ರಾಜಕೀಯ

ಲೋಕಸಭೆ ಚುನಾವಣೆಗ ಸಿಗದ ಟಿಕೆಟ್/ ರಾಜೀನಾಮೆ ನೀಡಿದ ಲೋಕ ಜನಶಕ್ತಿ ಪಕ್ಷದ ನಾಯಕರು

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗದ ಕಾರಣ ಲೋಕ ಜನಶಕ್ತಿ ಪಕ್ಷದ 22 ನಾಯಕರು ಏಕಕಾಲಕ್ಕೆ ರಾಜೀನಾಮೆ ನೀಡಿದ್ದಾರೆ. ಚಿರಾಗ್ ಪಾಸ್ವಾನ್ ನೇತೃತ್ವದ ಪಕ್ಷದ ನಾಯಕರು ರಾಜೀನಾಮೆ ನೀಡಿದ್ದು, ಹಣಕ್ಕಾಗಿ ಟಿಕೆಟ್ ಮಾರಾಟದ ಆರೋಪ ಮಾಡಿದ್ದಾರೆ. ರಾಜೀನಾಮೆ ನೀಡಿದ ಪ್ರಮುಖರಲ್ಲಿ ಮಾಜಿ ಸಚಿವ ರೇಣು ಕುಶ್ವಾಹ, ಮಾಜಿ ಶಾಸಕ ಮತ್ತು ಎಲ್‌ಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾ‌ರ್, ರಾಜ್ಯ ಸಂಘಟನೆ ಸಚಿವ ರವೀಂದ್ರ ಸಿಂಗ್‌, ಅಜಯ್ ಕುಶ್ವಾಹ, ಸಂಜಯ್ ಸಿಂಗ್ ಮತ್ತು ರಾಜ್ಯ ಪ್ರಧಾನ […]

ಲೋಕಸಭೆ ಚುನಾವಣೆಗ ಸಿಗದ ಟಿಕೆಟ್/ ರಾಜೀನಾಮೆ ನೀಡಿದ ಲೋಕ ಜನಶಕ್ತಿ ಪಕ್ಷದ ನಾಯಕರು Read More »

ವಯನಾಡ್ ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ

ಸಮಗ್ರ ನ್ಯೂಸ್: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ನಾಮಪತ್ರ ಸಲ್ಲಿಸಿದರು. ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಸೇರಿದಂತೆ ಪಕ್ಷದ ಇತರ ಹಿರಿಯ ನಾಯಕರೊಂದಿಗೆ ಚುನಾವಣಾಧಿಕಾರಿಯೂ ಆಗಿರುವ ವಯನಾಡ್ ಜಿಲ್ಲಾಧಿಕಾರಿಗೆ ಇಂದು ನಾಮಪತ್ರ ಸಲ್ಲಿಸಿದರು. ಇಂದು ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ವಯನಾಡಿಗೆ ಆಗಮಿಸಿದ ರಾಹುಲ್ ಗಾಂಧಿ, ನಾಮಪತ್ರ ಸಲ್ಲಿಸುವ ಮುನ್ನ ಇಲ್ಲಿನ ಕಲ್ಪೆಟ್ಟಾದಿಂದ ಸಿವಿಲ್ ಸ್ಟೇಷನ್

ವಯನಾಡ್ ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ Read More »

ಚಾಮರಾಜನಗರ : ಗೋಬ್ಯಾಕ್ ಸುನಿಲ್ ಬೋಸ್ ಪೋಸ್ಟರ್| ಕೈ ಅಭ್ಯರ್ಥಿಗೆ ಮುಜುಗರ

ಸಮಗ್ರ ನ್ಯೂಸ್ : ಚಾಮರಾಜನಗರದ ಗಲ್ಲಿಗಲ್ಲಿಗಳಲ್ಲಿ ಗೋಬ್ಯಾಕ್ ಸುನಿಲ್ ಬೋಸ್ ಪೋಸ್ಟರ್ ಮತ್ತು ಬರಹಗಳು ರಾರಾಜಿಸುತ್ತಿದ್ದು ಲೋಕಸಭಾ ಕೈ ಅಭ್ಯರ್ಥಿ ಸುನಿಲ್ ಬೋಸ್ಗೆ ಮುಜುಗರವನ್ನುಂಟುಮಾಡಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಸುನಿಲ್ ಬೋಸ್ ವಿರುದ್ಧ ಅನಾಮಿಕರು ಅಸಮಾಧಾನ ಹೊರಹಾಕಿದ್ದಾರೆ, ಪಟ್ಟಣದ ರಸ್ತೆ ಬದಿಯ ಗೋಡೆಗಳಲ್ಲಿ ಗೋಬ್ಯಾಕ್ ಪೋಸ್ಟರ್ ಅಂಟಿಸಿ ಆಕ್ರೋಶ ಹೊರಹಾಕಿದ್ದು, ಗೋಬ್ಯಾಕ್ ಸುನಿಲ್ ಬೋಸ್ ಎಂದು ಬರೆದಿರುವ ಅಪರಿಚಿತರು ಮರಳು ಮಾಫಿಯಾ ದೊರೆಗೆ ಮರುಳಾಗಬೇಡಿ ಎಂದು ಬರೆದು ಪೋಸ್ಟರ್ ಗಳನ್ನು ಎಲ್ಲಾ ಕಡೆ ಅಂಟಿಸಿದ್ದಾರೆ.

ಚಾಮರಾಜನಗರ : ಗೋಬ್ಯಾಕ್ ಸುನಿಲ್ ಬೋಸ್ ಪೋಸ್ಟರ್| ಕೈ ಅಭ್ಯರ್ಥಿಗೆ ಮುಜುಗರ Read More »

ವಯನಾಡಿನಲ್ಲಿ ರಾಹುಲ್ ಸ್ಪರ್ಧೆ/ ಆಕ್ಷೇಪ ವ್ಯಕ್ತಪಡಿಸಿದ ಪಿಣರಾಯಿ ವಿಜಯನ್

ಸಮಗ್ರ ನ್ಯೂಸ್: ವಯನಾಡ್ ಕ್ಷೇತ್ರದಿಂದ ಕಾಂಗ್ರೆಸ್‍ನ ನಾಯಕ ರಾಹುಲ್ ಗಾಂಧಿ ಸ್ಪರ್ಧೆ ಮಾಡುತ್ತಿರುವುದಕ್ಕೆ ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಜಿ ವಿಜಯನ್ ಟೀಕೆ ಮಾಡಿದ್ದು, ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ. ವಯನಾಡ್‍ನಲ್ಲಿ ಎಲ್‍ಡಿಎಫ್ ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಸಿಪಿಐ) ರಾಷ್ಟ್ರೀಯ ನಾಯಕಿ ಅನ್ನಿ ರಾಜಾರನ್ನು ಕಣಕ್ಕೆ ಇಳಿಸಿದೆ. ‘ರಾಷ್ಟ್ರಮಟ್ಟದಲ್ಲಿ ಹೆಸರಾಂತ ಎಡ ನಾಯಕಿ ಅನ್ನಿ ರಾಜಾ ವಿರುದ್ಧ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ. ಮಣಿಪುರದ ವಿಷಯದಲ್ಲಿ ಬಿಜೆಪಿ

ವಯನಾಡಿನಲ್ಲಿ ರಾಹುಲ್ ಸ್ಪರ್ಧೆ/ ಆಕ್ಷೇಪ ವ್ಯಕ್ತಪಡಿಸಿದ ಪಿಣರಾಯಿ ವಿಜಯನ್ Read More »

ಲೋಕಸಭೆ ಚುನಾವಣೆ/ ಏ.6ರಂದು ಜೈಪುರ ಹಾಗೂ ಹೈದರಾಬಾದ್‍ನಲ್ಲಿ ಕಾಂಗ್ರೆಸ್‍ನ ಬೃಹತ್ ಯಾತ್ರೆ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಏ.5ರಂದು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾಗಲಿದ್ದು, ಏ.6ರಂದು ಜೈಪುರ ಹಾಗೂ ಹೈದರಾಬಾದ್‍ನಲ್ಲಿ ಬೃಹತ್ ಯಾತ್ರೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜೈಪುರದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಲಿದ್ದಾರೆ. ಅದೇ ದಿನ ಹೈದರಾಬಾದ್‍ನಲ್ಲಿ ರಾಹುಲ್ ಗಾಂಧಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಕೆ.ಸಿ.ವೇಣುಗೋಪಾಲ್ ತಮ್ಮ ಟ್ವೀಟ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಲೋಕಸಭೆ ಚುನಾವಣೆ/ ಏ.6ರಂದು ಜೈಪುರ ಹಾಗೂ ಹೈದರಾಬಾದ್‍ನಲ್ಲಿ ಕಾಂಗ್ರೆಸ್‍ನ ಬೃಹತ್ ಯಾತ್ರೆ Read More »

ಲೋಕಸಭಾ ಚುನಾವಣೆ/ನಾಮಪತ್ರ ಸಲ್ಲಿಸಿದ ಯದುವೀರ್ ಕೃಷ್ಣ ರಾಜ ಒಡೆಯ‌ರ್

ಸಮಗ್ರ ನ್ಯೂಸ್: ಮೈಸೂರು ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣ ರಾಜ ಒಡೆಯ‌ರ್ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾ ಚುನಾವಣಾಧಿಕಾರಿ ಡಾ: ಕೆ.ವಿ.ರಾಜೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ತಾಯಿ ಪ್ರಮದಾದೇವಿ ಒಡೆಯರ್, ಶಾಸಕ ಟಿ.ಎಸ್‌. ಶ್ರೀವತ್ಸ ಮತ್ತಿನ್ನಿಬ್ಬರು ಹಾಜರಿದ್ದರು. ಈ ಮೊದಲು ಅಭ್ಯರ್ಥಿ ಯದುವೀ‌ರ್ ಅವರೇ ಖುದ್ದು ವಿಡಿಯೋ ಸಂದೇಶದ ಮೂಲಕ ಏ. ೩ ರಂದು ನಾಮಪತ್ರ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ಇಂದು ಯಾವುದೇ ಸದ್ದುಗದ್ದಲ ಇಲ್ಲದೆ

ಲೋಕಸಭಾ ಚುನಾವಣೆ/ನಾಮಪತ್ರ ಸಲ್ಲಿಸಿದ ಯದುವೀರ್ ಕೃಷ್ಣ ರಾಜ ಒಡೆಯ‌ರ್ Read More »

ಚಿತ್ರದುರ್ಗದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ನಡುವೆ ಜಗಳ

ಸಮಗ್ರ ನ್ಯೂಸ್: ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಜೆಡಿಎಸ್ ಸಮನ್ವಯ ಸಭೆ ನಡೆಯುತ್ತಿತ್ತು. ಈ ನಡುವೆ ಎರಡು ಗುಂಪುಗಳ ನಡುವಿನ ಕಾರ್ಯಕರ್ತರ ನಡುವೆ ಜಗಳ ನಡೆದಿದೆ. ಗೋವಿಂದ ಕಾರಜೋಳ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಇವರನ್ನು ಜೆಡಿಎಸ್ ಕಾರ್ಯಕರ್ತನೊಬ್ಬ ಡಮ್ಮಿ ಕ್ಯಾಂಡಿಡೇಟ್ ಎಂದು ಹೇಳಿದ್ದಾರೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಕೈ ಕೈ ಮಿಲಾಯಿಸಿಕೊಂಡು ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಕಾರಜೋಳ ಎದುರುಗಡೆಯೆ ಹೊಡೆದಾಟ ನಡೆದಿದೆ.

ಚಿತ್ರದುರ್ಗದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ನಡುವೆ ಜಗಳ Read More »

ಲೋಕಸಭಾ ಚುನಾವಣೆ/ ಕಾಂಗ್ರೆಸ್ ಪ್ರಚಾರಕರ ಪಟ್ಟಿ ಬಿಡುಗಡೆ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆ ದಿನಗಣನೆ ಆರಂಭವಾಗಿದ್ದು, ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಿದೆ. ಇದೀಗ ಕಾಂಗ್ರೆಸ್ ತನ್ನ ಪ್ರಚಾರಕರ ಪಟ್ಟಿಯನ್ನು ಪ್ರಕಟಿಸಿದ್ದು, 40 ಘಟಾನುಘಟಿ ನಾಯಕರ ಹೆಸರುಗಳನ್ನು ಇದು ಒಳಗೊಂಡಿದೆ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ್, ಜೈರಾಮ್ ರಮೇಶ್, ಎಂ.ವೀರಪ್ಪ ಮೊಯ್ಲಿ, ಲಕ್ಷ್ಮಣ ಸವದಿ, ಬಿ.ವಿ.ಶ್ರೀನಿವಾಸ್, ಕೆ.ಜೆ.ಜಾರ್ಜ್, ಬಿ.ಕೆ.ಹರಿಪ್ರಸಾದ್, ವಿನಯ್ ಕುಮಾರ್ ಸೊರಕೆ, ಆರ್.ವಿ.ದೇಶಪಾಂಡೆ, ಡಾ.ಜಿ.ಪರಮೇಶ್ವರ್, ಹೆಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ದಿನೇಶ್ ಗುಂಡೂರಾವ್,

ಲೋಕಸಭಾ ಚುನಾವಣೆ/ ಕಾಂಗ್ರೆಸ್ ಪ್ರಚಾರಕರ ಪಟ್ಟಿ ಬಿಡುಗಡೆ Read More »

ಕೊನೆಗೂ ಕೋಲಾರ ಟಿಕೆಟ್ ಘೋಷಣೆ ಕಾಂಗ್ರೆಸ್/ ಕೆ.ವಿ.ಗೌತಮ್ ಕಣಕ್ಕಿಳಿಸಲು ಹೈಕಮಾಂಡ್ ನಿರ್ಧಾರ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಗೆ ಕೋಲಾರದಿಂದ ಕೆ.ವಿ.ಗೌತಮ್ ಅವರನ್ನು ಚುನಾವಣಾ ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದು, ಟಿಕೆಟ್ ಘೋಷಣೆ ಮಾಡಿದೆ. ಕಾಂಗ್ರೆಸ್ ಗೆ ತಲೆನೋವಾಗಿದ್ದ ಏಕೈಕ ಕ್ಷೇತ್ರವಾಗಿದ್ದ ಕೋಲಾರದ ಸಮಸ್ಯೆ ಬಗೆಹರಿದಂತಾಗಿದೆ. ಈ ಕ್ಷೇತ್ರದ ಟಿಕೆಟ್‍ಗಾಗಿ ಹಾಲಿ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಮಾಜಿ ಸಚಿವ ರಮೇಶ್ ಕುಮಾರ್ ಸ್ಪರ್ಧಿಸಿದ್ದರು. ಅಳಿಯನಿಗೆ ಟಿಕೆಟ್ ನೀಡುವಂತೆ ಮುನಿಯಪ್ಪ ತೀವ್ರ ಲಾಬಿ ನಡೆಸಿದ್ದರು. ಮುನಿಯಪ್ಪ ಅವರ ಒತ್ತಡಕ್ಕೆ ಮಣಿದು ರಮೇಶ್ ಕುಮಾರ್ ಬೆಂಬಲಿಗ ಶಾಸಕರು, ಸಚಿವರು ರಾಜೀನಾಮೆ ನೀಡಲು ಸಿದ್ಧರಾಗಿದ್ದರು. ಇದೀಗ

ಕೊನೆಗೂ ಕೋಲಾರ ಟಿಕೆಟ್ ಘೋಷಣೆ ಕಾಂಗ್ರೆಸ್/ ಕೆ.ವಿ.ಗೌತಮ್ ಕಣಕ್ಕಿಳಿಸಲು ಹೈಕಮಾಂಡ್ ನಿರ್ಧಾರ Read More »

ಮೈತ್ರಿ ಬಿಕ್ಕಟ್ಟು ಹಿನ್ನಲೆ| ಜೆಡಿಎಸ್ ತೊರೆದು ‘ಕೈ’ ಹಿಡಿದ ನಜ್ಮಾ ನಜೀರ್

ಸಮಗ್ರ ನ್ಯೂಸ್: ಬಿಜೆಪಿ- ಜೆಡಿಎಸ್ ಮೈತ್ರಿ ಅಸಮಾಧಾನದಿಂದ ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಜೀರ್ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್‌ನ ಶಾಲನ್ನು ಹಾಕುವ ಮೂಲಕ ನಜ್ಮಾ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿದರು. ನಜ್ಮಾ ಅವರು 2020ರಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಸಮ್ಮುಖದಲ್ಲಿ ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ ಅವರು ಜಾತ್ಯತೀತ ಜನತಾ ದಳ ಪಕ್ಷವನ್ನು ಅವರು ಸೇರ್ಪಡೆಗೊಂಡಿದ್ದರು. ನಜ್ಮಾ ನಜೀರ್ ಅವರು ಕಳೆದ

ಮೈತ್ರಿ ಬಿಕ್ಕಟ್ಟು ಹಿನ್ನಲೆ| ಜೆಡಿಎಸ್ ತೊರೆದು ‘ಕೈ’ ಹಿಡಿದ ನಜ್ಮಾ ನಜೀರ್ Read More »