ಸಮಗ್ರ ಸಮಾಚಾರ

ಮಂಗಳೂರು : ರಾತ್ರೋ ರಾತ್ರಿ ಮುಸ್ಲಿಂ ಯುವತಿ ನಾಪತ್ತೆ

ಮಂಗಳೂರು: ಬಜ್ಪೆ ಸಮೀಪದ ಕೆಂಜಾರಿನಲ್ಲಿ ಯುವತಿಯೋರ್ವಳು ನಾಪತ್ತೆಯಾಗಿರುವ ಘಟನೆ ನಡೆದಿದೆ. ಹುಸೈನ್ ಶರೀಫ್ ಎಂಬವರ ಪುತ್ರಿ ಫಾತಿಮಾ ಸಾಹಿರಾ (21) ನಾಪತ್ತೆಯಾದ ಯುವತಿ. ಇವರು ಮೇ 26ರಂದು ತಡರಾತ್ರಿ ನಾಪತ್ತೆಯಾಗಿದ್ದಾರೆ. ಹುಸೈನ್ ಶರೀಫ್ ಪತ್ನಿ ಹಾಗೂ ಇಬ್ಬರು ಪುತ್ರಿಯರು ಫಾತಿಮಾ ಸಾಹಿರಾ ಮತ್ತು ಮಿಶ್ರಿಯಾ ಎಂಬವರು ಮೇ. 26ರಂದು ಎಂದಿನಂತೆ ಊಟ ಮಾಡಿ ಮಲಗಿದ್ದರು. ಆದರೆ ಸಾಹಿರಾ ರಾತ್ರೋ ರಾತ್ರಿ ಮನೆಯಲ್ಲಿದ್ದವರು ಮಲಗಿದ್ದಾಗ ನಾಪತ್ತೆಯಾಗಿದ್ದಾರೆ. ಈ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪುತ್ರಿಯನ್ನು ಪತ್ತೆ ಹಚ್ಚಿಕೊಡಬೇಕೆಂದು ಹುಸೈನ್ […]

ಮಂಗಳೂರು : ರಾತ್ರೋ ರಾತ್ರಿ ಮುಸ್ಲಿಂ ಯುವತಿ ನಾಪತ್ತೆ Read More »

ಕೊರೋನಾದಿಂದ ರಕ್ಷಿಸಿಕೊಳ್ಳಲು ಬೈಕಿಗೆ ಬಬಲ್ | ಇಲ್ಲಿದೆ ವೈರಲ್ ವೀಡಿಯೋ

ನವದೆಹಲಿ: ಕರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಅನೇಕ ರೀತಿಯ ಪ್ಲ್ಯಾನ್‌ ಮಾಡುವಲ್ಲಿ ಕೆಲವರು ನಿರತರಾಗಿದ್ದಾರೆ. ಅಂಥದ್ದೇ ಒಂದು ಕುತೂಹಲ ಎನ್ನುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಲ್ಲರ ಮನಸ್ಸನ್ನು ಗೆದ್ದಿದೆ. ವೈರಸ್‌ನಿಂದ ರಕ್ಷಿಸಿಕೊಳ್ಳಲು ವ್ಯಕ್ತಿಯೊಬ್ಬ ಬೈಕ್‌ಗೆ ಟಾರ್ಪಲ್ ಮಾದರಿ ವೈಟ್‌ಶೀಟ್‌ ಹಾಕಿದ್ದಾನೆ. ಇಡೀ ಬೈಕ್‌ ಅನ್ನು ಇದರಿಂದ ಮುಚ್ಚಿದ್ದಾನೆ. ವ್ಯಕ್ತಿಯು ಬೈಕ್‍ನಲ್ಲಿ ಕಬ್ಬಿಣದ ರಾಡ್‍ಗಳನ್ನು ಬೈಕ್ ಸುತ್ತಲೂ ಅಳವಡಿಸಿದ್ದು, ಅದಕ್ಕೆ ಬಿಳಿ ಪ್ಲಾಸ್ಟಿಕ್ ಶೀಟ್‍ ಹೊದಿಸಿದ್ದಾನೆ. ಇದನ್ನು ಗುಳ್ಳೆ ಆಕಾರದಲ್ಲಿ ಇರುವ ಕಾರಣ ಬಬಲ್‌ ಮಾದರಿ

ಕೊರೋನಾದಿಂದ ರಕ್ಷಿಸಿಕೊಳ್ಳಲು ಬೈಕಿಗೆ ಬಬಲ್ | ಇಲ್ಲಿದೆ ವೈರಲ್ ವೀಡಿಯೋ Read More »

“ತೇಜಸ್ವಿ ಸೂರ್ಯ ಹಾಗು ಮಾವ ರವಿಸುಬ್ರಹ್ಮಣ್ಯ ಲಸಿಕೆ ಮಾರಾಟಗಾರರು”: ಕಾಂಗ್ರೆಸ್

ಬೆಂಗಳೂರು ಆಡಳಿತ ಪಕ್ಷದ ಶಾಸಕರು ಮತ್ತು ಸಂಸದರುಗಳು ಲಸಿಕೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದಾರೆ. ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳ ಮುಖಾಂತರ ದುಬಾರಿ ಬೆಲೆಗೆ ಮಾರಾಟ ಮಾಡಿಸಿ ಲಾಭ ಪಡೆಯಲಾಗುತ್ತಿದೆ ಇಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರು ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಕನಿಷ್ಠ 900 ರಿಂದ 1200 ರೂ. ಹಣ ಪಡೆದು ಲಸಿಕೆಯನ್ನು ಜನಸಾಮಾನ್ಯರಿಗೆ ಮಾರಾಟ ಮಾಡಲಾಗುತ್ತಿದೆ. ತಮ್ಮ ಬಳಿ ಅಷ್ಟು ಹಣವಿಲ್ಲ ಎಂದು

“ತೇಜಸ್ವಿ ಸೂರ್ಯ ಹಾಗು ಮಾವ ರವಿಸುಬ್ರಹ್ಮಣ್ಯ ಲಸಿಕೆ ಮಾರಾಟಗಾರರು”: ಕಾಂಗ್ರೆಸ್ Read More »

ಬಿರುಕು ಬಿಟ್ಟಿದೆ ಕೆ ಆರ್ ಎಸ್ | ತನಿಖೆಗೆ ಸ್ಥಳೀಯ ರಾಜಕಾರಣ ಅಡ್ಡಿ: ಸುಮಲತ

ಮಂಡ್ಯ: ಐತಿಹಾಸಿಕ ಕೃಷ್ಣರಾಜಸಾಗರ ಜಲಾಶಯ ಬಿರುಕು ಬಿಟ್ಟಿರುವುದು ನಿಜ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ. ಕೆಆರ್ ಎಸ್ ಸುತ್ತಮುತ್ತ ಅಕ್ರಮವಾಗಿ ನಡೆಯುತ್ತಿರುವ ಭಾರಿ ಗಣಿಗಾರಿಕೆಯಿಂದ ಈ ಅಪಾಯದ ಸ್ಥಿತಿ ಬಂದೊದಗಿದೆ ಎಂದಿದ್ದಾರೆ. ಅಣೆಕಟ್ಟು ಬಿರುಕು ಬಿಟ್ಟಿರುವ ಬಗ್ಗೆ ನನಗೆ ಮಾಹಿತಿ ಇದೆ. ಸತ್ಯಾಸತ್ಯತೆ ತಿಳಿಯಬೇಕಾದರೆ ತಜ್ಞರಿಂದ ಸಮಗ್ರ ಪರಿಶೀಲನೆ ನಡೆಸಬೇಕು. ಇದಕ್ಕೆ ಸ್ಥಳೀಯ ರಾಜಕಾರಣ ಅಡ್ಡಿ ಮಾಡುತ್ತಿದೆ. ಜಿಲ್ಲೆಯ ಜೀವನಾಡಿಯ ವಾಸ್ತವತೆ ಜನರಿಗೆ ತಿಳಿಯಬೇಕು. ತನಿಖೆಗೆ ಅಡ್ಡಿಪಡಿಸಿದರೆ ವರದಿ ತರುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾ ಸಂಸದೆ

ಬಿರುಕು ಬಿಟ್ಟಿದೆ ಕೆ ಆರ್ ಎಸ್ | ತನಿಖೆಗೆ ಸ್ಥಳೀಯ ರಾಜಕಾರಣ ಅಡ್ಡಿ: ಸುಮಲತ Read More »

ಲಾರಿಯನ್ನು ಮೂರು ಕಿಮೀ ರಿವರ್ಸ್ ಚಲಾಯಿಸಿದ ಚಾಲಾಕಿ ಚಾಲಕ…..! | ಇಲ್ಲಿದೆ ವೈರಲ್ ವಿಡಿಯೋ

ಮಹಾರಾಷ್ಟ್ರ: ಚಲಿಸುತ್ತಿರುವ ವಾಹನಗಳು ತಾಂತ್ರಿಕ ವೈಫಲ್ಯಕ್ಕೀಡಾದಾಗ ಚಾಲಕರು ಸಮಯಪ್ರಜ್ಞೆ ಮೆರೆದು ದೊಡ್ಡ ದೊಡ್ಡ ಅನಾಹುತಗಳನ್ನು ತಪ್ಪಿಸಿದ ಹಲವಾರು ಉದಾಹರಣೆಗಳಿವೆ. ಅಂತೆಯೇ ಇಲ್ಲೊಬ್ಬ ಲಾರಿ ಚಾಲಕ, ಬ್ರೇಕ್ ವೈಫಲ್ಯ ಗೊಂಡ ಕಾರಣ ಲಾರಿಯನ್ನು ಹೆದ್ದಾರಿಯಲ್ಲಿ ರಿವರ್ಸ್ ಚಲಾಯಿಸಿ, ಅಪಾಯವನ್ನು ತಪ್ಪಿಸುವಲ್ಲಿ ತನ್ನ ಚಾಲಾಕಿತನ ತೋರಿಸಿದ್ದಾನೆ. ಮಹಾರಾಷ್ಟ್ರದ ಜಲ್ನಾ-ಸಿಲ್ಲೋಡ್ ರಸ್ತೆಯಲ್ಲಿ ಲಾರಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಬ್ರೇಕ್ ವೈಫಲ್ಯಗೊಂಡರಿವುದನ್ನು ಚಾಲಕ ಅರಿತಿದ್ದಾನೆ. ಆತ ತಡ ಮಾಡದೆ ಮಂದೆ ಚಲಿಸಿದರೆ ಹೆಚ್ಚಿನ ಅಪಾಯ ಸಂಭವಿಸಬಹುದು ಎಂದು ರಿವರ್ಸ್ ಗೇರ್ ನಲ್ಲಿ ಸುಮಾರು ಮೂರು

ಲಾರಿಯನ್ನು ಮೂರು ಕಿಮೀ ರಿವರ್ಸ್ ಚಲಾಯಿಸಿದ ಚಾಲಾಕಿ ಚಾಲಕ…..! | ಇಲ್ಲಿದೆ ವೈರಲ್ ವಿಡಿಯೋ Read More »

ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಲೈಫ್ ಆಫ್ ಚಾರ್ಲಿ ಟೀಸರ್

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘777 ಚಾರ್ಲಿ’ ಸಿನಿಮಾ ಕುರಿತು ದೊಡ್ಡ ಅಪ್‍ಡೇಟ್ ಸಿಕ್ಕಿದ್ದು, ಟೀಸರ್ ಬಿಡುಗಡೆ ಕುರಿತು ಸ್ವತಃ ರಕ್ಷಿತ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದ ಅಫೀಷಿಯಲ್ ಟೀಸರ್ ಬಿಡುಗಡೆ ಬಗ್ಗೆ ಚಿತ್ರ ತಂಡ ತಿಳಿಸಿದೆ. ಈ ಕುರಿತು ಫೆಸ್ಬುಕ್‍ನಲ್ಲಿ ಐದು ಭಾಷೆಗಳ ಪೋಸ್ಟರ್ ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿ, ನಮ್ಮ ಚಿತ್ರದ ಅಫೀಷಿಯಲ್ ಟೀಸರ್ ‘ಲೈಫ್ ಆಫ್ ಚಾರ್ಲಿ’ ಜೂನ್ 6ಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು

ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಲೈಫ್ ಆಫ್ ಚಾರ್ಲಿ ಟೀಸರ್ Read More »

ನೈಟ್ರೋಜನ್ ಆಕ್ಸೈಡ್ ಲೀಕೇಜ್ ಪರಿಣಾಮ: ಆ್ಯಸಿಡ್ ಮಳೆ ಭೀತಿಯಲ್ಲಿ ಕೊಲಂಬೋ

ಕೊಲಂಬೋ,ಮೇ.29-ಕಳೆದ ವಾರ ಕೊಲಂಬೊ ಸಮುದ್ರ ತೀರದಲ್ಲಿ ಸಿಂಗಾಪೂರ್ ನ ಸರಕು ಸಾಗಾಣೆ ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ನೈಟ್ರೋಜನ್ ಡೈ ಆಕ್ಸೆಡ್ ಹೊರಸೂಸಿರುವುದರಿಂದ ಸಮೀಪದ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದ ಆಸಿಡ್ ಮಳೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹೀಗಾಗಿ ಕೊಲಂಬೊ ಸುತ್ತಮುತ್ತಲಿನ ಜನ ಎಚ್ಚರಿಕೆ ವಹಿಸಬೇಕು ಎಂದು ಶ್ರೀಲಂಕಾ ಪರಿಸರ ಇಲಾಖೆ ಕರೆ ನೀಡಿದೆ.ಗುಜರಾತ್‍ನ ಹಜೀರಾದಿಂದ ಕೆಮಿಕಲ್ ಹಾಗೂ ಕಾಸ್ಮೇಟಿಕ್ ಕಚ್ಚಾ ವಸ್ತುಗಳನ್ನು ಕೊಲಂಬೊ ತರುತ್ತಿದ್ದ ಸಿಂಗಾಪೂರ್‍ನ ಎಂವಿ ಎಕ್ಸ್‍ಪ್ರೆಸ್ ಪರ್ಲ್ ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ಹಡಗಿನ ಟ್ಯಾಂಕಿನಲ್ಲಿ

ನೈಟ್ರೋಜನ್ ಆಕ್ಸೈಡ್ ಲೀಕೇಜ್ ಪರಿಣಾಮ: ಆ್ಯಸಿಡ್ ಮಳೆ ಭೀತಿಯಲ್ಲಿ ಕೊಲಂಬೋ Read More »

ಕೊರೋನಾಗೆ ಜೀವತೆತ್ತರೆ 4 ಲಕ್ಷ :ವೈರಲ್ ಆಗುತ್ತಿದೆ ಫೇಕ್ ಪಿಡಿಎಫ್

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ, ಕೊರೋನಾದಿಂದ ಮೃತಪಟ್ಟರೆ 400000 ಪರಿಹಾರ ಧನ ಸಿಗಲಿದೆ ಮಾಹಿತಿಯುಳ್ಳ ಪಿಡಿಎಫ್ ಫೈಲ್ ನ ಅಂಶಗಳು ಸಂಪೂರ್ಣ ಶುದ್ಧ ಸುಳ್ಳು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಕಳೆದೆರಡುದಿನಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ಪಿಡಿಎಫ್ ಫೈಲ್ ನಲ್ಲಿ ಕೊರೊನಾದಿಂದ ಮೃತಪಟ್ಟವರಿಗೆ ಕೇಂದ್ರ ಸರ್ಕಾರ ನಾಲ್ಕು ಲಕ್ಷ ಪರಿಹಾರ ಧನ ನೀಡಲಿದೆ ಇದಕ್ಕೆ ಸಂಬಂಧಿಸಿದ ಅರ್ಜಿ ನಮೂನೆಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಭ್ಯವಿದೆ ಎಂಬ ಇನ್ನಿತರ ಮಾಹಿತಿ ಇದ್ದು, ಇದನ್ನು ಎಲ್ಲರಿಗೂ ತಲುಪಿಸಿ

ಕೊರೋನಾಗೆ ಜೀವತೆತ್ತರೆ 4 ಲಕ್ಷ :ವೈರಲ್ ಆಗುತ್ತಿದೆ ಫೇಕ್ ಪಿಡಿಎಫ್ Read More »

ಖಾಸಗಿ ಸಾರಿಗೆ ವಾಹನ ಮಾಲಿಕರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿರುವ ಕಾರಣ ಮೇ ತಿಂಗಳ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಕರ್ನಾಟಕ ರಾಜ್ಯ ಸರ್ಕಾರ ಆದೇಶಿಸಿದೆ. ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ ಈ ಆದೇಶ ಅನ್ವಯವಾಗಲಿದ್ದು, ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ನೋಂದಾಯಿಸಿರುವ ಎಲ್ಲಾ ಸಾರಿಗೆ ಪ್ರಯಾಣಿಕ ವಾಹನಗಳಿಗೆ ಮಾತ್ರ ಅನ್ವಯಿಸುವಂತೆ ಮೇ 2021ರ ಒಂದು ತಿಂಗಳ ಅವಧಿಗೆ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ

ಖಾಸಗಿ ಸಾರಿಗೆ ವಾಹನ ಮಾಲಿಕರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ Read More »

ಕನ್ನಡದಲ್ಲಿ ನ್ಯಾಯ ಬರೆಯುತ್ತಿದ್ದ ಕೆ.ವಿ ವಾಸುದೇವ ಮೂರ್ತಿ ಇನ್ನಿಲ್ಲ

ಬೆಂಗಳೂರು(ಮೇ.30): ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಆದೇಶಗಳನ್ನು ಬರೆಸಿದ ಕೀರ್ತಿಗೆ ಭಾಜನರಾಗಿದ್ದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ.ವಿ. ವಾಸುದೇವ ಮೂರ್ತಿ (83) ಹೃದಯಾಘಾತದಿಂದ ಶನಿವಾರ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಗರದ ಹನುಮಂತನಗರದ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಸಂಜೆ 6.30ಕ್ಕೆ ಚಾಮರಾಜಪೇಟೆಯ ಟಿ.ಆರ್‌.ಮಿಲ್‌ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.ಸಮಾಜಸೇವೆ, ಸಾಹಿತ್ಯ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು, ಕಾನೂನು ಪದವಿ ಪಡೆದ ಬಳಿಕ ಶಿವಮೊಗ್ಗದ ನ್ಯಾಯವಾದಿ ವೆಂಕಟರಾಮಾಶಾಸ್ತಿರಗಳ ಕಚೇರಿಯಲ್ಲಿ

ಕನ್ನಡದಲ್ಲಿ ನ್ಯಾಯ ಬರೆಯುತ್ತಿದ್ದ ಕೆ.ವಿ ವಾಸುದೇವ ಮೂರ್ತಿ ಇನ್ನಿಲ್ಲ Read More »