ಸಮಗ್ರ ಸಮಾಚಾರ

ಕೊಟ್ಟಿಗೆಹಾರ: ಕಳ್ಳಭಟ್ಟಿ ಅಡ್ಡೆಯ ಮೇಲೆ ಅಬಕಾರಿ ಪೊಲೀಸರ ದಾಳಿ

ಸಮಗ್ರ ನ್ಯೂಸ್ : ಕೊಟ್ಟಿಗೆಹಾರ, ಬಿದರಹಳ್ಳಿಯ ಕಳ್ಳಭಟ್ಟಿ ಅಡ್ಡೆಯ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ. ಬಿದರಹಳ್ಳಿಯ ಮಂಜುಳ ಎಂಬುವವರ ಮನೆಯ ಮೇಲೆ ದಾಳಿ‌ ನಡೆಸಿದ್ದು 15 ಲೀ ಬೆಲ್ಲದ ಕೊಳೆ, 6 ಲೀ ಕಳ್ಳಭಟ್ಟಿಯನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ‌. ಕಾರ್ಯಾಚರಣೆಯಲ್ಲಿ ಮೂಡಿಗೆರೆ ಉಪ ವಿಭಾಗದ ಅಬಕಾರಿ ನಿರೀಕ್ಷಕರಾದ ಲೋಕೇಶ್ ಅಬಕಾರಿ ಪೇದೆಯಾದ ರಮೇಶ್ ವಾಹನ ಚಾಲಕರಾದ ಪ್ರಸನ್ನ ಕುಮಾರ್ ಹಾಜರಿದ್ದರು.

ಕೊಟ್ಟಿಗೆಹಾರ: ಕಳ್ಳಭಟ್ಟಿ ಅಡ್ಡೆಯ ಮೇಲೆ ಅಬಕಾರಿ ಪೊಲೀಸರ ದಾಳಿ Read More »

ಬಿ.ಬಿ ನಿಂಗಯ್ಯಗೆ ಟಿಕೇಟ್ ನೀಡಲು ಸ್ವಪಕ್ಷದಲ್ಲಿ ವಿರೋಧ|ಮೂಡಿಗೆರೆ ಜೆಡಿಎಸ್‍ನಲ್ಲಿ ಭಿನ್ನಮತ ಸ್ಪೋಟ

ಸಮಗ್ರ ನ್ಯೂಸ್:ಮೂಡಿಗೆರೆ ಜೆಡಿಎಸ್‍ನಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು ಸ್ವಪಕ್ಷದ ಮುಖಂಡರು, ಕಾರ್ಯಕರ್ತರು ಬಿ.ಬಿ ನಿಂಗಯ್ಯ ಅವರಿಗೆ ಟಿಕೇಟ್ ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಸೋಮವಾರ ಬಣಕಲ್‍ನಲ್ಲಿ ಜೆಡಿಎಸ್ ಪಕ್ಷದ ಬಿ.ಬಿ ನಿಂಗಯ್ಯ ವಿರೋಧಿ ಬಣದಿಂದ ಬಹಿರಂಗ ಸಭೆ ನಡೆದಿದ್ದು ಸಭೆಯಲ್ಲಿ ಬಿ.ಬಿ ನಿಂಗಯ್ಯಗೆ ಟಿಕೇಟ್ ನೀಡಲು ಸ್ವಪಕ್ಷದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಲಕ್ಷ್ಮಣಗೌಡ ಮಾತನಾಡಿ, ಬಿ.ಬಿ ನಿಂಗಯ್ಯ ಅವರು ಕಾರ್ಯಕರ್ತರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಶಾಸಕರಾಗಿದ್ದ ಸಂದರ್ಭದಲ್ಲಿ ತಾಲ್ಲೂಕಿಗೆ ಯಾವುದೇ ಕೊಡುಗೆ ನೀಡಲಿಲ್ಲ. ಹೆಚ್.ಡಿ ಕುಮಾರಸ್ವಾಮಿ

ಬಿ.ಬಿ ನಿಂಗಯ್ಯಗೆ ಟಿಕೇಟ್ ನೀಡಲು ಸ್ವಪಕ್ಷದಲ್ಲಿ ವಿರೋಧ|ಮೂಡಿಗೆರೆ ಜೆಡಿಎಸ್‍ನಲ್ಲಿ ಭಿನ್ನಮತ ಸ್ಪೋಟ Read More »

ಸುರತ್ಕಲ್: “ಯುವಶಕ್ತಿಯ ಸಮಾಜಪರ ಕಾಳಜಿಯನ್ನು ಬೆಂಬಲಿಸಬೇಕಿದೆ”
-ಇನಾಯತ್ ಅಲಿ

ಸಮಗ್ರ ನ್ಯೂಸ್: ಸೇವಾಶಿಖರ್ ಫೌಂಡೇಶನ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಮಂಗಳೂರು ತಾಲೂಕು ಕಬಡ್ಡಿ ಅಸೋಸಿಯೇಷನ್ ಇದರ ಸಹಯೋಗದಲ್ಲಿ “ಕುಡ್ಲ ಕಬಡ್ಡಿ-2023” ಕ್ರೀಡಾಕೂಟ ಇತ್ತೀಚಿಗೆ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಮಾತಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು, “ಯುವಜನರು ಸೇವಾಶಿಖರ್ ನಂತಹ ಸಂಘಟನೆಯನ್ನು ಕಟ್ಟಿಕೊಂಡು ನಶಿಸುತ್ತಿರುವ ಕಬಡ್ಡಿಯಂತಹ ಗ್ರಾಮೀಣ ಕ್ರೀಡೆಯನ್ನು ಇನ್ನಷ್ಟು ಬೆಳೆಸಲು ಪಣ ತೊಡಬೇಕು. ಸಮಾಜ ಸೇವೆಯಲ್ಲಿ ಹೆಸರು ಪಡೆದಿರುವ ಸಂಘಟನೆಗೆ ನಾವೆಲ್ಲರೂ ಬೆಂಬಲ ನೀಡಬೇಕು” ಎಂದರು. ಕ್ಯಾಪ್ಟನ್

ಸುರತ್ಕಲ್: “ಯುವಶಕ್ತಿಯ ಸಮಾಜಪರ ಕಾಳಜಿಯನ್ನು ಬೆಂಬಲಿಸಬೇಕಿದೆ”
-ಇನಾಯತ್ ಅಲಿ
Read More »

ಪುತ್ತೂರು: ಹಾವಿನ ಕಡಿತದ ವಿಷ ಹೀರಿ ಅಮ್ಮನ ರಕ್ಷಿಸಿದ ಮಗಳು| ಜೀವ ಒತ್ತೆ ಇಟ್ಟು ತಾಯಿಯ ಕಾಪಾಡಿದ ಧೀರ ಪುತ್ರಿ

ಸಮಗ್ರ ನ್ಯೂಸ್ : ಅಮ್ಮನಿಗೆ ಹಾವು ಕಡಿದ ವೇಳೆ ಆಕೆಯ ಜೀವ ಉಳಿಸಲು ಆಕೆ ಮಗಳೊಬ್ಬಳು ಸಾಹಸ ಮೆರೆದ ಘಟನೆಯೊಂದು ಪುತ್ತೂರು ತಾಲೂಕಿನ ಮಾಡಾವು ಎಂಬಲ್ಲಿಂದ ವರದಿಯಾಗಿದೆ. ಮಾಡಾವಿನ ಶ್ರಮ್ಯ ರೈ ಎಂಬ ಯುವತಿಯೊಬ್ಬಳು ತನ್ನ ಅಮ್ಮನಿಗೆ ಹಾವು ಕಡಿದ ವೇಳೆ ಧೈರ್ಯ ತುಂಬಿ ಬಾಯಿಂದ ಕಚ್ಚಿ ವಿಷ ತೆಗೆದು ಅಮ್ಮನ ಜೀವವನ್ನು ಕಾಪಾಡಿದ್ದಾಳೆ. ಇದು ಕರಾವಳಿಯಲ್ಲಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೆಯ್ಯೂರು ಗ್ರಾಮ ಪಂಚಾಯತ್‌ ಸಮಸ್ಯೆ ಮಮತಾ ರೈ ಎಂಬವರು ತಮ್ಮ ಅಡಿಕೆ ತೋಟದಲ್ಲಿ ಕೆಲಸ

ಪುತ್ತೂರು: ಹಾವಿನ ಕಡಿತದ ವಿಷ ಹೀರಿ ಅಮ್ಮನ ರಕ್ಷಿಸಿದ ಮಗಳು| ಜೀವ ಒತ್ತೆ ಇಟ್ಟು ತಾಯಿಯ ಕಾಪಾಡಿದ ಧೀರ ಪುತ್ರಿ Read More »

ಭಾರತ ಕೇವಲ ಎರಡ್ಮೂರು ಮಂದಿಗೆ ಸೇರಿದ್ದಲ್ಲ; ಅದು ಎಲ್ಲಾ ಭಾರತೀಯರದ್ದು – ರಾಹುಲ್ ಗಾಂಧಿ

ಸಮಗ್ರ ನ್ಯೂಸ್: ಈ ದೇಶ ಎಲ್ಲರಿಗೂ ಸೇರಿದ್ದು, ಯಾರೋ 2ರಿಂದ 3 ಮಂದಿಗೆ ಸೇರಿದ್ದಲ್ಲ ಅಥವಾ ಅದಾನಿಯವರದ್ದಲ್ಲ. ಬಿಜೆಪಿಯ ಮಿತ್ರರಾದ ಆಯ್ದ ಜನರಿಗೆ ಎಲ್ಲಾ ಲಾಭಗಳು ಸಿಗುತ್ತಿವೆ. ಇದುವೇ ಭ್ರಷ್ಟಾಚಾರಕ್ಕೆ ಕಾರಣ. ಕರ್ನಾಟಕದ ಸರ್ಕಾರವು ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು. ಬೆಳಗಾವಿಯ ಸಿಪಿಎಡ್​ ಮೈದಾನದಲ್ಲಿ ನಡೆದ ‘ಯುವ ಕ್ರಾಂತಿ’ ಸಮಾವೇಶದಲ್ಲಿ ಮಾತನಾಡಿದ ಅವರು, ‘ಭಾರತ ಅದಾನಿಯವರದ್ದಲ್ಲ. ಬದಲಿಗೆ ರೈತರ,

ಭಾರತ ಕೇವಲ ಎರಡ್ಮೂರು ಮಂದಿಗೆ ಸೇರಿದ್ದಲ್ಲ; ಅದು ಎಲ್ಲಾ ಭಾರತೀಯರದ್ದು – ರಾಹುಲ್ ಗಾಂಧಿ Read More »

ರಾಜ್ಯ ರಾಜಕಾರಣಕ್ಕೆ ರೀ ಎಂಟ್ರಿ ಕೊಡಲಿರುವ ನಟಿ ರಮ್ಯಾ| ಪದ್ಮಾವತಿ ಕಣಕ್ಕಿಳಿಯುವ ಎರಡು ಕ್ಷೇತ್ರಗಳು ಯಾವ್ದು ಗೊತ್ತಾ?

ಸಮಗ್ರ ನ್ಯೂಸ್: ರಾಜ್ಯ ರಾಜಕಾರಣಕ್ಕೆ ಚಿತ್ರನಟಿ ರಮ್ಯಾ (ದಿವ್ಯ ಸ್ಪಂದನಾ) ರಿ ಎಂಟ್ರಿ ಕೊಡಲಿದ್ದಾರೆ. ಬೆಂಗಳೂರಿನ ಪದ್ಮನಾಭನಗರ ಅಥವಾ ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಎರಡು ಕ್ಷೇತ್ರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಮ್ಯಾ ಕರೆ ತರಲು‌ ಪ್ರಯತ್ನ ಮಾಡಲಾಗಿದೆ. ಪದ್ಮನಾಭನಗರ , ಚನ್ನಪಟ್ಟಣ ಕ್ಷೇತ್ರದ ಲೆಕ್ಕಾಚಾರ ಮಾಡಿರುವ ಕಾಂಗ್ರೆಸ್ ನಾಯಕರು, ಪ್ರಮುಖ ಒಕ್ಕಲಿಗ ಸಮೂದಾಯದ ಮತಸೆಳೆಯಲು ಪ್ಲಾನ್ ರೂಪಿಸಿದ್ದಾರೆ. ಪದ್ಮನಾಭನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳ ಮಧ್ಯದಲ್ಲಿ ಪೈಪೋಟಿ ಇದೆ. ಇನ್ನು

ರಾಜ್ಯ ರಾಜಕಾರಣಕ್ಕೆ ರೀ ಎಂಟ್ರಿ ಕೊಡಲಿರುವ ನಟಿ ರಮ್ಯಾ| ಪದ್ಮಾವತಿ ಕಣಕ್ಕಿಳಿಯುವ ಎರಡು ಕ್ಷೇತ್ರಗಳು ಯಾವ್ದು ಗೊತ್ತಾ? Read More »

ಕರ್ನಾಟಕ ವಿಧಾನಸಭಾ ಚುನಾವಣೆ| ಸುಳ್ಯ ಸೇರಿದಂತೆ 80 ಕ್ಷೇತ್ರಗಳ ಆಪ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಆಮ್‌ ಆದ್ಮಿ ಪಕ್ಷದಿಂದ (ಎಎಪಿ) ಸ್ಪರ್ಧೆ ಮಾಡಲು 80 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಕುರಿತ ಮೊದಲ ಇಂದು ಬಿಡುಗಡೆ ಮಾಡಲಾಯಿತು. ಒಟ್ಟು 80 ಜನ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆಲವು ಕಡೆಗಳಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಮತ್ತು ಪ್ರಾದೇಶಿಕ ಪಕ್ಷ ಜೆಡಿಎಸ್‌ಗಳ ಮತಗಳನ್ನು ಕಸಿಯಲು ಸಿದ್ಧವಾಗಿದೆ. ಇದರಲ್ಲಿ ಪ್ರಮುಖವಾಗಿ ಎಎಪಿ ಮೊದಲ ಪಟ್ಟಿಯಲ್ಲಿ 7 ರೈತರು, 7 ಮಹಿಳೆಯರು ಹಾಗೂ 5 ಸಾಮಾಜಿಕ ಕಾರ್ಯಕರ್ತರಿಗೆ ಟಿಕೆಟ್‌ ನಿಡಲಾಗಿದೆ. ತುರುವೇಕೆರೆಯಿಂದ

ಕರ್ನಾಟಕ ವಿಧಾನಸಭಾ ಚುನಾವಣೆ| ಸುಳ್ಯ ಸೇರಿದಂತೆ 80 ಕ್ಷೇತ್ರಗಳ ಆಪ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ Read More »

“ಕಬಡ್ಡಿಯಂತಹ ದೇಶೀಯ ಕ್ರೀಡೆ ಉಳಿಸಿ ಬೆಳೆಸುವ ಹೊಣೆ ಯುವಜನರದ್ದು” -ಡಾ.ಭರತ್ ಶೆಟ್ಟಿ

ಸಮಗ್ರ ನ್ಯೂಸ್: ಸೇವಾಶಿಖರ್ ಫೌಂಡೇಶನ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಮಂಗಳೂರು ತಾಲೂಕು ಕಬಡ್ಡಿ ಅಸೋಸಿಯೇಷನ್ ಇದರ ಸಹಯೋಗದಲ್ಲಿ “ಕುಡ್ಲ ಕಬಡ್ಡಿ-2023” ಇದರ ಉದ್ಘಾಟನಾ ಸಮಾರಂಭ ಆದಿತ್ಯವಾರ ಬೆಳಗ್ಗೆ ಪಣಂಬೂರಿನ ಎನ್ಎಂಪಿಎ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಮಾತಾಡುತ್ತಾ, “ಕಬಡ್ಡಿಯಂತಹ ದೇಶೀಯ ಕ್ರೀಡೆ ಇಂದು ಅಳಿವಿನ ಅಂಚಿನಲ್ಲಿದೆ. ಆದರೆ ಯುವಕರು ಇಂತಹ ಕ್ರೀಡೆಗಳತ್ತ ಅಕರ್ಷಿತರಗುತ್ತಿರುವುದು ಒಳ್ಳೆಯ ಬೆಳವಣಿಗೆ. ಕಬಡ್ಡಿ

“ಕಬಡ್ಡಿಯಂತಹ ದೇಶೀಯ ಕ್ರೀಡೆ ಉಳಿಸಿ ಬೆಳೆಸುವ ಹೊಣೆ ಯುವಜನರದ್ದು” -ಡಾ.ಭರತ್ ಶೆಟ್ಟಿ Read More »

ಪಿಯುಸಿ‌ ಪರೀಕ್ಷೆ ಹಿನ್ನಲೆ| ಮಾ.9ಕ್ಕೆ ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಕರೆನೀಡಿದ್ದ ಕರ್ನಾಟಕ ಬಂದ್ ವಾಪಾಸ್

ಸಮಗ್ರ ನ್ಯೂಸ್: ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಗುರುವಾರ ಬಂದ್ ಗೆ ಕರೆ ಕೊಟ್ಟಿತ್ತು. ಆದರೆ ದ್ವಿತೀಯ ಪಿಯುಸಿ ಪರೀಕ್ಷೆ ಸೇರಿದಂತೆ ರಾಜ್ಯಾದ್ಯಂತ ಶಾಲಾ- ಕಾಲೇಜುಗಳ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಂದ್ ನ ಹಿಂಪಡೆಯಲು ನಿರ್ಧರಿಸಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಡದ ಮೇರೆಗೆ ನಾಳೆ ನಡೆಸಬೇಕಿದ್ದ ಸಾಂಕೇತಿಕ ಕರ್ನಾಟಕ ಬಂದ್ ಅನ್ನು ವಾಪಸ್ ತೆಗೆದುಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ಭ್ರಷ್ಟಾಚಾರ ವಿರೋಧಿಸಿ

ಪಿಯುಸಿ‌ ಪರೀಕ್ಷೆ ಹಿನ್ನಲೆ| ಮಾ.9ಕ್ಕೆ ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಕರೆನೀಡಿದ್ದ ಕರ್ನಾಟಕ ಬಂದ್ ವಾಪಾಸ್ Read More »

ಹೆಜಮಾಡಿ ಟೋಲ್ ಗೇಟ್ ಬಳಿ ಭೀಕರ ಅಪಘಾತ| ಇಬ್ಬರು ದಾರುಣ ಬಲಿ!!

ಸಮಗ್ರ ನ್ಯೂಸ್: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಜಮಾಡಿ ಟೋಲ್ ಗೇಟ್ ಸಮೀಪ ಸ್ಕೂಟರ್ ಟ್ಯಾಂಕರ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ದಾರುಣ ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ತೀರ್ಥಹಳ್ಳಿ ಮೂಲದ ಮಧ್ಯ ವಯಸ್ಕ ಮಹಿಳೆ ಹಾಗೂ ಗಂಡಸು ಸ್ಕೂಟರ್ ನಲ್ಲಿ ಹೋಗುತ್ತಿದ್ದು ಟ್ಯಾಂಕರ್ ಗೆ ಗುದ್ದಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರೂ ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸವನ್ನಪ್ಪಿದ್ದಾರೆ. ಸ್ಥಳಕ್ಕೆ ಮೂಲ್ಕಿ ಠಾಣಾ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ

ಹೆಜಮಾಡಿ ಟೋಲ್ ಗೇಟ್ ಬಳಿ ಭೀಕರ ಅಪಘಾತ| ಇಬ್ಬರು ದಾರುಣ ಬಲಿ!! Read More »