ಸಮಗ್ರ ಸಮಾಚಾರ

ಜೂನ್ 30ರವರೆಗೆ ಲಾಕ್ಡೌನ್ ಮುಂದುವರಿಸಲು ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಸೂಚನೆ

ನವದೆಹಲಿ: ಕೋವಿಡ್ 19 ಹಿನ್ನೆಲೆಯಲ್ಲಿ, ರಾಷ್ಟ್ರವ್ಯಾಪಿ ಸದ್ಯ ಜಾರಿಯಲ್ಲಿರುವ ಲಾಕ್ಡೌನ್ ಅನ್ನು ಜೂನ್ 30ರವರೆಗೆ ಮುಂದುವರೆಸುವಂತೆ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ಈ ಬಗ್ಗೆ ಆದೇಶ ಹೊರಡಿಸಿದ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲ, ಕೊರೋನಾ ನಿಗ್ರಹಕ್ಕಾಗಿ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಆಡಳಿತ ವರ್ಗ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಹೆಚ್ಚಿನ ರಾಜ್ಯಗಳಲ್ಲಿ ಕೋರೋನಾ ಸೋಂಕಿಗೊಳಗಾಗಿ ಜನರು ಸಾವಿಗೀಡಾಗುತ್ತಿರುವ ಸಂಖ್ಯೆ ಹಾಗು ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. ಸಕ್ರಿಯ ಪ್ರಕರಣಗಳ […]

ಜೂನ್ 30ರವರೆಗೆ ಲಾಕ್ಡೌನ್ ಮುಂದುವರಿಸಲು ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಸೂಚನೆ Read More »

ಬೆಂಗಳೂರು: ಬೆಳ್ಳಂಬೆಳಗ್ಗೆ ಅತ್ಯಾಚಾರ ಆರೋಪಿಗಳ ಮೇಲೆ ಫೈರಿಂಗ್ | ಕೃತ್ಯದಲ್ಲಿ ಬಾಂಗ್ಲಾ ಮೂಲದ ಯುವಕರಿಗೆ ಯುವತಿಯರ ಸಾಥ್….!

ಬೆಂಗಳೂರು: ಅತ್ಯಾಚಾರ ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದುಕೊಂಡು ಹೋಗಲಾಗಿದ್ದಾಗ, ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದು ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಗಳ ಮೇಲೆ ಫೈರಿಂಗ್ ನಡೆಸಿದ ಘಟನೆ ಇಂದು ಬೆಳಿಗ್ಗೆ ರಾಜಧಾನಿಯ ಚನ್ನಸಂದ್ರದಲ್ಲಿ ನಡೆದಿದೆ. ನಿರ್ಭಯಾ ರೀತಿಯ ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಇತರೆ ಇಬ್ಬರು ಯುವತಿಯರ ಸಹಾಯದಿಂದ ಯುವತಿಯನ್ನು ಅತ್ಯಾಚಾರಗೈದು ಗುಪ್ತಾಂಗಕ್ಕೆ ಮದ್ಯದ ಬಾಟಲ್ ಇರಿಸಿ ವಿಕೃತಿ ಮರೆದಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಇಂದು ಅತ್ಯಾಚಾರ ಮಾಡಿದ ಸ್ಥಳ ಪರಿಶೀಲನೆಗೆ ಆರೋಪಿಗಳಾದ ಸಾಗರ್, ಮೊಹಮ್ಮದ್ ಬಾಬಾ

ಬೆಂಗಳೂರು: ಬೆಳ್ಳಂಬೆಳಗ್ಗೆ ಅತ್ಯಾಚಾರ ಆರೋಪಿಗಳ ಮೇಲೆ ಫೈರಿಂಗ್ | ಕೃತ್ಯದಲ್ಲಿ ಬಾಂಗ್ಲಾ ಮೂಲದ ಯುವಕರಿಗೆ ಯುವತಿಯರ ಸಾಥ್….! Read More »

ಕೊಣಾಜೆ: ಪಾವೂರಿನಲ್ಲಿ ಮೆಹಂದಿ ಪಾರ್ಟಿ | ಪೊಲೀಸ್ ದೂರು ದಾಖಲಿಸಿದ ಪಿಡಿಒ

ಮಂಗಳೂರು: ತಾಲೂಕಿನ ಪಾವೂರಿನಲ್ಲಿ, ಕೋವಿಡ್ 19 ನಿಯಮಗಳನ್ನು ಉಲ್ಲಂಘಿಸಿ, ಮೆಹಂದಿ ಡಿಜೆ ಪಾರ್ಟಿ ನಡೆಸಿದವರ ವಿರುದ್ದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೇ.20 ರಂದು ಶೋಭಾ ಮತ್ತು ಕೌಶಲ್ ಎಂಬವರು ಮದುವೆಗೆ ಪಾವೂರು ಗ್ರಾಮ ಪಂಚಾಯತಿಯಿಂದ ಷರತ್ತು ಭದ್ದ ಅನುಮತಿ ನೀಡಲಾಗಿತ್ತು. ಆದರೆ ಮೇ 19 ರಂದು ರಾತ್ರಿ ಮೆಹಂದಿ ಕಾರ್ಯಕ್ರಮದ ಅನುಮತಿ ಇಲ್ಲದಿದ್ದರೂ ದ್ವನಿವರ್ಧಕ ಬಳಸಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮಾಸ್ಕ್ ಧರಿಸದೆ ಹೆಚ್ಚಿನ ಜನ ಸೇರಿಸಿ ನೃತ್ಯ ಮಾಡಿರುತ್ತಾರೆ. ಈ ರೀತಿಯಾಗಿ

ಕೊಣಾಜೆ: ಪಾವೂರಿನಲ್ಲಿ ಮೆಹಂದಿ ಪಾರ್ಟಿ | ಪೊಲೀಸ್ ದೂರು ದಾಖಲಿಸಿದ ಪಿಡಿಒ Read More »

ಶವ ಹೊತ್ತ ಅಂಬ್ಯುಲೆನ್ಸ್ ಚಲಾಯಿಸಿದ ರೇಣುಕಾಚಾರ್ಯ | ಕ್ಷೇತ್ರದ ಸೋಂಕಿತರ ಸೇವೆಗೆ ಸ್ವತಃ ಫೀಲ್ಡಿಗಿಳಿದ ಬಿಜೆಪಿ ಶಾಸಕ

ದಾವಣಗೆರೆ: ರಾಜ್ಯದ ಹೆಚ್ಚಿನ ಶಾಸಕರು ಮತ್ತು ಸಂಸದರುಗಳು ಇಂತಹ ಕಠಿಣ ತುರ್ತು ಪರಿಸ್ಥಿತಿಯಲ್ಲೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವಲ್ಲಿ ಬ್ಯುಸಿಯಾಗಿರುವ ಈ ಸಂದರ್ಭದಲ್ಲಿ , ತಮ್ಮ ಕ್ಷೇತ್ರದ ಜನರ ಸೇವೆಗೆ ನಿಂತಿರುವ ಕೆಲವೇ ಕೆಲವು ಶಾಸಕ, ಸಂಸದರಲ್ಲಿ ರೇಣುಕಾಚಾರ್ಯ ಒಬ್ಬರು. ಹೌದು, ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರವ ಎಂ.ಪಿ. ರೇಣುಕಾಚಾರ್ಯ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಪ್ರಸ್ತುತ ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದರೂ, ಅವರು ಬೆಂಗಳೂರಿನಲ್ಲಿ ಕಾಲ ಕಳೆಯದೆ ತನ್ನ ಸ್ವ ಕ್ಷೇತ್ರದ ಕೊರೋನಾ ಸೋಂಕಿತರ ಸೇವೆಯಲ್ಲಿ

ಶವ ಹೊತ್ತ ಅಂಬ್ಯುಲೆನ್ಸ್ ಚಲಾಯಿಸಿದ ರೇಣುಕಾಚಾರ್ಯ | ಕ್ಷೇತ್ರದ ಸೋಂಕಿತರ ಸೇವೆಗೆ ಸ್ವತಃ ಫೀಲ್ಡಿಗಿಳಿದ ಬಿಜೆಪಿ ಶಾಸಕ Read More »

ಸುಳ್ಯ : ಲಾರಿ ಢಿಕ್ಕಿ ಪಾದಚಾರಿ ಮೃತ್ಯು

ಸುಳ್ಯ: ತಾಲೂಕಿನ ಕಲ್ಲುಗುಂಡಿ ಎಂಬಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಓರ್ವರಿಗೆ ಲಾರಿ ಢಿಕ್ಕಿಯಾಗಿ ಅವರು ಮೃತಪಟ್ಟ ಘಟನೆ ಇಂದು ಕಲ್ಲುಗುಂಡಿಯಲ್ಲಿ ನಡೆದಿದೆ.ಮೃತಪಟ್ಟವರನ್ನು ಕಲ್ಲುಗುಂಡಿ ನಿವಾಸಿ 50 ವರ್ಷ ಪ್ರಾಯದ ಚಂದ್ರಶೇಖರ ಎಂದು ಗುರುತಿಸಲಾಗಿದೆ. ಕೆಲಸಕ್ಕೆ ತೆರಳಿದ್ದ ಚಂದ್ರಶೇಖರ್ ಅವರು ಮನೆಗೆ ಹಿಂದಿರುಗುತ್ತಿರುವಾಗ ಈ ದುರ್ಘಟನೆ ನಡೆದಿದೆ. ಸ್ಥಳೀಯರು ತಕ್ಷಣ ಗಾಯಾಳುವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದು, ಪರೀಕ್ಷಿಸಿದ ವೈದ್ಯರು, ಗಾಯಾಳು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಲಾರಿ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಲ್ಲುಗುಂಡಿ 

ಸುಳ್ಯ : ಲಾರಿ ಢಿಕ್ಕಿ ಪಾದಚಾರಿ ಮೃತ್ಯು Read More »

ಜನಸಾಮಾನ್ಯರಿಗೆ ಸಾಲ ಮರುಪಾವತಿಸುವಂತೆ ಒತ್ತಡ ಹೇರಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ

ಮಂಗಳೂರು: ಕೊರೋನಾ ಎರಡನೆಯ ಅಲೆ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಲಾಕ್ಡೌನ್ ಹೇರಲಾಗಿದ್ದು, ಈ ನಡುವೆ ಸರ್ಕಾರದ ಆದೇಶ ಮೀರಿ ಸಾಲ ಮರುಪಾವತಿ ಮಾಡುವಂತೆ ಸಾಲಗಾರರಿಗೆ ಒತ್ತಡ ಹೇರಿದರೆ, ಅಂತಹ ಹಣಕಾಸು ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲಾ ಅಧಿಕಾರಿ ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಲಾಕ್ಡೌನ್ ಇರುವ ಕಾರಣ ಜನಸಾಮಾನ್ಯರಿಗೆ ಕೆಲಸ ಇಲ್ಲದೆ ಸಂಪಾದನೆ ಇಲ್ಲದಂತಾಗಿದೆ. ದುಡಿಮೆಯನ್ನೇ ನಂಬಿಕೊಂಡಿದ್ದ ಜನತೆ ಸಾಲ ಮರುಪಾವತಿಗೆ ಹಣವಿಲ್ಲದಾಗಿದೆ, ಆ ಕಾರಣಕ್ಕಾಗಿ ಸಾರ್ವಜನಿಕರ ಹಿತ ಕಾಯ್ದುಕೊಂಡಿರುವ ರಾಜ್ಯ ಸರ್ಕಾರ

ಜನಸಾಮಾನ್ಯರಿಗೆ ಸಾಲ ಮರುಪಾವತಿಸುವಂತೆ ಒತ್ತಡ ಹೇರಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ Read More »

ಅಂತೂ ಇಂತೂ ಕರಾವಳಿ ಜನತೆಗೆ ಕೆಂಪು ಕುಚ್ಚಲಕ್ಕಿ ಭಾಗ್ಯ | ಸ್ಪಷ್ಟನೆ ನೀಡಿದ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ

ಬೆಂಗಳೂರು: ಕರಾವಳಿಯ ಜನತೆಗೆ ಮುಂದಿನ ನವೆಂಬರ್ ತಿಂಗಳಿನಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಕೆಂಪು ಕುಚ್ಚಲಕ್ಕಿ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ. ಕರಾವಳಿ ಜನರ ಬೇಡಿಕೆಯಾಗಿದ್ದ ನ್ಯಾಯಬೆಲೆ ಅಂಗಡಿಗಳಲ್ಲಿ ಕುಚ್ಚಲಕ್ಕಿ ವಿತರಣೆ ಬಗ್ಗೆ ಸರ್ಕಾರದ ಬೆನ್ನುಹತ್ತಿದ್ದ ಸಚಿವರು, ಈ ಬಗ್ಗೆ ಆಹಾರ ಸಚಿವರಲ್ಲಿ ಚರ್ಚಿಸಿ ಮುಂದಿನ ನವಂಬರ್ ತಿಂಗಳಿನಿಂದ, ಕರಾವಳಿಯ ಜನತೆ ನಿತ್ಯ ಸೇವಿಸುವ ಕೆಂಪು ಕುಚ್ಚುಲಕ್ಕಿ ವಿತರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ. ದಕ್ಷ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ

ಅಂತೂ ಇಂತೂ ಕರಾವಳಿ ಜನತೆಗೆ ಕೆಂಪು ಕುಚ್ಚಲಕ್ಕಿ ಭಾಗ್ಯ | ಸ್ಪಷ್ಟನೆ ನೀಡಿದ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ Read More »

ವೈದ್ಯನ ನರಳಾಟ ನೋಡಿಯೂ‌ ಕಾಲ್ಕಿತ್ತ‌ ಬಿಜೆಪಿ ಶಾಸಕ | ಇವರೇನಾ ಜನಪ್ರತಿನಿಧಿಗಳು?

ಚಿಕ್ಕಮಗಳೂರು.: ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ವೈದ್ಯರನ್ನು ನೋಡಿಯೂ ನೋಡದಂತೆ ತೆರಳಿದ್ದ ಬಿಜೆಪಿ ಶಾಸಕರೋರ್ವರ ನಡೆಯಿಂದಾಗಿ ವೈದ್ಯ ಕೊನೆಯುಸಿರೆಳೆದ ಘಟನೆ ಇಲ್ಲಿನ ಲಕ್ಕವಳ್ಳಿ ಎಂಬಲ್ಲಿ ನಡೆದಿದೆ.ಮಧ್ಯಾಹ್ನ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ರಮೇಶ್ ಎಂಬವರು ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ದಾರಿ ಮದ್ಯೆ ಅವರ ವಾಹನ ಅಪಘಾತಕ್ಕೆ ಈಡಾಗಿದೆ. ಅಪಘಾತದ ರಭಸಕ್ಕೆ ವೈದ್ಯ ರಮೇಶ್ ರಸ್ತೆಗುರುಳಿದ್ದು, ಅದೇ ವೇಳೆಗೆ ಸ್ಥಳೀಯ ಶಾಸಕ ಡಿ.ಎಸ್. ಸುರೇಶ್ ಕಾರಲ್ಲಿ ಆಗಮಿಸಿದ್ದು, ವೈದ್ಯರ ಸ್ಥಿತಿ ನೋಡಿಯೂ ನೋಡದಂತೆ ತೆರಳಿದ್ದರು.

ವೈದ್ಯನ ನರಳಾಟ ನೋಡಿಯೂ‌ ಕಾಲ್ಕಿತ್ತ‌ ಬಿಜೆಪಿ ಶಾಸಕ | ಇವರೇನಾ ಜನಪ್ರತಿನಿಧಿಗಳು? Read More »

ಕೈಯಲ್ಲಿ ಕಾಸಿಲ್ದೇ ಇದ್ರೂ ಈ ಚೆಕ್ ಪೋಸ್ಟ್ ನಲ್ಲಿ ಮಾಮೂಲಿ ಕೊಡ್ಲೇ ಬೇಕು | ಸಂಪಾಜೆ ಅರಣ್ಯಾಧಿಕಾರಿಯ ಹಗಲು ದರೋಡೆ ಇಲ್ಲಿದೆ ಲಂಚ ತೆಗೆದುಕೊಳ್ಳುತ್ತಿರುವ ವಿಡಿಯೋ

ಮಂಗಳೂರು. ಮೇ.27: ಕೊರೊನಾ ಲಾಕ್ ಡೌನ್ ನಿಂದಾಗಿ ಕೈಯಲ್ಲಿ ಕಾಸಿಲ್ದೇ ಜನ ಪರದಾಡ್ತಿದಾರೆ. ಅದರಲ್ಲೂ ದೂರದೂರಿಗೆ ಸರಕು ಸರಂಜಾಮು ಸಾಗಿಸುವ ಲಾರಿ ಚಾಲಕರಂತೂ ಒಂದೊಂದು ಪೈಸೆಗೂ ಕಷ್ಟ ಪಡ್ತಾ ಇದ್ದು, ಹೊಟೇಲುಗಳು, ಡಾಬಾಗಳು‌ ಮುಚ್ಚಿರುವಾಗ ಹೆಚ್ಚು ಹಣ ಕೊಟ್ಟು, ಹೊಟೇಲುಗಳಿಂದ‌ ಪಾರ್ಸೆಲ್ ತಗೊಂಡು ಉಣ್ಣಬೇಕು. ಆದ್ರೆ ನಮ್ಮ ಕೆಲವು ಅಧಿಕಾರಿವರ್ಗದವ್ರಿಗೆ ಜನಸಾಮಾನ್ಯರ ಕಷ್ಟಕೋಟಲೆ ಗೊತ್ತಾಗ್ತಾನೆ ಇಲ್ಲ. ಇದಕ್ಕೊಂದು ತಾಜಾ ಉದಾಹರಣೆ ದ.ಕ ಮತ್ತು ಕೊಡಗು ಜಿಲ್ಲೆಯನ್ನು ಸಂಪರ್ಕಿಸುವ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಂಪಾಜೆ‌ ಚೆಕ್ ಫೋಸ್ಟ್

ಕೈಯಲ್ಲಿ ಕಾಸಿಲ್ದೇ ಇದ್ರೂ ಈ ಚೆಕ್ ಪೋಸ್ಟ್ ನಲ್ಲಿ ಮಾಮೂಲಿ ಕೊಡ್ಲೇ ಬೇಕು | ಸಂಪಾಜೆ ಅರಣ್ಯಾಧಿಕಾರಿಯ ಹಗಲು ದರೋಡೆ ಇಲ್ಲಿದೆ ಲಂಚ ತೆಗೆದುಕೊಳ್ಳುತ್ತಿರುವ ವಿಡಿಯೋ Read More »

ವಿದ್ಯುತ್ ಶಾಕ್: ನಿವೃತ್ತ ಶಿಕ್ಷಕ ಮೃತ್ಯು

ಕಾಸರಗೋಡು: ಮೋಟಾರ್ ಪಂಪ್ ಚಾಲೂ ಮಾಡುವಾಗ ವಿದ್ಯುತ್ ಶಾಕ್ ತಗಲಿ ನಿವೃತ್ತ ಶಿಕ್ಷಕ ಮೃತಪಟ್ಟ ಘಟನೆ ಜಿಲ್ಲೆಯ ಮಧೂರು ರಸ್ತೆಯ ಕೂಡ್ಲು ಎಂಬಲ್ಲಿ ನಡೆದಿದೆ. ಕೂಡ್ಲು ನಿವಾಸಿ ಮುರಳೀಧರ (೫೭) ಮೃತ ಶಿಕ್ಷಕ. ಇವರು ಪಟ್ಲ ಸರಕಾರಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದ ಒಂದು ವರ್ಷದ ಹಿಂದೆಯಷ್ಟೇ ನಿವೃತ್ತರಾಗಿದ್ದರು. ಇಂದು ಮಧ್ಯಾಹ್ನ ಮೋಟಾರ್ ಪಂಪ್ ಚಾಲೂ ಮಾಡುತ್ತಿದ್ದಾಗ ಶಾಕ್ ತಗಲಿ ಈ ದುರ್ಘಘಟನೆ ಸಂಭವಿಸಿದೆ.ಶಾಕ್ ತಗಲಿ ಗಂಭೀರ ಸ್ಥಿತಿಯಲ್ಲಿದ್ದ ಮುರಲೀಧರ ಅವರನ್ನು ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ಕರೆತಂದಿದ್ದು ಆಗಲೇ

ವಿದ್ಯುತ್ ಶಾಕ್: ನಿವೃತ್ತ ಶಿಕ್ಷಕ ಮೃತ್ಯು Read More »