ಮನೆ ಮನೆಗೆ ತೆರಳಿ ಶಾಸಕರಿಂದ ಆಹ್ವಾನ, ಬಿಜೆಪಿ

ಬಹಿಷ್ಕಾರದ ಭೀತಿಯಿಂದ ಅಧಿಕಾರಿಗಳ ಕುತ್ತಿಗೆ ಹಿಡಿದ ಬಿಜೆಪಿ ಸರ್ಕಾರ| ಉಚಿತ ಬಸ್, ಊಟದ ವ್ಯವಸ್ಥೆ ಸೇರಿ‌ ಖರ್ಚುವೆಚ್ಚವೆಲ್ಲಾ ಜಿಲ್ಲಾಡಳಿತದ ಖಾತೆಗೆ!! Read More »

ಕರ್ನಾಟಕಕ್ಕೆ ಬರ್ತಾ ಇರ್ತೇನೆ, ನೀವೆಲ್ಲಾ ಇಂದಿನಿಂದಲೇ ಚುನಾವಣೆಗೆ ರೆಡಿಯಾಗಿ| ಮಂಗಳೂರಿನಲ್ಲಿ ಕೋರ್ ಕಮಿಟಿಗೆ ಸೂಚನೆ ನೀಡಿದ ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯದೆಲ್ಲೆಡೆ ಶಕ್ತಿ ಪ್ರದರ್ಶನ ನೀಡುವ ಮೂಲಕ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲು ಈಗಿಂದಲೇ ಕಾರ್ಯೋನ್ಮುಖರಾಗಿ ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಸಮಾವೇಶದ ಬಳಿಕ ಹೆಲಿಪ್ಯಾಡ್‌ ಬಳಿ ಪಕ್ಷದ ಕೋರ್‌ಕಮಿಟಿ ಸದಸ್ಯರ ಜತೆಗೆ ಸುಮಾರು 45 ನಿಮಿಷ ಚರ್ಚೆ ನಡೆಸಿದ ಅವರು, ರಾಜ್ಯದಲ್ಲಿನ ಪ್ರಸ್ತುತ ರಾಜಕೀಯ ಬೆಳವಣಿಗೆಗಳು, ಪಕ್ಷದಿಂದ ನಡೆಯುತ್ತಿರುವ ಸಂಘಟನಾತ್ಮಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಮಂಗಳೂರಿನ ಸಮಾವೇಶದಲ್ಲಿ ಸೇರಿದ್ದ ಜನಸ್ತೋಮ ಹಾಗೂ ಬಿಜೆಪಿ ಕಾರ್ಯಕರ್ತರ ಉತ್ಸಾಹದ ಬಗ್ಗೆ

ಕರ್ನಾಟಕಕ್ಕೆ ಬರ್ತಾ ಇರ್ತೇನೆ, ನೀವೆಲ್ಲಾ ಇಂದಿನಿಂದಲೇ ಚುನಾವಣೆಗೆ ರೆಡಿಯಾಗಿ| ಮಂಗಳೂರಿನಲ್ಲಿ ಕೋರ್ ಕಮಿಟಿಗೆ ಸೂಚನೆ ನೀಡಿದ ಪ್ರಧಾನಿ ಮೋದಿ Read More »

ಕರ್ನಾಟಕಕ್ಕೆ ಬರ್ತಾ ಇರ್ತೇನೆ, ನೀವೆಲ್ಲಾ ಇಂದಿನಿಂದಲೇ ಚುನಾವಣೆಗೆ ರೆಡಿಯಾಗಿ| ಮಂಗಳೂರಿನಲ್ಲಿ ಕೋರ್ ಕಮಿಟಿಗೆ ಸೂಚನೆ ನೀಡಿದ ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯದೆಲ್ಲೆಡೆ ಶಕ್ತಿ ಪ್ರದರ್ಶನ ನೀಡುವ ಮೂಲಕ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲು ಈಗಿಂದಲೇ ಕಾರ್ಯೋನ್ಮುಖರಾಗಿ ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಸಮಾವೇಶದ ಬಳಿಕ ಹೆಲಿಪ್ಯಾಡ್‌ ಬಳಿ ಪಕ್ಷದ ಕೋರ್‌ಕಮಿಟಿ ಸದಸ್ಯರ ಜತೆಗೆ ಸುಮಾರು 45 ನಿಮಿಷ ಚರ್ಚೆ ನಡೆಸಿದ ಅವರು, ರಾಜ್ಯದಲ್ಲಿನ ಪ್ರಸ್ತುತ ರಾಜಕೀಯ ಬೆಳವಣಿಗೆಗಳು, ಪಕ್ಷದಿಂದ ನಡೆಯುತ್ತಿರುವ ಸಂಘಟನಾತ್ಮಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಮಂಗಳೂರಿನ ಸಮಾವೇಶದಲ್ಲಿ ಸೇರಿದ್ದ ಜನಸ್ತೋಮ ಹಾಗೂ ಬಿಜೆಪಿ ಕಾರ್ಯಕರ್ತರ ಉತ್ಸಾಹದ ಬಗ್ಗೆ

ಕರ್ನಾಟಕಕ್ಕೆ ಬರ್ತಾ ಇರ್ತೇನೆ, ನೀವೆಲ್ಲಾ ಇಂದಿನಿಂದಲೇ ಚುನಾವಣೆಗೆ ರೆಡಿಯಾಗಿ| ಮಂಗಳೂರಿನಲ್ಲಿ ಕೋರ್ ಕಮಿಟಿಗೆ ಸೂಚನೆ ನೀಡಿದ ಪ್ರಧಾನಿ ಮೋದಿ Read More »

ಮಂಗಳೂರು: ಪ್ರಧಾನಿ ಸಮಾವೇಶದಲ್ಲಿ ಲೋಪ ಆಗದೆ ಸಕ್ಸಸ್| ಆದರೆ ಜನಸಾಮಾನ್ಯನಿಗೆ ಆದ ಲೋಪಕ್ಕೆ ಯಾರು ಹೊಣೆ?

ಸಮಗ್ರ ನ್ಯೂಸ್: ಸೆ.2 ರಂದು ನಡೆದ ಪ್ರಧಾನ ಮಂತ್ರಿಯವರ ಸಮಾವೇಶದಲ್ಲಿ ಯಾವುದೇ ಲೋಪ ಆಗದಂತೆ ಭದ್ರತೆ ಕಲ್ಪಿಸಲಾಗಿತ್ತು. ಆದರೆ ಈ ಕಾರ್ಯಕ್ರಮದಿಂದ ಸಮಾಜಕ್ಕೆ, ಸಾರ್ವಜನಿಕರಿಗೆ ಆದ ಲೋಪಕ್ಕೆ ಯಾರು ಹೊಣೆ?ಎಂಬ ಪ್ರಶ್ನೆ ಎದುರಾಗಿದೆ. ಪ್ರಧಾನ ಮಂತ್ರಿ ಮಂಗಳೂರಿಗೆ ಬರುತ್ತಿರುವ ಸುದ್ದಿ ಆಗುತ್ತಿದಂತೆ ದ.ಕ ಜಿಲ್ಲೆ ಸೇರಿದಂತೆ ಅಕ್ಕ ಪಕ್ಕ ಜಿಲ್ಲೆಯ ಲಕ್ಷಾಂತರ ಜನ ವಿಶ್ವ ನಾಯಕನಿಗೆ ಸ್ವಾಗತ ಕೋರಲು ಸಿದ್ದರಾಗಿದ್ದರು. ಈ ಹಿನ್ನಲೆ ಪ್ರಧಾನ ಮಂತ್ರಿಯವರ ಸಮಾವೇಶದಲ್ಲಿ ಯಾವುದೇ ಲೋಪ ಉಂಟಾಗದಂತೆ ಬಿಜೆಪಿ ಘಟಾನುಘಟಿ ನಾಯಕರ ಆದೇಶದಂತೆ

ಮಂಗಳೂರು: ಪ್ರಧಾನಿ ಸಮಾವೇಶದಲ್ಲಿ ಲೋಪ ಆಗದೆ ಸಕ್ಸಸ್| ಆದರೆ ಜನಸಾಮಾನ್ಯನಿಗೆ ಆದ ಲೋಪಕ್ಕೆ ಯಾರು ಹೊಣೆ? Read More »

ಕಚ್ ಮತ್ತು ಭುಜ್ ನಲ್ಲಿ ನಡೆದ ರೋಡ್ ಶೋ ವೈರಲ್| ಮಂಗಳೂರಿನಲ್ಲಿ ಇಷ್ಟೊಂದು ಜನ ಸೇರಿದ್ದರೇ? ಪ್ಯಾಕ್ಟ್ ಚೆಕ್

ಸಮಗ್ರ ನ್ಯೂಸ್: ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಾಗೂ ತಮ್ಮ ತವರು ಗುಜರಾತ್ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಆ.28ರ ಭಾನುವಾರ ಕಚ್ ಜಿಲ್ಲೆಯ ಭುಜ್ ಪಟ್ಟಣದಲ್ಲಿ ರೋಡ್ ಶೋ ನಡೆಸಿದ್ದರು. ಇದೇ ವಿಡಿಯೋವನ್ನು ಕೆಲವರು ಮಂಗಳೂರಿನಲ್ಲಿ ಸೇರಿದ್ದ ಜನಸ್ತೋಮ ಎಂದು ಸ್ಟೇಟಸ್ ಹಾಕಿದ್ದು, ಈ ವಿಡಿಯೋ ವೈರಲ್ ಆಯಿತು. ಈ ವಿಡಿಯೋದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸಮೂಹವು ಮೋದಿ ಮೋದಿ ಎಂದು ಕೂಗುತ್ತಲೇ ಇದ್ದರು ಮತ್ತು ತ್ರಿವರ್ಣ ಧ್ವಜವನ್ನು ಬೀಸುತ್ತಾ ಪ್ರಧಾನಿಯವರ

ಕಚ್ ಮತ್ತು ಭುಜ್ ನಲ್ಲಿ ನಡೆದ ರೋಡ್ ಶೋ ವೈರಲ್| ಮಂಗಳೂರಿನಲ್ಲಿ ಇಷ್ಟೊಂದು ಜನ ಸೇರಿದ್ದರೇ? ಪ್ಯಾಕ್ಟ್ ಚೆಕ್ Read More »

‘ಮೀನುಗಾರರಿಗೆ ಶಕ್ತಿ ತುಂಬಲು ವಿವಿಧ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದ್ದೇನೆ’ – ಪ್ರಧಾನಿ ಮೋದಿ ಮಂಗಳೂರಿನಲ್ಲಿ ಅಭಿಮತ

ಸಮಗ್ರ ನ್ಯೂಸ್: ಭಾರತದ ಸಮುದ್ರ ಶಕ್ತಿಗೆ ಇಂದು ಬಹಳ ದೊಡ್ಡ ದಿನ. ಕರಾವಳಿ ಹಾಗೂ ಕರ್ನಾಟಕ ಅಭಿವೃದ್ಧಿಗೆ ಇಂದು ಲೋಕಾರ್ಪಣೆಗೊಳಿಸಿದ ಯೋಜನೆಗಳಿಂದ ಅತ್ಯಂತ ದೊಡ್ಡ ಶಕ್ತಿ ತುಂಬಿದ್ದು, ಭಾರತದ ಬಂದರುಗಳ ಸಾಮರ್ಥ್ಯವು ಈಗ ದ್ವಿಗುಣಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಗರದ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆದ ಬಂದರು, ಒಳನಾಡು ಜಲಸಾರಿಗೆಗೆ ಸಂಬಂಧಿಸಿದ 3,800 ಕೋಟಿ ರೂ.ಗಳ ಮೊತ್ತದ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಪ್ರಧಾನ ಮಂತ್ರಿ, “ಮೀನುಗಾರರಿಗೆ ಶಕ್ತಿ

‘ಮೀನುಗಾರರಿಗೆ ಶಕ್ತಿ ತುಂಬಲು ವಿವಿಧ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದ್ದೇನೆ’ – ಪ್ರಧಾನಿ ಮೋದಿ ಮಂಗಳೂರಿನಲ್ಲಿ ಅಭಿಮತ Read More »

ಮಂಗಳೂರು: ಮೋದಿ ಕಾರ್ಯಕ್ರಮದತ್ತ ಸರ್ಕಾರಿ ‌ಬಸ್ ಗಳು| ರಸ್ತೆಯಲ್ಲೇ ಬಾಕಿಯಾದ ವಿದ್ಯಾರ್ಥಿಗಳು, ನಿತ್ಯ ಪ್ರಯಾಣಿಕರು

ಸಮಗ್ರ ನ್ಯೂಸ್: ಮಂಗಳೂರಿಗೆ ಪ್ರಧಾನಿ ಮೋದಿ‌ ಆಗಮಿಸಲಿರುವ ಕಾರಣ ಸರ್ಕಾರಿ ಬಸ್ ಗಳನ್ನು ಮಂಗಳೂರಿನತ್ತ ಬುಕ್ಕಿಂಗ್ ಮಾಡಲಾಗಿದ್ದು, ನಿತ್ಯ ಪ್ರಯಾಣಿಸುವ ಪ್ರಯಾಣಿಕರು, ಸಾರ್ವಜನಿಕರು,ಶಾಲಾ ಮಕ್ಕಳು ಬಸ್ಸಿಲ್ಲದೆ ಪರದಾಡಿದರು. ಗ್ರಾಮಾಂತರ ಪ್ರದೇಶಗಳಿಂದ ಮಕ್ಕಳು ಶಾಲೆಗೆ ಹೋಗಬೇಕಾದರೆ ಸರಕಾರಿ ಬಸ್ ಗಳು ಅವಶ್ಯಕವಾಗಿದ್ದು, ಇಂದು ದ.ಕ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಪರದಾಟ ನಡೆಸಿದರು. ಶಾಲಾ ಮಕ್ಕಳು ಬಸ್ ಪಾಸ್ ಮಾಡಿಸಿದ್ದು ದಿನಾ ಬಸ್ಸಿನಲ್ಲಿ ಶಾಲೆಗೆ ಹೋಗುತ್ತಿದ್ದರು. ಆದರೆ ಇಂದು ಬಸ್ ಗಳಿಲ್ಲದ ಕಾರಣ ಅತ್ತ

ಮಂಗಳೂರು: ಮೋದಿ ಕಾರ್ಯಕ್ರಮದತ್ತ ಸರ್ಕಾರಿ ‌ಬಸ್ ಗಳು| ರಸ್ತೆಯಲ್ಲೇ ಬಾಕಿಯಾದ ವಿದ್ಯಾರ್ಥಿಗಳು, ನಿತ್ಯ ಪ್ರಯಾಣಿಕರು Read More »

ಕೊಟ್ಟಿಗೆಹಾರ: ಮಂಗಳೂರಿಗೆ ಪ್ರಧಾನಿ ಭೇಟಿ ಹಿನ್ನೆಲೆ ಬಸ್ ಸಂಚಾರ ಸ್ಥಗಿತ, ಸಾರ್ವಜನಿಕರು ಪರದಾಟ

ಕೊಟ್ಟಿಗೆಹಾರ: ಮಂಗಳೂರಿಗೆ ಪ್ರಧಾನಿ ನದೆಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಮಾರ್ಗದಿಂದ ಮಂಗಳೂರು ಮಾರ್ಗ-ಮಂಗಳೂರು ಮಾರ್ಗದಿಂದ ಚಿಕ್ಕಮಗಳೂರು ಬರುವ KSRTC ಬಸ್ ಸಂಚಾರ ಸ್ಥಗಿತಗೊಂಡ ಹಿನ್ನಲೆ ಸಾರ್ವಜನಿಕರು ಪರದಾಡುವಂತಾಗಿದೆ. ಚಿಕ್ಕಮಗಳೂರು ಮೂಡಿಗೆರೆ ಕೊಟ್ಟಿಗೆಹಾರ ಮಾರ್ಗದಿಂದ ಸಂಚರಿಸುವ KSRTC ಬಸ್ಸುಗಳು ಬೆಳೆಗ್ಗೆ 6 ರಿಂದ ಸ್ಥಗಿತಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರು, ರೋಗಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಕಾಯುವ ಪರಿಸ್ಥಿತಿ ಉಂಟಾಗಿದೆ. ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ ಹಿರಿಯ ಅಧಿಕಾರಿಗಳು ಯಾವುದೇ ಪ್ರಕಟಣೆಯಲ್ಲಿ ತಿಳಿಸಿಲ್ಲ ಎಂದು ಪ್ರಯಾಣಿಕರು ಅವರ ಮೇಲೆ ಹಿಡಿ ಶಾಪ

ಕೊಟ್ಟಿಗೆಹಾರ: ಮಂಗಳೂರಿಗೆ ಪ್ರಧಾನಿ ಭೇಟಿ ಹಿನ್ನೆಲೆ ಬಸ್ ಸಂಚಾರ ಸ್ಥಗಿತ, ಸಾರ್ವಜನಿಕರು ಪರದಾಟ Read More »

ಕಡಲನಗರಿಯಲ್ಲಿ ಪ್ರಧಾನಮಂತ್ರಿ| ಮಂಗಳೂರಿನಿಂದ ನೇರಪ್ರಸಾರ

ಸಮಗ್ರ ನ್ಯೂಸ್: ವಿವಿಧ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಹಾಗೂ ಫಲಾನುಭವಿಗಳ‌ ಜೊತೆ ಸಂವಾದ ಕಾರ್ಯಕ್ರಮಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಚಂದನ ವಾಹಿನಿಯ ಕೃಪೆಯೊಂದಿಗೆ

ಕಡಲನಗರಿಯಲ್ಲಿ ಪ್ರಧಾನಮಂತ್ರಿ| ಮಂಗಳೂರಿನಿಂದ ನೇರಪ್ರಸಾರ Read More »